ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಂಬೇಡ್ಕರ್ ನೆನಪಿಗೆ

Dr B R Ambedkar's journey | India News,The Indian Express

ಶಿವಲೀಲಾ ಹುಣಸಗಿ

Ambedkar family - Wikipedia

ನೀ ಹೋದ ಮರುದಿನ ಮೊದಲಂಗ
ನಮ್ಮ ಬದುಕು ಎಂಬ ಗೋಳು ನಿಂತಿಲ್ಲ //ಪ//

ಮರಳಲಿಲ್ಲವೋ ಆ ದಿನಗಳು
ಕನಸುಗಳೆಲ್ಲ ಕಮರಿಹೋದವು
ನಿಟ್ಟುಸಿರು ನಮ್ಮ ಪಾಲಾದವು
ಬದಲಾಗಲಿಲ್ಲ ಏನು

ನೀ ಸೋತು ಸೊರಗಿದಿ ಅನುದಿನ
ಕಂಡ ದುರಂತ ಮಾಸಿಲ್ಲ ಅನುದಿನ
ಡೊಂಬರಾಟಕ ನಿಬ್ಬಣ ಕಟ್ಟಿ ನಿಂತಂಗ
ಹಲಗಿ ಹೊಡೆದಷ್ಟು ಮಾರಣ ಹೋಮ

ಸೂಟು ಬೂಟು ಬಂದದ ಕೇರಿಗೆ
ಅಕ್ಷರದ ಹಣತಿ ಬೆಳಗಿದ ಗುಡಿಸಲಿಗೆ
ಮಬ್ಬು ಇನ್ನು ಹರಿದಿಲ್ಲ ಹೆಬ್ಬಾಗಿಲಿಗೆ
ಹಬ್ಬದ ಸಡಗರವಿಲ್ಲ ಮುಂಬಾಗಿಲಿಗೆ

ಸಂವಿಧಾನದ ಶಿಲ್ಪಿ ನೀವಾಗಿ ಉಳಿದ್ರಿ
ದೇಶಕ ಗೌರವ ತಂದವರು ನೀವಾದ್ರಿ
ಅದನುಳಿಸಲು ಹೋರಾಟ ನಡದೈತ್ರಿ
ದಲಿತನ ಎದೆ ಸೀಳಿ‌ ರಾಗ ಮೀಟೈತ್ರಿ

ಹೆಸರಿಗಷ್ಟೇ ಸೀಮಿತವಾದ ಕ್ಷಣಗಳಿವು
ಜಾತಿಯ ಅಂಧಕಾದಲಿ ಬುಗಿಲೆದ್ದವು
ಮನಸ್ಸಿಗೆ ಬಂದಂಗ ನಡೆದು
ಕಾನೂನ ಗಾಳಿಗೆ ತೂರಿ ಮೆರೆದಾರು

ಹೊಲೆ ಮಾದಿಗರ ಕೋಟಾಕೆ ನೀ ಮಾತ್ರ
ದಲಿತ ಕೇರಿಗೆ ಜನಕ ಮತ್ಯಾರಿಗೂ ನೀ ಬೇಕಿಲ್ಲ
ಮೇಲು ಕೀಳೆಂಬ ಅಜ್ಞಾನದಿ ಮುಳುಗಿದವರ
ನರನಾಡಿಯಲಿ ಹರಿವ ರಕ್ತದ ರಂಗರಿತಿಲ್ಲ

ಬೆಳಕ ನೀಡುವ ರವಿಗಿಲ್ಲದ ಜಾತಿ
ಬೀಸೋ ಗಾಳಿಗೆ ಇಲ್ಲದ ಜಾತಿ
ಕುಡಿಯೋ ನೀರಿಗೆ ಇಲ್ಲದ ಜಾತಿ
ಭೂತಾಯಿ ಮಡಿಲಿಗಿಲ್ಲದ ಜಾತಿ

ಮನುಷ್ಯ ಮನುಷ್ಯನ ನಡು ನರಳಾಟ
ದಿನಕ್ಕೊಂದು ಮುಖವಾಡದಾಟ
ಅಸಹಾಯಕರೆಲ್ಲರ ಉದರ ಬರಿದು
ಜುಟ್ಟಿಗೆ ಮಲ್ಲಿಗೆ ಮುಡಿಸಿದ ಆಟ

ಎದ್ದವರೆಲ್ಲ ಮಗ್ಗುಲಾಗಿರು ಹಗಲು
ಯಾರಿಗೆ ಬೇಕಿದೆ ಹೊಡೆದಾಟ
ಸ್ವಾರ್ಥದ ಬೆನ್ನ ಹತ್ತಿ ಮೆರೆದವರು
ದನಿಯೆತ್ತಿದವರ ಕತ್ತ ಕೊಯ್ದು


About The Author

6 thoughts on “ಅಂಬೇಡ್ಕರ್ ನೆನಪಿಗೆ”

    1. ರತ್ನ ನಾಗರಾಜ

      ಒಳ್ಳೆಯ ಭಾವಪೂರ್ಣ ಮನಕಲಕುವಂತ ಮನಮುಟ್ಟುವಂತೆ ಕವಿತೆ ಸೂಪರ್ ಶಿವಲೀಲಾ ಅಭಿನಂದನೆಗಳು

  1. ಸತ್ಯದ ಸಂಘರ್ಷಕ್ಕೆ ಸಾಕ್ಷಿಯಾಗಿದೆ ತಮ್ಮ ಈ ಲೇಖನ.

  2. ದೇವಿದಾಸ ಬಿ ನಾಯಕ ಅಗಸೂರು

    ಇನ್ನೂ ಮನುಜ ಬದಲಾಗಬೇಕು ಎಂಬ ಸಂದೇಶ ಹೊತ್ತ ಕವನ ಸೊಗಸಾಗಿದೆ

  3. ಜಾತೀಯತೆಯ ಮಂಕು ಬಡೆದ ಈಗಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ

Leave a Reply

You cannot copy content of this page

Scroll to Top