ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ನನ್ನ ಮನದ ಮೋಡಿಗಾರ
ಮೌನದಿ ಸೆಳೆದ ಚತುರ
ಸರಳ ಸೌಮ್ಯ ಜೊತೆಗಾರ
ಸುಮಧುರ ಮಾತುಗಾರ

ನಿನ್ನ ಕಾಣುವ ಆತುರ
ಸ್ಪರ್ಶ ಸುಖದ ಭಾವಾಂಕುರ
ಸರಸದ ಸಾದರಕೆ ಅವಸರ
ಮಿಲನದ ನಿರೀಕ್ಷೆ ನಿರಂತರ

ನನ್ನ ಕಾಣಲು ನಿನಗೇನೋ ಚಡಪಡಿಕೆ
ಸನಿಹಕೆ ಬಂದರೆ ಪ್ರೀತಿಯ ಕೋರಿಕೆ
ಆಲಿಂಗನದ ಬಿಸಿಯ ಬೇಡಿಕೆ
ಅಧರಗಳ ಮಧುವಿನ ಬಯಕೆ

ನಾ ನಿನ್ನ ಮುದ್ದು ಚಿನ್ನ
ನಯನಗಳ ಮಿಲನ ರೋಮಾಂಚನ
ನೀ ನನ್ನೊಲವಿನ ಬಂಗಾರ
ನಮ್ಮಳಗೆ ನವಬಗೆ ಪ್ರೇಮಾಂಕುರ

ಕಾದಿದೆ ಮನ ನಿನಗಾಗಿ ಮನದನ್ನ
ಆಲಿಸು ಹ್ರದಯದ ದೀನ ಮೊರೆಯನ್ನ
ಪ್ರೇಮದಿ ಸೇರು ನೀ ಕಾಲ ಕರಗುವ ಮುನ್ನ
ಹೊಸೆಯಲು ಪ್ರಣಯದ ಮಧುರ ಸವಿ ಗಾನ


About The Author

Leave a Reply

You cannot copy content of this page

Scroll to Top