ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು ಹೇಳಿದ್ದಾರೆ. ಜನಪದ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆ ಸಂವಾದಿಯಾದ ವ್ಯಕ್ತಿಯು ಮಾತ್ರ ಇಂತಹದೊಂದು ವಿಶಿಷ್ಟವಾದ ಕೃತಿಯನ್ನು ರಚಿಸಬಲ್ಲರು. ಅವರ ಸ್ಮೃತಿಪಟಲದಲ್ಲಿ ಇದರಿಂದ ಮೂಡಿರುವ ಘಟನೆಗಳು, ಪಾತ್ರಗಳೊಂದಿಗೆ ಸಮ್ಮಿಳಿತಗೊಂಡು ಚೆಂದನೆಯ ಕೊಲಾಜ್ ಇಲ್ಲಿ ನಿರ್ಮಾಣಗೊಂಡಿದೆ. ಈ ಪುಸ್ತಕದ ತಮ್ಮ ಮನದ ಮಾತಿನಲ್ಲಿ, ಹೋಮ್ ಸಿಕ್ನೆಸ್ ಅನ್ನು ‘ಹುಟ್ಟೂರಿನ ಹಂಬಲ’ ಎಂದು ಅನುವಾದಿಸುವಲ್ಲೇ ಶಿವಾನಂದರ ಸಕಾರಾತ್ಮಕ ನೋಟದ ನಿಲುವು, ಒಲವು ಓದುಗನಿಗೆ ದಕ್ಕುತ್ತದೆ. ‌ಕಳವೆಯವರ ಜೇನಿನ ಕುರಿತು ಆಸಕ್ತಿ, ನಾಟಿ ವೈದ್ಯರ ಸಮೀಕ್ಷೆ, ಕಾಡಿನ ಪ್ರೀತಿ, ಪ್ರಾಣಿಗಳೆಡೆಗಿನ ಪ್ರೇಮ ( ಗೌರಿ ಜಿಂಕೆಯ ಆತ್ಮಕಥೆ ಕೃತಿ), ಜೀವಲೋಕದ ಸಸ್ಯಗಳ ಖಜಾನೆಯ ಕುತೂಹಲ ಮತ್ತು ಭಾಷೆಯೆಡೆಗಿನ ಮಮತೆಗಳ ಒಟ್ಟೂ ಮೊತ್ತವೇ ಕಾದಂಬರಿಯಾಗಿರಬಹುದು. ಸ್ಥಳೀಯ ಭಾಷೆ, ನಿರೂಪಣೆ ಮತ್ತು ಕಥೆಯ ಬಂಧ ಈ ಕಾದಂಬರಿಯ ಶಕ್ತಿಯಾಗಿದೆ. ಇಲ್ಲಿನ ನಾಣ್ಣುಡಿಗಳು, ತಮಾಷೆಗಳು, ಆರ್ದ್ರ ಘಟನೆಗಳು ಗಮನ ಸೆಳೆಯುತ್ತವೆ. ‘ಪರೂರ ಹೊಳೆ ಮತ್ತು ಊರ ಸ್ಮಶಾನ ಹೆದರಿಸುತ್ತದೆ’ ಎಂದು ಹೇಳುತ್ತಾ, ಕಥನ ಮಾರ್ಗದ ‘ದಾಟುಸಾಲು’ ಹುಡುಕುತ್ತಿದ್ದೇನೆ ಎಂಬ ವಿನಮ್ರತೆಯಿಂದ ಕಳವೆಯವರು, ಕೇರಳದ ಕೊಟ್ಟಾಯಂ ಕೋಶಾಂಬುಲಿಯಿಂದ ನೂರಾರು ಮೈಲಿ ದೂರವನ್ನು ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ಕಾಲ್ನಡಿಗೆಯಲ್ಲಿ ಶಿರಸಿ ಸಮೀಪದ ಮಧ್ಯಘಟ್ಟಕ್ಕೆ, ಮಗಳು ಶ್ರೀದೇವಿಯನ್ನು ಕಾಣಲು ಬರುವ ಭೂದೇವಿಯ ಪ್ರಯಾಣದಿಂದ ಕಾದಂಬರಿಯನ್ನು ಆರಂಭಿಸುತ್ತಾರೆ. ಶಿರಸಿ ಭಾಗದಲ್ಲಿ ಈಗ ಮತ್ತೆ ಶುರುವಾಗಿರುವಂತೆ, ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ‘ತಿರಾ’ ( ವಧುದಕ್ಷಿಣೆ) ತೆತ್ತು ಲಗ್ನವಾಗುವ ಪ್ರಸಂಗ ಇದ್ದಾಗ ಗೋಪಯ್ಯ ಹೆಗಡೆ ಕುಂಬಳದ ಹೆಣ್ಣು ಶ್ರೀದೇವಿಯನ್ನು ವರಿಸುತ್ತಾರೆ. ಮದುವೆಯಾಗುವ ಹಂಬಲಕ್ಕೆ ಬಿದ್ದು ಸಾಲಮಾಡಿ ಜಮೀನು ಕಳೆದುಕೊಂಡವರ ಉಲ್ಲೇಖ ಕೂಡ ಇಲ್ಲಿ ಬರುತ್ತದೆ. ಒಂದು ಕೊಳಗ ಗೋಟಡಿಕೆಗೆ ಮಗುವನ್ನು ನೀಡುವ ತಾಯಿಯ ಚಿತ್ರಣ ಆ ಕಾಲದ ಪರಿಸ್ಥಿತಿಯ ಭೀಕರತೆಯನ್ನು ಸೂಚ್ಯವಾಗಿ ಹೇಳುತ್ತದೆ. ತಿರಸಿ (ಶಿರಸಿ) ಯಲ್ಲಿ ಮನುಷ್ಯರ ತಿಂಬುವ ಜನ ಇದ್ವಡ ಎಂಬ ಮಾತು ಕೇಳಿ ಹೊರಟ ಭೂದೇವಿಯ ಪ್ರಯಾಣದ ಜೊತೆಗೆ ಪುಡಿಯಮ್ಮ ಎಂಬ ನಸ್ಯ ಸೇದುವ ಕುಂಬಳೆ ಕಡೆಯ ಮತ್ತೊಂದು ಹೆಂಗಸಿನ ಕಥೆ ಸಾಥ್ ಪಡೆದು ಸಾಗುತ್ತದೆ. ಮಧ್ಯಘಟ್ಟದಲ್ಲಿ ಭತ್ತದ ಗದ್ದೆಗಳಿಲ್ಲದೇ ಅಕ್ಕಿ ದುಬಾರಿ. ಹಾಗಾಗಿ ಅವರು ಹಲಸು ಮತ್ತು ಬಾಳೆಯನ್ನು ಅವಲಂಬಿಸಿದ್ದ ಸನ್ನಿವೇಶದ ಚಿತ್ರಣ ಕಾಡುತ್ತದೆ. ಕೇಮು ಮರಾಠಿ ಭೂದೇವಿಗೆ ಮಗಳ ಮನೆಗೆ ದಾರಿ ತೋರಿಸುವವ ಮಾತ್ರವಾಗದೇ, ಮಗುವಾಗದ ಶ್ರೀದೇವಿ ಮತ್ತು ಗೋಪಯ್ಯ ಹೆಗಡೆ ದಂಪತಿಗೆ ನಾಟಿ ಮದ್ದು ನೀಡುವ ಆಪತ್ಬಾಂಧವನೂ ಆಗುತ್ತಾನೆ. ಹೀಗೆ ಈ ಕೃತಿ ಹವ್ಯಕರ ಬದುಕಿನ ಕಥನವಾಗದೇ ಗೌಳಿ, ಸಿದ್ಧಿ, ಕುಣಬಿ,ಕರೆವೊಕ್ಕಲಿಗ, ಕುಮರಿ ಮರಾಠಿಗರ ಜೀವನಗಾಥೆಯೂ ಆಗಿ ಗಮನ ಸೆಳೆಯುತ್ತದೆ. ದೇವಕಾನಿನ ನೀರ ನಡಿಗೆಯ ಜೊತೆಗೆ ಹೊಸಕಟ್ಟಿನ ಹೆರಿಗಮನೆಯ ದೃಶ್ಯವನ್ನು ನೋಡುವುದೇ ಇಲ್ಲಿಯ ಸೊಗಸಾಗಿದೆ. ಅಮಟೆ ಮರವನ್ನು ಮನುಷ್ಯನ ಬದುಕಿಗೆ ಹೋಲಿಸಿ ಮಾತನಾಡುವ ರೀತಿಯೇ ಕಾಡುನೆಲೆಯ ಮಧ್ಯಘಟ್ಟದ ಅದ್ಭುತವೆಂದು ಕೃತಿಕಾರ ಪಾತ್ರದ ಮೂಲಕ ಹೇಳುವುದು ಸತ್ಯವೂ ಹೌದು. ಅದಕ್ಕೆ ಕೆಂಪೆತ್ತಿನ ಕಾಯಿಯಂತಹ ಹೆಸರುಗಳು ಸಾಕ್ಷಿ. ಮನೆಗೆ ಸೋಗೆ ಹೊಚ್ಚುವ ಕಂಬಳ, ಅಡಿಕೆ ಮರದಲ್ಲಿ ಕೊನೆಗೆ ಕೊಟ್ಟೆ ಕಟ್ಟುವ ಕಂಬಳ, ಆಲೆಮನೆ ಹಬ್ಬ; ಇವೆಲ್ಲ ಇಂದಿನ ದಿನಗಳಲ್ಲಿ ಇಲ್ಲವೇ ಆಗಿಹೋಗಿದ್ದರೂ, ಈ ಅಧ್ಯಾಯಗಳನ್ನು ಓದುವಾಗ ಕೃತಿಯ ಕಾಲದ ಸ್ತಂಭನ ಮಾಡುವುದು ಕಾದಂಬರಿಯ ಪರಿಣಾಮಕ್ಕೆ ಸಾಕ್ಷಿ!ಇದರಲ್ಲಿ ಬರುವ ಗಂಜಿ ಕುಳಿ ಪ್ರಸಂಗದಂತವು ಸಂಕಟವನ್ನುಂಟು ಮಾಡುತ್ತವೆ. ಗಮಯನ ಗಿಣ್ಣು, ಚಾಂದ್ ಷಾ ಶಿಕಾರಿ, ಹುಲಿಯಜ್ಜನ ಅವತಾರ, ನಳಿನಮನೆ ಬೆಟ್ಟದ ಹುಲಿ ಬೇಟೆ ಅಧ್ಯಾಯಗಳು ಬೆರಗನ್ನು ಮೂಡಿಸುತ್ತವೆ. ಗಿಡ್ಡೂ ಮರಾಠಿಯ ಸಾವು ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಮುಖವನ್ನು ಬಯಲಿಗೆ ಎಳೆಯುತ್ತದೆ. ಚಾಂದ್ ಷಾ ತಾವೇ ಗುಂಡು ಹಾರಿಸಿಕೊಂಡು ಸಾಯುವ ಸನ್ನಿವೇಶದಲ್ಲಿ ಎದೆ ಝಲ್ ಎನ್ನುತ್ತದೆ. ಉಗ್ರಾಣಿ ಧರ್ಮನ ರಹಸ್ಯ ಶೋಧ ಮತ್ತು ಡೊಳ್ಳು ಹೊಟ್ಟೆಯ ಭಟ್ಟರ ಹಾವು ಅಧ್ಯಾಯಗಳು, ಹಾಸ್ಯದ ಧಾಟಿಯಲ್ಲಿ ಮನುಷ್ಯನ ಕ್ರೂರತೆಯನ್ನು ಬಿಚ್ಚಿಡುತ್ತವೆ.ತಾಂಮ್ರ ಕಲ್ಲಂಟೆಯ ಕುಂಟಭೂತ, ಗುಂಡಟ್ಲಕಾನಿನ ಗಿರಿಜಮ್ಮನ ಕಥೆ ಮತ್ತು ಆಲೆ ಬಯಲಿನ ದೆವ್ವಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಕ್ಕಲಿಗರ – ಮತ್ತಿಮರದ ಸಂಬಂಧ, ಕುಮರಿ ಮರಾಠಿಗರ – ತಾಳೆ ಮರ ಸಂಬಂಧ, ಕನ್ನೆಕುಡಿ, ಹಲಸು, ಅಪ್ಪೆ ಮಾವಿನ ಜೊತೆ ಹವ್ಯಕರ ಸಂಬಂಧ ಈ ಹೊತ್ತಿಗೆಯಲ್ಲಿ ಅಪರೂಪದ ಹೊಳಹನ್ನು ನೀಡುತ್ತದೆ. ‘ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಲಾಗ, ನೋಡಿದ್ದೆಲ್ಲ ಕೆದಕಲಾಗ’ ಎಂಬ ವರದಪ್ಪಣ್ಣನ ಮಾತು ಕೃತಿಯ ಆಶಯವೂ ಆಗಿದೆ. ಪಟಾನ್ಸ್ ರಾಮ, ವಾಚು ತಂದ ವೈದ್ಯರು, ಎತ್ತಿನ ಗಾಡಿಯ ಕಾಲಚಕ್ರ, ಕಲ್ಲಂಟೆಯ ಕಳ್ಳರ ಮಾಳ ಅಧ್ಯಾಯಗಳು ಮಧ್ಯಘಟ್ಟ ಪ್ರಗತಿಯ ದಾರಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ. ಕಾದಂಬರಿಯ ಕೊನೆಯಲ್ಲಿರುವ ಆಯ್ದ ಪದಗಳ ಅರ್ಥ, ಜೀವಲೋಕದ ಖಜಾನೆ, ಕೃಷಿ ಮೂಲದ ಸಸ್ಯಗಳು, ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಪ್ರಾಣಿಗಳ ಪಟ್ಟಿ ಓದುಗನಿಗೆ ಅನುಕೂಲವಾಗುವಂತಿದೆ.ನೆನಪಿನ ಜೇನಿನ ರೊಟ್ಟಿನಿಂದ ಮಧುರವಾದ ತುಪ್ಪವನ್ನು ಆಸ್ವಾದಿಸಲು, ಪರಿಸರದ ಅಧ್ಯಯನ, ಜಾನಪದದ ಮಾಹಿತಿ ಕುರಿತು, ಅದೆಲ್ಲಕ್ಕಿಂತ ಮುಖ್ಯವಾಗಿ ರಸ ಸ್ಪುರಣೆಯ ದೃಷ್ಟಿಯಿಂದ ಓದಲೇಬೇಕಾದ ಮಹತ್ವದ ಕೃತಿ ‘ ಮಧ್ಯಘಟ್ಟ’ ಎಂದು ನಿಶ್ಚಿತವಾಗಿ ಹೇಳಬಹುದು.********************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಇತರೆ

