ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನು ಹೆಣ್ಣು…ಹೌದು…!!

ಹೆಚ್.ಮಂಜುಳಾ, ಹರಿಹರ.

ನಾನು ಶಕ್ತಳು ನಾನು ಸಶಕ್ತಳು
ನಾ ಮಾಡುವುದನ್ನು ನೀನೆಂದೂ ಮಾಡಲಾರೆ,ನಾ ನೋಡುವುದನ್ನು ನೀನು ಅರಿಯಲಾರೆ;ಆದರೂ ಕಾಣೇ ಆ ಒಣಜಂಭವೇಕೋ…..

ಲಾಲನೆಗೆ ನನ್ನ ಮಡಿಲು ಪಾಲನೆಗೆ ನನ್ನ ಒಡಲು,ಆಟಕ್ಕೆ ಬೇಕು ತಾಯಿ ಪಾಠಕ್ಕೆ ನಾನೇ ಸೈಯಿ; ಮಗುವ ರಮಿಸುವ ಜಂಜಡವನೊಲ್ಲದ ನಿನಗೇಕೋ ನನ್ನೆಡೆಗೆ ಕಡೆಗಣ್ಣು….

ನಾನಿಲ್ಲದ ಮನೆಯದು ಕಸದ ಕೂಪ
ನಾನಿದ್ದರೆ ಕಳೆ ತುಂಬುವುದು ನಂದಾದೀಪ, ನಾನಿದ್ದರೆ ನಿನಗೊಂದು ಗತ್ತು ಗಮ್ಮತ್ತು;
ಅದಕ್ಕೂ ತಕರಾರು ನನಗೆ ಗೊತ್ತು…

ಏಕೆಂದರೆ ನಾನು ಹೆಣ್ಣು…
ನಿನ್ನ “ಅಹಂ” ಗೆ ‘ಒಗರಾದ’ ಹಣ್ಣು….!!


About The Author

1 thought on “ನಾನು ಹೆಣ್ಣು…ಹೌದು…!!”

Leave a Reply

You cannot copy content of this page

Scroll to Top