ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)”

ಕಾವ್ಯ ಸಂಗಾತಿ ಎಮ್ಮಾರ್ಕೆ “ಕೆಂಪಿ(ಕೆಂಡ ನುಂಗಿದವಳು)“ ಬಹುತೇಕ ನಿಮಗನಿಸಬಹುದುಮತ್ತೇಕೆ ಬಂದಳೋ ಈ ಕೆಂಪಿ?,ಹೌದು…ಅವಳಾಗಾಗ ಬರುವವಳೇ,ಹಳೆ ಮೂಸೆಯಲಿ ಹೊಸತು ಹೊತ್ತುಅವಳ ಕಷ್ಟ ಅವಳಿಗಷ್ಟೇ ಗೊತ್ತು ಇನ್ನೂ ಹಸುಳೆಯವಳುಮೊಸಳೆ ಬಾಯ್ಗೆ ಬಿದ್ದವಳು,ಪರದೇಶಿ ಕೂಸವಳುಪರರ ಪಾಲೇ ಆದವಳು,ಸಾಕುವೆನೆಂದವಳ ಒಯ್ದುಯಾರಿಗೋ ಮಾರಿದರು,ಇಲ್ಲಸಲ್ಲದ ಸಬೂಬು ಹೇಳಿಮೆಲ್ಲ ಮೆಲ್ಲಗೆ ಜಾರಿದರು,ಮೈಯ ಮಾರಿಕೊಳ್ಳುವವರಮಾರಕಟ್ಟೆಗೆ ದೂಡಿದರು,ಸ್ವಾರ್ಥಕ್ಕೆ ಕೆಂಪಿಯ ಬಾಳನ್ನೇದಾ(ಗಾ)ಳಕ್ಕೆ ಹೂ(ನೀ)ಡಿದರು ಬಂದು ಹೋಗುವವರಲ್ಲಿಯಾರೂ ಬಂಧುಗಳಲ್ಲ,ಮನಬಂದಂತೆ ಭೋಗಿಸಿಕಾಸು ಎಸೆಯುವರಲ್ಲ,ಬೇಕು ಬೇಡಗಳೆನಿತನುಕೇಳುವ ಕಿವಿಗಳಲ್ಲಿಲ್ಲ,ಕಣ್ಣು,ಕರುಳು ಎರಡೂಅರಿಯುತ್ತಲಿರಲಿಲ್ಲ,ಹಗಲು ಇರುಳಿಗೂ ಅಲ್ಲಿವ್ಯತ್ಯಾಸವೇ ಇರಲಿಲ್ಲ,ಯಾಕೆಂದರೆ ‘ಕಾಮ’ಗಾರಿಒಂದು ದಿನವೂ ನಿಲ್ಲಲಿಲ್ಲ ಉದರವ ಹೊರೆಯಲುದರ ನಿಗದಿಯಾಯಿತಲ್ಲ,ಒಲ್ಲದಿದ್ದರೂ ದೇಹವದುಒಗ್ಗಿಕೊಳ್ಳದೇ ವಿಧಿಯಿಲ್ಲ,ದಣಿದು,ಕುಣಿದು,ಮಣಿದುದೇಹದಿ ಏನೂ ಉಳಿದಿಲ್ಲ,ಕೆಂಡವನೇ ನುಂಗಿದವಳೀಕೆಸೆರಗಿಗೆ ಕಟ್ಟಿಕೊಂಡವಳಲ್ಲ, ವ್ಯಥೆಯ ಕಥೆ ಹೇಳಲೆಂದೇಹುಟ್ಟಿ ಬಂದಿರುವಳು,ಆಗಾಗ ತನ್ನೊಡಲ ಕಿಚ್ಚನುಕೊಂಚ ಬಿಚ್ಚಿಡುವಳು,ಸುತ್ತಿ ಸುತ್ತಿ ನೋವಿನತ್ತಲೇಮತ್ತೆ ಹೊರಳುವವಳು,ಮತ್ತೆ ಬರುವವಳು ಕೆಂಪಿಸದ್ಯಕ್ಕೆ ತೆರಳುವಳು,ಅಲ್ಲಿಯತನಕ ಅಯ್ಯೋ!ಪಾಪ…ಎಂದು ಬಿಡಿ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)” Read Post »

