ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದ್ವಿಪದಿಗಳು

ವಿ.ಹರಿನಾಥ ಬಾಬು

Lupin Flowers. Pink Lupin flowers (Lupinus polyphyllus) growing against a stone wall in a garden royalty free stock images

ಯಾರನ್ನಾದರೂ ಏನ ಕೇಳುವುದಿದೆ?
ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ!

ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆ
ಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ

ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆ
ನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ??

ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದು
ಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ

ಮರಗಿಡಗಳೂ ಮೌನ ತಾಳಿವೆಜೀವವಿರದ ಈ ದೇಹ ದಿಗಿಲುಗೊಂಡಿದೆ

ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆ
ಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ

ಒಂಟಿತನಕೆ ಯಾಕಿಷ್ಟು ಆತಂಕ?
ನೀನು ಕೊಟ್ಟ ಪ್ರೀತಿಯ ಸವಿಮುತ್ತು ಇದ್ದ ಕಾಲಕ್ಕ

ಹಗಲನೇಗೋ ಕಳೆದುಬಿಡುವೆ ಬೆಳಕಿನ ಜೊತೆಗೂಡಿ
ಇರುಳು ನಿನ್ನ ನೆನಪ ಹೆಣವ ತಂದು ಸುರಿಯುತಿದೆ ಅಂಗಳಕೆ

ನೀನಲ್ಲದೆ ಚಂದಿರ ಉರಿವ ಸೂರ್ಯನಿಗೂ ಮಿಗಿಲಾಗಿರುವ
ಅವನ ಬೆಳದಿಂಗಳ ಬೆಂಕಿ ಕನಸುಗಳ ಸುಟ್ಟು ಕೇಕೆ ಹಾಕಿದೆ

**********************************

About The Author

1 thought on “ದ್ವಿಪದಿಗಳು”

  1. ಮಾನ್ಯ ಸಂಪಾದಕರಿಗೆ ಪ್ರಕಟಿಸಿದ್ದಕ್ಕೆ ಧನ್ಯವಾದಗಳು
    *
    ಪ್ರತಿ ದ್ವಿಪದಿಗಳ ಮಧ್ಯೆ ಒಂದು * ಇರಬೇಕಿತ್ತು

    ಕಾಗುಣಿತ ದೋಷಗಳು ನುಸುಳಿವೆ!

    ಒಂದು ದ್ವಿಪದಿಯ ಸಾಲು ಏಕವಾಗಿ ಮುಂದುವರಿದಿದೆ!

Leave a Reply

You cannot copy content of this page

Scroll to Top