ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ ಕಾವೇರಿತೀರದಪಯಣ ಪುಸ್ತಕವೊಂದು ಓದಲು ಮಡಿಲಿಗೆ ಬಿದ್ದಾಗ ಅದು ಕಾವೇರಿಯದೆಂದು ತಿಳಿದು ಕಣ್ಣರಳಿತು. ಇದೊಂದು ಅನುವಾದ ಕೃತಿಯೆಂಬುದು ಮತ್ತಷ್ಟು ಖುಷಿಕೊಟ್ಟಿತು. ಮೂಲ ಮಲಯಾಳಂ ಆಗಿದ್ದು , ಮಲಯಾಳಂ ಸಾಹಿತಿಯೊಬ್ಬರೂ ಕಾವೇರಿಯ ಜತೆ ಹೆಜ್ಜೆಯಿಡುತ್ತಲೇ ಕಾವೇರಿ ತೀರದ ಇತಿಹಾಸದ ಅನಾವರಣ ಮಾಡಿದ್ದಾರೆ. ಕನ್ನಡ ಮಣ್ಣಲ್ಲೇ ಹುಟ್ಟಿ, ಕಾವೇರಿಯ ಬಗಲಲ್ಲೇ ಉಸಿರಾಡಿ  ಈ ಕೃತಿಯನ್ನು ಓದುವ ಮೂಲಕವಾದರೂ  ನಾನೂ ಕಾವೇರಿಯೊಡನೆ  ಪ್ರಯಾಣ ಬೆಳೆಸಿದೆ. ಕೊಡಗಿನ ತಲಕಾವೇರಿಯಿಂದ ಹೊರಟ ಜೀವನದಿ ಪೂಂಪುಹಾರ್ ತಲುಪುವವರೆಗೂ ಅದೆಷ್ಟು ರೋಚಕ ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟಿಲ್ಲ! ನದಿಗಳೆಂದೂ ಸಂಸ್ಕೃತಿಯ ತೊಟ್ಟಿಲೇ ತಾನೇ? ರಾಜ ಮನೆತನಗಳು,  ಆಗಿನ ಜೀವನರೀತಿ , ಸಂಭ್ರಮ, ಸಂಕಟ ಎಲ್ಲವನ್ನೂ ಹೃದ್ಯವಾಗಿ ಮತ್ತು ಶಕ್ತವಾಗಿ  ಕಾವೇರಿ ತೀರದ ಪಯಣ ಉಣಬಡಿಸಿದೆ. ಅದೆಷ್ಟೋ ಇತಿಹಾಸದ ಪುಟಗಳನ್ನು  ಸಾವಾಧಾನವಾಗಿ  ತಿರುವಿ ಕಲೆಹಾಕುತ್ತಲೇ  ಮೌಲ್ಯಾಧಾರಗಳ  ಕಂತೆಯನ್ನು ನಮ್ಮ ಮುಂದೆ ಸುರಿದಿದ್ದಾರೆ. ಕಾವೇರಿ  ನದಿಯ ಉದ್ಭವ ತಾಣದಿಂದ ಹಿಡಿದು ಸಮುದ್ರ ಸೇರುವವರೆಗಿನ ಕಾವೇರಿಯ  ವರ್ಣನೆ ನಿಜಕ್ಕೂ ತಲೆದೂಗುವಂತೆ ಮಾಡುತ್ತದಾದರೂ ಇಲ್ಲಿ ನದಿ ಹರಿದ  ಆಸುಪಾಸಿನ ತಾಣಗಳ  ಇತಿಹಾಸ ಮತ್ತು ವರ್ತಮಾನದ ವಿಶಿಷ್ಟ ಸಂಗತಿಗಳ ಜಗತ್ತನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕಾವೇರಮ್ಮನ ಸನ್ನಿದಿಯನ್ನೇ ಉಸಿರಾಗಿಸಿಕೊಂಡಿರುವ  ನಮಗೆ ಕೊಡಗಿನ ಇತಿಹಾಸವನ್ನು ತಿಳಿದುಕೊಳ್ಳುವಂತೆ ಹೇಳುತ್ತಾ ಕಿವಿಹಿಂಡಿದಂತಿದೆ. ಕನ್ನಡದಲ್ಲಿ ಕೊಡವ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿರುವುದು, ಕೊಡಗು ಪ್ರತ್ಯೇಕ ರಾಜ್ಯದ ಕೂಗು ,ಸ್ವಾತಂತ್ರ್ಯ ಬಯಸಿದ ಮಹಿಳೆಯೊಂದಿಗೆ  ಕಾವೇರಿಯನ್ನು ಹೋಲಿಸುತ್ತಾ ಸೊಗಸಾದ ಕಥೆ ಹೆಣೆಯಲಾಗಿದೆ. ಬಲಮುರಿ ಸ್ಥಳಕ್ಕೆ ಯಾಕೆ ಆ ಹೆಸರು ಬಂತು? ಸೀರೆಯ ನೆರಿಗೆ ಹಿಂದಕ್ಕೆ ಆದುದರ ಹಿನ್ನೆಲೆ ಏನು? ಹೀಗೆ ಸಾಕಷ್ಟು ಕೊಡಗಿನ ಮಾಹಿತಿಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಕೊಡಗು, ಕಾವೇರಿ ಮತ್ತು ಇದರ ಸಂಬಂಧ ಇತರ ಕಥೆಗಳ ಜತೆ   ಭಾರತದಲ್ಲೇ ಟಿಬೆಟನ್ನರ ಅತಿದೊಡ್ಡ ಬೌದ್ಧ ಕೇಂದ್ರ  ಬೈಲುಕುಪ್ಪೆಯಲ್ಲಿ ಬೆಳೆದ ಮಾಹಿತಿ ಎಲ್ಲರ ಗಮನ ಸೆಳೆಯುವಂತಿದೆ. ವಿಕ್ಟೋರಿಯಾ ಗೌರಮ್ಮ ಎಂಬ ದುರಂತ ನಾಯಕಿಯ ಕುತೂಹಲಕಾರಿ ಬದುಕಿನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಬೇಕೆಂಬ ಒಳತುಡಿತ ಹುಟ್ಟುಹಾಕಿದೆ.  ಬೌದ್ಧ -ಜೈನ ತತ್ವಗಳ ಪ್ರಭಾವ, ದೇವಾಲಯಗಳು, ಆಚಾರ ವಿಚಾರಗಳು, ಸ್ಥಳವಿಶೇಷಗಳು , ರಾಜ ಮನೆತನಗಳಿಂದ ಹಿಡಿದು ಕಾವೇರಿ ಹರಿಯುವ ಊರುಗಳ ಇತಿಹಾಸವನ್ನೇ ಹೇಳುತ್ತಾಕಾವೇರಿ ತೀರದ ಪಯಣ ಬೆರಗಿನ ಲೋಕಕ್ಕೆ ಕೊಂಡೊಯ್ಯುತ್ತದೆ. ‘ಹರಿಯುವ ನದಿಯಲ್ಲಿ ಕಾಲೂರಿದಾಗಲೆಲ್ಲ ಆದು ಹೊಸ ನದಿಯೆಂದೇ ಭಾಸವಾಗುತ್ತದೆ’ ಎಂದು ಚಿಂತಕ ಹೆರಕ್ಲೀಟಸ್ ಹೇಳಿದಂತೆ ತನ್ನ ಪಯಣವನ್ನು ಮೆಲುಕಿಸುತ್ತಾ ಕಾವೇರಿಯ ಜತೆ ಅನೇಕ ಜನ್ಮಗಳಿಂದಲೂ ನಾನು ಹೆಜ್ಜೆ ಹಾಕಿದ್ದೇನೆ ಎಂದು ಹೇಳುವ ಮೂಲ ಕೃತಿಕಾರ ಓ.ಕೆ.ಜೋಣಿ  ಕೇರಳದವರು. ಇವರು ಜೀವನದಿಯ ಜಾಡು ಹುಡುಕುತ್ತಾ  ಹೊರಟು ಸಾಕಷ್ಟು ಅಧ್ಯಯನ ಮಾಡಿರುವುದು ಹೆಮ್ಮೆ ಅನಿಸುತ್ತದೆ. ಮೂಲ ಕೃತಿಕಾರರಾದ ಓ.ಕೆ. ಜೋಣಿ ಕೇರಳದ ವಯನಾಡ್ ಜಿಲ್ಲೆಯವರಾಗಿದ್ದು ರಾಷ್ಟ್ರ್ ಪ್ರಶಸ್ತಿ ಪುರಸ್ಕೃತರು. ಕಾವೇರಿಯ ವರ್ಣನೆ ಮತ್ತು ವಸ್ತುನಿಷ್ಠ, ಗಂಭೀರ ನಿರೂಪಣೆಯೊಂದಿಗೆ ವಿವರಿಸುವ ಇವರು ಸಂಶೋಧಕನಾಗಿ ಕಾವೇರಿ ದಡದಲ್ಲಿ ಪಯಣಿಸುತ್ತಾ ಬೇರೆ ಬೇರೆ ಆಕರಗಳಿಂದ  ಮಾಹಿತಿ ಸಂಗ್ರಹಿಸಿದ್ದಾರೆ.. ಇದರಿಂದಲೇ  ಕಾವೇರಿಯ ಹರಹನ್ನೂ, ಆಳವನ್ನೂ, ಹರಿವಿನ ಸಾನ್ನಿಧ್ಯವನ್ನೂ ಸಮೀಪಿಸಿ ಕ್ರೋಢೀಕರಿಸಲು ಹಾಗೂ ಇಷ್ಟು ಪರಿಣಾಮಕಾರಿಯಾದ ಅದ್ಭುತ ಕೃತಿಯ ಯಶಸ್ಸಿಗೆ ಸಾಧ್ಯವಾಯಿತು. ಕೃತಿಯನ್ನು ಓದುತ್ತಾ ಕನ್ನಡದೇ ಮೂಲ ಕೃತಿ ಎನ್ನುವಷ್ಟು ಆಪ್ತ ಭಾಷೆಯಲ್ಲಿ ಅನುವಾದಿಸಿ ಮಲಯಾಳಂ ಕೃತಿಯೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಾರೆ ಪತ್ರಕರ್ತ ವಿಕ್ರಂ ಕಾಂತಿಕೆರೆಯವರು. ಅನುವಾದವೆಂದರೆ ಹೀಗಿರಬೇಕು ಎಂಬುದಕ್ಕೆ ಮಾದರಿಯಾಗಿ ತಮ್ಮ ಪಕ್ವ ಭಾಷೆಯಲ್ಲಿ ಮೂಡಿರುವ  ಅನುವಾದ ನಿಜಕ್ಕೂ ಕನ್ನಡದ್ದೇ ಎನ್ನುವಷ್ಟು  ಅದ್ಭುತವಾಗಿದೆ. ಕಾವೇರಿ ತೀರದ ಪಯಣವನ್ನು ಹಲವು ಆಕರ ಗ್ರಂಥಗಳಿಂದ ಶೋಧಿಸಿರುವುದರಿಂದಲೂ, ಅಷ್ಟೇ ಪ್ರೌಢ ಅನುವಾದದಿಂದಲೂ ಇದೊಂದು ಅಧ್ಯಯನಯೋಗ್ಯ ಮತ್ತು ಸಂಗ್ರಹ ಯೋಗ್ಯ ಹೊತ್ತಗೆ ಎಂಬುದರಲ್ಲಿ ಎರಡು ಮಾತಿಲ್ಲ. ಇತಿಹಾಸ ಅದರಲ್ಲೂ ಜೀವನದಿಯ ಹೆಸರಲ್ಲಿ!. ನಾವೆಲ್ಲ ಈ ಕೃತಿಯನ್ನು ಓದಿಯೇ ಸವಿಯಬೇಕು. ಸುನೀತ ಕುಶಾಲನಗರ .