ನಿಮ್ಮೊಂದಿಗೆ

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ”

ಕಾವ್ಯ ಸಂಗಾತಿ ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” ನೀ ಹೇಳಿ ಹೋಗ ಬೇಕಿತ್ತು ಕಾರಣವುನನ್ನ ಬಿಟ್ಟು ದೂರ ಹೋಗುವ ಮೊದಲು!ನನ್ನನ್ನು ಒಂಟಿಯಂತೆ ಬೇರೆ ಮಾಡಿ ನೋಡಲುಸಂಶಯವು ನಿನ್ನಲ್ಲಿ ಹುಟ್ಟಿದೆ ನನ್ನ ಮರಣವು!! ನಿನ್ನ ಕಣ್ಣೆದುರೆ ಬಿರಿಯೆ ಕರುಳ ಕುಡಿ ಸತ್ಯವುಕಣ್ಣನೀರು ಸುರಿಸಿದೆ ಏಕೆ ನೀನು ಮೌನವು!ನಿನ್ನ ಜೊತೆ ಕೂಡಿ ಬಾಳುವ ಆಸೆ ನಾ ಕಂಡೆನುನೂರಾರು ಕನಸನು ಗಾಳಿಗೆ ತೂರಿ ಹೋದನು!! ಕರುಳ ಸಂಬಂಧ ಅನುಬಂಧ ಕಡಿದು ಎಸೆದೆಪ್ರೀತಿ ಕುರುಡು ನಂಬಿಕೆ ಮೋಸವನು ವೆಸಗಿದೆ!ಸುಡುವ ಬೆಂಕಿಯಂತೆ ಮಾತಲ್ಲೇ ನನ್ನ ಕೊಂದೆಕೊಟ್ಟ ಆಣೆ ಪ್ರಮಾಣ ಮರೆತು ದೂರ ಹೋದೆ!! ನನ್ನ ನೆರಳಲ್ಲಿ ನಿನ್ನ ನೆರಳು ಜೊತೆ ಕಂಡೆನುಕತ್ತಲು ಕವಿದ ಇರುಳಲ್ಲಿ ನಿನ್ನ ನೆನಪು ಸವಿದೇನು!ಬೆಳಕು ಚೆಲ್ಲುವ ಸಮಯದಲ್ಲಿ ಕೊರಳು ಕಡಿದನುಸೆರೆ ಸಿಕ್ಕ ಮೀನಿನಂತೆ ನನ್ನ ದೂರ ತಳ್ಳಿದನು!! ನನ್ನ ಜೀವನವೇಕೆ ಅಲೆಮಾರಿ ಬದುಕಾಯಿತುಕನಸಿನ ಗೋಪುರವು ನುಚ್ಚು ನುರಾಯಿತುಎಲ್ಲಿಗೆ ಸಾಗಿದೆ ಕರುಣೆ ಇಲ್ಲದ ಈ ಜಗವುನನ್ನ ನೆರಳ ದಾರಿ ದೀಪ ಮುಳುಗುತ್ತಿರುವುದು!! ಕೆ. ಎಂ. ಕಾವ್ಯ ಪ್ರಸಾದ್

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” Read Post »

