ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದಿತ ಕವಿತೆ

ದ್ರೌಪದಿ ಶಸ್ತ್ರಧಾರಿಯಾಗು

ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  
ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ.

NUTAN

ನೂತನ ದೋಶೆಟ್ಟಿ

Mahabharat: It took THESE many days to shoot the Draupadi Cheer Haran scene

ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲ
ನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲ
ನೀನೇ ನಿನ್ನ ಹುರಿದುಂಬಿಸಿಕೊ
ಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆ
ಎಲ್ಲ ತಲೆಗಳೂ ಬಿಕರಿಯಾಗುತ್ತವೆ
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ

ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.
ಇನ್ನೂ ಎಷ್ಟು ಕಾಲ ನಿರುಕಿಸುವಿ?
ಈ ದುಶ್ಯಾಸನರ ದರ್ಬಾರಿನಲ್ಲಿ
ಎಂಥ ರಕ್ಷಣೆಯ ಅಹವಾಲು?
ಈ ದುಶ್ಯಾಸನ ಕಡು ದುಷ್ಟ
ಕಡು ಲಜ್ಜಾಹೀನನೂ
ಅವನಿಂದ ನಿನ್ನ ಶ್ರೀರಕ್ಷೆಯೇ?
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ

ನಿನ್ನೆಯ ತನಕ ಕುರುಡಾಗಿದ್ದ ರಾಜ
ಈಗ ಮೂಗನೂ, ಕಿವುಡನೂ
ಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆ
ಜೊತೆಗೆ ಕಿವಿಯ ಮೇಲೆ ಬಿಗಿ ಪಹರೆ
ನಿನ್ನ ಈ ಕಣ್ಣೀರು
ಯಾರನ್ನು ತಾನೆ ಕರಗಿಸಬಲ್ಲುದು ?
ಕೇಳು ದ್ರೌಪದಿ , ಶಸ್ತ್ರಧಾರಿಯಾಗು
ಈಗ ಗೋವಿಂದ ಬರುವುದಿಲ್ಲ.

*************************

About The Author

Leave a Reply

You cannot copy content of this page

Scroll to Top