ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಿನ್ನ ಮೋಹಕೆ

ರೇಷ್ಮಾ ಕಂದಕೂರು

ಕೆಲವರು ಹಾಗೆ

brown wooden flute

ನಿನ್ನ ಮೋಹದ ಅರವಳಿಕೆ
ಮೈಮನವ ಮರೆತ ಹಾಗಿದೆ
ಭಾವೋನ್ಮಾದದ ಬೆಸುಗೆಗೆ
ಬಾಚಿ ತಬ್ಬುವ ಇಳೆಯ ಪ್ರೀತಿಯಂತೆ

ಸಾಚಾತನಕೆ ಪರಚಿದ ಗಾಯ
ಮಾಸದ ಕಲೆಯ ಸ್ಥಿತಿ
ಬೆಡಗು ಬಿನ್ನಾಣದ ರಿಂಗಣ
ಲಗ್ಗೆ ಹಾಕುವ ನೆರೆಯ ಹಾವಳಿ

ಕಣ್ಣ ಹೊಂಬೆಳಕಿನ ಕಿಡಿ
ಹೊತ್ತಿಸಿದೆ ಅನುರಾಗದ ದೀಪ್ತಿ
ಮೌನಕೂ ಕಸಿವಿಸಿಯಾದಂತೆ
ಆಸರೆಯ ಒಡಲಲಿ ತವಕ

ಅನುದಿನವು ಬೇಯುತಿದೆ
ಸಹಚರಕೆ ಹಪಹಪಿಸಿದೆ ಕಂಗೆಟ್ಟು
ಇರುಳ ಬಾನ ತುಂಬಾ ನಗೆಯ ನಕ್ಷತ್ರ
ಚೆಲುವಿನ ಚೈತ್ರಕೂ ಮರುಹುಟ್ಟು

ವಿಸ್ಮಿತ ಪ್ರತಿಯ ಸ್ವರೂಪ
ಸ್ವಪ್ನದಿ ಕಾಡಿದೆ ಬೆಂಬಿಡದೆ
ಜ್ವಾಲಾಮುಖಿಯ ಆವೇಗದ ಸಂಚಾರ
ಬೆರಗಿನ ಜಾಡು ಅನವರತ.

****************

About The Author

Leave a Reply

You cannot copy content of this page

Scroll to Top