ಗಜಲ್
ಶಂಕರಾನಂದ ಹೆಬ್ಬಾಳ


ನೇಹದ ಮನವು ಪ್ರಲೋಭನೆಗೆ
ಒಳಗಾಗುತ್ತಿದೆ ಸಖಿ
ಕಂಪಿಸಿದ ಹೃದಯ ಮೌನದಿ
ಪ್ರಲಾಪಿಸುತ್ತಿದೆ ಸಖಿ
ಅಗಲಿಕೆಯ ನೋವು ಕೊನೆತನ
ಶಾಶ್ವತವೇ ಜಗದಿ
ಕನಸುಗಳ ಲೋಕವು ಬರಿದಾಗಿ
ಸೊರಗುತ್ತಿದೆ ಸಖಿ
ವಿರಹದ ಬೇಗೆ ದಾವಾಗ್ನಿಯಾಗಿ
ಒಡಲ ಸುಡುತಿದೆ
ಉದ್ವಿಗ್ನದ ಅವ್ಯಾಜ ಭಾವವು
ಕೊರಗುತ್ತಿದೆ ಸಖಿ
ಅಹೋರಾತ್ರಿ ನಿನ್ನದೆ ಕನವರಿಕೆ
ಸ್ವಪ್ನದಲಿ ನೋಡು
ಉಸಿರಿಲ್ಲದ ದೇಹ ಉಡುಗಿ
ಬಡಕಲಾಗುತ್ತಿದೆ ಸಖಿ
ದುಃಖದ ಮಡುವಲ್ಲಿ ಮಿಂದಿತು
ಅಭಿನವನ ಕಾವ್ಯ
ಅಶನವ ತೊರೆದು ಜೀವವು
ಹಳಹಳಿಸುತ್ತಿದೆ ಸಖಿ




1 thought on “ಗಜಲ್”