ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದಿತ ಕವಿತೆ

ಇದು ದುಃಖದ ಸಂಜೆ

ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ

ಕನ್ನಡಕ್ಕೆ : ಆರ್.ವಿಜಯರಾಘವನ್

Jellyfish, Sea Jellies, Animals

ಇದು ದುಃಖದ ಸಂಜೆ; ಚತುರೆಯ ಆ ನೋಟವ ಕುರಿತು ಮಾತನಾಡಿ
ಮಾದಕತೆ ಹರಡುತ್ತಿದೆ; ಈಗ ರಹಸ್ಯವ ಕುರಿತು ಏನಾದರೂ ಮಾತನಾಡಿ.

ಚತುರೆಯ ಈ ಮೌನ; ಇದು ಹೃದಯದ ರಕ್ತನಾಳಗಳ ಕೀಳುತ್ತಲಿದೆ
ಈ ಮೌನದಲ್ಲಿ, ವಾದ್ಯ ಮುರಿಯುವ ಕುರಿತು ಏನಾದರೂ ಮಾತನಾಡಿ

ಹರಡುವ ಕೂದಲಿನ ಘಮಲು! ದುಃಖಕ್ಕೆ ಮುಸುಕ ಹಾಕುವ ಕಥೆ!
ಮುಂಜಾನೆ ಬರುವನಕ ಅಂತಹ ವಿಷಯಗಳ ಕುರಿತು ಮಾತನಾಡಿ

ಹೃದಯದ ಪ್ರತಿ ರಕ್ತನಾಳವ ನೂಕಿತ್ತೆಸೆಯಲಿ! ಅದಕೂ ನೋವಾಗಲಿ!
ಅಂತೆಯೇ ಅವಳ ಉಚಿತ-ಅನುಚಿತ ಚತುರತನ ಕುರಿತು ಮಾತನಾಡಿ

ರಹಸ್ಯಗಳ ಆ ಧ್ವನಿಯ ಮೌನವ ಕುರಿತು ಮಾತನಾಡಿ
ಅನಸ್ತಿತ್ವದ ಮೂಲತತ್ವವನು, ಜೀವನಸಂದೇಶವನ್ಕು ಕುರಿತು ಮಾತನಾಡಿ

ಪ್ರೀತಿಯನು ಅಪಕೀರ್ತಿಗೆಳೆಸಲು ಪ್ರಾರಂಭಿಸಿದೆ, ಆನಂದವಿಲ್ಲ, ಬರೀ ಬೇಸರ ಇಂದು, ದೃಷ್ಟಿ ತಪ್ಪಿಸುವ ಅವಳ ಕಣ್ಣಿನ ಕುರಿತು ಮಾತನಾಡಿ

ಯಾರ ಹೆಸರಿನ ಉಲ್ಲೇಖವೇ ಬಣ್ಣ ಪರಿಮಳದ ವಿಶ್ವವನು ಸೃಷ್ಟಿಸುವುದೋ
ಓ, ಗೆಳೆಯರೇ! ಆ ಚದುರೆಯರ ಹೊಸ ವಸಂತವ ಕುರಿತು ಮಾತನಾಡಿ

ನಿರ್ಲಕ್ಷ್ಯದ ಕ್ಷಮೆಯ ಅರ್ಥವೇನು? ಪ್ರೀತಿಯ ಮೇಲೇಕೆ ಆರೋಪ?
ಇಂದು, ವಿಂಗಡನೆಗಳ ಸೃಷ್ಟಿಕರ್ತ ಆಕಾಶದ ಬಗ್ಗೆ ಮಾತನಾಡಿ

ಪಂಜರದ ಸರಳು‌ಗಳ ತೂರಿ ಎಂತೆಂಥದೋ ಬೆಳಕು ಒಳಗೆ ಸೋಸುತ್ತಿದೆ
ತೆರೆದ ಸ್ಥಳಗಳ, ಅತೃಪ್ತ ಬಯಕೆಗಳ ಕುರಿತು ಏನಾದರೂ ಮಾತನಾಡಿ

ಅದು ಅನಂತ ಬಾಳ್ವೆ, ಹಠಾತ್ ಸಾವು, ಎಷ್ಟು ಅನಿರೀಕ್ಷಿತಗಳು
ಇಂದು, ನಾಜ್ಮತ್ತು ಆಂದಾಜ್ನ ಕುರಿತು ಏನಾದರೂ ಮಾತನಾಡಿ

ಅಸಡ್ಡೆಯೊಡಗೂಡಿದ ಪ್ರೀತಿಯೂ ತುಸು ಸಹನೆಯಿಂದಿರಲು ಅನುವಾಗಿದೆ
ಮೋಡಿ ಮಾಡುವ ಸೌಂದರ್ಯದ ಖನಿಯ ಲವಲವಿಕೆಯ ಕುರಿತು ಮಾತನಾಡಿ

ಓ, ಫಿರಾಕ್, ಇಂದು
ಕ್ರಿಸ್ತನಂತೆ ಜೀವ ನೀಡುವ ಗುಣವ ಹೊಂದಿದವನ ಕುರಿತು ಮಾತನಾಡಿ
ಅವಳ ಮರುಹುಟ್ಟಿನ ಪ್ರೀತಿಯಿಂದ ದೂರ ಹೋಗುವುದರ ಕುರಿತು ಮಾತನಾಡಿ.

*******************************

About The Author

2 thoughts on “ಇದು ದುಃಖದ ಸಂಜೆ”

Leave a Reply

You cannot copy content of this page

Scroll to Top