ನೆಲೆ ಸಂಭ್ರಮ – 2020

ನೆಲೆ ಸಂಭ್ರಮ – 2020 ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ಪ್ರಾದೇಶಿಕ ನೆಲೆಯಿಂದ ಸಾಹಿತ್ಯ ಪರಿಚಾರಿಕೆಯ ಕೆಲಸವನ್ನು ಮಾಡುತ್ತ ಬಂದಿದೆ. ಇದೀಗ ಕೊರೋನಾ ಪರಿಣಾಮವಾಗಿ ಪ್ರತಿವರ್ಷವೂ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದ ನೆಲೆ ಸಂಸ್ಥೆ ಈ ಬಾರಿ ಫೇಸ್ಬುಕ್ ಲೈವ್ ನ ಮೂಲಕ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯ, ದೇಶ ಹಾಗೂ ದೇಶದಾಚೆಗೂ ಪಸರಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಗಿ ನಿಂತಿದೆ. ಆಕರ್ಷಕ ಮಾದರಿಯಲ್ಲಿ ಆರಂಭವಾದ ನೆಲೆ ಸಂಭ್ರಮವು ವಿವಿಧ ಹಿರಿಯ ಚಿಂತಕರಾದ ಜಯಂತ್ ಕಾಯ್ಕಿಣಿ(ಹಿರಿಯ ಕವಿ, ಕತೆಗಾರರು ), ಪ್ರೊ. ಸಿ ಎಸ್. ಭೀಮರಾಯ (ಸಿ ಎಸ್ಪಿ- ಕವಿ ವಿಮರ್ಶಕರು), ಡಾ. ರಾಜಶೇಖರ ಮಠಪತಿ (ರಾಗಂ – ಹಿರಿಯ ಕವಿಗಳು ), ಡಾ. ಶ್ರೀರಾಮ ಇಟ್ಟಣ್ಣವರ ( ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಬಯಲಾಟ ಅಕಾಡೆಮಿ ಬೀಳಗಿ ), ಡಾ. ಬಾಳಾಸಾಹೇಬ ಲೋಕಾಪುರ(ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು – ನವದೆಹಲಿ) ಮುಂತಾದವರ ಆಶಯ ನುಡಿಗಳೊಂದಿಗೆ ಕಾರ್ಯಕ್ರಮದ ರಂಗೇರಿಸಿತು. ಜುಲೈ 19 ರಿಂದ ಆಗಸ್ಟ್ 11 ರವರೆಗೆ ನಿರಂತರವಾಗಿ ಫೇಸ್ಬುಕ್ ಲೈವ್ ಮೂಲಕ ಅಚ್ಚುಕಟ್ಟಾದ ನಿರ್ವಹಣೆಯೊಂದಿಗೆ ಆರಂಭವಾದ “ನೆಲೆ ಸಂಭ್ರಮ -2020” ಅತ್ಯಂತ ಯಶಸ್ವಿಯಾಗಿ ನಡೆದು ಇದರಲ್ಲಿ ಭಾಗವಹಿಸಿದ ಎಲ್ಲಾ ಉತ್ಕೃಷ್ಟ ಕವಿಮನಸುಗಳ ಸವಿನೆನಪುಗಳನ್ನು ಶಾಶ್ವತವಾಗಿಸಲು ಇದೀಗ ಮೂರು ಕೃತಿಗಳನ್ನು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿಸಲು ಅಣಿಗೊಳಿಸಲಾಗುತ್ತಿದೆ. ಕ್ರಮವಾಗಿ “ಬಯಲ ರೆಕ್ಕೆಗಳು”, “ಕಥಾ ಕಾಲಕ್ಷೇಪ”‘ ಹಾಗೂ “ಸಂಕಥನ” ಎಂಬ ಬಹುಕಾಲ ಗಟ್ಟಿಯಾಗಿ ಉಳಿಯಬಲ್ಲ ಮೂರು ಮಹತ್ವದ ಕೃತಿಗಳನ್ನು ದೇವು ಮಾಕೊಂಡ, ಮನು ಪತ್ತಾರ ಹಾಗೂ ಡಾ. ಶ್ರೀಶೈಲ ನಾಗರಾಳ ರವರುಗಳು ಸಂಪಾದಿಸಿದ್ದಾರೆ. ನೆಲೆ ಸಾಹಿತ್ಯ ಸಂಭ್ರಮ-2020 ಕಾವ್ಯ ಕಂತು, ಕಥಾ ಸಪ್ತಾಹ ಹಾಗೂ ಚಿಂತನಾ ಸಪ್ತಾಹವೆಂದು ಮೂರು ಹಂತಗಳಲ್ಲಿ ನಡೆಯಿತು. ಕಾವ್ಯಸಪ್ತಾಹವು 7 ಕಂತುಗಳಲ್ಲಿ ನಡೆದು ನಾಡಿನ ವಿವಿಧ ಮೂಲೆಗಳಿಂದ ಹಾಗೂ ಅನ್ಯ ರಾಜ್ಯ, ಅನ್ಯ ದೇಶದಿಂದಲೂ ಒಟ್ಟು 41ಕ್ಕೂ ಹೆಚ್ಚು ಕವಿಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಇದರಲ್ಲಿ ಒಂದು ಗಜಲ್ ಗೋಷ್ಠಿಯನ್ನು ಕೂಡ ಆಯೋಜಿಸಲಾಗಿತ್ತು. ಜುಲೈ 19 – 2020 ರಿಂದ ಆರಂಭವಾದ ಕಾವ್ಯಗೋಷ್ಠಿಯ ಜೊತೆಜೊತೆಗೆ “ಕಾವ್ಯದಲ್ಲಿ ಶೋಧದ ದಾರಿ” ಕುರಿತು ಡಾ. ರಾಜಶೇಖರ ಮಠಪತಿಯವರು, “ಸಾಮಾಜಿಕ ಜವಾಬ್ದಾರಿ ಮತ್ತು ಕಾವ್ಯ” ಕುರಿತು ಪ್ರೊ. ಎಲ್. ಎನ್. ಮುಕುಂದರಾಜ್ ರವರು, “ವರ್ತಮಾನದ ಕಾವ್ಯದ ಅನುಸಂಧಾನ” ಕುರಿತು ಡಾ. ದೇವೇಂದ್ರಪ್ಪ ಜಾಜಿಯವರು, “ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ರೂಪಕ ಮತ್ತು ಪ್ರತಿಮೆ” ಗಳ ಕುರಿತು ಡಾ. ಸುರೇಶ ನಾಗಲಮಡಿಕೆಯವರು, “ಕಾವ್ಯದ ಸ್ವರೂಪ -ಓದುವ ಬಗೆಗಳು” ಕುರಿತು ಡಾ.ಎನ್ ದುಂಡಪ್ಪ ರವರು, “ಸರಕು ಸಮಾಜದಲ್ಲಿ ಕಾವ್ಯ ವ್ಯವಸಾಯ” ಕುರಿತು ಪ್ರೊ. ಕಮಲಾಕರ ಭಟ್ ಅಹ್ಮದ್ ನಗರ ಹಾಗೂ “ಗಾಲಿಬ್ ಗಜಲ್ ನಲ್ಲಿ ವಸ್ತು ವೈವಿದ್ಯತೆ” ಕುರಿತಾಗಿ ಗಿರೀಶ್ ಜಕಾಪುರೆಯವರು ಹೀಗೆ ಅತ್ಯಂತ ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ತದನಂತರ ಕಥಾ ಸಪ್ತಾಹದ ಸರಣಿಯಲ್ಲಿ ಹಲವಾರು ಪ್ರಸಿದ್ಧ ಕತೆಗಾರರು ಭಾಗವಹಿಸಿದ್ದರು.. ಅವರಲ್ಲಿ ಡಾ. ಕೇಶವ ಮಳಗಿಯವರು “ಕನ್ಯಾಗತ ಕತೆ”, ಡಾ. ಬಸು ಬೇವಿನಗಿಡದರವರು “ನೆರಳಿಲ್ಲದ ಮರ” ಕತೆಯನ್ನು, ನಟ ಮಂಡ್ಯ ರಮೇಶ್ ರವರು ಚದುರಂಗ ಅವರ “ಸಾವಿನ ಮನೆ” ಕತೆಯನ್ನು, ದೀಪ್ತಿ ಭದ್ರಾವತಿಯವರು “ನೆರಳಿನಾಚೆ” ಕತೆಯನ್ನು, ಅನುಪಮಾ ಪ್ರಸಾದ್ ರವರು “ಸೈತಾನನ ಬಲೆ” ಕತೆಯನ್ನು, ರಾಜಶೇಖರ ಹಳೆಮನೆ ಅವರು ” ಗೋಡೆಯ ಚಿತ್ರ”, ಚೀಮನಹಳ್ಳಿ ರಮೇಶಬಾಬು ಅವರು “ಹುಣಸೆ ಮರ”, ಆನಂದ ಕುಂಚನೂರು ಅವರು “ಗಂಧರ್ವ ಪಟ್ಟಣ” ಮತ್ತು ಕೊನೆಯದಾಗಿ ಕಪಿಲ್ ಹುಮನಾಬಾದ್ ರವರು “ನಿರೋಷ”.. ಹೀಗೆ ಎಲ್ಲಾ ಕಥೆಗಳು ವಿಭಿನ್ನ ಕಥಾವಸ್ತುಗಳನ್ನು ಒಳಗೊಂಡಿದ್ದು ಕತೆಗಾರರು ಮನೋಜ್ಞವಾಗಿ ಮನ ಮುಟ್ಟುವಂತೆ ವಾಚಿಸಿದರು. ನಂತರದಲ್ಲಿ ಚಿಂತನಾ ಸಪ್ತಾಹದಲ್ಲೂ ಮೇರು ಚಿಂತಕರು ಪಾಲ್ಗೊಂಡು ವಿವಿಧ ಆಯಾಮಗಳಲ್ಲಿ ತಮ್ಮ ಚಿಂತನಾ ಲಹರಿಗಳನ್ನು ಹರಿಯಬಿಟ್ಟರು. ಅವರಲ್ಲಿ ಡಾ. ರಹಮತ್ ತರೀಕೆರೆಯವರು “ತತ್ವಪದದಲ್ಲಿ ಅರಿವಿನ ನೆಲೆ”, ಡಾ. ಜಿ. ಪಿ. ಬಸವರಾಜುರವರು “ಬೊಗಸೆಯಲ್ಲಿ ಬುದ್ಧ”, ಡಾ. ಬಾಳಾಸಾಹೇಬ ಲೋಕಾಪುರರವರು “ಪ್ರಪ್ರಾಚೀನ ಜೈನ ಕಥೆಗಳು ಮತ್ತು ಲೋಕಪ್ರಜ್ಞಪ್ತಿ”, ಡಾ. ನಟರಾಜ್ ಬೂದಾಳ್ ರವರು “”ನಾಗಾರ್ಜುನನೆಂಬ ಜ್ಞಾನಸೂರ್ಯ” ಕುರಿತು, ಡಾ. ಪುರುಷೋತ್ತಮ ಬಿಳಿಮಲೆಯವರು “ತುಳು ಜಾನಪದ”, ಡಾ. ಬಸವರಾಜ ಡೋಣೂರ ಅವರು “ಬೇಂದ್ರೆ -ಕೀಟ್ಸ್ ತೌಲನಿಕ ಅಧ್ಯಯನ” ಕುರಿತಾಗಿ, ಡಾ. ಶ್ರೀಶೈಲ ನಾಗರಾಳ ಅವರು “ಜಾನಪದ ಲೋಕರೂಢಿ”… ಹೀಗೆ ವಿವಿಧ ವಸ್ತುವಿಷಯಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿದರು. ಇಷ್ಟೂ ದಿನಗಳು ನಡೆದಂತಹ ಸಾಹಿತ್ಯಸುಗ್ಗಿಯ ಸಂಭ್ರಮವನ್ನು ಕುರಿತು, ನೆಲೆ ಪ್ರಕಾಶನ ಸಂಸ್ಥೆಯ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗೆ ನಡೆದುಬಂದ ಪಯಣ, ನೆಟ್ಟ ಹೆಜ್ಜೆಗಳು ಮುಂತಾದ ವಿಷಯಗಳ ಕುರಿತು ಡಾ. ಶ್ರೀರಾಮ ಇಟ್ಟಣ್ಣನವರ ಅವರು ತಮ್ಮ ಸಮಾರೋಪ ನುಡಿಗಳಲ್ಲಿ ಸವಿಸ್ತಾರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತಾ ನುಡಿಗಳನ್ನು ಈ ಸಂಸ್ಥೆಯ ಆಧಾರ ಸ್ಥoಭಗಳಾದ ಡಾ. ಎಂ. ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು ತಿಳಿಸಿದರು. ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅಂತೆಯೇ ಒಂದು ಯಶಸ್ವಿ ಕಾರ್ಯಕ್ರಮದ ಹಿಂದೆ ಹಲವಾರು ಕಾಣದ ಕೈಗಳ ಸಹಕಾರ, ಪರಿಶ್ರಮವಿರುತ್ತದೆ, ಗೆಳೆಯರ ಬಳಗವಿರುತ್ತದೆ, ಹಿರಿಯರ ಮಾರ್ಗದರ್ಶನವಿರುತ್ತದೆ. ಹೀಗೆ ಎಲ್ಲವನ್ನೂ ಒಗ್ಗೂಡಿಸಿ ದೇಶದೆಲ್ಲೆಡೆ ಮಹಾಮಾರಿಯಾಗಿ ಹರಡಿ ಜನರನ್ನು ಕಾಡುತ್ತಿರುವ ಈ ಕೊರೋನಾ ಕಾಲದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಆಯೋಜಿಸಲಾಗಿದ್ದ ನೆಲೆ ಸಂಭ್ರಮ -2020 ಸಾಹಿತ್ಯಾತ್ಮಕ ಕಾರ್ಯಕ್ರಮವು ಈಗ ಮಗದೊಂದು ಹೆಜ್ಜೆಗುರುತನ್ನು ಮೂಡಿಸಿರುವುದು ಸ್ತುತ್ಯಾರ್ಹ. ಇನ್ನು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತ ದೇವು ಮಾಕೊಂಡ ರವರು ಕಾರ್ಯಕ್ರಮದ ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮೂಡಿಬರುವಂತೆ ಕಾಳಜಿ ವಹಿಸಿ, ಇಂತಹ ಒಂದು ಕಾರ್ಯಕ್ರಮವನ್ನು ಸವಿಯಲು ಅನುವು ಮಾಡಿಕೊಟ್ಟು ಹಲವು ಪ್ರತಿಭೆಗಳಿಗೆ ಆನ್ಲೈನ್ ಮೂಲಕವೇ ವೇದಿಕೆ ಒದಗಿಸಿಕೊಟ್ಟು ಯಶಸ್ವಿಗೊಳಿಸಿದ್ದು ಆದರ್ಶನೀಯ. ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳು ಇನ್ನು ಮುಂದೆಯೂ ಜರುಗಲಿ.. ಕನ್ನಡಮ್ಮನ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನೆರಡು ಅಭಿಮಾನದ ನುಡಿಗಳಿಗೆ ವಿರಾಮ ನೀಡುತ್ತಿದ್ದೇನೆ. ********************************** ತೇಜಾವತಿ ಹೆಚ್.ಡಿ.

