ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಪರಿಚಯ

ಕಾಗೆ ಮುಟ್ಟಿದ ನೀರು

ಪುಸ್ತಕ:- ಕಾಗೆ ಮುಟ್ಟಿದ ನೀರು
ಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆ
ಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ

ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ.

ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. ಬಿಳಿಮಲೆರವರು ಒಬ್ಬ ಎಡಪಂಥೀಯರು, ಚಿಂತಕರೂ, JNU ಯಲ್ಲಿ ಪ್ರಾಧ್ಯಾಪಕರು ಅಂತ ಮಾತ್ರ ತಿಳಿದಿದ್ದ ನನಗೆ, ಕಾಗೆ ಮುಟ್ಟಿದ ನೀರಿನಿಂದ ಅವರೇನೂ ಅಂತ ಮತ್ತಷ್ಟು ಒಳಹೊಕ್ಕು ತಿಳಿಯಲು ಅನುಕೂಲವಾಯಿತು.

ಬಂಟಮಲೆಯಿಂದ ದೆಹಲಿವರೆಗೆ ಬೆಳೆದು ದೇಶ-ವಿದೇಶ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಇವರ ಎದೆಗಾರಿಕೆಗೆ ಮೆಚ್ಚಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸುತ್ತಿರುವುದು ಸಹ ವಿಶೇಷ. ಬಾಲ್ಯದ ನೆನಪನ್ನು ಹೆಕ್ಕಿ, ಪಿಯು ಫೇಲಾಗಿ ಶಿಕ್ಷಣ ಪೂರೈಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾ, ಬದುಕು ಬಂದಂತೆ ಎದುರಿಸಿ, ಕೊನೆಗೆ ಬದುಕು ಕಟ್ಟಿಕೊಂಡ ಇವರ ಯಶೋಗಾಥೆ ನನಗೆ ಸ್ಪೂರ್ತಿ ಆಗಬಹುದೆಂದರೆ ತಪ್ಪಾಗಲಿಕ್ಕಿಲ್ಲ.

ದೊಡ್ಡ-ದೊಡ್ಡ ಮನುಷ್ಯರೆನಿಸಿಕೊಂಡವರ ಮನಸ್ಥಿತಿ ಹೇಗಿರುತ್ತದೆಂದು ಕಂಬಾರರ ಕರಾಳ ಮುಖವನ್ನ ಎತ್ತಿ ಹಿಡಿದು, ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿನ ಇವರ ಸೇವೆ, ಜೆ-ಎನ್-ಯುನಲ್ಲಿ ಕನ್ನಡ, ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸ.

ಮದುವೆ, ದೆಹಲಿಯಲ್ಲಿ ಮನೆ, ಪುನರ್ಜನ್ಮ, ಮಾಟಮಂತ್ರ, ಜಾತಿ, ರೋಗದಲ್ಲೂ ಗೆದ್ದಿದ್ದು ಮೇಲ್ನೊಟ್ಟಕ್ಕೆ ಕಟ್ಟುಕತೆಯಂತಿದ್ದರೂ ಇದೊಂದು ವಿಶೇಷ. ಹೋರಾಟದ ಬದುಕು ಆಪ್ತವಾಗಿ ಓದಿಸಿಕೊಂಡು ಹೋಗುವ ಪುಸ್ತಕ.

ನೀರೇ ಗತಿಯಿಲ್ಲದ ಊರಲ್ಲಿ ಕಾಗೆ ಮುಟ್ಟಿದ ನೀರು ನಲ್ಲಿ, ಹಳ್ಳ-ಕೊಳ್ಳದಲ್ಲಿ ಬಂದಿದೆ ನೀವು ಮುಟ್ಟುತ್ತೀರೋ ಇಲ್ಲೋ ಕುಡಿತಿರೋ ಇಲ್ಲ, ಬಳಸುತ್ತಿರೋ ಇಲ್ಲೋ ಅಂತ ಗದ್ಗರ್ತೀತನಾಗಿ ಯಾರೋ ಗದರಿಸಿ ಹಾಡು ಹಾಡಿದಂತೆ ಕಿವಿಯಲ್ಲಿ ಇಂಪರಿಸುತಿದೆ.

ಸಕಲ ರೋಗಗಳಿಂದಾನೆ ಬದುಕುತ್ತಿದ್ದಾರೋ ಏನೋ ಅನ್ನಿಸುತ್ತಿದೆ.ಇತ್ತೀಚಿಗೆ ನಿವೃತ್ತರಾಗಿರಬಹುದು ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಸಂಶೋಧಕ, ಜಾನಪದ ಸಂಶೋಧಕರು, ಕನ್ನಡವಾದಿ, ಮಹಿಳಾಪರರು ಅಪಾರ ಶಿಷ್ಯೋತ್ಸವವನ್ನು ಹೊಂದಿರುವ ನೇರ, ನಿಷ್ಠುರವಾದಿ ಇವರ ಅನುಭವಗಳನ್ನು ಓದುತ್ತಾ ಹೋದರೆ ನಾವೇ ಇದ್ದು ಅನುಭವಿಸುತ್ತಿದ್ದೇವೆನೋ ಅಂತ ಅನ್ನಿಸುವ ಮಟ್ಟಿಗೆ ಆಪ್ತತೆಯ ನಿರೂಪಣೆ ಮುನ್ನುಡಿಯಲ್ಲಿ ಅಚ್ಚುಕಟ್ಟಾಗಿ ಕನ್ನಡಿ ತೋರಿಸಿದ ದಿನೇಶ್ ಅಮಿನ್ ಮಟ್ಟುರವರು, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿದಂತ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

***********************************

ಶಿವರಾಜ್ ಮೋತಿ

About The Author

1 thought on “ಕಾಗೆ ಮುಟ್ಟಿದ ನೀರು”

  1. Purushothama Bilimale

    ಪುಸ್ತಕ ಓದಿ ಪ್ರತಿಕ್ರಿಯಿಸಿದ ನಿಮ್ಮ ಪ್ರೀತಿಗೆ ಕೃತಜ್ಞ

Leave a Reply

You cannot copy content of this page

Scroll to Top