ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಎ.ಕಮಲಾಕರ ಸುರಪುರ

ನಿನ್ನ ಕಣ್ಣಿನ ಸಮುದ್ರದೊಳು ಮುಳುಗಿ ಪ್ರೀತಿಯ ಮುತ್ತು ತರಲು ಬಿಡು ನನ್ನ ಪ್ರಿಯೆ!
ಹೃದಯದ ಆಳಕೆ ಇಳಿದು ನೋವು-ನಲಿವುಗಳ ಜೊತೆ ಇರಲು ಬಿಡು ನನ್ನ ಪ್ರಿಯೆ!!

ಕಿವಿಯಲಿ ನಿನಾಡಿದ ಸವಿ ನುಡಿಗಳೆ ಹಗಲು ರಾತ್ರಿ ಗುನುಗುತಿವೆ ಬಾ ಬೇಗ ಎಲ್ಲಿರುವೆ!
ಮನದಲಿ ನಮ್ಮಿಬ್ಬರ ಪ್ರಣಯದ ನೆನಪುಗಳು ಕಾಡುತ ಬರಲು ಬಿಡು ನನ್ನ ಪ್ರಿಯೆ!!

ನಿದ್ರೆಯಲಿ ಸಾಲು ಸಾಲಾಗಿ ಬಂದು ಮುಕ್ಕಿ ಹಿಂಸೆ ಕೊಡುತಿವೆ ನನಗೆ ಕನಸುಗಳಾಗಿ!
ಹೋದ ಕಡೆಯಲ್ಲ ನೆರಳಾಗಿ ಬೆನ್ನು ಬಿದ್ದಿರುವೆ ನಿನ್ನಯ ನಶೆ ಏರಲು ಬಿಡು ನನ್ನ ಪ್ರಿಯೆ!!

ಕಣ್ಮುಚ್ಚಿದರು ತೆರೆದರು ನೀನೆ ಕಾಣುತಿರುವಿ ಹುಚ್ಚಾಸ್ಪತ್ರೆಯ ದಾರಿಯು ತೋರಿಸದಿರು!
ಹೀಗೆಯೇ ಮನಸ್ಸು ಮೆದುಳುಗಳಲ್ಲೆಲ್ಲ ತುಂಬಿಕೊಂಡು ಕೂರಲು ಬಿಡು ನನ್ನ ಪ್ರಿಯೆ!!

ಕಮಲ್ ನ ಸರ್ವಾಂಗಗಳಲಿ ನೀನಿಳಿದು ಒಂದಾದ ಮೇಲೆ ಏನಿದೆ ಹೇಳು ಬಂದುಬಿಡು!
ನಿನ್ನೊಲವು ಉಸಿರಾಟದಿ ಬೆರೆತು ರಕ್ತದ ಕಣ ಕಣದಲಿ ಸೇರಲು ಬಿಡು ನನ್ನ ಪ್ರಿಯೆ!!


About The Author

1 thought on “ಗಜಲ್”

Leave a Reply

You cannot copy content of this page

Scroll to Top