Read Post »

ಪುಸ್ತಕ ಸಂಗಾತಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

ಪುಸ್ತಕ ಸಂಗಾತಿ ಕನ್ನಡಿ ಮುಂದಿನ ನಗ್ನ ಚಿತ್ರಗಳು ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ……. ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ,ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ ಪ್ರಯತ್ನ ನಿರಂತರ, ಇಂತಹದೇ ಪ್ರಯತ್ನವಾಗಿ ಇಲ್ಲಿನ ಗಜಲ್ ಗಳನ್ನು ವಿಶ್ಲೇಷಿಸಬಹುದು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಳ್ಳಿಯ ಯುವಕ ಶ್ರೀ ಪ್ರಶಾಂತ ಅಂಗಡಿ, ಶ್ವೇತಪ್ರಿಯ ಎಂಬ ಕಾವ್ಯನಾಮದಿಂದ ತಮ್ಮ ಗಜಲ್ ಬರೆಹ ಯಾನದಲ್ಲಿರುವರು. ಇವರ ಈ ಕೃತಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನ ಸಹಾಯ ಪಡೆದಿದೆ. ಇಲ್ಲಿನ ಗಜಲ್ ಗಳು ಸಾಮಾಜಿಕ ಅಸಮಾನತೆ, ರಾಜಕೀಯ ವಿಡಂಬನೆ, ಕೃಷಿ ಬದುಕಿನ ಒಳನೋಟ, ಹೆತ್ತವರ ಬಗೆಗಿನ ಆಳವಾದ ಪ್ರೇಮ, ಮತ್ತು ಒಲವಿನ ರಂಗೋಲಿಯ ಗೆರೆಗಳನ್ನು ಒಳಗೊಂಡ ಸುಂದರ ಅರವತ್ತು ಗಜಲ್ ಗಳ ಗುಚ್ಚವಾಗಿ ನಮ್ಮ ಕೈಸೇರಿದೆ. “ಹತ್ತುಸಲ ಮರಣಯಾತನೆಯನ್ನು ಅನುಭವಿಸಬೇಕಾಗಿ ಬಂದರು ನನ್ನ ನಡತೆಯನ್ನೇನು ಬದಲಾಯಿಸಲಾಯಿಸುವದಿಲ್ಲ ಎಂಬುದನ್ನು ಮಾತ್ರ ತಿಳಿಯಿರಿ” ಎನ್ನುತ್ತಾನೆ ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್.ಜೈಲಿನ ಸೇವಕ ಕೊಟ್ಟ “ಹೇಮ್ಲಾಕ್” ವಿಷ ಸೇವನೆಗೂ ಮುನ್ನ ಅವನ ತಪ್ಪೊಪ್ಪಿಗೆ ಹೇಳಿಕೆಗೆ ಆಗ್ರಹಿಸುವ ಜೈಲಿನ ಅಧಿಕಾರಿಗೆ ಹೇಳಿದ ಕೊನೆಯ ಮಾತಿದು. ಇಂತಹ ದಾಷ್ಟ್ಯತನ ಸಮಾಜ ಸುಧಾರಕ, ಲೋಕ ಚಿಂತಕ, ಲೋಕದ ಹಿತೈಷಿಗಳಿಗಲ್ಲದೆ ಭ್ರಷ್ಟ ಮನಸ್ಥಿತಿಯಲ್ಲಿ ಲೋಕ ದೇಳ್ಗೆ ಯ ವಿಚಾರಗಳು ಮೂಡಲಾರವು ಇಲ್ಲಿ ಇಂತಹದ್ದೇ ಪದಾಕ್ರೋಶ. ಇಲ್ಲಿನ ಬಹುತೇಕ ಗಜಲ್ ಗಳು ಭಾವಗೀತಾತ್ಮಕವಾದ ಮಧುರ ಬಂಧದಲ್ಲಿ ಕಟ್ಟಿ ಕೊಟ್ಟಿದ್ದರೂ ಅಭಿವ್ಯಕ್ತಿಯ ಸಿಡಿಲಾಗಿ ಕೋರೈಸುವ ಶೇರ್ ಗಳೇ ಹೆಚ್ಚಾಗಿವೆ. ತನ್ನ ಸುತ್ತ ಮುತ್ತಲಿನಲ್ಲಿ ನೋಡಿದ,ಅನುಭವಿಸಿದ ಕಷ್ಟ,ದಾರಿದ್ರ್ಯ,ತಾರತಮ್ಯ,ಬಡವರ ಬವಣೆ, ಆಡಳಿತಗಾರರ ಭ್ರಷ್ಟತೆ, ಜಾತಿ ಓಲೈಕೆ, ಒಡೆದಾಳುವ ಸಂಚು ಎಲ್ಲವನ್ನೂ ಕವಿ ಬಹು ನಿರ್ಭಿಡೆಯಿಂದ ತನ್ನ ಗಜಲ್ ಗಳಲ್ಲಿ ಉಲ್ಲೇಖಿಸಿ ಜಾಡಿಸಿದ್ದಾನೆ, ಖಟು ಪದಗಳಲ್ಲಿ ರೂಪಕಗಳಲ್ಲಿ ವಿಡಂಬಿಸಿ ಲೇವಡಿಯಾಡಿದ್ದಾನೆ.ಇಂತಹ ಒಂದಷ್ಟು ಶೇರ್ ಗಳನು ಉದಾಹರಣೆಗೆ ನೀಡುವುದಾದರೆ…. ಗಜಲ್  01 “ಬೆದರುಗೊಂಬೆಗೆ ನೆದರು ಬಿದ್ದಿದೆ ನೆರಳು ಗದರಿ ನಿಲ್ಲುವಂತೆ ಹೆಜ್ಜೆ ಹೆಜ್ಜೆಗೂ ಜಾತಿಯ ಗಡಿ ರೇಖೆಗಳಿವೆ ಏನು ಮಾಡಲಿ“ ಹೊಲದಲ್ಲಿ ಹಕ್ಕಿ ಪಕ್ಷಿಗಳನ್ನು ಮೋಸಗೊಳಿಸಲು ತನ್ನ ಬೇಳೆ ಕಾಯ್ದುಕೊಳ್ಳಲು ರೈತಾಪಿ ಜನ ಮನುಷ್ಯನೊಬ್ಬ ಅಲ್ಲಿ ಸದಾ ಕಾವಲಿರುವಂತೆ ಕಾಣುವ ಬೆದರು ಬೊಂಬೆಯನ್ನು ಹೊಲದಲ್ಲಿ ನೆಡಾಕಿರುತ್ತಾರೆ ಅದರ ನೆರಳು ಕೂಡ ನಡುಗುವಂತೆ,ಅಂದರೆ ಜೀವವಿಲ್ಲದ ಬೊಂಬೆ ಮತ್ತದರ ನೆರಳು ಎಂಥ ರೂಪಕವಿದು ಈ ನೆರಳು ಹೆದರುವಂತೆ ಹೆಜ್ಜೆ ಹೆಜ್ಜೆಗೂ ಎಲ್ಲರಲ್ಲಿಯೂ, ಎಲ್ಲೆಂದರಲ್ಲಿ ಜಾತಿಯ ಗಡಿರೇಖೆಗಳನ್ನು ಎಳೆದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ವಿದ್ಯಮಾನದ ಕುರಿತು  ಅಸಮಾಧಾನವಿದೆ. ಗಜಲ್  4 “ಹುಟ್ಟು ಸಾವಿನ ಮಧ್ಯ ಮನುಷ್ಯತ್ವ ಹುಟ್ಟಲಿ ಅದುವೇ ಜೀವನ ಸತ್ತ ಹೃದಯ ಮೌನತಾಳಿ ಸೋಲುವದೇನು ಹೊಸತಲ್ಲ ಬಿಡು“ ಅಪಘಾತದಲ್ಲಿಯೋ, ದುರಂತದಲ್ಲಿಯೋ, ಜೀವಗಳು ನರಳುತ್ತಿದ್ದರೆ ಅವರನ್ನು ರಕ್ಷಿಸದೆ,ಉಪಚರಿಸದೆ ಅದನ್ನು ಚಿತ್ರಿಸಿ ಜಾಲತಾಣಗಳಿಗೆ ರವಾನಿಸುವ ಇಂದಿನ ಆಧುನಿಕರ ಸಂವೇದನಾಹೀನ ಮನ ಕಂಡು ಹುಟ್ಟು ಸಾವಿನ ನಡುವಲ್ಲಿ ಒಮ್ಮೆಯಾದರೂ ಅವರಲ್ಲಿ ಮನುಷ್ಯತ್ವ ಜಾಗೃತವಾಗಲಿ ಹೃದಯ ಒಳ್ಳೆಯದನ್ನು ಆಚರಿಸಲು ಮಿಡಿಯಲಿ ಅದುವೇ ಜೀವನ,ಆಗಲೇ ಬದುಕು ಗೆಲ್ಲುವುದು ಇಲ್ಲದಿದ್ದರೆ ಮಾನವನ ಬದುಕು ಸೋಲುವುದು ನಿಶ್ಚಿತ ಅದಾಗದಿದ್ದರೆ ಅದು ಸತ್ತ ಹೃದಯ ಅದು ಮೌನತಾಳುವುದು ಸಹಜ ಎನ್ನುವ ಅಂಬೋಣ. ಗಜಲ್  8 “ಉಸಿರಿಗೆ ಬೆಲೆ ಕಟ್ಟಿ ಹರಾಜು ಕೂಗಿದ್ದಾರೆ ಅವನ ಗಜಲಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ“ “ರವಿ ಕಾಣದ್ದನ್ನು ಕವಿ ಕಾಣ್ವ”  ಎನ್ನುವ ಮಾತಿದೆ ಇಂಥಹ ಕವಿಗೆ ಬೆಲೆ ಕಟ್ಟಿ ಅವನ ಬದುಕನ್ನು ಹಣ ಅಂತಸ್ತಿನಿಂದ ಅಳೆದು ಹರಾಜು ಕೂಗಿದ್ದಾರೆ ಆದರೆ ಅವನ ಗಜಲಿಗೆ ಇನ್ನೂ ಬೆಲೆ ನಿಗದಿಯಾಗಿಲ್ಲ, ಲೋಕ ಚಿಂತಕರ ವಿಚಾರಗಳನ್ನೂ, ಕಾಣಿಸಿದ ದಾರಿಯನು ಅನುಸರಿಸಬಹುದು, ಅಳವಡಿಸಿಕೊಳ್ಳಬಹುದೇ ಹೊರತು ಅಳಿಸಲು ನೋಡುವುದು ಬೆಲೆ ನಿಗದಿಮಾಡುವುದು ಮೂರ್ಖತನ . ಗಜಲ್  9 “ಚರ್ಚು ಮಸೀದಿ ಗುಡಿಗಳಲ್ಲಿ ಬೆತ್ತಲಾಗಿ ಮಲಗಿದ್ದಾನೆ ಹೆಸರಿಡಬೇಡ ಅವನು ಗಜಲಿನ ನಶೆಗೆ ಮಧುಶಾಲೆಗೆ ಹೋದವನು ಹೇಗೆ ತಡೆಯಲಿ“ ಧರ್ಮಗಳ ಕಾರ್ಯಸ್ತಾನ ಅದರ ಪವಿತ್ರ ತಾಣಗಳು, ಅಲ್ಲಿಯೇ ಕವಿ ಇಂತಹ ಧರ್ಮದಿಂದ ಬಂದಿದ್ದಾನೆ ಎಂದು ತೋರುವ ಧರ್ಮದ ಬಟ್ಟೆ , ಲಾಂಛನ ಮೇಲು ವಸ್ತ್ರದ ಹಂಗು ತೊರೆದು ಬೆತ್ತಲಾಗಿದ್ದಾನೆ ಅಲ್ಲದೆ ಅವನು ಗಜಲ್ ನ ನಶೆಗಾಗಿ ಮಧುಶಾಲೆಗೆ ಹೋಗಿದ್ದಾನೆ ಅವನನ್ನು ನಾನು ತಡೆಯಲಾರೆ ಆಕ್ಷೇಪಿಸಲಾರೆ ಇದು ನಡೆಯ ಬೇಕಾದ ನಡೆ ಎನ್ನುತ್ತದೆ. ಮಧುಶಾಲೆ ಚಿಂತನಾ ಕೂಟವಾಗಿ ಗಜಲ್ ಅಲ್ಲಿಂದ ಹೊಮ್ಮಿದ ಪಾಕ ಪರಿಮಳ,ಈ ಶೇರ್ ಮನುಜ ಮತ ಸಾಗಬೇಕಾದ ಹಾದಿಯ ದಿಕ್ಸೂಚಿಯಾಗಿದೆ.  ಗಜಲ್  15 “ವ್ಯವಸಾಯಿಕ ಅಪ್ಪನ ಜೀವನವನ್ನು ವ್ಯವಸಾಯದ ಪರಿಕರ ಮತ್ತು ಪರಿಸ್ಥಿತಿಯ ಸಾದೃಶ್ಯಗಳೊಂದಿಗೆ ಹೋಲಿಸಿ ಬರೆದ ಮನಮಿಡಿಯುವ ಗಜಲ್ ಆಗಿದೆ“ ಗಜಲ್  17 “ಕಲ್ಹೊಡೆದ ಕೈಗಳ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಚೂರು ಸೂರಿಗೆ ಬೆಟ್ಟ ಗುಡ್ಡಗಳೇ ನೀರಾಗಿದೆ ಸಾಕಿ“ ಕಲ್ಲು ಹೊಡೆಯುವ ಕಲ್ಲು ಕುಟಿಕರ ಕೈಯಲ್ಲಿ ಎದ್ದ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಅವರ ಸಣ್ಣ ಸೂರಿನ  ಅಗತ್ಯತೆಗಳಿಗಾಗಿ ಬೆಟ್ಟ ಗುಡ್ಡಗಳು ಕೂಡ ಮಿದಿಡಿವೆ ಎನ್ನುವ ವಾಚ್ಛಾರ್ಥ ಕಂಡರೂ ಕಲ್ಲು ಎಸೆಯುವ ಸಮಾಜ ಘಾತುಕರಿಗಳಿಗು ಕಿವಿಗೊಡೋಣ ಅವರ ಸಣ್ಣ ಅತೃಪ್ತಿಗಾಗಿ ದೊಡ್ಡ ಬೆಟ್ಟವನ್ನೆ ಕರಗಿಸುತ್ತಾರೆ ಎನ್ನುವ ಎಚ್ಚರಿಕೆಯ ಮಾತು ಇಲ್ಲಿ ಅರ್ಥೈಸಬಹುದು. ಗಜಲ್  21 “ಸರ್ವಜ್ಞ” ನ ಬಗ್ಗೆ ಗಜಲ್ ಗೋ ರಿಗೆ ಇರುವ ಅಭಿಮಾನ ಗಜಲ್ ಆಗಿ ಕಳೆಗಟ್ಟಿದೆ. ಗಜಲ್ 33 ಕರೋನಾದ ಭೀಕರತೆ,ಕಾರಣ ವಿವರಿಸುವ ಗಜಲ್ ಆಗಿದೆ. ಗಜಲ್ 29 “ಸತ್ಯದ ಮುಖ ಹುಡುಕದಿರು ನಿನ್ನುಸಿರ ಕಪ್ಪ ಕೇಳುತ್ತಾರೆ ಅವುಡುಗಚ್ಚಿದ ನಾಲಿಗೆಗಿಂದು ಕದನದ ಆಪತ್ತು ಒದಗಿದೆ“ ಸತ್ಯವನ್ನು ಆಚರಿಸುವುದು ಅದನ್ನು ಹುಡುಕಾಡುವಂತ ಸ್ಥಿತಿ ಈಗ ನಿರ್ಮಾಣವಾಗಿದೆ, ಒಂದುವೇಳೆ ಹುಡುಕಲು ಹೋದರು ಅದಕ್ಕಾಗಿ ಪ್ರಾಣವನ್ನೇ ತೆರಿಗೆಯಾಗಿ ಕಟ್ಟಬೇಕಾದ ಪರಿಸ್ಥಿತಿ ಒದಗಿದೆ ಅಲ್ಲದೆ ಇದೆಲ್ಲವನ್ನೂ ಬಾಯಿ ಮುಚ್ಚಿ ಸಹಿಸಿದರೂ ಎಂದಾದರೂ ಒಮ್ಮೆ ಇದು ತಮಗೆ ತಿರುಗುಬಾಣವಾಗುವ ಭಯದಿಂದ ಸಾಮಾನ್ಯರ ನಾಲಿಗೆಗೂ ಸಂಚಕಾರ ತರುವರು ಎನ್ನುವ ದ್ರೋಹಿಗಳ ಹುನ್ನಾರದ ವಾಸ್ತವ. ಗಜಲ್ 30 “ಅದೆಷ್ಟೋ ಬಾರಿ ಹಸಿದ ಹೊಟ್ಟೆಗೆ ಬಹಿಷ್ಕಾರ ಹಾಕಿದ್ದಳು ನನ್ನವ್ವ ಪಾದದ ಧೂಳಿಗೆ ಗಡಿಪಾರು ಹಾಕಲು ನನ್ನಪ್ಪನ ದುಬ್ಬ ಸೋತಿತ್ತು“ ಈ ಶೇರ್ ಅಪ್ಪ ಅವ್ವ ಸವೆಸುವ ಬದುಕಿನ ಹಾದಿಯ ಧಾರುಣತೆಯನ್ನು ತೋರುಗಾಣಿಸಿದಂತೆ ಕಂಡರೂ ಸ್ವತಂತ್ರ ಭಾರತದ ಬಹುಪಾಲು ಜನ ಅನ್ನವಿಲ್ಲದೆ ,ಸೂರಿಲ್ಲದೆ ಆಸರೆಯ ಬಲವಿಲ್ಲದೆ ಬದುಕುತ್ತಿರುವ ಬದುಕಿಗೆ ಸಾಕ್ಷಿಯಾಗಿ ಶೇರ್ ದಾಖಲಾಗಿದೆ. ಗಜಲ್  35 “ಎಲುಬಿಲ್ಲದ ನಾಲಿಗೆ ದೇಶವಿರೋಧಿ ಜೈಕಾರ ಹಾಕಿದೆ ಸುಟ್ಟುಬಿಡು “ಶ್ವೇತಪ್ರಿಯ“ ಸಾವು ಬಯಸಿದರೆ ಮಸಣದ ಮೆಟ್ಟಿಲು ತಿರಸ್ಕರಿಸಿ ಹಾರೈಸುವಂತೆ ಇರಬೇಕು“ ಈ ಶೇರ್ ಕವಿಯ ದೇಶಪ್ರೇಮವನ್ನು  ಸಾರುತ್ತಿದೆ ದೇಶವಿರೋಧಿ ಜೈಕಾರ  ಹಾಕುವ ಎಲುಬಿಲ್ಲದ ನಾಲಿಗೆಯನ್ನು ಸುಟ್ಟುಬಿಡು ಅಲ್ಲದೆ ಮಸಣದ ಮೆಟ್ಟಿಲು ಕೂಡ ನಿನ್ನ ಸಾವನ್ನು ತಿರಸ್ಕರಿಸುವಂತೆ ಅಲ್ಲಿಯೇ ಬದುಕಿಬಿಡು ಎಂದು ಹೇಳುವ ಉತ್ಕಟ ದೇಶಪ್ರೇಮವಿದು ಅಪ್ಪಟ ದೇಶ ಭಕ್ತನ ಮನದಾಳದ ಹೆಬ್ಬಯಕೆಯಿದೆ ಇಲ್ಲಿ. ಗಜಲ್ 56 “ಆರಿಂಚಿನ ಎದೆ ಬಂಜರೆಂದು ತಿಳಿಯದೆ ಬೀಜ ಬಿತ್ತಿದ್ದಾನೆ ಶ್ವೇತಪ್ರಿಯ ತೆರಿಗೆಯ ಮಳೆ ಸುರಿದರೂ ಬರಗಾಲದ ವೈರಸ್ ಒಕ್ಕರಿಸಿ ಬಿಕ್ಕಳಿಸಿದೆ“ ಬಂಜರಿನಲ್ಲಿಯು ಕೂಡ ಬಿತ್ತನೆ ಮಾಡಿ,ತೆರಿಗೆಯ ಮಳೆ ಸುರಿದರೂ, ಬರಗಾಲದ ವೈರಸ್ ಆ ಬೆಳೆಯನ್ನು ನಾಶಪಡಿಸುತ್ತಿದೆ ಫಸಲಿಗಾಗಿ ಕಾಯುತ್ತ ಕೂತಿರುವ ರೈತನ ಪರಿಸ್ಥಿತಿಯ ಅರ್ಥದೊಂದಿಗೆ  ಎದೆ ಬಂಜರು ಬಿತ್ತಬಾರದಾಗಿತ್ತು ತಾನು ನಂಬಬಾರದ್ದಲ್ಲಿ ನಂಬಿದ್ದನ್ನು ಅದು ಆಗಬಾರದ ಕೇಡಾಗಿ ಘಟಿಸಿದ್ದರ ವಿಷಾದ ಧ್ವನಿಸುತ್ತದೆ. ಆರಿಂಚಿನ ಇದೆ ಇನ್ನೊಂದು ವಾಸ್ತವಿಕವಾದ ಸಧ್ಯದ ಮತ್ತೊಂದು ಹೊಳವನ್ನು ನೀಡುತ್ತಿದೆ. ಪ್ರೇಮ, ವಿರಸ ,ದಾಂಪತ್ಯ ಸವಿಯ ಅನೇಕ ಗಜಲ್ ಗಳು ಇದ್ದರೂ ಸಮಕಾಲೀನ ವಿಷಯಗಳಲ್ಲಿನ ಸಂದಿಗ್ಧತೆ ಸೂಚಿಸುವ ಗಜಲ್ ಗಳ ಸದ್ದೆ ಇಲ್ಲಿ ಹೆಚ್ಚು ಕೇಳಿಬರುತ್ತದೆ. ಇಲ್ಲಿನ ಗಜಲ್ ಗಳು ಹತ್ತು ಹಲವಾರು ವಿಷಯಗಳನ್ನು ಧ್ವನಿಸಿದರು ಅದನ್ನೇ ಇನ್ನೂ ನಯವಾಗಿ,ಸೂಚ್ಯವಾಗಿ ತಿಳಿಸುವ ಉಮೇದು ಇದ್ದಂತಿಲ್ಲ ಹೊಸೆದ ಸಾಲು ಆಕಾಶಕ್ಕೆ ಗುರಿಯಾಗಿರಬೇಕು ಅದು ಸೂರ್ಯನಿಗೋ, ಚಂದ್ರನಿಗೊ,ನಕ್ಷತ್ರಗಳಿಗೋ ಇತ್ಯಾದಿ ಕಲ್ಪನೆ ಹೊಸ ಹೊಳವು ನೋಡುಗ, ಓದುಗರಲ್ಲಿ ಮೂಡಿಸಿದಾಗಲೇ ಕವಿತೆಗೆ ಸಮಾಧಾನ ಮುಂದೆ ಈ  ಪ್ರಯತ್ನವಿರಲಿ. ಒತ್ತಕ್ಷರವಿರುವ ಪದಗಳನ್ನು ಕಡಿಮೆ ಗೊಳಿಸಿ ಇನ್ನೂ ಸರಳ ವಿರಳ ಪದಗಳ ಬಳಕೆಯಿಂದ ಗಜಲ್ ಇನ್ನೂ ಲಾಲಿತ್ಯಪೂರ್ಣ ವಾಗಿಸಬಹುದಿತ್ತು ಎನ್ನುವ ಅಂಬೋಣ ಮುಂದಿನ ಗಜಲ್ ಗಳಲ್ಲಿ ಕವಿ ಇದನ್ನು ಗಮನಿಸಲಿ. ಸಧ್ಯದ ಕಾಲದ ತಲ್ಲಣಗಳಿಗೆ ಧ್ವನಿಯಾಗಿ ಮೂಡಿಬಂದ ಈ ಗಜಲ್ ಆಲದ ಮರದ ಕೆಳಗೆ ಕುಳಿತು ನೀವು ಒಮ್ಮೆ ಇಲ್ಲಿನ ವಿಚಾರಗಳಿಗೆ ಕಿವಿಯಾಗಿ. ಪುಸ್ತಕ ಬೇಕಾದವರು ಸಂಪರ್ಕಿಸಿ ಶ್ರೀ.ಪ್ರಕಾಶ ಅಂಗಡಿ ಫೋನ್ ಸಂಖ್ಯೆ: 81474 03964 ಜ್ಯೋತಿ ಬಿ ದೇವಣಗಾವ

ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »

ಪುಸ್ತಕ ಸಂಗಾತಿ

ಪಿಸುಗುಡುವ ಹಕ್ಕಿ

ಪುಸ್ತಕದ ಹೆಸರು : ಪಿಸುಗುಡುವ ಹಕ್ಕಿ
ಕೃತಿಕಾರರು : ಸರಸ್ವತಿ ಕೆ, ನಾಗರಾಜ್
ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.
ಪ್ರಕಟಣೆ : ಡಿಸೆಂಬರ್ ೨೦೨೧.
ಪುಟಗಳು: ೭೨, ಬೆಲೆ : ೯೦/-
ಪುಸ್ತಕಕ್ಕಾಗಿ ಸಂಪರ್ಕಿಸಿ : ೯೭೪೧೫೬೬೩೧೩

ಪಿಸುಗುಡುವ ಹಕ್ಕಿ Read Post »

ಪುಸ್ತಕ ಸಂಗಾತಿ

ಲೋಕದ ದನಿಗೆ ಕಿವಿಯಾದ ಗಾಳಿಗೆ ತೊಟ್ಟಿಲ ಕಟ್ಟಿ ಕವಿತೆಗಳು

ಲೋಕದ ದನಿಗೆ ಕಿವಿಯಾದ ಗಾಳಿಗೆ ತೊಟ್ಟಿಲ ಕಟ್ಟಿ ಕವಿತೆಗಳು

ಲೋಕದ ದನಿಗೆ ಕಿವಿಯಾದ ಗಾಳಿಗೆ ತೊಟ್ಟಿಲ ಕಟ್ಟಿ ಕವಿತೆಗಳು Read Post »

ಪುಸ್ತಕ ಸಂಗಾತಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

ಕೃತಿ: ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ)
ಲೇ: ಪ್ರಶಾಂತ ಅಂಗಡಿ (ಶ್ವೇತಪ್ರಿಯ)
ಪ್ರಕಾಶಕರು: ನೇರಿಶಾ ಪ್ರಕಾಶನ
ಪುಟಗಳು: ೧೦೪
ಬೆಲೆ: ೧೧೦/-
8147403964

ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »

ಪುಸ್ತಕ ಸಂಗಾತಿ

ಮಲೆನಾಡ ಆಚರಣೆಯ ಒಂದು ನೋಟ ” ಫಣಿಯಮ್ಮ “

ಜಾತಿ ಧರ್ಮಗಳನ್ನು ಮೀರಿದ ಚಿಂತನೆ ಅವಳದ್ದು.ಜಾತಿ.ಧರ್ಮ .ಲಿಂಗಗಳನ್ನು ಮೀರಿದ ಮಾನವೀಯತೆಯ ನ್ನು ತೋರಿಸುವ ಫಣಿಯಮ್ಮ ನಮ್ಮ ನಿಮ್ಮೆಲ್ಲರ ಗಮನ ಸೆಳೆಯುತ್ತಾಳೆ .ವಿಧವೆಯೆಂದು ಮೂಲೆಗೆ ತಳ್ಳಿದ ಒಬ್ಬ ಹೆಣ್ಣಿನಲ್ಲಿ ಅದೆಂತ ಶಕ್ತಿ ಇರಬಹುದು ಎನ್ನುವುದಕ್ಕೆ ಫಣಿಯಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ.

