ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕೊಲ್ಲು ಕೊಲ್ಲನುವರಯ್ಯ

ಆನಂದಬಸವ

Collector Concerns: How to Judge the Quality of Abstract Painting | Artwork  Archive

ಮಾನವ ಕುಲವಿದರೊಂದಿಗೆ ಬಾಳುವುದು ಹೇಗಯ್ಯ
ಏನು ಮಾಡಿದರೇನು ? ಕೊನೆಯೊಂದಿನ ಬಿಡದಯ್ಯ
ಗೋವು ನೀಡಿದ ಕರುವಾದರೂ ಬಳಸಿದರಯ್ಯ
ಹೋರಿ,ಎತ್ತಾಗಿ ಹೂಡಿ ಮುಪ್ಪಾಯ್ತು ಕೊಲ್ಲು ಕೊಲ್ಲುನುವರಯ್ಯ..

ಬಾಳು ಹೊತ್ತು ಹೆಣ್ಣೊಂದು ಸತಿಯಾಗಿತಯ್ಯ
ಹಣ್ಣು ಹಣ್ಣಾಗಿದೆಂದು ತಿಂದೆಸೆಯುವ ಕುಲವಯ್ಯ
ಹೆಣ್ಣು ,ಹಣ್ಣು ,ಮಣ್ಣು ಮೂರು ಬಳಿಸಿದರಯ್ಯ
ಬಳಿಕೆ ನಿಂತ ಮೇಲೆ ಗಳಿಕೆಗಾಗಿ ಮಾರಿದರಯ್ಯ..

ಅರಿಷಡ್ವರ್ಗಗಳ ತನ್ನೊಳು ಇಟ್ಚು ಬಾಳುವನಯ್ಯ
ಮನಸ್ಸು ಹೇಳಿದ ಹಾಗೆ ಕುಣಿದು ಹಾಳಾಗಿತಯ್ಯ
ಮೂರು ದಿನದ ಬಾಳಿನೊಳು ಸುಖ ಬಯಸಿತಯ್ಯ
ಕಾಮ,ಕ್ರೋಧ, ಲೋಭ, ಮೋಹ ,ಮಧ,ಮತ್ಸರವಯ್ಯ..

ಹಿಡಿತ ಮನವಿದು ಹರಿತವಾಗಿತಯ್ಯ
ಕುರಿತು ಹೇಳುವ ನುಡಿ ಮರೆತು ಬಾಳಿತಯ್ಯ
ಸದಾ ದುರಿತಗಳಾವಸ್ತೆಯೊಳು ಹಿಂಸೆಯೊಳ್ಗಿತಯ್ಯ
ಕಳೆದ್ಹೋದ ಕಾಲ ಬಳಿ ನಿಂತು ಕಾಯುವುದಯ್ಯ..


About The Author

Leave a Reply

You cannot copy content of this page

Scroll to Top