ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದೊಳಗಿನ ಆಳದಲಿ ಅಳಿಯದೆ ಉಳಿದ ಪುಟಗಳೆ ದೊಡ್ಡದು |
ಕಳೆದ ನೋವಿಗೆ ಬೆನ್ನ ಹಿಂದೆಯೆ ಹಗೆ ಸಾಧಿಸದ ನಾಳೆಗಳೆ ದೊಡ್ಡದು ||

ಸಡಗರದ ಇತಿಹಾಸ ಪುಟಗಳಲಿ ಕಣ್ಣೀರ ಕಥೆಗೆ ಮರು ನಾಮಕರಣ |
ಸಕಾಲದಲಿ ಬದುಕಿನ ಬಂಡಿಗೆ ಸದಾಚಾರದ ಮಾತುಗಳೆ ದೊಡ್ಡದು ||

ಸಾಧ್ಯವಾದರೆ ಸೇತುವೆಯ ಕಟ್ಟು ಉರಳಿಸುವ ದಾಳ ನೀನಾಗಬೇಡ |
ಕೇಡಿಲ್ಲದ ಸಂತೆಯೊಳಗೆ ಇಲ್ಲಗಳ ನಡುವಿನ ಕ್ಷಣಗಳೆ ದೊಡ್ಡದು ||

ದೇವನೊಲುಮೆ ಹುಡುಕುವ ಭರದಲಿ ಕೂಡಿ ಹಚ್ಚಿಟ್ಟ ದೀಪ ಬೆಳಗು |
ಇರುವಿಕೆಯ ಬಗೆಗಿನ ಬೆರಗು ಚಿಗುರಿದ ಹೂವಿನ ದಳಗಳೆ ದೊಡ್ಡದು ||

ಮಣ್ಣಿನಲಿ ಮಣ್ಣಾದ ಮುತ್ತುವಿನ ಕಳೆಬರ ನೆಲದ ಋಣವನು ತೀರಿಸೀತು |
ಮತ್ತೇಕೆ ಕೆದಕುವೆ ದಮನಿತರ ಉಸಿರನಾದ ಅರಿತ ಧ್ವನಿಗಳೆ ದೊಡ್ಡದು||


About The Author

Leave a Reply

You cannot copy content of this page

Scroll to Top