ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲವನ್ನ ಮರೆಸುವುದು ನಗು
ನಿನ್ನಂತೆ ನಾನಾಗಬೇಕು ಮಗು
ಯಾವುದೇ ಕಲ್ಮಶವಿಲ್ಲದ
ನಿನ್ನ ಮನಸು
ಚಂದಿರನಂತೆ ಹೊಳೆಯುತಿದೆ
ನಿನ್ನ ಸೊಗಸು
ನಿನ್ನೊಳಗಿಲ್ಲ ಯಾವುದೇ
ದ್ವೇಷ ಅಸೂಯೆ
ನಿನ್ನದು ಎಂದೆಂದೂ
ಪ್ರೀತಿಯ ನಿರೀಕ್ಷೆ
ಮಾಡುವೆ ನೀನು ಆಗಾಗ
ತಾಳ್ಮೆ ಪರೀಕ್ಷೆ
ಕೊಟ್ಟಷ್ಟು ಮಗೆ ಮಗೆದು
ಕೊಡುವೆ ನೀನು ಪ್ರೀತಿ
ಹಸಿದರಷ್ಟೇ ಅತ್ತು ಕರೆಯುವೆ ನೀನು
ಪುಟಿವ ಚೆಂಡಂತೆ ಓಡಾಡುತ್ತಿರುವೆ ನೀನು ಹುಣ್ಣಿಮೆಯ ಬೆಳಕಂತೆ ನೀನು
ಮನವ ಮುದಗೊಳಿಸುವೆ ನೀನು
ಯಾವುದೇ ಸಂಚಿಲ್ಲ ಕೇಡಿಲ್ಲ
ನಿನ್ನ ಮನಸ್ಸಿನಲ್ಲಿ
ಮುಗ್ಧತೆಯು ತುಂಬಿದೆ
ನಿನ್ನ ಬದುಕಿನಲಿ
ಎಲ್ಲವನ್ನೂ ನೋಡುವ
ತಿಳಿಯುವ
ಕಾತುರತೆ ನಿನ್ನಲ್ಲಿ
ಮರಳಿ ಮರಳಿ ಪ್ರಯತ್ನಿಸುವ
ಗುಣ ನಿನ್ನದು
ಮತ್ತೊಮ್ಮೆ ನಿನ್ನಂತೆ
ನಾನಾಗಬೇಕು
ಮನಸ್ಸಿನೊಳಗಡೆ ಶಾಂತಿ
ನೆಮ್ಮದಿ ನೆಲೆಸಿರಬೇಕು
ದ್ವೇಷ ಅಸೂಯೆಗಳ
ಅಳಿಸಿಬಿಡಬೇಕು
ಮಾನವೀಯ ಮೌಲ್ಯಗಳ
ತುಂಬಿಕೊಳ್ಳಬೇಕು
ಎಲ್ಲ ದೌರ್ಬಲ್ಯಗಳನ್ನು
ಮೀರಿ ನಿಲ್ಲಬೇಕು
ಸಂತನಲ್ಲದ ಸಂತನಂತೆ
ನಾನು ಬದುಕಬೇಕು


About The Author

1 thought on “ನಾಗರಾಜ ಜಿ. ಎನ್. ಬಾಡ-ನಿನ್ನಂತೆ ನಾನಾಗಬೇಕು.”

  1. ಮಗುವಿನ ಮನಸ್ಸು ಪರಿಶುದ್ಧ. ಮಗುವಿನಲ್ಲಿ ದೊಡ್ಡ ನಿರೀಕ್ಷೆಗಳು ಇರುವುದಿಲ್ಲ. ಭರವಸೆ, ನಗು,ತೊದಲು,ಹುಸಿನೋಟ ಮಾತ್ರ ಇರುತ್ತದೆ.ಎಲ್ಲವನ್ನೂ ಗೆಲ್ಲುವ ಕೌತುಕವಿರುತ್ತದೆ. ಮಗು ಮನೆಯ ನಗುವಿನಂತೆ. ಅಲ್ಲೊಂದು ಆರಾಧನೆಯ ಅಂತ:ಕರಣವಿರುತ್ತದೆ. ಮುಗ್ದತೆಯಿರುತ್ತದೆ. ಜೊತೆ ಸಾಗಿ ನಲಿವಾಗುವ ಹೊಸತನವಿರುತ್ತದೆ…….ಸಾಲುಗಳ ಭಾವ ಆಪ್ತವಾದವು….. ಅರ್ಥಪೂರ್ಣ ಕವನ ಚೆನ್ನಾಗಿದೆ

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ…..

Leave a Reply

You cannot copy content of this page

Scroll to Top