ಮಲೆನಾಡ ಆಚರಣೆಯ ಒಂದು ನೋಟ ” ಫಣಿಯಮ್ಮ “ Read Post »

ಪುಸ್ತಕ ಸಂಗಾತಿ

ತುಮುಲಗಳು

ಪುಸ್ತಕ ಸಂಗಾತಿ ತುಮುಲಗಳು ಹಿರಿಯ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರ ಕವನ ಸಂಕಲನವಾದ ” ತುಮುಲಗಳು ” ಹೆಸರೇ ತಿಳಿಸುವ ಹಾಗೆ ಅಂತರಾಳದ ಬೇಗುದಿಗಳನ್ನ, ತಳಮಳವನ್ನ ಹೊರ ಹಾಕುವ ಪ್ರಕ್ರಿಯೆಯಾಗಿ ಮೂಡಿ ಬಂದ ಸಂಕಲನವಾಗಿದೆ. ಅವರೇ ಬರೆದ ಹಾಗೆ ನನ್ನನ್ನು ಪ್ರೀತಿಸಿದ, ದ್ವೇಷಿಸಿದ, ಜೊತೆಯಾದ, ತೊರೆದ, ಗೌರವಿಸಿದ, ಅವಮಾನಿಸಿದ, ಪ್ರೋತ್ಸಾಹಿಸಿದ, ಹೀಗಳೆದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಹೇಳುವುದರಲ್ಲೇ ಅವರ ತುಮುಲಗಳನ್ನ ಅರ್ಥೈಸಿಕೊಳ್ಳಬಹುದು. ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರ ಕೆಲವು ಬರಹಗಳನ್ನ ಫೇಸ್ಬುಕ್ ನಲ್ಲಿ ಗಮನಿಸುತ್ತಲೇ ಬಂದಿರುವ ನಾನು ಅವರು ಆಲ್ಬರ್ಟ್ ಕಾಮೂ ಅವರ The Fall – “ಪತನ” ಕೃತಿಯನ್ನ ಕನ್ನಡಕ್ಕೆ ತಂದಿದ್ದನ್ನ ಗಮನಿಸಿ ಪುಸ್ತಕ ತರಿಸಿಕೊಂಡ ನನಗೆ “ತುಮುಲಗಳು” ಅಚ್ಚರಿಯಾಗೆ ಬಂದಿತ್ತು. ಆಮೇಲೆ ತಿಳಿಯಿತು ಇವರು ಕಾಮೂ ಅವರ ಕೃತಿಯನ್ನೇ  ಅನುವಾದಿಸಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೂ ಅವರ ಕವನ ಸಂಕಲನಕ್ಕೂ ಅವಿನಾಭಾವ ಸಂಬಂಧವನ್ನ ಗುರುತಿಸಿದೆ.    ವೈಯುಕ್ತಿಕವಾಗಿ ಕವಿತೆಗಳಲ್ಲಿ ಪ್ರೀತಿ-ಪ್ರೇಮಗಳ ಹೊರತಾಗಿ ಏನಾದರೂ ಇದೆಯೇ ಎಂಬುದನ್ನ ಹುಡುಕುವ ಮನೋಭಾವದವನಾದ ನನಗೆ “ತುಮುಲಗಳು” ಮೋಸ ಮಾಡಿಲ್ಲ. ವಾಸ್ತವದ ಜೊತೆ ಜೊತೆಗೆ ಅಸಂಗತ ಬದುಕಿನ ನೆಲೆಗಳನ್ನ ಶಬ್ದಗಳಲ್ಲಿ ಹಿಡಿದಿಡುವ ಕವಿತೆಗಾಗಿ ಹಾತೊರೆವ ಮನಸ್ಸುಗಳಿಗೆ ಈ ಸಂಕಲನದ ಕವಿತೆಗಳು ಮೋಸ ಮಾಡಲಾರವು.   ಬದುಕನ್ನ ಬೆರಗಿನಿಂದ ನೋಡುವ, ಅಲ್ಲಿನ ಸಂಗತಿಗಳನ್ನ ಅಂತರಾಳದಲ್ಲಿ ಒರೆಗೆ ಹಚ್ಚಿ ಅವಲೋಕಿಸುವ, ನಿರ್ಭೀತಿಯಿಂದ  ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಗುಣ, ಪೂರ್ವಾಗ್ರಹಕ್ಕೆ ಒಳಗಾಗದೇ ವಿಚಾರಗಳನ್ನ ಗ್ರಹಿಸುವ, ಶಾಶ್ವತವಾದವನ್ನ ಅಲ್ಲಗಳೆಯುತ್ತಲೇ ಒಂಟಿತನ, ಸಾವನ್ನ ಕುರಿತಾದ ಕೆಲವು ಭಾವನೆಗಳು  ನಾನೇ ಬರೆಯಬೇಕಂದುಕೊಂಡಿದ್ದ ಆದರೆ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರು ಬರೆದಿದ್ದಾರೆ ಎಂಬ ನಿರಾಳ ಭಾವ ಇಲ್ಲಿನ ಕವಿತೆಗಳದ್ದು.   ಮೊದಲ ಕವಿತೆಯಲ್ಲೇ ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುವ ಸಾಲುಗಳನ್ನ ಕಾಣಬಹುದು. ” ನನಗೆ ಹುಚ್ಚು ಹಿಡಿದ ದಿನ ಎಲ್ಲ ಸ್ಪಷ್ಟವಾಗಿತ್ತು ಅಲ್ಲಿಯವರೆಗೆ ನಾನು ಬದುಕಿನ ಅರ್ಥ ಹುಡುಕುತ್ತಿದ್ದೆ ಒಳತು–ಕೆಡುಕುಗಳನ್ನ ತೂಗಿ ನೋಡುತ್ತಿದ್ದೆ ಬೇಕು ಬೇಡಗಳನ್ನ ಅಳೆದು ನೋಡುತ್ತಿದ್ದೆ ….