ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಹೂವು ಕಂದಿದಲ್ಲಿ ಮರಿಮಳವ ಅರಸುವರೇ?
 ಕಂದನಲ್ಲಿ ಕುಂದ ನರಸುವರೆ?
 ಎಲೆ ದೇವಾ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವರಸುವರೇ ?
 ಎಲೇ ದೇವ, ಬೆಂದ ಹುಣ್ಣಿಗೆ  ಬೇಗೆಯನಿಕ್ಕುವರೇ ?
 ಕೇಳಯ್ಯಾ,ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ
 ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು?

ಹುಟ್ಟು ಸಾವುಗಳ ಈ ಬದುಕಿನ ಪಯಣದಲ್ಲಿ ಸಾಗುವ
ಅಕ್ಕನ ದೇಹ ಹೂವಿನಂತೆ ಆಗಿದೆ. ಎಲೆ ದೇವಾ ಚೆನ್ನಮಲ್ಲಿಕಾರ್ಜುನಾ

ಈ ಬದುಕು ಕ್ಷಣಿಕ, ಇರುವಷ್ಟು ದಿವಸ ಈ ಹೂವಿನ ಮರಮಳ ಸಮಾಜಕ್ಕೆ ಆಗಬೇಕು .ಒಳ್ಳೆಯ ಕಾರ್ಯಗಳ ಮೂಲಕ ಈ ಹೂವಿನ ಪರಿಮಳ ಮಾಸದಿರಲಿ. ಹೂವು ಬಾಡಿದ ಮೇಲೆ ಅದರ ಮರಿಮಳ ಮಾಸಿ ಹೋಗುತ್ತದೆ .ಹಾಗೇ ಬಾಡಿ  ಉದುರಿ ಬೀಳುವ ಹೂವನ್ನು ಯಾರೂ ಇಷ್ಟ ಪಡುವುದಿಲ್ಲ. ಇದ್ದಾಗ ಈ ದೇಹವೆಂಬ ಪರಿಮಳವು ನಿತ್ಯ ನಿನ್ನ ಸೇವೆಗೆ ಸಮಾಜದ ಒಳ್ಳೆಯ ಕೆಲಸಕ್ಕೆ ಮೀಸಲಾಗಿರಲಿ ಎನ್ನುವರು ಅಕ್ಕ .ಈ ಪರಿಮಳ ಸದಾ ಕಂಗೊಳಿಸುವಂತಿರಲಿ ಎನ್ನುವರು ಅಕ್ಕ.

 ಕಂದನಲ್ಲಿ ಕುಂದನರಸುವರೇ ?

ನಾವು ಹೆತ್ತು ಹೊತ್ತು ಸಾಕಿದ ಮಗುವಿನಲ್ಲಿ ತಾಯಿಯಾದವಳು ಕುಂದನ್ನು ಹುಡುಕಲಾರಳು .ಮಗು ಹೇಗೆ ಇದ್ದರೂ ಆ ಮಗುವಿನ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದುವಂತೆ ಅಕ್ಕಳು ಇಲ್ಲಿ ತನ್ನ ಮನ  ಕಂದನ ಮನ ಚೆನ್ನಮಲ್ಲಿಕಾರ್ಜುನ ಕಂದನ ಮನದಲ್ಲಿ ಕುಂದನ್ನು  ಹುಡುಕುವುದೇ ? ಪರಮಾತ್ಮ.

 ಎಲೆ ದೇವಾ ,ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವರಸುವರೇ ?

ಎಲೆ ದೇವಾ , ಸ್ನೇಹ ವಿಶ್ವಾಸ ನಂಬಿಕೆಯು ಸ್ನೇಹವನ್ನು ಗಟ್ಟಿಗೊಳಿಸಿ ,ಮತ್ತಷ್ಟು ಸ್ನೇಹವನ್ನು ವೃದ್ದಿಗೊಳಿಸುವುದು .ಇಂಥಹ ಸ್ನೇಹದ ಸ್ಥಳದಲ್ಲಿ ,ದ್ರೋಹವಾದ ಬಳಿಕ ಮರಳಿ ಮೊದಲಿನ ಸ್ನೇಹದ ಸಾಮರಸ್ಯ, ಮೊದಲಿನಂತೆ ಸದ್ಗುಣವನ್ನು ಕಾಣಲು ಮೊದಲಿನಂತೆ ನಂಬಿಕೆ ಹುಟ್ಟುವುದೇ ? ಪರಮಾತ್ಮ.

 ಎಲೇ ದೇವ ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೇ ?

ಎಲೇ ದೇವಾ ಈ ದೇಹ  ಬಳಲಿ ಬೆಂದು ಹುಣ್ಣಾಗಿ ಹೋಗಿದೆ . ಹುಣ್ಣಿಗೆ ,ಮತ್ತಷ್ಟು ನೋವನ್ನು ನೀಡುವುದು ಉಚಿತವೇ ?
 ಪರಮಾತ್ಮ.

 ಕೇಳಯ್ಯಾ ಶ್ರೀಶೈಲ ಮಲ್ಲಿಕಾರ್ಜುನಾ ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?

ಜೀವನ ಎನ್ನುವ ಹೊಳೆಗೆ ಇಳಿದ ಮೇಲೆ ಅಲ್ಲಿ ಅಂಬಿಗನ ಅವಶ್ಯಕತೆ ಬೀಳುವವದಿಲ್ಲ. ಎನ್ನುವ  ಬದುಕಿನ ಅರ್ಥವನ್ನು ಅಕ್ಕಮಹಾದೇವಿಯು ಅತ್ಯಂತ ಸ್ವಾರಸ್ಯಕರವಾಗಿ ಹೇಳಿದ್ದಾರೆ .

ಏನಯ್ಯ ಚೆನ್ನಮಲ್ಲಿಕಾರ್ಜುನಾ
ಅಂಬಿಗನ ಕಾಯಕ ನದಿ ಅಥವಾ ಹಳ್ಳದ ಈ ದಂಡೆಯಿಂದ ಆ ದಂಡೆಯವರೆಗೆ ಪ್ರಯಾಣಿಕರನ್ನು ಬಿಡುವುದು .ಆ ಅಂಬಿಗನ ಅವಶ್ಯಕತೆ ಹೊಳೆ ಇದ್ದಾಗ ಮಾತ್ರ  ಹೊಳೆಯೇ ಇಲ್ಲ ಅಂದ್ರೆ ಅಂಬಿಗನ ಅವಶ್ಯಕತೆ ಬೀಳಲಾರದು ಅಲ್ಲವೇ ? ಪರಮಾತ್ಮ.
ಈ ಜನರ ಮನವೇ ಹಾಗೇ ಅವಕಾಶವಾದಿಗಳು. ಕೆಲಸ ಇದ್ದಾಗ ಒಂದು ತರ .ಕೆಲಸ ಇಲ್ಲದಾಗ ಒಂದು ತರ ಅಲ್ಲವೇ ಪರಮಾತ್ಮ.
ಎನೇ ಇದ್ದರೂ ಬದುಕಿನ ಈ ಹೊಳೆಗೆ ಜೆಗಿದ ಮೇಲೆ  ಅದನ್ನು ಈಜಿ ಗುರಿ ಮುಟ್ಟುವುದು ಜೀಗಿದ ವ್ಯಕ್ತಿಯೇ ಹೊರತು ಅಂಬಿಗ ಅಲ್ಲಿ ಬರಲಾರ ಎನ್ನುವ ಸುಂದರ ಅರ್ಥ.

ಒಟ್ಟಿನಲ್ಲಿ ಬದುಕುವ ಮಾನವ ಸಮಾಜದಲ್ಲಿ ,ಒಳ್ಳೆಯ ರೀತಿಯಿಂದ ಬದುಕಿ ,ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ಹೂವಿನ ಕಂಪನ್ನು ಶಾಶ್ವತವಾಗಿ ಉಳಿಸಿ ಹೋಗುವ ಸುಂದರ ಅರ್ಥ.


About The Author

Leave a Reply

You cannot copy content of this page

Scroll to Top