ನೆಲೆ ಸಂಭ್ರಮ – 2020 Read Post »

ಅನುವಾದ

ಅನುವಾದ ಸಂಗಾತಿ

ಚಿತ್ರಗಳು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇಂಗ್ಲೀಷಿಗೆ:ಪಂ. ರವಿಕಿರಣ್ ಮಣಿಪಾಲ ಚಿತ್ರಗಳು ನನ್ನ  ಮನದಲ್ಲೆಷ್ಟೋ ಚಿತ್ರಗಳಿವೆ ಬಿಡಿಸ ಹೋದರೆ ಅವು ಹಾಳೆಗಳಲ್ಲಿ ನಿರ್ಜೀವ ಹೆಣಗಳಂತೆ ಬೋರಲು ಬೀಳುತ್ತವೆ ಇನ್ನು ಕೆಲವು ಬೆನ್ನಡಿಯಾಗಿ ಬಿದ್ದ ಜಿರಳೆಗಳಂತೆ ಅಸಹಾಯಕವಾಗಿಕೈಕಾಲಾಡಿಸುತ್ತ ಕಪ್ಪು ಕಂಗಳಲ್ಲಿ ಚಂದ್ರನನ್ನೇ ನೋಡುತ್ತಿರುತ್ತವೆ. ನನ್ನ ಮನದ ಚಿತ್ರಗಳು ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತ  ಕೆಂಪು ಕೆಂಪಾದ ಹಸಿಗಾಯದ ಮೇಲೆ ಯಾರ್ಯಾರೋ ಗೀರಿದಂತೆ ನೆತ್ತರಲ್ಲಿತೊಯ್ದಿರುತ್ತವೆ. ನನ್ನ ಮನದ ಚಿತ್ರಗಳು ಬದುಕಿನತಿಪ್ಪೆಯಲ್ಲಿ ಅವನು ಬಿಸಾಕಿದ ಎಂಜಲು ಅನ್ನಕ್ಕಾಗಿ ಕಚ್ಚಾಡುತ್ತಿರುತ್ತವೆ ಹಸಿವಲ್ಲಿ ಲೋಕ ಕಾಣದೆ ಇನ್ನಾರದ್ದೋ ಹಸಿದ ಮುಖವನ್ನೇ ಹಸಿ ರೊಟ್ಟಿಯೆಂದುಕೊಳ್ಳುತ್ತ ಒಡಲ ಬೆಂಕಿಯಲಿ ಸುಟ್ಟುತಿನ್ನಲು ಕೈಚಾಚುತ್ತ ಹೊಟ್ಟೆ ಬೆನ್ನಿಗೆ ಅಂಟಿ ರೊಟ್ಟಿಯೇ ಆಗಿ ಇನ್ನಾರದ್ದೋ ತುತ್ತಾಗುತ್ತವೆ ಇನ್ನು ಕೆಲವು ತಮ್ಮ ಮುಖಗಳನ್ನೇ ರೊಟ್ಟಿಯೆಂದುಕೊಳ್ಳುತ್ತ ಹೊಟ್ಟೆಯೊಳಗೇ ಎಳೆದುಕೊಳ್ಳುತ್ತವೆ ರಾಹು…ಚಂದ್ರನನ್ನೇರಾವುಹಿಡಿದಂತೆ ನುಂಗುತ್ತಿರುತ್ತದೆ ಅವನು ಮಾತ್ರ ಹಳೆಮೊಳೆಗೆ ತೂಗು ಹಾಕಿದ ಹೊಸ ಕ್ಯಾಲೆಂಡರಿನಲ್ಲಿ ನಗುತ್ತಿರುತ್ತಾನೆ ಕಪ್ಪು ಚಿತ್ರಗಳು  ಕಪ್ಪು ಮಣ್ಣಲಿ ಹೂತು ಬಿಳಿಹತ್ತಿ ಬೆಳೆದು ಬತ್ತಿಯಾಗಿ ಭಕ್ತಿಯ ಹಣತೆ ಹಚ್ಚುತ್ತವೆ ಬಿಳಿಚಿತ್ರಗಳು ಬಿಳಿಗಂಗೆಯಲ್ಲಿ ಮುಳುಗಿ ಅಸ್ಥಿವಿಸರ್ಜಿಸಿ  ಕಾಗೆಯಾಗಿ ಮಾಲಯದಲ್ಲಿ ಪಿಂಡಕಾಯುತ್ತವೆ ನನ್ನ ಮನದ ಚಿತ್ರಗಳು ಹಾಳೆಗೆ ಬಿದ್ದೊಡನೆ ಹೃದಯದ ತೊಟ್ಟಲ್ಲೊಂದು ಆಸೆಯ ಮೊಗ್ಗನ್ನುಅಪ್ಪಿಕೊಂಡು ಹುಳುಹಿಡಿದ ದಾಸವಾಳ ಗಿಡದಂತೆ ಮುರುಟಿ ಹೋಗುತ್ತವೆ ಬಿಸಿಲಿನ ಝಳಕ್ಕೆ ಬಾಡಿಹೋದ ಕುಂಬಳದ ಬಳ್ಳಿಯಂತೆ ಮತ್ತೆ ಮರವನ್ನಪ್ಪಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತ ಬೇಡದ ಬಸಿರು ಹೊತ್ತು ತೆವಳುತ್ತವೆ ಬೀದಿಯಲ್ಲಿ ಬಿಸುಟ ಕೂಸುಗಳು ಗಂಟಲಲ್ಲಿ ನಾಲಗೆ ಇಡದೆ ಬೆಕ್ಕಿನಂತೆ ಅಳುತ್ತಿರುತ್ತವೆ ಭಗ್ನಗೊಂಡ ನಗ್ನ ಶಿಲ್ಪಗಳು ತಮ್ಮದೇ ದೇಹದ  ತುಂಡುಗಳನ್ನು ತಮ್ಮೊಳಗೇ ಹುಡುಕುತ್ತ ತಮ್ಮದಲ್ಲದ ಜಾತ್ರೆಯಲ್ಲಿ ತಮ್ಮದಲ್ಲದ ನಗುವನ್ನು ನಗುತ್ತವೆ ಅವನು ಆ ದೇವರೆಂಬವನು ಚಿತ್ರಿಸಿದ ಈ ನನ್ನಂತೆಯೇ ನನ್ನ ಮನದ ಚಿತ್ರಗಳು ಚೆಲ್ಲಾಪಿಲ್ಲಿ ಹಾಳೆಯ ಮೇಲೆ ಬಿದ್ದು ಬಿದ್ದಲ್ಲಿಂದಲೇ ಎದ್ದು ತಮ್ಮದೇ ಭೂಮಿಯಿದು ಎಂದುಕೊಂಡು ಮನೆ ಕಟ್ಟಿಕೊಳ್ಳುತ್ತವೆ ತಮ್ಮದು ಎಂದುಕೊಳ್ಳಲೆಂದೇ ಮದುವೆಯಾಗಿ ಮಕ್ಕಳು ಮರಿಗಳನ್ನು ಮಾಡುತ್ತ ತಮ್ಮದೆಂದುಕೊಂಡೇ ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತಿರುತ್ತವೆ ಕೊನೆಗೆ ತಮ್ಮದಲ್ಲದ ಭೂಮಿಯನ್ನು ಬಿಟ್ಟು ಹೋಗುತ್ತವೆ ಹಾಳೆಯಲ್ಲಿ ಮುಷ್ಟಿಕಟ್ಟಿದ ಮನೆ ಬಣ್ಣ ಪೇಲವವಾಗಿ ಬಿಳಿಚಿ ಹಲ್ಲಿಲ್ಲದ ಮುದುಕನಂತೆ ಬೊಚ್ಚುಬಾಯಿಯನ್ನು ಆ ಎಂದುತೆರೆದುಕೊಂಡು ಆಗಸವನ್ನೇ ದಿಟ್ಟಿಸುತ್ತಿರುತ್ತದೆ ಸರಳಿಲ್ಲದ ಒಟ್ಟೆ ಕಂಗಳಿಂದ… ನೋಟದಲ್ಲಿ ಶೂನ್ಯ ತುಂಬಿಕೊಂಡು ಇವೆಲ್ಲದರ ಗೋಜೇ ಇಲ್ಲದಂತೆ ನನ್ನ ಮನದ ಮೂಲೆಯಲ್ಲೊಂದು ಮಗು ತನ್ನೊಳಗೇ ಮಾತನಾಡುತ್ತ ಹಾಳೆಯಲ್ಲಿ ಗೀಚುತ್ತ ಬಣ್ಣತುಂಬುತ್ತಿರುತ್ತದೆ ನೇತು ಹಾಕಿದ ಲಾಂಟಾನಿನಲ್ಲಿ ಅದರ ಕಪ್ಪು ದ್ರಾಕ್ಷಿ ಹಣ್ಣಿನಂತಹ ಕಂಗಳಿಂದ ನಕ್ಷತ್ರಗಳು ಉದುರಿ ಹಾಳೆಯ ತುಂಬ ನಕ್ಕು ಕತ್ತಲನ್ನು ತುಂಬಿಕೊಳ್ಳುತ್ತವೆ ಅದರ ಪುಟ್ಟಚಿಗುರು ಬೆರಳುಗಳು ಎಳೆಯುವ ಚಿತ್ರಗಳಿಗೆ ಎಲ್ಲೋ ಮೂಡುವ ಕಣ್ಣುಜೀವತುಂಬುತ್ತದೆ ಗಿಡ ಮರ ಬಳ್ಳಿ ಹೂವುಗಳೆಲ್ಲ ಜೀವಂತವಾಗಿ ಆಗಸವನ್ನೇ ನೋಡುತ್ತಿರುತ್ತವೆ ಹಕ್ಕಿಯಂತೆರೆಕ್ಕೆ ಬಿಚ್ಚಿ. ಅವು ದೇವರೊಡನೆ ಮಾತನಾಡುತ್ತವೆ. *** The pictures There are numourous Pictures in my mind If I try to sketch them They fall upside down On the sheets A few like cocroaches Fell on their back Helplessly move their Limbs and gaze the moon With dark eyes The pictures of my mind Live lives that do not Belong to them but Somebody else And are soaked with Blood as if a fresh wound Has been scraped by Someone My mind’s pictures  Squabble for left out Food in the garbage Of life Desperate with hunger Delude somebody’s face As Roti Extend their hands To catch it and roast it In the fire of the body And to eat A few delude their Faces as Rotis And pull them inside the Stomach Like the moon devoured By Rahu But he laughs in the New calendar hanged By a old nail Black pictures Are seeded in black earth White cotton grows And becomes a whip That lightens the Lamp of devotion White pictures drown In the white Ganges Discard their corporeal Remnants and become Crows waiting for the Pinda in Mahalaya The pictures of my mind As they fall on a sheet Carry a bud of desire In the foot stalk Of the heart Shrivel like a hibiscus Plant eaten by worms Like a pumpkin creeper Withered