ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಕಾಶ ನೀಡದಿರು ಹೆಣ್ಣೇ ಆಗಲು ಗಂಡಿನಿಂದ ಅವಜ್ಞೆ
ಇಂದೇ ಮಾಡು ಅದಕಾಗಿ ಪ್ರಥಮ ಸದೃಢವಾದ ಪ್ರತಿಜ್ಞೆ

ಯಾವ ಹೆಣ್ಣೂ ಎಂದೆಂದಿಗೂ ತೃಣವಲ್ಲ ಅದುವೇ ವಿಶೇಷ
ಮೂಡಲಿ ಆಕೆಯ ಬಗ್ಗೆ ಜಗದಿ ನವ ನವೀನವಾದ ಪ್ರಜ್ಞೆ

ನಿನ್ನ ಈ ಸ್ಥಿತಿಗೆ ಆರ್ಥಿಕ ದುರ್ಬಲತೆಯೇ ಪ್ರಮುಖ ಕಾರಣ
ಸತತ ಅಭ್ಯಾಸವ ಮಾಡಿ ಆಗು ನೀ ಎಲ್ಲ ವಿಷಯದಿ ತಜ್ಞೆ

‘ನಹಿಃ ಜ್ಞನೇನ ಸದೃಶಂ’ ಎನ್ನುವುದು ಒಂದು ಉಪನಿಷತ್ತು
ಪಡೆದೆಯಾದೊಡೆ ವಿಜ್ಞಾನ ಅವಕಾಶವಿದೆ ಆಗೆ ಸಾಮ್ರಾಜ್ಞೆ

ತೊಡೆಗೆ ಹೊಡೆಯೆಂದು ಪ್ರತ್ಯೇಕ ಹೇಳಲಿಲ್ಲಾ ತಾ ಕೃಷ್ಣಾ!
ಮಾಡಿ ತೋರಿಧನು ಭೀಮಗೆ ಸಣ್ಣ ಪ್ರಮಾಣದಲಿ ಸಂಜ್ಞೆ.


About The Author

Leave a Reply

You cannot copy content of this page

Scroll to Top