ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಾತ್ರೆಯಲಿ ಮೈ ಮರೆಯಬೇಡ
ಏಕಾಂತದಲಿ ಅತಿ ಬೆದರಬೇಡ

ಗೊತ್ತಿದೆ ಎಲ್ಲವೂ ಹಗಲಿನ ಸಂತೆ
ನಿಶೆಯ ಮಂಪರಿನಲಿ ತೇಲಬೇಡ

ಆ ಊರಿನಲಿ ನಿತ್ಯವೂ ಸಪ್ಪಳವಿದೆ
ಇಲ್ಲಿ ಸತ್ಯ ನೀರವದಲಿ ಬೆವರಬೇಡ

ಮೊದಲೇ ಗೊತ್ತಿಲ್ಲ ಏಳಲಾರದ ದಿನ
ನಡೆವ ದಿನವಿದೆ ಆಸೆ ಕೈಬಿಡಬೇಡ

ಏಕಾಂಗಿ ಸತ್ಯ ದರ್ಶನ ತಡವಿಲ್ಲ ಅನು
ಕಾಲ ಗತಿಸುತ್ತದೆ ಹಿಂದೆ ನಡೆಯಬೇಡ


About The Author

2 thoughts on “ಅನಸೂಯ ಜಹಗೀರದಾರ ಅವರ ಗಜಲ್”

  1. ಬಲು ಸುಂದರ ಜೋಡಿ ಬರಹ ಗಜಲ್ ಓದುಗರಿಗೆ ಮೇಜವಾನಿ

Leave a Reply

You cannot copy content of this page

Scroll to Top