ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಲೆತ್ತರ..  ಎತ್ತರಕ್ಕೆ
ಹಾರಾಡುತ ಮನದಾಳದ
ಪಾಡು ಪಾಡುತ
ಹುರುಪು-ಹುಮ್ಮಸ್ಸದಿ
ಹಾರಾಡುವ ಹಕ್ಕಿಯು
ಮೌನವಾಗಿದೆ..,

ಹುಸಿ ಸಂಸ್ಕಾರ- ಸಂಪ್ರದಾಯಗಳ
ಗೋಡೆ ಕಟ್ಟಿ, ಸಂಬಂಧಗಳ
ಬಂಧನದಲ್ಲಿ ಬಂಧಿಸಿ,
ಪ್ರೀತಿಯ ಪಂಜರದೊಳಗಣ ಚಡಪಡಿಸುತ,ಹಕ್ಕಿ
ಮೌನವಾಗಿದೆ…..

ಪರಂಪರೆ- ಬಿಗುಮಾನ-
ಅಭಿಮಾನಗಳ ಒಡ್ದು,
ಮೋಹದ ಗೆರೇಯ ಎಳೆದು,
ರಾಗ- ತಾಳ-ಮೇಳಗಳ
ತಿರುಳು ಅರಿಯದವನ
ಬಂಧನದ ಬಂಧದಲ್ಲಿ
ರಾಗವೇರಿ ಸಾಗದ ಹಕ್ಕಿ
 ಮೌನವಾಗಿದೆ….

ಗಾನಲಹರಿಯ ನೂರೆಂಟು
ಹಾಡುಗಳ ಹೆಣೆದು
ಹಾಡಲು ಧ್ವನಿಯೆತ್ತಿ
ಯಜಮಾನನ ಆಣತಿಗಾಗಿ
ಹಾತೊರೆಯುತ, ತನ್ನತನವ ಮರೆತ
ನಿಂತ ಹಕ್ಕಿ ಮೌನವಾಗಿದೆ….

ಉಚ್ಚ -ನೀಚಗಳ ಸಂಕೋಲೆ
ಸರಪಳಿಯ ಕಿತ್ತು ಒಗೆಯುವ
ಆತುರದಲ್ಲಿ,ಮಾತು
ಮೂಕವಾಗುವ ಮುನ್ನ,
ಮೌನ ಮುರಿದು ಮತ್ತೆ
ಎತ್ತರಕ್ಕೆ ಹಾರಾಡುತ ಹಾಡುವ ಹೊಂಗನಸಲಿ…..ಹಕ್ಕಿ ಮೌನವಾಗಿದೆ…..


About The Author

Leave a Reply

You cannot copy content of this page

Scroll to Top