ನಿಮ್ಮೊಂದಿಗೆ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ

ಗಾದೆ ಸಂಗಾತಿ ವನಜಾ ಮಹಾಲಿoಗಯ್ಯ “ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!” “ಪುಕ್ಕಟೆ ಸಿಕ್ಕರೆ ಮೈಯೆಲ್ಲಾ ಬಾಯಿ” ಎಂಬಗಾದೆಯನ್ನು ಕೇಳಿದ್ದೀರಿ. ಕಷ್ಟಪಡದೆ ಏನು ಸಿಕ್ಕರೂ ನಮಗೆ ಬೇಕು. ಕೆಲಸಕ್ಕೆ ಹೋಗದೆ ಸಂಬಳ ಬರುತ್ತದೆ ಅಂತಾದರೆ ನಮ್ಮಷ್ಟು ಸುಖಿಗಳು ಈ ಜಗತ್ತಿನಲ್ಲಿ ಯಾರು ಇಲ್ಲ ಅಂದುಕೊಳ್ಳುತ್ತೇವೆ. ಆದರೆ, ಕೂತು ಉಣ್ಣುವವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವರಿಗೆ ನಿಜಕ್ಕೂ ಅದರ ಸುಖವೇ ಅರಿವಿಗೆ ಬರುತ್ತಿರುವುದಿಲ್ಲ.ಏಕೆಂದರೆ ಆ ಊಟ ಗಳಿಸಲು ಅವರು ಕಷ್ಟಪಟ್ಟಿಲ್ಲ.ಸುಖವನ್ನು ಮನಸಾರೆ ಅನುಭವಿಸಬೇಕು ಅಂದರೆ ನಮಗೆ ಕಷ್ಟದ ಅನುಭವವೂ ಇರಬೇಕು. ಇಲ್ಲವಾದರಸುಖ ಅರ್ಥವಾಗುವುದಿಲ್ಲ. ಆಗಭ೯ ಶ್ರೀಮಂತನಿಗೆಮೃಷ್ಟಾನ್ನ ಭೋಜನ ಮಾಡಿಸುವುದರಿಂದ ಯಾವ ವಿಶೇಷ ಆಸಕ್ತಿಯೂ ಇಲ್ಲದೆ ಅದನ್ನು ಊಟ ಮಾಡುತ್ತಾನೆ. ಬಡವನಿಗೆ ಬಡಿಸಿದರೆ ಹತ್ತು ದಿನವಾದರೂ ನೆನಪಿಟ್ಟುಕೊಂಡು ಸುಖಿಸು ತ್ತಾನೆ.ಅದೃಷ್ಟ ದಿಂದ ಬರುವುದಕ್ಕೆ ಮಹತ್ವವಿಲ್ಲ.ಲಾಟರಿಯಿಂದ ಬಂದ ದುಡ್ಡು ಬಹಳ ದಿನ ಉಳಿಯುವುದಿಲ್ಲ. ಆದರೆ ಕಷ್ಟಪಟ್ಟು ಗಳಿಸುವುದಕ್ಕೆ ನಿಜಕ್ಕೂ ತುಂಬಾ ಮಹತ್ವವಿದೆ. ಜೀವನವಿಡೀ ಹಣ ಉಳಿಸಿ ಮನೆ ಕಟ್ಟಿದವನು ಅದನ್ನು ಅರಮನೆಯoತೆಅನುಭವಿಸುತ್ತಾನೆ ಮತ್ತು ಕಾಪಾಡಿಕೊಳ್ಳುತ್ತಾನೆ. ಯಾವ ಪ್ರಯತ್ನವನ್ನು ಮಾಡದೆ ಹಣ ಸಿಕ್ಕರೆ ಅದನ್ನು ಅನುಭವಿಸುವುದರಲ್ಲಿ ಏನು ಸುಖವಿದೆ ?ಎಮ್ಮೆ ಮುದಿಯಾಗಿದೆ. ಜೀರ್ಣ ಶಕ್ತಿ ಕುಂದಿದೆ, ಕಾಲಿನಲ್ಲಿ ಕಸುವಿಲ್ಲ, ಮೇವು ಹುಡುಕಲು ಚೈತನ್ಯವಿಲ್ಲ. ಕೊನೆದಿನಗಳನ್ನು ಎಣಿಸುತ್ತಾ ಕೊಟ್ಟಿಗೆಯಲ್ಲಿ ಬಿದ್ದುಕೊಂದಿದೆ. ಆಗ ಯಾರಾದರೂ ಎರಡು ಹಿಡಿ ಹುಲ್ಲು ಹಾಕಿದರೆ ಅದನ್ನು ಜೀರ್ಣಿ ಸಿಕೊಳ್ಳಲು ಶಕ್ತಿ ಇಲ್ಲದಿದ್ದರೂ ತಿನ್ನುತ್ತದೆ. ಏಕೆಂದರೆ ಅದು ಪ್ರಯತ್ನ ಪಡದೆ ಸಿಕ್ಕಿದ್ದು. ಬೇಕೋ ಬೇಡವೋ ಅದನ್ನು ತಿನ್ನಬೇಕು ಎಂದು ಅದರ ಮನಸ್ಸು ