ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ಹೆಜ್ಜೆ ಹೊಸ ಪಲ್ಲವಿ
ಎಳೆ ಚಿಗುರಿನ ತಂಗಾಳಿ
ನವ ಚೇತನ ನವ ಉಲ್ಲಾಸ
ಹೊಸ ವಸಂತದ ಸಂತಸ

ಸಿರಿ ಸಂಭ್ರಮ ಹೊಸ ವಿಕ್ರಮ
ಇಳೆ ನಗುವ ನಂದನ
ಕಣಕಣದಿ ಭಾವ ತೋರಣ
ಮುಗಿಲು ಮುಟ್ಟಿದೆ ಗಾಯನ

ರವಿಯುದಯಕೂ ಹೊಸ ಬೆಳಕು
ಹೊಸ ಮಾತಿನ ಪರಿಚಯ
ಸಿಹಿ ಕಹಿಯ ಜೀವನಕೂ
ಹೊಸ ಮುನ್ನುಡಿಯ ಸವಿನಯ

ಸಾತತ್ಯದ ಒಲವು ತುಂಬಿರಲು ನೆಲವು
ಜಗವೆಲ್ಲಾ ಹರಡಿಹ ಪರಿಮಳದ
ಘಮವು
ಆತಿಥ್ಯದ ಆಕೃತಿ ಚಿತ್ತಾರದ ಪ್ರಕೃತಿ
ತುಂಬಿರಲು ಚಂದನದ ನಿಯತಿ

ಬದುಕೊಲವ ಒರತೆ ತೇಲಿರಲು ಜೀವನವು
ದಿನ ದಿನವೂ ಕ್ಷಣ ಕ್ಷಣವೂ
ಅಕ್ಕರೆಯ ಔತಣವು
ಹಬ್ಬಿರಲಿ ತುಂಬಿರಲಿ ಸದಾಚಾರ
ಸಾಗುವ ಪಯಣ ಸಾಕಾರ

About The Author

6 thoughts on “ಯುಗಾದಿ ವಿಶೇಷ”

Leave a Reply

You cannot copy content of this page

Scroll to Top