ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಹಿಳಾ ದಿನದ ವಿಶೇಷ

ಭಿತ್ತಿ

ಅರುಣ ರಾವ್

Woman Statue Pictures | Download Free Images on Unsplash

ಕೋಣೆಯ ನಾಲ್ಕು ಗೋಡೆಗಳು
ಅವೆಷ್ಟು ನೋವುಗಳಿಗೆ ಸಾಕ್ಷಿಯಾಗಿವೆಯೋ?
ಚೀರಾಟ ಅರಚಾಟಗಳಿಗೆ ರಂಪಾಟಗಳಿಗೆ
ಕಿವಿ‌ ಕಿವುಡಾಗಿ ಕೇಳಗಾಗಿದೆಯೇನೋ!

ಪ್ರಸ್ತದ ರಾತ್ರಿಯ ಕೈಬಳೆ ನಾದ
ಜೊತೆಗೆ ಸುಖದ ಮೂಲುಗಾಟ
ಗೋಡೆಯ ಮರೆಯ ಪಿಸುಮಾತುಗಳು
ಅವರಿವರ ಬಗೆಗಿನ ಚಾಡಿ

ಪ್ರಸವ ಬೇನೆಯ ನರಳಾಟ
ನಂತರ ಹಸುಗೂಸಿನ ತಾರಕದ ಅಳು
ತಂದೆಯ ಗೆಲುವಿನ‌ಮುಗುಳ್ನಗೆ ಜೊತೆಗೆ
ತಾಯ ನೆಮ್ಮದಿಯ ಬಿಟ್ಟುಸಿರು

ದಾದಿಯ ಉಪಚಾರ ಅಮ್ಮನ ಆರೈಕೆ
ಬೆಳ್ಳುಳ್ಳಿ, ಹರಳೆಣ್ಣೆ ಸಾಂಬ್ತಾಣಿಯ ಹೊಗೆ
ತಾಉ ಮೊಲೆವಾಲ ಕರೆ
ಹಿತ ನಾತ ಮೂಗಿಗೆ ಈ ಗೋಡೆಗೆ

71,639 Female Sculpture Stock Photos, Pictures & Royalty-Free Images -  iStock

ಬೆಳಗ್ಗೆ ಸಂಜೆ ಭೇಟಿ ನೀಡುವ ವೈದ್ಯ
ಮಂಚದ ಪಕ್ಕದಲ್ಲಿಜೋಡಿಸಿದ್ದ ಔಷದಿಯ ಬಾಟಲಿ
ನಿತ್ಯ ನೋವಿನಲ್ಲೇ ಮುಳುಗೇಳುತ್ತ
ಸಾವಿಗಾಗಿ ಎದುರು ನೋಡೋ ಜೀವಂತ ಶವ

ಗುಳಿಯಲ್ಲಿ ಮಲಗಿದ್ದ ಹೆಣವಾದರೂ ಬೇಕು
ನೋವ ನುಂಗಿ ನಕ್ಕಾಗ ತುಟಿ ಬಂಜರು
ಸುತ್ತಲೂ ಕುಳಿತು ಅಳುತಿಹ ನೆಂಟರು
ಯಾತ್ರೆಗೆ ಸಾಕ್ಷಿಯಾಗಿಹ ಭಿತ್ತಿ ಚಲಿಸದೆ ನಿಂತಿರು 


About The Author

Leave a Reply

You cannot copy content of this page

Scroll to Top