ಲೆಕ್ಕ ಅಳತೆಗಳೆಲ್ಲ ತಪ್ಪಿ ನನ್ನನ್ನು ಗೇಲಿ ಮಾಡತೊಡಗಿದ್ದವು … ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಅಂದು ತೋಳಗಲಿಸಿನಿಂತೆ ಆಮೇಲೆ ನನಗೆ ಹುಚ್ಚು ಹಿಡಿಯಿತು…” ಇಲ್ಲಿ ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಕೈ ತೋಳುಗಳನ್ನ ಅಗಲಿಸಿ ಹೊರಟ ಕವಿಗೆ ಕೊನೆಗೆ ಹುಚ್ಚುತನದ ಬದುಕಿನಿಂದ ಬಿಡುಗಡೆ ಹೇಗೆ ಅಸಾಧ್ಯವಾಯಿತು ಎಂಬುದನ್ನ ಮಾರ್ಮಿಕವಾಗೇ ಹೇಳುತ್ತದೆ. ಹೀಗೆ ಕವಿಯ ಮನಸ್ಸಿನ ಒಂದು ನಿರ್ದಿಷ್ಟ ಘಟನೆಯ ಸಾಲುಗಳು ಸಾರ್ವರ್ತ್ರಿಕ ಬದುಕನ್ನೇ ಬಿಂಬಿಸುವ ವಸ್ತುನಿಷ್ಠತೆಯನ್ನ ಪ್ರತಿನಿಧಿಸುತ್ತವೆ. ಇದು ಇವರ ಕವಿತೆಗಳ ಹೆಚ್ಚುಗಾರಿಕೆ. ಮತ್ತೊಂದು ಕವನದಲ್ಲಿ, ” ನಡೆಯಬಾರದ ಹಳೆಯ ದಾರಿಗಳಲ್ಲಿ, …ಕನಸುಗಳ ಬಂಡಿ ಮುಗ್ಗರಿಸಿ ಮುಕ್ಕಾದ, ಆ ಕ್ರೂರ ತಿರುವುಗಳಲ್ಲಿ ಹೊಂಚು ಹಾಕಿ ಕುಳಿತ ನೆನಪುಗಳ ಪ್ರೇತಗಳೆದುರು ನಿಲ್ಲಬಾರದು ಹೋಗಿ ಲಜ್ಜೆಗೆಟ್ಟು ಬಗ್ಗಿ, ಹೀಗೆಂದುಕೊಳ್ಳುತ್ತೇನೆ ಪ್ರತೀ ಸಾರಿ, ಅದೇ ಹಾದಿಗಳ ಅದೇ ತಿರುವುಗಳಲ್ಲಿ, ಅವೇ ಪ್ರೇತಗಳು ಸುತ್ತಲೂ ಕುಣಿವಾಗ ನೋವಿನಲಿ ಕುಗ್ಗಿ…”   ಹೀಗೆ ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಬವಣೆಗಳನ್ನ ಎದುರಿಸಲು ಮನಸ್ಸಿನ ತಲ್ಲಣಗಳನ್ನ ಪ್ರತಿಮೆಗಳ ಮೂಲಕ ಚಿತ್ರಿಸುವುದು ಸುಲಭವೂ ಅಲ್ಲ.  ಮತ್ತೊಂದು ಕವನದಲ್ಲಿ,  “ಬದುಕು ಕುಸಿದು ಕಣ್ಣೆದುರಿನಲ್ಲೇ ಮಣ್ಣಾಗುತ್ತಿರುವಾಗ ಮತ್ತೇನೂ ಮಾಡಲಾಗದೆ ನಾನು ಕುಣಿಯುತ್ತ, ಹೊರಳಾಡುತ್ತ, ಕೇಕೆ ಹಾಕುತ್ತಾ, ಮಕ್ಕಳಂತೆ, ಮಣ್ಣಾಡತೊಡಗಿದೆ…”    ಈ ಸಾಲುಗಳು ಪ್ರತಿಯೊಬ್ಬನ ಬದುಕಿನಲಿ ಧುತ್ತೆಂದು ಎಗರಿ ಬರುವ  ಸಂಗತಿಗಳಿಗೆ ಮನುಷ್ಯ ಹೇಗೆ ಅಸಹಾಯಕನಾಗಿರುವನು ಎಂಬುದನ್ನ ಮನೋಜ್ಞವಾಗಿ ಬಿಂಬಿಸುತ್ತವೆ. ಕೊನೆಗೆ ‘ಮಕ್ಕಳಂತೆ ಮನ್ನಾಡತೊಡಗಿದೆ’ ಎಂಬ ಮಾತುಗಳೇ ನಮ್ಮನ್ನ ಮಗುವಿನಂತಹ ಅಸಹಾಯಕತೆಯನ್ನ ಅನಿವಾರ್ಯವಾಗಿ ಮೈಗೂಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ತಂದೊಡ್ಡುತ್ತವೆ. ಮತ್ತೊಂದು ಕವಿತೆಯಲ್ಲಿ  ಬದುಕಿನ ಬಗ್ಗೆ ಇದೇ ಭಾವವನ್ನ ಮೂಡಿಸುವ ಅದ್ಭುತ ಸಾಲುಗಳಿವೆ. ಜೊತೆಗೆ ಗ್ರೀಕ್ ಪೌರಾಣಿಕತೆಯಲ್ಲಿ ಕಂಡುಬರುವ ನಾಟಕಗಳ ವಿಚಿತ್ರ ಪಾತ್ರವಾದ ಟೈರಿಶೀಯಸ್ ಎಂಬುವವನನ್ನು ಈ ಅಸಂಗತ ಪರಿಸ್ಥಿತಿಗಳಿಗೆ ತಗೆದುಕೊಂಡಿರುವುದು ಅವರ ಕವನ ಮತ್ತಷ್ಟು ಗಮ್ಯವಾಗಿ ಮೂಡಿಬರಲು ಕಾರಣವಾಗಿದೆ. ” ಹತಾಶೆಯ ಬಿಸಿಲಿನಲಿ ಒಣಗಿ ಬಿರಿದಿದೆ ನೆಲ ತೇವಗೊಳಿಸಲು ಭರವಸೆಯ ಒಂದು ಹನಿಯೂ ಇಲ್ಲ.. ಬಾ ಇಲ್ಲಿ  ಮತ್ತೊಮ್ಮೆ ಟೈರಿಶೀಯಸ್, ಜಗದ ಒಗಟುಗಳನ್ನೆಲ್ಲ ಬಿಡಿಸುವವ ನೀನು, ಆದಿ ಅಂತ್ಯಗಳನ್ನೆಲ್ಲ ಮೊದಲೇ ಕಂಡವನು….” ಮಗದೊಂದು ಕವಿತೆಯಲ್ಲಿ ಕವಿಯ ಮನಸ್ಸಿನ ತಲ್ಲಣಗಳನ್ನು ಸ್ಪಷ್ಟವಾಗೇ ಅರಿಯಹುದು – “ಪ್ರಶಾಂತ ಸರೋವರದಲ್ಲಿಯೂ ಏಳುವವು ಒಮ್ಮೊಮ್ಮ ಬಿರುಗಾಳಿ, ಸುತ್ತಿ ಸುಳಿವ ಅಲೆಗಳು ಮುಸ್ಸಂಜೆಯಲಿ ಕಾಗೆಗಳ ಗದ್ದಲದ ಹಾಗೆ– ಏನು ಕೂಗುವೆ, ಏಕೆ ಕೂಗುವೆ, ಕಾಗೆಗೂ ತಿಳಿಯದೇನೋ…! “ ಇನ್ನೂ ಕೆಲವು ಕವಿತೆಗಲ್ಲಿ ಕವಿಯು  ತನ್ನ ಸಮಾಜಕ್ಕೆ ಏನೋ ಹೇಳಲೇಬೇಕು ಎಂಬ ಇರಾದೆಯಿಂದ ಪೆನ್ನು ಹಿಡಿದು ಕೂತಿದ್ದಾನೆ ಎಂಬ ಭಾವನೆ ಕಾಣುವುದು, ” ಮಧ್ಯರಾತ್ರಿಯ ಖಾಲಿರಸ್ತೆಗಳ ಬೀದಿದೀಪಗಳ ಬೆಳಕಿನಲ್ಲಿ ಪ್ರೇತಗಳ ನೆರಳು ಸುಳಿದಾಡುವಂತೆ ಇತಿಹಾಸದ ದಟ್ಟ ನಿರ್ಜನ ಹೆದ್ದಾರಿಯಲ್ಲಿ ಮಾಯೆಯ ನೆರಳು ಮೂಡುತ್ತದೆ… ಸತ್ಯಕ್ಕೆ ದನಿಯಾದ ಗಂಟಲುಗಳು ರಸ್ತೆಯಲ್ಲೆಲ್ಲೋ ಕಳೆದು ಹೋದರೂ ಮೊಳಗುತ್ತಲೇ ಇರುವ ಕೂಗು… ಓಗೊಡಲು ಬಾಯಿ ತೆರೆದರೆ ಗಂಟಲುಬ್ಬುತ್ತದೆ… ಕಣ್ಣಿನ ದುಗುಡ ನೀರಾಗಿ ಸತ್ಯ ಅಗೋಚರವಾಗುತ್ತದೆ.. ಪ್ರೇತಗಳ ನೆರಳು ಸುಳಿದಾಡುತ್ತದೆ…” ಇನ್ನೊಂದು ಕವಿತೆಯಲ್ಲಿ ನಾಯಿಯ ರೂಪಕವನ್ನ ಸೂಚ್ಯವಾಗಿ  ಮನುಷ್ಯನಿಗೆ ಅನ್ವಯವಾಗುವಂತಹ ಸಾಲುಗಳನ್ನ ಕಾಣಬಹುದು, ” ಕೊಳಕು ಚರಂಡಿಗಳಲ್ಲಿ ಕುಂಟುತ್ತ ಓಡುವ ನಾಯಿ ಮೂಸುತ್ತಿದೆ ಕೇಸರನ್ನು ಕಸದ ತೊಟ್ಟಿಗಳಲ್ಲಿ ಹಳಸಿದ ನಿಧಿಗಳಿಗಾಗಿ ಕೆದಕಿ ನೋಡುತ್ತಿದೆ ಪಿಸುರುಗಟ್ಟಿದ ಕಣ್ಣಿನಿಂದ ….ನಾಳೆ ಸಾಯುವ ನಾಯಿಗೆ ಇಂದು ರೊಟ್ಟಿ ತಿನ್ನುವ ಆಸೆ “ ಇನ್ನೊಂದು ಕವನದ ಸಾಲುಗಳಲ್ಲಿ ಬೆತ್ತಲು ಮನಸ್ಸಿನ ಹಸಿ ಹಸಿ ಭಾವಗಳು ಮನೋಜ್ಞನವಾಗಿ ಮೂಡಿಬಂದಿವೆ ಈ ಸಲುಗಳಂತೂ ನನಗೆ ತುಸು ಹೆಚ್ಚೇ ಇಷ್ಟವಾಗಿವೆ. ಕಾರಣ ನಮ್ಮ ‘ಮನಸ್ಸು ಸತ್ತಿರುವ ಕನಸುಗಳ ರುದ್ರಭೂಮಿಯಾಗಿದೆ’ ಎಂದು ಹೇಳಬೇಕಾದರೆ ಮನುಷ್ಯನ ಬದುಕು ಇಷ್ಟು ಅಸಹನೀಯವೇ ಎಂಬ ಬೆರಗು ಮೂಡದೇ ಇರದು. “ಮನದ ಮೂಲೆಗಳಿಂದ ಹೊರಹೊಮ್ಮುವುದು ಆಗಾಗ ಉಸಿರುಗಟ್ಟುವ ದುರ್ಗಂಧ, ಅಲ್ಲಿ ಆಳಗಳಲ್ಲಿ ಕೊಳೆತು ನಾರುತ್ತಿರುವ ಕನಸುಗಳ ಕಳೇಬರಗಳಿಂದ; ಆಗ ಅರಿವಾಗುವುದು, ನಗುವ ಹೂಗಳ ನಂದನವಲ್ಲ ಮನಸು ಇಂದು ಸತ್ತ ಕನಸುಗಳ ರುದ್ರಭೂಮಿ…” ಇನ್ನೂ ಕೆಲವು ಸಾಲುಗಳು ಮನಸ್ಸಿಗೆ ಮುದ ನೀಡುವ ಹಾಗೇ ದೇಹಕ್ಕೂ ಮನಸ್ಸಿಗೂ ವಯಸ್ಸಿನ ಅರಿವನ್ನ ಮೂಡಿಸುವ ಜೊತೆಗೆ ನೆನಪುಗಳ ಹಾವಳಿಗಳನ್ನ ತೆರೆದಿಡುತ್ತ ತುಟಿಯಂಚಲಿ ನಗು ಮೂಡಿಸುತ ಹೌದು ಹೌದು.. ನಂದೂ ಅದೇ ಕತೆ ಅಂದುಕೊಂಡ ಸಾಲುಗಳು ಕಾಣುತ್ತವೆ.. ” ದಟ್ಟ ಕಪ್ಪಿನ ನಡುವೆ ಅಲ್ಲಲ್ಲಿ ಎದ್ದು ಕಾಣುವ, ಕಂಡು ನಗುವ ಹೀಗೆ ಅನೇಕ ಹೇಳಲೇಬೇಕಾದ ಸಾಲುಗಳು ಹಲವಿವೆ ಈ ಸಂಕಲನದಲ್ಲಿ. ಒಮ್ಮೆ ಕೊಂಡು ಓದಿಬಿಡಿ. ಜೊತೆಗೆ ನಮ್ಮದೇ ಭವಾನುರಾಗದಲ್ಲಿ ಮೀಯುವ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಕವಿ ಬರೆದ ಮೇಲೆ ಅದರ ಭಾವಗಳು ನಮ್ಮವೇ ಆಗಿರುವ ಕೆಲವು ಸಲುಗಳೂ ಎಲ್ಲರ ಕವಿತೆಗಳಲ್ಲಿ ಬಂದರೂ ಈ ಅಸಂಗತ ಬದುಕಿನ ತುಮುಲಗಳನ್ನ ಹಿಡಿದಿಡುವ ಸಾಲುಗಳು ಕಾಣುವುದು ಅಪರೂಪ.  ಈ ಸಂಕಲನಕ್ಕೆ ಚಂದದ ಮುನ್ನುಡಿ ಬರೆದವರು ಮೂಡ್ನಾಕೋಡು ವಿಶ್ವನಾಥ್ ಹಾಗೇ  ಬೆನ್ನುಡಿ ಬರೆದ ಶೌರಿ ಬಿ. ಪಿ. ಅವರು ಹೇಳುವ ಹಾಗೆ ಇಂದು ನಮ್ಮನ್ನು ಆವರಿಸಿರುವ ಸಾಮಾಜಿಕ ಹಾಗೂ ಬೌದ್ಧಿಕ ವಿಷಾದದ ಸ್ಥಿತಿಯನ್ನು ಈ ಕವಿತೆಗಳು ಮಾತಾಡುತ್ತವೆ ಎಂಬುದು ಉತ್ಪ್ರೇಕ್ಷೆ ಏನೂ ಅಲ್ಲ. ಹಾಗಾಗಿ ಅಲ್ಬರ್ಟ್ ಕಾಮೂ ಪುಸ್ತಕದ ಜೊತೆಗೆ ಅಮೂಲ್ಯ ಕವಿತೆಗಳ ಗುಚ್ಚವನ್ನ ಕಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರಿಗೆ ಧನ್ಯವಾದಗಳು. ಡಾ. ವಸಂತಕುಮಾರ ಎಸ್. ಕಡ್ಲಿಮಟ್ಟಿ

ತುಮುಲಗಳು Read Post »

ಪುಸ್ತಕ ಸಂಗಾತಿ

ಪುಟ್ಟನ ಕನಸು’

ಮನೆ ಬೀದಿ ದೇಗುಲದಲಿ ನಿರುತ ಸೇವೆಯು ಪ್ರತಿಪಲಾಕ್ಷೆ ಇಲ್ಲದಿರುವ ನಿಸರ್ಗ ದೈವವು’ ಪೊರಕೆಯನ್ನು ಎಲ್ಲಂದರಲ್ಲಿ ಬಳಕೆಯಾಗುವ ಮೌನವಾಗುವ ಪರಿಯನ್ನು ಸೂಚಿಸಿದ್ದಾರೆ. ಇದಲ್ಲದೆ ತಮ್ಮೂರಾದ ಜಮಖಂಡಿಯ ವರ್ಣನೆಯನ್ನು ಕವಿತೆಯಲ್ಲಿ ಮನೋಹರವಾಗಿ ಕಟ್ಟಿದ್ದಾರೆ

ಪುಟ್ಟನ ಕನಸು’ Read Post »

You cannot copy content of this page

Scroll to Top