ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಕ್ಕಮಹಾದೇವಿ ಜನುಮದಿನಕ್ಕೊಂದು ಕವಿತೆ

ಜ್ಯೋತಿ ಡಿ.ಬೊಮ್ಮಾ.

ಅನುಭಾವ ಅಂಬುಧಿಯಲ್ಲಿ ಮಿಂದವಳು…: ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರಜ್ಞಾ  ಮತ್ತಿಹಳ್ಳಿ ಬರಹ | ಕೆಂಡಸಂಪಿಗೆ

ಅಕ್ಕ…

ಚನ್ನನ ಮೇಲೆ ಅದೆಂತಹ ಮೋಹ ನಿನಗೆ
ಆ ಚೆನ್ನ ಸಿಕ್ಕನೇನೆ ನಿನಗೆ.
ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡು
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿ
ಕಾಡು ಮೇಡು ಅಲೆದು ದಣಿದ ನಿನಗೆ
ಆ ಚೆನ್ನ ಸಿಕ್ಕನೇನೆ ಕೊನೆಗೆ

ದೇಹದ ಮೋಹವನ್ನು ತೋರೆದು
ಭಯವೆಂಬ ಭವವ ನಿರ್ಬಯದಿ ಹರಿದು
ಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀ
ನಿನೋಲಿದ ಚನ್ನ ಸಿಕ್ಕನೇನೆ ನಿನಗೆ.

ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದ
ಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿ
ಇಚ್ಚೆ ಪಟ್ಟವನನ್ನು ಅರಸುತ್ತಾ
ಅರಸೊತ್ತಿಗೆ ಬಿಟ್ಟು ಬಂದ ನಿನಗೆ
ಆ ಚನ್ನ ಸಿಕ್ಕನೇನೆ ಅಕ್ಕ..

ಶ್ರೀಶೈಲದ ಕಾಡುಮೇಡು ಅಲೆದು
ಕದಳಿಯ ಭವ ಘೋರಾರಣ್ಯ ಹೊಕ್ಕು
ಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದ
ಆ ಚನ್ನ ಸಿಕ್ಕನೇನೆ ಅಕ್ಕ..

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಸೀಮೆಇಲ್ಲದ ನಿಸ್ಸೀಮನಿಗಾಗಿ
ಉಡತಡಿಯಿಂದ ಕಲ್ಯಾಣದ ವರೆಗೆ
ಕದಳಿಯ ಸೀಮೆಯವರೆಗೆ ತ್ರೀಕೂಟವೆಂಬ
ಮಹಾಗಿರಿಯ ಬಟ್ಟಬಯಲೋಳಗೆ

ಹುಚ್ಚಾಟದ ಮೇರೆಮೀರಿ ಹುಡುಕಾಡಿ
ಶರಣಸತಿ ಲಿಂಗಪತಿ ಎಂಬ ಭಾವದಲ್ಲಿ
ಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ..

ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ…


About The Author

Leave a Reply

You cannot copy content of this page

Scroll to Top