ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿ.ಶ್ರೀನಿವಾಸ ಎರಡು ಕವಿತೆಗಳು

broken circuit symbol of freedom

ದಾಳಿ


ನೋಟುಗಳ ಮೇಲೆ,
ದೇಶ-ವಿದೇಶಗಳ ಮೇಲೆ
ದಾಳಿಯ ಬದಲು
ಜಾತಿಗಳ ಮೇಲೆ ನಡೆದಿದ್ದರೆ..

ಸಾಯುವ ಮುನ್ನ
ಊರ ಜನರನ್ನು ಒಮ್ಮೆಯಾದರೂ ಮುಟ್ಟುವ

ಅಪ್ಪನ ಕನಸಾದರೂ ನನಸಾಗುತ್ತಿತ್ತು

*************

ಐ ಕಾಂಟ್ ಬ್ರೀದ್….

ಮಲದ ಗುಂಡಿಗೆ ಇಳಿದವನೂ
ಹೀಗೆಯೇ ಕೂಗುತ್ತಿದ್ದ
ಆದರೆ ಪಾಪ …
ಅವನಿಗೆ
ಇಂಗ್ಲಿಷ್ ಬರುತ್ತಿರಲಿಲ್ಲ


About The Author

Leave a Reply

You cannot copy content of this page

Scroll to Top