ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿರಹದ ಬಿಸಿ ಅಪ್ಪುಗೆಯಲ್ಲಿ
ನರಳುವ ವಸುಂಧರೆಗಿಂದು
ವರುಣರಾಯನ ಮುತ್ತುಗಳ
ಸಿಹಿ ಚುಂಬನದ ಸಂಚಲನ

ತಂಪೇರಿ ಒಲವಿನ ರಂಗೇರಿ
ನಲಿದಳೆ ಧರಾ ವರುಣನ ಅಪ್ಪುಗೆಯಲ್ಲಿ
ಸಂಚು ಹೊಡುವಂತಿತ್ತು ತಂಗಾಳಿ ಚಲನವಲನ
ತಂಪೆರೆಯುವ ಪ್ರೇಮವದು ಗಹನ

ಮಿಂಚಿನ ಮಾಲೆಯಲ್ಲಿ ಒಲವಿನ ಹೊಂಗಿರಣ
ಮೇಘಲೀಲೆಯಲ್ಲಿ ಪಾವನವಾಯಿತು ಪ್ರೇಮ
ವಿರಹದಗ್ನಿಯಲ್ಲಿ ಬೆಂದು ಕಾಯ್ದಿದೆ ವರವಾಯಿತ್ತಿದಿನ
ಮನದಲ್ಲಿ ಮಿಲನೋತ್ಸವದ ಸುಮಧುರವಾದ ಸುರಗಾನ


About The Author

1 thought on “ಸುವರ್ಣ ಕುಂಬಾರ ಕವಿತೆ-ಮಿಲನೋತ್ಸವ”

  1. ಕವನ ಉತ್ತಮವಾಗಿ ಮೂಡಿಬಂದಿದೆ ಮೇಡಂ. ಹಾರ್ದಿಕ ಅಭಿನಂದನೆಗಳು. ….ಬಿ ಆರ್ ಅಣ್ಣಾಸಾಗರ

Leave a Reply

You cannot copy content of this page

Scroll to Top