in the hot son Do fruitless efforts To embrace the tree And crawl carrying Unwanted womb The infants thrown to Streets weep relentlessly Like cats Broken naked sculptures Search their broken Limbs within themselves Smile somebody else’s Smile at somebody else’s Festival Like me who has been Painted by someone Knows as god My mind’s pictures also Fall and Scatter on sheets And get up Deluding the sheet As their earth Build castles Give birth to Children and Grand children And live life that Is not theirs but Someone else’s And at the end Leave the earth that is Not theirs The tight fisted home Drwan on the sheet Gets faded and bleached And gazes the sky Like an old man With teethless mouth And with a sight Of emptiness Regardless of the above A child at the corner Of my mind Is talking to itself And scribbling the sheet And filling colors In the light of the lantern Stars drop from its black Grape eyes On the sheet and laugh And embody the Darkness The pictures drawn by Its tender fingers get an Eye somewhere That fills life to them Plants, trees, creepers, Flowers gaze the heaven With life Extend their wings like A bird and Converse with god *************************

ಅನುವಾದ ಸಂಗಾತಿ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂ‌ಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ಸೇರೋ ತವಕ ಪ್ಯಾರಿಸುತ ನಿನ್ನೂರು ದಾರಿಯು ಸವಿದಷ್ಟುದೂರಹವೆ ತುಂಬಿದ ಗಾಲಿಗಳು ಉರುಳಿದಷ್ಟುಮತ್ತಷ್ಟು ದೂರಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತುನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತುಪ್ರಯಾಸಗೊಂಡೆ,ಅನಾಯಾಸಗೊಂಡೆಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆಬೆಳೆದಿದ್ದ ಒಂಟಿ ಬೇವಿನಮರದಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿಮಲಗಿಕೊಂಡುನಿನ್ನ ಸೇರೋ ಕನಸು ಕಾಣುತ್ತಿದ್ದೆಕನಸನ್ನು ಭಗ್ನ ಮಾಡಿ,ಮತ್ತೆನಿನ್ನೂರು ದಾರಿ ಹಿಡಿಯಲುಪ್ರೇರೇಪಿಸಿದ್ದು ಅದೇ ಸೊಳ್ಳೆಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂತರ್ಕಕ್ಕೆ ಇಳಿಯುದಿಲ್ಲಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇಸ್ವಾಗತಗೀತೆ,ಅದೆಷ್ಟು ಚಂದ ಅನ್ನುತ್ತಿಯಾ…?ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕುಇಲ್ಲ,ನಿನ್ನ ನೋಡುವ ತವಕದಿ ಓಡಿ ಬರಲೇ…?ಸೂರ್ಯ ನಿನ್ನ ಹಣೆಯ ಕುಂಕುಮವನ್ನು ಹೋಲುತ್ತಿದ್ದಗಾಳಿಯು ಸುಗಂಧ ಪುಷ್ಪ ಹೊತ್ತು ತರುತ್ತಿದ್ದಹಕ್ಕಿಗಳು ಮರಳಿ ಗೂಡಿನಡಿಗೆ ಸಾಗುತ್ತಿದ್ದಗಳಿಗೆಯಲಿ ನಮ್ಮಿಬ್ಬರ ದೇಹಗಳು ಒಟ್ಟುಗೂಡುತ್ತಿದ್ದವುಅಲ್ಲೊಂದಿಷ್ಟು ಪೋಲಿ ಸಂಜ್ಞೆಗಳು ಆಟ ಆಡುತ್ತಿದ್ದವುಭಾವನೆಗಳು ಕಟ್ಟಿಗೊಂಡ ಹಗ್ಗದಿಂದ ತಪ್ಪಿಸಿಕೊಂಡುಹಿಂಡು ಹಿಂಡಾಗಿ ಬರುತ್ತಿದ್ದವುಮತ್ತದೇ ಆಸೆಯಿಂದ ಸುಗಂಧಿ ಪರಿಮಳವನ್ನು ಬೆನ್ನುಬಿದ್ದುಸೂರ್ಯ ಕೆಂಪಾಗುವ,ಹಿತವಾಗುವಸಮಯಕ್ಕೆ ನಿನ್ನೂರಿಗೆ ಕಾಲಿರುಸುವೆನಿನ್ನೆಲ್ಲ ಸಮಯವನ್ನು ಕಾಯ್ದಿರುಸುವೆಯಾ…? *********************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಧಗೆ ಕನ್ನಡ ಮೂಲ; ಸುನೀತಾ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್ ಅದು ನಾಲ್ಕನೆಯ ಪಂಚಾಯತಿ ಬಾವಿ ಇನ್ನೂನೀರಿತ್ತೆನ್ನುವ ಕುರುಹೆಲ್ಲಿ ?ಹುಡುಕುವ ಕಣ್ಣೆವೆಗಳಿಗೆ ಯುದ್ಧಮುಂದೆ ಸಾಗಿ ಪ್ರಯೋಜನವಾದರೂ ಏನುಬಿಸಿಲ ಧಗೆಗೆ ರಿವರ್ಸ್‌ಗೇರ್ ಹಾಕಿದಭಯದ ಬೆವರ ಹನಿಕಣ್ಣುಗಳಿಗೆ ಬೀಗ ಜಡಿದುಕಂಡಿದ್ದ ಜಲರಾಶಿ ಮತ್ತೆ ಕಂಡೆಕಣ್ಣ ಹನಿ, ಬೆವರ ಹನಿಜೊತೆಗೂಡಿ ಬಿಟ್ಟ ಕಣ್ಣುಆಲಿಕಲ್ಲು ಅರಸಿಎಡವಿದ ಕಲ್ಲಿಗೆ ರಕ್ತದೋಕುಳಿಆಕಾಶದ ಹೃದಯ ಕಲ್ಲಾಗಿದೆಪಾದಪಗಳೂ ಚಲನ ಹೀನನದಿಯ ಬೆಸುಗೆಯಲ್ಲೂ ವಿರಸ‌ನರರ ವಿಲಾಸಿ ಜೀವನಈಗ ಸಣಕಲಾದ ಇಳೆಒಗಟು ಮಾತ್ರಬಾವಿಯ ಎಡಭಾಗದ ಮೂರನೆಯಒಣಗಿದ ಗದ್ದೆ ನಕ್ಕು ಹೇಳಿದೆ That is a fourth well digged by a councilBut where is the trace of water,Searched the batting eyelids.What’s the use of moving forward,When unable to bear the heatThe fearfull sweat dropsApplied the reverse gear..Locked the eyes to see theAquatic treasure once I had seen.The sweat and teardrops mixed upAnd opened the eyesThat searched for hailstones,But stumbled on a parched rockTo bathe it in blood. The stone hearted sky,the still floraThe dried river bed are all the giftsOf the luxurious life of the man.Now the thinning earth is just a riddleSaid the third parched fieldOn the left side of the well ,with a grin. ************************

