ಕಾವ್ಯ ಸಂಗಾತಿ

ಸುವರ್ಣ ಕುಂಬಾರ
ಬಿಡಿಸದ ಬಂಧ

ನಯನ ಹೊಳೆಯುವ ನಕ್ಷತ್ರ
ಹೃದಯದಲ್ಲಿ ಬಿಡಿಸಿದಳು ಚಿತ್ರ
ಒಲವಿನಿಂದ ತಂದಳು ಚೈತ್ರ
ಆತ್ಮವಾಗಿ ಬಂದಳು ನನ್ನ ಹತ್ರ
ನನ್ನ ಕವಿಯಾಗಿದಳು ಕವಿತೆಯಾಗಿ
ಒಲವ ಸುಧೆ ಹರಿಸಿ ಪ್ರೀಯತಮೆಯಾಗಿ
ಮೌನಮನದಲ್ಲಿ ಪ್ರೇಮೋತ್ಸವವಾಗಿ
ಅನುರಾಗದ ಶಾಲೆಯಲ್ಲಿ ವಿದ್ಯಾರ್ಥಿಯಾಗಿ
ಪ್ರೇಮ ಪಾಠದ ಹೊಸ ಅಧ್ಯಾಯವಾಗಿ
ಅನುರತ ಜೊತೆಗೆ ನಡೆಯುವ ನುಡಿಯಾಗಿ
ಹೃದಯದಲ್ಲಿ ನಿಂತಳು ಮಿಡಿತವಾಗಿ
ಎಂದೆಂದೂ ಬಿಡಿಸದ ಬಂಧವಾಗಿ
ಸುವರ್ಣ ಕುಂಬಾರ




1 thought on “ಸುವರ್ಣ ಕುಂಬಾರ ಅವರಕವಿತೆ-ಬಿಡಿಸದ ಬಂಧ”