ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದತ್ತ ಸಾಲು: ಮೆಲ್ಲನೆ ಸವಿ ಮಾತೊಂದ
ಪ್ರಕಾರ: ಕವನ
ಶೀರ್ಷಿಕೆ: ಪ್ರೀತಿ ಅಂಕುರಕ್ಕೆ ಅಧರದಿ ಹೊರಟ ಕವಿತೆ

ಪ್ರೀತಿಯು ಅಂಕುರ ವಾಗಲು
ಮನವದು ಪಿಸು ಮಾತಾಡಿತು||
ಮೆಲ್ಲನೆ ಸವಿ ಮಾತೊಂದು
ಅಧರದಿ ಅದರುತ ಜಾರಿತು||

ಶಶಿ ತಂಪಿನ ಭಾವವು ತೇಲಲು
ಬೆಳದಿಂಗಳ ಆಸ್ತೆಯು ಕುದುರಿತು||
ಮೋಹನ ಸೆಳೆತದ ಕಣ್ಮಿಂಚದು
ತೇಜಸ್ಸಿಗೆ ಆಂತರ್ಯ ಬೆಳಗಿತು||

ಹೃದಯಾಳದ ಮಾತು ಮೂಡಲು
ಮೊಗದಲಿ ಕಾಂತಿಯು ಹರಡಿತು||
ಆನಂದದಿ ನುಲಿಯುತ ತನುವದು
ಮುದ್ದಾಡುವ ಅಪ್ಪುಗೆ ಬಯಸಿತು||

ಸರಸದಿ ಮನ ಲೋಕವ ಮರೆಯಲು
ತನು ಮಿಲನದ ಗುಂಗಲಿ ತೇಲಿತು||
ಹತೋಟಿ ಮೀರಿದ ಕ್ಷಣವದು
ಸುಂದರ ಒಪ್ಪುಗೆ ಕವಿತೆ ಗುನುಗಿತು||

About The Author

Leave a Reply

You cannot copy content of this page

Scroll to Top