ಅನುವಾದ ಸಂಗಾತಿ Read Post »

ಇತರೆ

ನನ್ನ ಇಷ್ಟದ ಕವಿತೆ

ಪೂಜಾ ನಾಯಕ್ ಬೆಳಗು ಜಾವ ರಚನೆ :ದ. ರಾ. ಬೇಂದ್ರೆ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಜುಮ್ಮೆಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ ಹೋದವರು ತಿರುಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ. ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರಯಕ್ಕೆ ಬೇರೆ ಹೊತ್ತೆ?    ನಿಜವಾದ ಕವಿತೆಯೆಂಬುದು ತನ್ನಷ್ಟಕ್ಕೆ ತಾನೇ ಇಂದಿನವರೆಗೆ ಉಳಿದಿದೆ ಮತ್ತು ಎಂದೆಂದಿಗೂ ಉಳಿಯುತ್ತದೆ ಎಂಬುದಕ್ಕೆ ಆಧುನಿಕ ಕನ್ನಡ ಸಾಹಿತ್ಯದ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ದ. ರಾ. ಬೇಂದ್ರೆಯವರ ‘ಬೆಳಗು ಜಾವ’ ಕವಿತೆಯೇ ಒಂದು ಉತ್ತಮ ನಿದರ್ಶನವಾಗಿ ಇಂದಿಗೂ ನಮ್ಮ ಮುಂದೆ ಇದ್ದು ಈ ಕವಿತೆಯನ್ನು ಓದಿದ ಎಷ್ಟೋ ಯುವಕರ ಬಾಳನ್ನು ಹಸನಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ . ಈ ಕವಿತೆಯನ್ನು ನಾನು ಮೊಟ್ಟಮೊದಲ ಬಾರಿ ಓದಿದ್ದು ನಾನು ದ್ವಿತೀಯ ಪಿಯುಸಿ  ಇರುವಾಗ ನಮ್ಮ ಕಾಲೇಜಿನ ಪಠ್ಯದಲ್ಲಿ.  ಅದ್ಯಾಕೋ ಗೊತ್ತಿಲ್ಲ ನನಗೆ ಈ ಕವಿತೆಯನ್ನು ಓದಿದಾಗ, ಒಂದು ಸಾರಿಯ ಓದಿಗೆ ಕೊನೆಗೊಳಿಸಬೇಕು ಎಂದೆನಿಸದೇ ಮಗದೊಮ್ಮೆ ಓದಬೇಕು ಎಂದೆನಿಸಿತು. ಆದರೆ ಮೊದಲ ಬಾರಿ ಓದಿದಾಗ ದ. ರಾ ಬೇಂದ್ರೆಯವರು ಕೇವಲ ಈ ಕವಿತೆಯಲ್ಲಿ ಮುಂಜಾನೆಯ ನಿಸರ್ಗದ ಸೌಂದರ್ಯವನ್ನಷ್ಟೇ ವರ್ಣನೆ ಮಾಡಿದ್ದಾರೆ ಎಂದು ಭಾವಿಸಿದ್ದೆ ತದನಂತರ ಈ ಕವಿತೆಯಲ್ಲಿ ಕೇವಲ ಬೆಳಗು ಜಾವದ ವರ್ಣನೆಯನ್ನಷ್ಟೇ ಮಾಡಿದ್ದಲ್ಲ, ಅದರಲ್ಲಿ ಯೌವನಿಗರಿಗೆ ನೀಡಿದ ಅದ್ಬುತವಾದ ಸಂದೇಶವನ್ನು ಕೂಡಾ ಕವಿ ತಮ್ಮ ಕವಿತೆಯೊಳಗೆ ಹುದುಗಿಸಿಟ್ಟಿದ್ದಾರೆ ಎಂದು ತಿಳಿದ ಬಳಿಕ ನನಗೆ ಈ ಕವಿತೆ ಇನ್ನೂ ಹೆಚ್ಚು ಇಷ್ಟವಾಯಿತು. ನವೋದಯ ಕವಿಗಳು ಪ್ರಕೃತಿ ಸೌಂದರ್ಯವನ್ನು ವರ್ಣಿಸುವ ಕೆಲವು ಪರಿಗಳನ್ನು ಇಲ್ಲಿ ಗಮನಿಸುವುದರ ಮುಖಾಂತರ ಬೆಳಗು ಜಾವದ ಅತ್ಯದ್ಭುತ  ಕಲ್ಪನೆ ಮತ್ತು ಅದರ ಮಹತ್ವವನ್ನು ನಾವು ಅರಿತುಕೊಳ್ಳಬಹುದು. ಮೊದಲಿಗೆ ಸೂರ್ಯೋದಯದ ಸರಳ ಸುಂದರ ವರ್ಣನೆ ನೋಡಿ : ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ  ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝಂ ಎಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು ಬೇಟೆಗಾರ. ಇದು ಸುತ್ತಣ ನಿಸರ್ಗದಲ್ಲಿ ಒಂದು ಬೆಳಗಿನ ಸೌಂದರ್ಯಾನುಭವವನ್ನು ಪಡೆದ ಕವಿಯ ಉಲ್ಲಾಸದ ಕರೆಯನ್ನು ನೀಡಿದರೆ, ಮತ್ತೊಂದೆಡೆ ಯೌವನಿಗರಿಗೆ ಎಚ್ಚರಿಸುವ ಕರೆ! ಏನು ಸೋಜಿಗ ಈ ಕವಿಯ ರೀತಿ! ಪುಟ್ಟ-ಪುಟ್ಟ ಸಂಗತಿಯ ಸೌಂದರ್ಯವೂ ಕೂಡ ಇಲ್ಲಿ ಕವಿಗೆ ಸೋಜಿಗವಾಗಿ ಕಾಡಿದಂತಿದೆ. ಪ್ರಕೃತಿಯ ಅದ್ಭುತ ಸೌಂದರ್ಯ ತುಂಬಿ ತುಳುಕುವ ‘ಬೆಳಗು ಜಾವ’ ಕವನ ಮುಂಜಾನೆಯ ಚೈತನ್ಯ,ಶಾಂತಿ, ಉಲ್ಲಾಸ, ಆಹ್ಲಾದಗಳನ್ನು ಚೇತೋಹಾರಿಯಾಗಿ ವ್ಯಕ್ತ ಪಡಿಸುತ್ತದೆ. ಮೂಡಲ ಮನೆಯ ತೆರೆದ ಬಾಗಿಲಿನಿಂದ  ಹರಿದ ಹೊಂಬೆಳಕು ಜಗವನ್ನೆಲ್ಲಾ ಬೆಳಗಿರುವ ಇಲ್ಲಿನ ಕಲ್ಪನೆ ರಮೋಜ್ವಲವಾದುದು. ನಮ್ಮ ದ. ರಾ. ಬೇಂದ್ರೆಯವರು ಅಲೆ ಅಲೆಯಾಗಿ ಹೊಮ್ಮುವ ಪ್ರಕೃತಿ ಸೌಂದರ್ಯದ ಸಾಗರದೊಳಕ್ಕೆ ಮುಳುಗಿ ರಸಾನುಭವವನ್ನು ಪಡೆದಿದ್ದಾರೆ. ಅವರಿಗೆ ಈ ಒಂದು ಅನುಭವ ಕೇವಲ ಐಂದ್ರಿಕವಾಗಿರದೆ ಅಧ್ಯಾತ್ಮದ ಔನತ್ಯಕ್ಕೇರುವ  ಸ್ವರ್ಣ ಸೋಪಾನವೂ ಆಗಿದೆ ಎನ್ನಬಹುದು. ಬೆಳಗು ಜಾವ ಆನಂದಮಯವೆಂದೂ,  ಇದು ಪ್ರಕೃತಿ ನಮಗೆ ನೀಡಿದ ವರವೆಂದೂ ತಿಳಿದು ಆನಂದಿಸಿದ ಕವಿಗೆ ಅದರ ಇನ್ನೊಂದು ಮಗ್ಗಲು ತಿಳಿದಿತ್ತು. ಪ್ರಕೃತಿಯ ವರವಾದ ಬೆಳಗು ಜಾವದಲ್ಲಿ ಸೌಂದರ್ಯವಿರುವಂತೆ ಯೌವನಿಗರ ಬದುಕಿಗೆ ಅದಮ್ಯ ಚೈತನ್ಯವನ್ನು ತುಂಬುವ ಅಪಾರ ಶಕ್ತಿಯೂ ಕೂಡಾ ಇರುವುದು ಕವಿಗೆ ಕಾಣಿಸದೇ ಹೋಗಿಲ್ಲ. ಹಾಗಾಗಿಯೇ ಕವಿ ಅದನ್ನು ಗುರುತಿಸಿ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ: ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು. ತಮ್ಮ ಮೂರನೆಯ ಚೌಪದಿಯಲ್ಲಿ ಕವಿ ಇಂದಿನ ಯುವ ಪೀಳಿಗೆಗೆ, ತಮ್ಮ ಯೌವನದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಲಿ ಎಂದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದಂತಿದೆ. ಜೀವನವೆಂಬ ನದಿಗೆ ಪ್ರವಾಹ ಬರಬಹುದು ಎಂದಿದ್ದಾರೆ ಅಂದರೆ ಯಾವಾಗ ಬೇಕಾದರೂ ಸಾವು ಪ್ರವಾಹದ ರೀತಿಯಲ್ಲಿ ಬಂದು ನಮ್ಮನ್ನು  ಎಳೆದೊಯ್ಯಬಹುದು. ಮರಣ ಬಂದ ಮೇಲೆ ಬದುಕಲು ಅವಕಾಶವಂತು ಇಲ್ಲವೇ ಇಲ್ಲ ಎಂದಾದ ಮೇಲೆ ಬದುಕಿರುವಾಗಲೇ ಯೌವನವನ್ನು ಸಾರ್ಥಕ ಪಡಿಸಿಕೊಳ್ಳಲು ದುಡಿಮೆಯಲ್ಲಿ ತೊಡುಗುವುದು ಉತ್ತಮವಲ್ಲವೇ? ಎಂದು ಹೇಳುವ ಮೂಲಕ ಇಂದಿನ ಎಷ್ಟೋ ಕರ್ತವ್ಯ ರಹಿತ ಯುವಕರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಕವಿ ತಮ್ಮ ಕವಿತೆಯ ಮೂಲಕವೇ ಮಾಡಿದ್ದಾರೆ. ಹಾಗೆಯೇ ಕವಿ ವಸ್ತುವಿನ ಪೂರ್ತಿ ತಿರುಳನ್ನು ತಮ್ಮ ಕೊನೆಯ ಎರಡು ಚರಣಗಳಲ್ಲಿ ಈ ರೀತಿ ಚಿತ್ರಿಸಿದ್ದಾರೆ : ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರಯಕ್ಕೆ ಬೇರೆ ಹೊತ್ತೇ? ಆಕಾಶದಲ್ಲಿ ಒಮ್ಮೆ ಮೋಡ ಕವಿದು ಮಬ್ಬು ಆವರಿಸಿದ್ದರು ಕೂಡ ಮೋಡ ಸರಿದ ಮೇಲೆ ಮತ್ತೆ ಪ್ರಕಾಶಿಸಬಹುದು, ಒಂದು ಋತುವಿನಲ್ಲಿ ತನ್ನ ಪೂರ್ತಿ ಎಲೆಯನ್ನು ಉದುರಿಸಿ ಒಣಗಿದ ಮರ ಕೂಡ ಪುನಃ ಮತ್ತೆ ವಸಂತ ಋತುವಿನಲ್ಲಿ ಚಿಗುರಬಹುದು ಆದರೆ ಮನುಷ್ಯನ ಯೌವನದ ಕಾಲ ಕಳೆದು ಹೋದರೆ ಎಂದಿಗೂ ಹಿಂದಿರುಗಿ ಬರಲಾರದು ಆದ್ದರಿಂದ ಮುಪ್ಪು ಬಂದು ಆವರಿಸುವ ಚಿಂತೆ ಇರಲಿ ಹಾಗೆಯೇ ಯೌವನವು ಇನ್ನೊಮ್ಮೆ ಸಿಗುವುದಿಲ್ಲವೆಂಬ ಎಚ್ಚರವಿರಲಿ. ಈಗ ಹರೆಯ ಇರುವುದರಿಂದ ಎಲ್ಲ ಚಿಂತೆಯನ್ನು ಬದಿಗೊತ್ತಿ ದುಡಿಯಲು ಮುಂದಾಗಿ, ಯೌವನದ ಸಾರ್ಥಕತೆಯನ್ನು ಅನುಭವಿಸಿ ಎಂದು ಕರೆ ನೀಡಿದ್ದಾರೆ. ಈ ಕವಿತೆ ಇಂಗ್ಲಿಷಿನ ಸಾನೆಟ್ ಪ್ರಕಾರಕ್ಕೆ ಸಂವಾದಿಯಾಗಿ ಬಂದ ಸುನೀತ ಪ್ರಕಾರದಲ್ಲಿದ್ದು ಷೇಕ್ಸ್‌ಪಿರಿಯನ್ ಮಾದರಿಯಲ್ಲಿದೆ. ಈ ಮಾದರಿಯ ಸುನೀತಗಳಲ್ಲಿ ಹನ್ನೆರಡು ಚರಣಗಳು ಮೂರು ಚೌಪದಿಗಳಿಂದ ಕೂಡಿದ್ದು ಕೊನೆಯ ಎರಡು ಚರಣಗಳು ದ್ವಿಪದಿಯ ರೂಪದಲ್ಲಿವೆ. ಹಾಗೆಯೇ ಚೌಪದಿಯ ಮೊದಲ ಎರಡು ಸಾಲುಗಳು ಒಂದು ಪ್ರಾಸದಿಂದ ಕೂಡಿದ್ದರೆ ಕೊನೆಯ ಎರಡು ಸಾಲುಗಳು ಇನ್ನೊಂದು ಪ್ರಾಸವನ್ನು ಹೊಂದಿರುತ್ತವೆ. ಕಡೆಯ ದ್ವಿಪದಿ ಒಂದೇ ಪ್ರಾಸದಲ್ಲಿ ಮುಕ್ತಾಯವಾಗುತ್ತದೆ. ಈ ಪ್ರಾಸ ವಿನ್ಯಾಸದಲ್ಲಿ ರಚನೆಯಾದ ವಿಶಿಷ್ಟ ಕವನವಿದು. ಈ ಕವಿತೆ ಯುವ ಪೀಳಿಗೆಗೆ ಎಚ್ಚರಿಸಲು ಹೇಳಿ ಮಾಡಿಸಿದ ಕವಿತೆಯಂತಿದೆ ಯಾಕೆ ಕೇಳಿದರೆ ಇಂದಿನ ಯುವ ಪೀಳಿಗೆ ಆಧುನಿಕತೆ,ವಿಜ್ಞಾನದ ಅತಿಯಾದ ಮುಂದುವರಿಕೆ,ನಾನಾ ಹೊಸ ಶೈಲಿಯ ಕಲಿಕಾ ಕ್ರಮದಲ್ಲಿ ಮೈಮರೆತು ಹಕ್ಕಿಯಂತೆ ಕೃತಕವಾಗಿ ಹಾರಾಡಿ, ಮೀನಿನಂತೆ ಕೃತಕವಾಗಿ ಈಜಿ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಕಾಲೂರಿ ಇನ್ನೂ ಅನೇಕಾನೇಕ ಸಾಹಸವನ್ನು ಮಾಡಿರಬಹುದು ಆದರೆ ಪ್ರಕೃತಿಯೇ ನಮಗೆ ನಿಸರ್ಗದತ್ತವಾಗಿ ನೀಡಿದ ಬೆಳಗು ಜಾವದ ಅದ್ಭುತ ಕ್ಷಣವನ್ನು ಅನುಭವಿಸುವುದರಲ್ಲಿ ಇರುವ ನೆಮ್ಮದಿ, ಸಂತೋಷ ಆಧುನಿಕತೆಯಲ್ಲಿ ಎಂದಿಗೂ ಸಿಗಲಾರದು ಹಾಗೆಯೇ ಮನುಷ್ಯನ ಬದುಕಿಗೆ ಬೇಕಾದ ಚೈತನ್ಯವನ್ನು ಸಹ ಆಧುನಿಕತೆ ಎಂದಿಗೂ ಕೊಡಲಾರದು. ಮನುಷ್ಯರೇ(ಯುವಕರೇ) ಯೌವನದ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಅವರನ್ನು ಬಡಿದೆಬ್ಬಿಸಿ, ಬೆಳಗು ಜಾವದ ಮಹತ್ವವನ್ನು ಸಾರಿ ಹೇಳಿದ ದ. ರಾ. ಬೇಂದ್ರೆಯವರ ಈ ಕವಿತೆ ಎಂದೆಂದಿಗೂ ನನ್ನ ಅಚ್ಚುಮೆಚ್ಚು. ***************************

