ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೈಕುಗಳು

ಯ.ಮಾ,ಯಾಕೊಳ್ಳಿ

೧
ಅರಿಯದೆಯೆ
ಆಡಿದ ಮಾತು ಆಟ
ನಿಲ್ಲಿಸಬಹುದು
೨
ಮಾಡಿದ ತಪ್ಪು
ಮತ್ತೆ ಮತ್ತೆ ಇರಿದು
ಅಸಾಧ್ಯ ನೋವು

೩
ಹಳೆಯ ಗಾಯ
ಕೆರೆದು ಹೊಸ ಗಾಯವ
ಮಾಡಿಕೊಳ್ಳಬಾರದು
೪
ಅವಸರದಿ
ಎಸೆದ ಕಲ್ಲೂ ಗಾಜು
ಒಡೆಯುವದೇ
೫
ಮನದ ಗಾಜು
ಒಡೆದರೆ ತಿರುಗಿ
ಜೋಡಿಸಲಾರೆ
೬
ಪಡೆದ ಮನ
ಅಗಲಿದರೆ ನೋವು
ಸುಡುವ ಬೆಂಕಿ

೭
ಒಂದೆಡೆ ಆದ
ನೋವು ಎರಡು ಕಡೆ
ಕುದಿತ ಬೆಂಕಿ

೮
ಅಳದಿರು ನೀ
ಕಣ್ಣೀರು ಒರೆಸಲು
ಕೈಗಿಲ್ಲಿ ಬರ
೯
ಬೇಡವಾದಲ್ಲಿ
ಸಕ್ಕರೆಯ ಗುಡ್ಡವೂ
ಕಹಿಯ ಗಾರೆ

೧೦
ಮನಕೊಪ್ಪಿದ
ನಡೆ ತಪ್ಪಲ್ಲ, ಮನ
ಜವಾಬುದಾರ

———————-.

About The Author

Leave a Reply

You cannot copy content of this page

Scroll to Top