ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮೋಹದ ಕಡಲಲ್ಲಿ…

Art deco abstract faces. An abstract painting of female faces stock illustration

ಜಯಲಕ್ಷ್ಮೀ ಎನ್ ಎಸ್ ಕೋಳಗುಂದ

ಅಂಗ ಸಂಗವ ಜರೆದು
ಅರಿವೆ ಹಂಗನು ತೊರೆದು
ಬೆತ್ತಲಾದ ಅಕ್ಕಯ್ಯನಿಗೂ
ಆತ್ಮ ಸಂಗಾತದ ಮೋಹ..!

ಮಾಯೆಯ ಜಗದೊಳಗೆ
ಈಸಿ ಗೆದ್ದ ಅಲ್ಲಮನಿಗೂ
ಲಿಂಗದಾಲಿಂಗನದ ಮೋಹ…!

ಕಾನನದ ಕಾರ್ಪಣ್ಯಗಳ
ಅರಿವಿದ್ದೂ ಸೀತೆಯ ಬಿಡದ
ಬಂಗಾರದ ಮೋಹ…!

ಬಸುರಿ ಹೆಂಡತಿಯ
ಕಾಡಿಗಟ್ಟಿದ ಪುರುಷೋತ್ತಮನ
ಜನಪದದ ಮೋಹ..!

ಮಡದಿಯ ಅಡವಿಟ್ಟೂ
ಮಾತುತಪ್ಪದ ಹರೀಶ್ಚಂದ್ರನ
ಸತ್ಯನಿಷ್ಠೆಯ ಮೋಹ..!

ಗೆದ್ದ ರಾಜ್ಯವ ಒದ್ದು
ತಪೋನಿರತನಾದವನಿಗೂ
ಜಿತನಾಗುವ ಮೋಹ…!

ಸಾವಿನ ಬಾಗಿಲಿನಲಿ ನಿಂತ
ಅರಿವಿದ್ದೂ ಫಣಿಕೇತನನಿಗೆ
ಛಲಮೆರೆವ ಮೋಹ..!

ತುಂಡು ಅರಿವೆಯ ಮಂಡಿಯ ಮೇಲೆ
ಸುತ್ತಿಕೊಂಡ ಫಕೀರನಿಗೆ
ಮುಕ್ತಿ ಕೊಡಿಸುವ ಮೋಹ…!

ಮೋಹವ ಗೆದ್ದೂ ಗೆಲ್ಲದ
ನಿರ್ಮೋಹಿಗಳೂ
ಮೋಹದ ಕಡಲೊಳಗಿನ
ಆಣಿಮುತ್ತುಗಳಾದರು….!!

**************************************

About The Author

Leave a Reply

You cannot copy content of this page

Scroll to Top