ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶೀರ್ಷಿಕೆ ಇರದ ಪುಟ..!

ಈರಪ್ಪ ಬಿಜಲಿ

Abstract art | Tate

ಹುಟ್ಟು ಉಚಿತ
ಸಾವು ಖಚಿತ
ನಡುವೆ ಇರುವ ಬಾಳಿಗೆ
ಅರ್ಥವಿಲ್ಲದೆ ಬಾಳಿದರೆ
ಅದೊಂದು ಶೀರ್ಷಿಕೆ ಇರದ ಪುಟ…

ಅನಂತ ಪಯಣದಲಿ
ಹಲವಾರು ನಿಲ್ದಾಣಗಳಿವೆ
ಸಾಗುವ ಪಯಣದಲಿ ಗುರು – ಗುರಿಯಿಲ್ಲದೇ
ಚಲಿಸಿದರೆ ಶಿರ್ಷಿಕೆ ಇರದ ಪಟದ
ಬಸ್ಸಿನಲಿ ಹತ್ತಿ ಪ್ರಯಾಣಿಸಿದಂತೆ….

ವಿಶಾಲ ಸಾಗರದಿ ಸೌಂದರ್ಯ ರಾಶಿ
ಸವಿಯುತ್ತ ನಾವಿಕನಿಲ್ಲದ ನಾವೆಯನು
ಏರಿದರೆ ಶೀರ್ಷಿಕೆ ಇರದ ಪುಟವನ್ನು
ಸರಸರನೆ ಓದಿದಂತೆ…

ಭಾವನೆಗಳೇ ಇಲ್ಲದ ಬಾಲೆಯನ್ನು
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸದರೇನು ಫಲ?
ಘಮವಿರದ ಸುಮದಂತೆ..ಆ ಪ್ರೀತಿ..
ಶೀರ್ಷಿಕೆ ಇರದ ಪುಟವಲ್ಲವೇ…ಓ ದೇವ..!!


About The Author

Leave a Reply

You cannot copy content of this page

Scroll to Top