ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಂಗಾಳಿಯ ತಂಪಿನಲಿ
ಮುಂಗಾರಿನ ಇಂಪಿನಲಿ
ಅರಳಿರುವ ಆ ಮಲ್ಲಿಗೆ
ನಿನಗಾಗಿ ತಂದಿರುವೆ ಓ ಒಲವೇ
ನೀ ಓಡಿ ಬಾ ಇಲ್ಲಿಗೆ..!!

ತಂಪಾದ ಗಾಳಿ ಬಿಸುತಿರಲು
ಇಂಪಾದ ರಾಗ ನಿನಗಾಗಿ ನಾನಿಲ್ಲಿ
ಮೈ ಮರೆತು ಹಾಡುತಿರಲು
ನಮ್ಮಿಬ್ಬರ ನಡುವೆ ಪ್ರೇಮವೆಂಬ
ಕವಿತೆ ಅರಳಿ ತಂಗಾಳಿಯ ಮನ ಸೇರಿತು..!!

ರಂಗೇರಿದ ಈ ಸಾಲುಗಳು
ತಂಗಾಳಿಯ ಮನದೋಳಗೆ
ಬಂಗಾರದ ಮನೆ ಮಾಡಿರಲು
ಓ ಒಲವೇ ನಾ ನಿನಗೆ ನೀಡುವೆ
ಉಡುಗೊರೆಯಾಗಿ ಈ ಒಂದು
ಕವಿತೆಯನು..!!


About The Author

Leave a Reply

You cannot copy content of this page

Scroll to Top