ನನ್ನ ಇಷ್ಟದ ಕವಿತೆ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ ಕಚ್ಚಲೆರಡು ಹಾರಿ ನಡೆದವು ತುಸು ದೂರ ಸಾಗಿದೊಡನೆಕಂಡಿತೊಂದು ಊರುಮಕ್ಕಳೆಲ್ಲ ಆಮೆ ಕಂಡುಕೂಗಿದರು ಜೋರು ಕಲ್ಲನೆಸೆದು ಗೇಲಿ ಮಾಡೆಆಮೆ ಕೋಪ ಸಿಡಿಯಿತುಬೈಯ್ಯಲೆಂದು ಬಾಯಿ ತೆರೆಯೆಕೆಳಗೆ ಬಿದ್ದು ಮಡಿಯಿತು ಹಮ್ಮು ಬಿಮ್ಮು ಬೇಡ ನಮಗೆಬೇಡ ಕೋಪ ತಾಪಮನಗಾಣಿರಿ ಮಕ್ಕಳೆಲ್ಲಅವುಗಳೆಮಗೆ ಶಾಪ ******************

ಮಕ್ಕಳ ಕವಿತೆ Read Post »

ಇತರೆ, ಪ್ರಬಂಧ

ನಾನು ಈಜು ಕಲಿತ ಪ್ರಸಂಗ:

ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು ಭಾಷೆಯಲ್ಲಿ ‘ಪದ್ರಾಡ್’ ಅಂದರೆ ‘ಸದ್ದಿಲ್ಲದೆ ತಪ್ಪಿಸಿಕೊಂಡು ಓಡಿಹೋಗುವುದು’ ಎಂದು ಅರ್ಥ; ಅಲ್ಲದೇ ಅದು ಅಂಕೆ 12 ರ ಸಂಖ್ಯಾವಾಚಕ ಶಬ್ದವೂ ಹೌದು). ಹಿರಿಯರಿಗೆ ತಿಳಿಸಲೂ ಭಯ. ಆ ವಯಸ್ಸೇ ಅಂತಹ ಹುಚ್ಚಾಟದ್ದು. ಹೀಗಾಗಿ ನನಗೆ ಈಜು ಕಲಿಯಲು ಹಸಿರು ನಿಶಾನೆ ಸಿಗುವ ಸಂಭವವೇ ಇರಲಿಲ್ಲ. ನಮ್ಮ ಊರಿನ ಕೋಟಿಕೆರೆ ಬಹು ದೊಡ್ಡದು. ಮನೆಯಿಂದ ಒಂದು ಕಿ.ಮಿ. ದೂರದಲ್ಲಿ ಹಸಿರು ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿತ್ತು. ಆ ಕೆರೆ ವಿಶ್ವವಿಖ್ಯಾತ — ಆ ಕಾಲಕ್ಕೆ ‘ನಮ್ಮ ಊರೇ ನಮ್ಮ ವಿಶ್ವ, ಸರ್ವಸ್ವ’ — ಆಗಿದ್ದರೂ ಮೊತ್ತಮೊದಲ ಬಾರಿಗೆ ನಮ್ಮ ಊರಿನವರೇ ಆದ ಪರಮೇಶ್ವರ ಹೊಳ್ಳರನ್ನು ನ್ಯಾಶನಲ್ ಚಾಂಪಿಯನ್ ಮಟ್ಟದವರೆಗೆ ತರಬೇತುಗೊಳಿಸಿದ ಮಹಾನ್ ಕೆರೆ ಎಂಬಭಿದಾನದಿಂದ ಕಂಗೊಳಿಸುತ್ತಿರ್ಪ ಒಂದು ಶುಭಮುಹೂರ್ತದಲ್ಲಿ ನನ್ನ ಪಾಲಿಗೂ ಅದು ಅನುಕೂಲವಾಗಿಯೇ ಒದಗಿ ಬಂತು. ಅದೇ ಪರಮೇಶ್ವರ ಹೊಳ್ಳರನ್ನು ತಯಾರು ಮಾಡಿದ ನಮ್ಮ ಹೈಸ್ಕೂಲಿನ ವ್ಯಾಯಾಮ ಶಿಕ್ಷಕರಾಗಿದ್ದ ಶ್ರೀ ಸುಬ್ರಾಯ ಶೆಟ್ಟಿಗಾರ್ ನನಗೂ ಈಜು-ಗುರುಗಳು. ಆದರೆ ಮನೆಯಲ್ಲಿ ಗೊತ್ತಾಗದಂತೆ ಈಜು ಕಲಿಯುವುದು ಹೇಗೆ? ಮನೆಯಿಂದ ಹೆಚ್ಚುವರಿ ಬಟ್ಟೆ ತರುವಂತೆಯೂ ಇಲ್ಲ. ಅದಕ್ಕಿದ್ದದ್ದೊಂದೇ ಪರಿಹಾರ. ಹಾಕಿದ್ದ ಅಂಗಿ ಚಡ್ದಿಯನ್ನೇ ಪುನರ್ಬಳಕೆ ಮಾಡುವುದು – ಮೈ, ತಲೆ ಒಣಗಿದ ಬಳಿಕ! ಆ ಕೋಟಿಕೆರೆ ಎಂದರೆ ಸಾಮಾನ್ಯವೇನಲ್ಲ. ಅದರ ಸುತ್ತಲೂ ಹಲವು ಮನೆಗಳೂ ಇದ್ದುವು. ಹಳ್ಳಿಮನೆ ಎಂದ ಮೇಲೆ ಜನರಿಗಿಂತ ಹೆಚ್ಚು ಜಾನುವಾರುಗಳೂ – ಹಸು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವೆಲ್ಲ ಸೇರಿ ಒಂದು ಪ್ರಪಂಚ – ಇದ್ದುವು. ಅವುಗಳಿಗೂ ಜಳಕವಾಗಬೇಕಲ್ಲ. ಕೋಟಿಕೆರೆಯ ಒಂದು ತುದಿಯಲ್ಲಿ ದನಗಳೂ, ಹೆಚ್ಚಾಗಿ ಎಮ್ಮೆಗಳೂ ಅಲ್ಲಿ ಜಲವಿಹಾರದಲ್ಲೋ ಜಲಕೇಳಿಯಲ್ಲೋ – ಹಾಲುಕರೆಯುವ ಸಮಯವೊಂದನ್ನು ಬಿಟ್ಟು – ಸದಾ ತೊಡಗಿರುತ್ತಿದ್ದವು. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳ ಬಟ್ಟೆಬರೆ ತೊಳೆಯುವ ಕೆಲಸ, ಮೈ…(!) ತೊಳೆಯುವ ಕೆಲಸ – ಮರೆಯಲ್ಲಿ ‘ಸ್ನಾನ’ ಎಂಬುದು ಎಲ್ಲೋ ಕೆಲವರಿಗಷ್ಟೇ ಲಭ್ಯವಿದ್ದ ಘನಕಾರ್ಯ; ಹಾಗೆಯೇ ಮುಸುರೆಪಾತ್ರೆಗೆ ಬೂದಿ ಬಳಿದು ಶುದ್ಧೀಕರಿಸುವ ಕೆಲಸ, ಸ್ವಲ್ಪ ಮಟ್ಟಿಗೆ ಕೃಷಿಗಾರಿಕೆಗೂ – ಹೀಗೆ ಹಲವು ಹನ್ನೊಂದು ಕೆಲಸಗಳಿಗೆ ಈ ಕೋಟಿಕೆರೆಯೇ ಆಧಾರ. ಇವೆಲ್ಲದರ ಜೊತೆಗೆ ಕೋಟಿಕೆರೆಯ ಇನ್ನೊಂದು ತುದಿ ಈಜುವುದಕ್ಕೆ ಮೀಸಲು. ಹೀಗೆ ಕ್ಷೇತ್ರ ವಿಂಗಡಣೆಯ ವಿಷಯ ಸರ್ವರಿಗೂ ತಿಳಿದಿದ್ದ ಕಾರಣದಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರವರ ಕೆಲಸ-ಕಾರ್ಯಗಳು ಅದರದರ ಪಾಡಿಗೆ ಸ್ವಯಂಚಾಲಿತ ಕ್ರಿಯೆಯಂತೆ ನಡೆದುಕೊಂಡು ಹೋಗುತ್ತಿತ್ತು. ಯಾರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಮೀರುವಂತಿಲ್ಲದ ಒಂದು ಅಲಿಖಿತ ನಿಯಮ ಜಾರಿಯಲ್ಲಿತ್ತು ಮತ್ತು ಇದು ಎಲ್ಲರಿಗೂ ತಿಳಿದಿದ್ದ ಗುಟ್ಟು. ಈಜು ಕಲಿಯುವ ಪ್ರಾಥಮಿಕ ಪಾಠ ಕೆರೆದಂಡೆಯ ಕಲ್ಲುಗಳನ್ನು ಆಧಾರಕ್ಕೆ ಹಿಡಿದುಕೊಂಡು ಕೈ ಕಾಲು ಬಡಿಯುವುದು. ಆಗ ಈಜಿನಲ್ಲಿ ಪರಿಣತಿ ಹೊಂದಿದ್ದ ಇತರ ಗೆಳೆಯರು ಸುಬ್ರಾಯ ಶೆಟ್ಟಿಗಾರ್ ಅವರ ಸುಪರ್ದಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ಶೆಟ್ಟಿಗಾರ್ ಮಾಸ್ತರ್ ತಮ್ಮ ಸ್ಟಾಪ್-ವಾಚ್ ಹಿಡಿದು ಟೈಮ್ ನೋಡುತ್ತಿದ್ದರು. ನನಗೋ ಇದನ್ನು ನೋಡಿ ಒಂಥರಾ ಹೊಟ್ಟೆಯುರಿ. ನಾನು ಅವರಂತೆ ಈಜುವುದು ಯಾವಾಗ? ಶೆಟ್ಟಿಗಾರ್ ಮಾಸ್ಟರ್ ಅವರ ಹೆಚ್ಚಿನ ಗಮನ ಆ ವಿದ್ಯಾರ್ಥಿಗಳ ಮೇಲೆ. ನನಗೆ ನನ್ನ ಮೇಲೂ, ನನ್ನಂತೆ ಕೈ ಕಾಲು ಬಡಿಯುತ್ತಿದ್ದ ಇನ್ನಿತರ ಬಾಲಪಾಠದ ವಿದ್ಯಾರ್ಥಿಗಳ ಮೇಲೂ ಒಂದು ಥರಾ ಅಸಹನೆ ಮೂಡುತ್ತಿತ್ತು. ಆದರೆ ವಿಧಿಯಿಲ್ಲ. ಬಹುಶಃ ಮಾಸ್ತರಿಗೆ ಇದು ಗೊತ್ತಾಯಿತೇನೋ ‘ಇರಿ ಮಾಡುತ್ತೇನೆ’ ಎಂದು ಎರಡನೆ ಬಾಲಪಾಠ –- ಲೆಸನ್ ನಂಬರ್ ೨ – ಶುರು ಮಾಡಿದರು: ಹಾಗೆಯೇ ಕೈಕಾಲು ಬಡಿಯುತ್ತಾ ಅರ್ಧತಲೆಯನ್ನು ನೀರಿಗೆ ಮುಳುಗಿಸಿ ಉಸಿರು ತೆಗೆದುಕೊಳ್ಳಲು ಮಾತ್ರ ಮುಖ ಒಂದು ಬದಿಗೆ ವಾಲಿಸಿ ಉಸಿರೆಳೆದುಕೊಂಡು ತಕ್ಷಣ ಮತ್ತೆ ಅರ್ಧತಲೆ ಮುಳುಗಿಸಿ ಇನ್ನೊಂದು ದಿಕ್ಕಿಗೆ ತಲೆ ವಾಲಿಸಿ ಉಸಿರೆಳೆದುಕೊಳ್ಳುವುದು. ಆಗ ಕೈಕಾಲು ಬಡಿಯುವುದನ್ನು ನಿಲ್ಲಿಸುವಂತಿಲ್ಲ! ಇದನ್ನು ಒಂದೆರಡು ಬಾರಿ ಮಾಡುವಷ್ಟರಲ್ಲಿ ನಾನು ಸಾಕಷ್ಟು ನೀರು ಕುಡಿದದ್ದಾಯಿತು, ಅಲ್ಲದೆ ತಲೆ ಮುಳುಗಿಸುವಾಗ ಕೈಕಾಲು ಬಡಿಯುವುದು ನಿಲ್ಲುತ್ತಿತ್ತು; ಕೈಕಾಲು ಬಡಿಯುತ್ತಿದ್ದರೆ ತಲೆ ಮುಳುಗುತ್ತಿರಲಿಲ್ಲ.ಒಳ್ಳೇ ಪೇಚಾಟಕ್ಕೆ ಬಂತು. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ. ಇದನ್ನು ಆದಷ್ಟು ಬೇಗನೆ ಕಲಿಯದಿದ್ದರೆ ಈಜಲು ಸಾಧ್ಯವಿಲ್ಲ ಎಂಬ ಜ್ಞಾನೋದಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಮಾಡಿದ ಮೇಲೆ ಮಾಸ್ತರಿಗೆ ದುಂಬಾಲು ಬಿದ್ದು ಮುಂದಿನ ಪಾಠ ಹೇಳಿ ಕೊಡಿ ಅಂತ ಅವರನ್ನು ಪೀಡಿಸಿದೆ. ಮೊದಲಿನಿಂದಲೂ ನನಗೆ ತಾಳ್ಮೆ ಸ್ವಲ್ಪ ಕಡಿಮೆಯೇ. ಎಲ್ಲವೂ ಬೇಗ ಬೇಗ ಆಗಬೇಕು. ಆಗೆಲ್ಲಾ ‘ಏನು ಆರು ತಿಂಗಳಿಗೆ ಹುಟ್ಟಿದ ಹಾಗೆ ಮಾಡುತ್ತಿ?’ ಎನ್ನುವ ವಾಡಿಕೆಯ ಚುಚ್ಚುಮಾತು ನನ್ನೆದೆಗೆ ಚುಚ್ಚಿದರೂ ನಾನದನ್ನು ‘ಡೋಂಟ್ ಕೇರ್’ ಮಾಡುತ್ತಿದ್ದೆ! ಸರಿ ಮುಂದಿನ ಪಾಠ: ಎರಡು ಪೊಟ್ಟು ತೆಂಗಿನಕಾಯಿಗಳನ್ನು ಒಟ್ಟಿಗೆ ಚಿಕ್ಕ ಹಗ್ಗದ ಸಹಾಯದಿಂದ ಜೋಡಿಸಿ ಹೊಟ್ಟೆಗೆ ಆಧಾರವಾಗಿಟ್ಟುಕೊಂಡು (ಇವು ನಮ್ಮನ್ನು ನೀರಲ್ಲಿ ಮುಳುಗದಂತೆ ತಡೆಯುತ್ತವೆ ಮತ್ತು ಇದು ಈಜು ಕಲಿಯಲು ಎಲ್ಲರೂ ಬಳಸುತ್ತಿದ್ದ ಅತೀ ಸಾಮಾನ್ಯ ಸಾಧನ, ಅದಿಲ್ಲದಿದ್ದರೆ ಉದ್ದದ ಬಾಳೆದಿಂಡೂ ಇದೆ ರೀತಿ ಆಸರೆಯಾಗುತ್ತಿತ್ತು.) ಕಡಿಮೆ ಆಳದ ನೀರಿನಲ್ಲಿ ಈಜುವ ಅಭ್ಯಾಸ ಮಾಡುವುದು. ಆಗ ಚೆನ್ನಾಗಿ ಈಜು ಗೊತ್ತಿದ್ದ ಇತರ ಮಕ್ಕಳು ನಮ್ಮ ಸುತ್ತ ಈಜುತ್ತಾ ಹುರಿದುಂಬಿಸುತ್ತಿದ್ದರು. ಕೆಲವೊಮ್ಮೆ ನಮಗೆ ಅರಿವೇ ಆಗದಂತೆ ಈ ಪೊಟ್ಟು ತೆಂಗಿನಕಾಯಿಗಳನ್ನು ತಪ್ಪಿಸಿ ನಾವು ಈಜುವಂತೆ ಮಾಡುತ್ತಿದ್ದರು. ಆದರೆ ಈ ಆಸರೆ ತಪ್ಪಿದೆ ಎಂದು ತಿಳಿದ ತಕ್ಷಣ ಕೈಕಾಲು ಬಡಿಯುವುದು ನಿಂತು ಮುಳುಗುವ ಭಯದಲ್ಲಿ ಇನ್ನಷ್ಟು ನೀರು ಕುಡಿದು ದಡದ ಕಡೆಗೆ ಈಜುವುದಲ್ಲ, ಹಾರುವುದು ಎಂದರೂ ಸರಿಯೇ – ಆಗುತ್ತಿತ್ತು. ಹೀಗೆ ನಿಧಾನವಾಗಿ ಈಜುವುದು ಅಭ್ಯಾಸವಾಯಿತು. ಆಮೇಲೆ ಕೇಳಲುಂಟೇ! ‘ಭಳಿರೇ ಪರಾಕ್ರಮ ಕಂಥೀರವ’ ಎಂದು ‘ಡೈವ್’ ಮಾಡುವುದರಿಂದ ಹಿಡಿದು ಫ್ರೀ-ಸ್ಟೈಲ್, ಬ್ಯಾಕ್ ಸ್ಟ್ರೋಕ್ ಇತ್ಯಾದಿಗಳಲ್ಲಿ ಪಳಗಿದ್ದುಂಟು. ಆದರೆ ಇದನ್ನು ಸ್ಪರ್ಧೆಯ ಮಟ್ಟಕ್ಕೆ ಮುಂದುವರಿಸುವುದಕ್ಕಾಗಲಿಲ್ಲ. ಇದರಿಂದ ಊರೇನೂ ಮುಳುಗಿಹೋಗಿಲ್ಲ ಅಥವಾ ದೊಡ್ಡ ನಷ್ಟ ಯಾರಿಗೂ ಏನೂ ಇಲ್ಲ. ಇರಲಿ ಬಿಡಿ. ನನ್ನ ಜೊತೆ ಈಜಿಗೆ ಸಾಥ್ ಕೊಡುತ್ತಿದ್ದ ಒಬ್ಬ ಸಹಪಾಠಿ ಶೇಕ್ ಹಸನ್ ಸಾಹೇಬ್. ಹೀಗೆ ಹೇಳಿದರೆ ಹೆಚ್ಚಿನವರಿಗೆ ತಿಳಿಯಲಾರದು. ‘ವಿಟ್ಲ ಹಸನ್’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ನಾನು ಅವನ ಮನೆಗೆ, ಅವನು ನಮ್ಮ ಮನೆಗೆ ಬಂದು ಹೋಗುವುದು ಮಾಮೂಲಾಗಿತ್ತು. ಅವನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆ ಕಾಲದಲ್ಲಿ ನಮ್ಮಿಬ್ಬರಿಗೂ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ಪರಸ್ಪರ ಪ್ರೀತಿ, ವಿಶ್ವಾಸಗಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತದ್ದು ಒಂದು ಸುಖಾನುಭವ. ಜೊತೆಗೆ ಹಸನ್ ಕೂಡಾ ನನ್ನೊಂದಿಗೆ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ. ನಾವು ರಿಹರ್ಸಲ್-ಗೂ ಜೊತೆಯಲ್ಲೇ ಹೋಗುತ್ತಿದ್ದೆವು. ನಾವು ಹತ್ತನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ (ಆಗೆಲ್ಲಾ ರಾತ್ರಿಪೂರ್ತಿ ಬೆಳಗಾಗುವ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾತ್ರಿ ಎರಡರ ಬಳಿಕ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹೀಗೆ ನಡೆಯುತ್ತಿತ್ತು. ಹಳ್ಳಿಯ ಜನರು ಇದಕ್ಕೆ ತಯಾರಾಗಿಯೇ ಬರುತ್ತಿದ್ದರು.) ನಮ್ಮ ಮಾಸ್ತರ್ ಮಹಾಬಲ ರೈ ಅವರು ಬರೆದು ನಿರ್ದೇಶಿಸಿದ ತುಳು ನಾಟಕ ‘ಲಾಟ್ರಿ ಲಕ್ಕಪ್ಪೆ ದಿವಾಳಿ ದೂಮಪ್ಪೆ’ ದಲ್ಲಿ ನನ್ನದು ಲಕ್ಕಪ್ಪನ ಪಾತ್ರ. ದೂಮಪ್ಪನ ಪಾತ್ರ ಬಹುಶಃ ಹಸನ್ ಮಾಡಿದ್ದ ಅಂತ ನೆನಪು. ಇರಲಿ, ತಿರುಗಿ ಮತ್ತೆ ನನ್ನ ಈಜು ಪುರಾಣಕ್ಕೆ ಬರೋಣ. ನಾನು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಸನ್ ಮನೆಗೆ ಬಂದು (ನಮ್ಮ ಮನೆಯಲ್ಲಿ ಏನೋ ಒಂದು ಸುಳ್ಳು ಹೇಳಿ; ಏನದು ಸುಳ್ಳು ಸಬೂಬು ಈಗ ನೆನಪಾಗುತ್ತಿಲ್ಲ) ಇನ್ನೂ ಮಲಗಿಯೇ ಇರುತ್ತಿದ್ದವನನ್ನು ಎಬ್ಬಿಸಿ, ಬಳಿಕ ಕಾರಿನ ಹಳೆ ಟ್ಯೂಬ್ (ಅದು ಅವನ ಮಾವನ ಕಾರಿನದ್ದು) ಹಿಡ್ಕೊಂಡು ನಿದ್ದೆಗಣ್ಣಿನಲ್ಲಿ ಒಂದು ಕಿಲೋ ಮೀಟರ್ ನಡ್ಕೊಂಡು ಹೋಗಿ ಈಜು ಕ್ಲಾಸಿಗೆ ಮೊದಲು ಹಾಜರು ಹಾಕುತ್ತಿದ್ದೆವು. ಪೊಟ್ಟು ತೆಂಗಿನ ಕಾಯಿ, ಬಾಳೆದಿಂಡುಗಳಿಂದ ಮೇಲ್-ಬಡ್ತಿ ಕಾರಿನ ಹಳೆ ಟ್ಯೂಬ್. ಇದರ ಮಧ್ಯದಲ್ಲಿ ಕೂತರೆ ಯಾವ ಭಯ, ಸುಸ್ತು ಇಲ್ಲದೆ ಬೇಕಾದಷ್ಟು ಹೊತ್ತು ನೀರಿನಲ್ಲಿ ಖುಷಿ ಬಂದಂತೆ ವಿಹರಿಸಬಹುದಾಗಿತ್ತು. ಆದರೆ ನಮ್ಮ ಶೆಟ್ಟಿಗಾರ್ ಮಾಸ್ತರಿಗೆ ಇದನ್ನು ಕಂಡರೆ ಅಷ್ಟಕ್ಕಷ್ಟೇ. ಮಕ್ಕಳು ಈಜು ಕಲಿಯುವುದು ಬಿಟ್ಟು ಜಲವಿಹಾರ ಮಾಡುತ್ತಾ ಕಾಲಕಳೆಯುತ್ತಾರೆ ಎಂದು ಅವರಿಗೆ ಅನಿಸುತ್ತಿತ್ತು. ಮತ್ತು ಅದು ಸತ್ಯವೂ ಆಗಿತ್ತು.ಅಜಿತ್ ಕುಮಾರ್ ರೈ ಕೂಡಾ ಈ ಈಜು ಕ್ಲಾಸಿನ ಸದಸ್ಯನೇ. ಇವರಿಬ್ಬರು ಮತ್ತು ಗಣಪತಿ ಭಟ್ (ಉಳಿದವರ ಹೆಸರು ನೆನಪಾಗುತ್ತಿಲ್ಲ) ಮೈಸೂರು ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಟ್ರೋಫಿ ಹಿಡಿದು ಮೆರೆದ ಘಟನೆ ಒಂದು ರೋಚಕ ಕಥೆ. ಈ ಕೋಟಿಕೆರೆಗೆ ಬರಬೇಕಾದರೆ ನನಗೆ ಎರಡು ದಾರಿಗಳಿದ್ದವು. ಒಂದು ಜಟಾಧಾರಿ ಕೆರೆದಂಡೆ ಮೇಲೆ ಸಾಗಿ ಸದಾ ನೀರು ಹರಿಯುವ ಒಂದು ಸಣ್ಣ ತೋಡಿನಲ್ಲಿ ಸ್ವಲ್ಪ ದೂರ ನಡೆದು ದಾಟಿ ಬರುವುದು – ಇದು ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು – ಮಳೆ ಬರುತ್ತಿದ್ದ ದಿನಗಳಲ್ಲೂ ಎಷ್ಟೋ ಬಾರಿ ನಾನು ಈಜು ಹೊಡೆಯುತ್ತಿದ್ದೆ. ಆಗೆಲ್ಲಾ ಸಾಮಾನ್ಯವಾಗಿ ನಾನು ಒಂಟಿಯೇ. ಇನ್ನೊಂದು ದಾರಿ ನಮ್ಮ ಹೈಸ್ಕೂಲ್ ಬದಿಯಿಂದ ಗದ್ದೆಗಳನ್ನು ಹಾದು ನನ್ನ ಸಹಪಾಠಿ ಸುಬ್ರಹ್ಮಣ್ಯ ಹೊಳ್ಳನ (ಪರಮೇಶ್ವರ ಹೊಳ್ಳರ ಖಾಸಾ ತಮ್ಮ – ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ದುರದೃಷ್ಟವಶಾತ್ ಬೈಕ್ ಆಕ್ಸಿಡೆಂಟ್-ನಲ್ಲಿ ತೀರಿಹೋದ) ಮನೆಗೆ ಬಂದು ಅವನೊಂದಿಗೆ ಕೋಟಿಕೆರೆಗೆ ಬರುವ ಬಳಸು ದಾರಿ. ಅವನು ನನ್ನೊಂದಿಗೆ ಬರುತ್ತಾನೆ ಎನ್ನುವ ಕಾರಣಕ್ಕೆ ನಾನು ಈ ಬಳಸು ದಾರಿಯನ್ನೇ ಹೆಚ್ಚು ನೆಚ್ಚಿದ್ದೆ. ಈಜುವಿಕೆಯಲ್ಲಿ ಸಾಧನೆ ಮಾಡಿದ ನನ್ನ ಇನ್ನೊಬ್ಬ ಸಹಪಾಠಿ ಕಾಶೀಮಟದ ಗಣಪತಿ ಭಟ್. ಇವನೊಂದಿಗೆ ತಳುಕುಹಾಕಿಕೊಂಡ ನೆನಪು ನಾನು ಏಳನೆಯ ತರಗತಿಯಲ್ಲಿ ಇದ್ದಾಗ ಜೀವಂಧರ ಮಾಷ್ಟ್ರ ನಿರ್ದೇಶನದ ‘ಕುರುಕ್ಷೇತ್ರ’ ನಾಟಕ. ಅದರಲ್ಲಿ ಗಣಪತಿಯದ್ದು ಕೌರವನ ಪಾತ್ರ, ನನ್ನದು ಬಲರಾಮನ ಪಾತ್ರ. ನಾಟಕದ ತರಬೇತಿ ಸಮಯದಲ್ಲಿ ಮಾತು ಮರೆತರೆ ಜೀವಂಧರ ಮಾಸ್ತರಿಗೆ (ನಮ್ಮ ಊರಿನ ಎರಡೋ ಮೂರೋ ಜೈನ ಮನೆಗಳಲ್ಲಿ ಇವರದೂ ಒಂದು; ಇನ್ನೊಂದು ಜೈನ ಬಸದಿಯ ಇಂದ್ರ ಅವರದು.) ಅಸಾಧ್ಯ ಸಿಟ್ಟು. ಕೌರವನ ಗದೆ, ಬಲರಾಮನ ಹಲಾಯುಧಗಳನ್ನು ನಾವು ನಮ್ಮ ನಮ್ಮ ಕೈಯಲ್ಲಿ ಇದೆ ಎಂದೇ ಭಾವಿಸಿಕೊಂಡು ರಿಹರ್ಸಲ್ ನಡೆಸುತ್ತಿದ್ದೆವು. ನಾಟಕದ ದಿನ ನನಗೆ ಸಣ್ಣಗೆ ಜ್ವರ. ಇದು ಮಾಸ್ತರಿಗೆ ಗೊತ್ತಾದರೆ ಫಜೀತಿ ಎಂದು ಸಾಧ್ಯವಾದಷ್ಟು ಉಮೇದು ತೋರಿಸುತ್ತಿದ್ದೆ. ಮೇಕಪ್ ಎಲ್ಲಾ ಮುಗಿದು ನಾಟಕ ನಡೆಯುತ್ತಿದೆ. ಆದರೆ ನನ್ನ ಹಲಾಯುಧ ಮಾತ್ರ ಕಾಣೆಯಾಗಿದೆ; ಅದನ್ನು ತಂದೇ ಇಲ್ಲವೋ ಅಥವಾ ಉಳಿದ ಪರಿಕರಗಳೆಡೆಯಲ್ಲಿ ಎಲ್ಲಿ ಮರೆಯಾಗಿತ್ತೋ

ನಾನು ಈಜು ಕಲಿತ ಪ್ರಸಂಗ: Read Post »

You cannot copy content of this page

Scroll to Top