ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

(ಸಾನಿ ಮಿಸ್ರಾ : ಸಂಗಾತಿ ಪತ್ರಿಕೆಯ ಕು.ಸ.ಮಧುಸೂದನ ಅವರದು)

ಅರುಣಾ ನರೇಂದ್ರ

(ಸಾನಿ ಮಿಸ್ರಾ : ಸಂಗಾತಿ ಪತ್ರಿಕೆಯ ಕು.ಸ.ಮಧುಸೂದನ ಅವರದು)

ಕನಸು ಕಡಕೇಳಬೇಡ ಡಾಲಿ ನಾನದರ ಗಾಯಗಳ ಹೆಕ್ಕುತ್ತಿರುವೆ
ಹೃದಯದ ಮಾತಾಡಬೇಡ ಡಾಲಿ ನಾನದರ ಚೂರುಗಳ ಹೆಕ್ಕುತ್ತಿರುವೆ

ನೋವು ನಿರಾಸೆಗಳಿಗೆ ಹಣೆ ಬರಹವೇ ಹೊಣೆಯಾಗಬೇಕಿಲ್ಲ
ಮನಸಿನ ಬೆನ್ನುಹತ್ತಬೇಡ ಡಾಲಿ ನಾನದರ ಭಾವಗಳ ಹೆಕ್ಕುತ್ತಿರುವೆ

ಬೇಲಿಯ ಮೇಲೆ ಅರಳಿದರೂ ಬೆರಗುಗೊಳಿಸುವ ಹೂವಾಗಬೇಕು
ಮಾತಿಗೆ ಸೋತು ಹೋಗಬೇಡ ಡಾಲಿ ನಾನದರ ಮೌನಗಳ ಹೆಕ್ಕುತ್ತಿರುವೆ

ತೊಟ್ಟು ಕಳಚಿದ ಎಲೆ ಗಿಡಕೆ ಗೊಬ್ಬರವಾಗಿ ಬಂಧ ಬೆಸೆಯುತ್ತದೆ
ಕರುಳ ಕೊರಗಿಸಬೇಡ ಡಾಲಿ ನಾನದರ ಸಿಕ್ಕುಗಳ ಹೆಕ್ಕುತ್ತಿರುವೆ

Flowers growing along fence in a garden.

ಸೋಲಿನ ಭಯ ಮೆಟ್ಟಿನಿಂತ ಅರುಣಾ ಗೆಲುವೇ ಆಗಿರುತ್ತಾಳೆ
ಹಸಿವು ನೆನಪಿಸಬೇಡ ಡಾಲಿ ನಾನದರ ಬಾಧೆಗಳ ಹೆಕ್ಕುತ್ತಿರುವೆ


About The Author

1 thought on “ಗಜಲ್”

Leave a Reply

You cannot copy content of this page

Scroll to Top