ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಡಗಿ ಕುಳಿತ ನಮ್ಮೊಳಗಿನ ಅಹಂ ಜಯಿಸಿ
ಬದುಕಬೇಕು ಗೆಳೆಯ
ಜೀವನದ ಪ್ರತಿಕ್ಷಣವು  ಶ್ರಮಿಸುವ ತಾಳ್ಮೆ
ಇರಬೇಕು ಗೆಳೆಯ

ಶಾಂತಿ ಸಂತೋಷ ಸಮಧಾನ ಸಹನೆ
ಇವುಗಳಿಗಿದೆ ಶಕ್ತಿ
ಸಿರಿವಂತ ಬಡವನೆಂಬ ಭೇದದ ತಾರತಮ್ಯ
 ಬಿಡಬೇಕು ಗೆಳೆಯ

ಕೋಪಗೊಳ್ಳದೆ ಕಾರ್ಯ ಸಾಧನೆಯಾಗದೆಂಬ
ಭ್ರಮೆಯನು ಬಿಡು
ಬಾಳಿಗೆ ಅವಶ್ಯಕವಾದ ಭಾವನೆಗಳನ್ನು
ಸ್ವೀಕರಿಸಬೇಕು ಗೆಳೆಯ

ಮನಸ್ಥೈರ್ಯದಿಂದ ಏನನ್ನ ಬೇಕಾದರೂ
ಸಾಧಿಸಬಹುದು
ಸದ್ಗುಣ ಸಚ್ಯಾರಿತ್ರದ ಹಿರಿಮೆಯ ಶ್ರೇಷ್ಠತೆಯು ತಿಳಿಯಬೇಕು ಗೆಳೆಯ

ಅಶೋಕನಂತ ನಿಜ ಸ್ನೇಹಿತನನ್ನು ಅನುಸರಿಸು
ಮಂದಹಾಸನಾಗಲು
 ಒಳ್ಳೆತನವನು ಪ್ರಶಂಸಿಸುತ ಇತರರನು
ಗೌರವಿಸಬೇಕು ಗೆಳೆಯ


About The Author

Leave a Reply

You cannot copy content of this page

Scroll to Top