ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನಕೆ ತಾಮೂಡಿ
ಬಂದ ಪದಪುಂಜಗಳರಿವಿಲ್ಲ
ಲೇಖನಿಗೆ ತಾ ಹೊರ
ಸೂಸುವ ಷಾಹಿಯ ಪ್ರಮಾಣದರಿವಿಲ್ಲ

ಇದ್ದರೂ ಒಂದೇ ನಾಣ್ಯದ
ಎರಡುಮುಖಗಳಂತೆ
ಮುಗಿಸಿ ಮೌನದಿ ತಮ್ಮ ಕಾರ್ಯ
ಓದುಗರ ಮನದಾಳಕ್ಕೆ ನುಗ್ಗಿ
ಅಂತರಾಳವ ತಟ್ಟುವ ಗುಣ
ಒಗ್ಗೂಡಿಸಿಕೊಂಡಿರುವಾಗ

ವ್ಯಕ್ತಿ ವ್ಯಕ್ತಿಗಳಿಗೆ ತಮ್ಮ
ವ್ಯಕ್ತಿತ್ವದ ಅರಿವಿಲ್ಲದೆ
ಮತ್ತೊಬ್ಬರ
ಕೂಪಕ್ಕೆ ತಳ್ಳಿ
ತಾ ಸುಖಿಸುವ ಹಂಬಲ

ಆ ಹಂಬಲದಿ ತಮ್ಮ
ಸ್ಥಿತಿಗತಿಗಳನರಿತು ಪರಿಸ್ಥಿತಿಯ
ಒಳಿತು ಮಾಡದ ಹೊರತು
ಮತ್ತೊಬ್ಬರ ಬಾಯಿಗೆ
ಆಹಾರವಾಗುವ ಗೋಜೇಕೆ?


About The Author

2 thoughts on “ಇಂದಿರಾ ಪ್ರಕಾಶ್ ಅವರ ಕವಿತೆ-ಅನ್ಯರ ಹಂಗೇಕೆ?”

  1. R. Shivajumaraswamy kurki

    ನನ್ನ ಕವನ ಹೇಗೆ ಕಳುಹಿಸಬಹುದು ತಿಳಿಸಿ. ಶಿವಕುಮಾರಸ್ವಾಮಿ ಕುರ್ಕಿ ಮೊ.6362971551

Leave a Reply

You cannot copy content of this page

Scroll to Top