ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವವ್ಯ ಸಂಗಾತಿ

ನೆರಳಿತ್ತವನ ಉರುಳಿಸಿದವರು

ಸುರೇಶ ಮಲ್ಲಾಡದ.

ಮುಂದಿನ ಪೀಳಿಗೆಗಳಿಗೆ…
ಜಲ-ಚರಗಳಿಗೆ ನೆರವಾಗಲು
ಭುವಿ ತಂಪಾಗಿ..
ಮೋಡ ಮಂಜಾಗಿ..
ಮಳೆ ಸುರಿಸಲಿ. ಜೀವ-ಸಂಕುಲಕೆ
ಬೊಗಸೆ ನೀರುಣಿಸಲೆಂದು..
ರಾಜರು. ಪರಿಸರ ಪ್ರಿಯರೆಲ್ಲ
ಕೂಡಿ ಗಿಡ ನೆಟ್ಟರು..

ಬರಿಗಾಲೊಳು ನಡೆದಾಡಿದರೆ.
ಆರೋಗ್ಯಕ್ಕೆ ರಕ್ತ-ಪರಿಚಲನೆಗೆ
ಉತ್ತಮವೆಂದು ತಿಳಿದಿದ್ದ
ನಮ್ಮ ಹಿರೀಕರು..
ಪರಿಸರ ಪ್ರಿಯರು. ಉತ್ತಮ
ನಾಗರೀಕರವರು..

ಬೆಳೆದೆ ನಾನು ಆಲ-ಮರವಾಗಿ
ಭೂ ಒಡಲ ಅಂತರಾಳದ
ಜಲವ-ನುಂಡು…
ಮಣ್ಣಿನ ಸತ್ವ ಹೀರಿ..
ಆಕಾಶದಗಲ ನಳನಳಿಸೋ
ಹಸಿರ ರಂಬೆ-ಕೊಂಬೆ ಹರಡಿ
ನೆರಳ ಹಾಸಿ ಭುವಿಗೆ ನೂರಡಿ.

ಮನುಜ ನಡೆಯುವುದ ಮರೆತಿರುವ.
ಹಲವು ರೋಗಗಳಿಗೆ ತುತ್ತಾಗಿರುವ.
ತನ್ನ ವಾಹನಗಳಿಗೆ ಸರಾಗ
ರಸ್ತೆ ಗೇಯುತ್ತಿರುವ..
ಅಡ್ಡಬಂದ ನನ್ನಂತಹ ನೂರಾರು
ವರ್ಷಗಳಿಂದ ಮಳೆ-ನೆರಳಿಗೆ
ನೆರವಾಗಿ ತಂಪನೀಯುವವರನ್ನ.
ಬುಡಮೇಲು ಮಾಡುತ್ತಿರುವ..


About The Author

4 thoughts on “ನೆರಳಿತ್ತವನ ಉರುಳಿಸಿದವರು”

  1. Shivaleela hunasgi

    ವಾಸ್ತವ ಎಲ್ಲವೂ ಕೃತ್ತಿಮತೆಗೆ ಒಳಗಾಗಿ ನೋವು ಅನುಭವಿಸುವುದು ಖಚಿತ…ಮನುಷ್ಯ ನಷ್ಟು ಭಯಂಕರ ವ್ಯಕ್ತಿ ಬೇರೆಲ್ಲೂ ಇಲ್ಲ…

  2. ಹೆಚ್. ಮಂಜುಳಾ.

    ಹಸಿರೇ ಉಸಿರು ಎನ್ನುವ ಜನರು ಈಗೆಲ್ಲಿ? ಒಂದು ವೇಳೆ ಹಾಗೆ ಅನ್ನುವವರು ಮುಂದೆ ಬಂಧರೆ ಆಲದ ಮರದ ಗತಿಯನ್ನೇ ಅವರಿಗೂ ತಂದೊಡ್ಡುವವರು ಬೇಕಾದಷ್ಟು ಜನ ನಮ್ಮಲ್ಲಿ.ಇದಕ್ಕೆ ಕೊನೆ ಹೇಗೋ?!

    1. Suresh Malladad

      ಕೊನೆನೇ ಇಲ್ಲ. ಪ್ರಶ್ನಿಸಿದವರು ನೆಲೆ ಕಳೆದುಕೊಳ್ಳುವರು.ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ..

      ಧನ್ಯವಾದಗಳು ಮೇಡಮ್..

Leave a Reply

You cannot copy content of this page

Scroll to Top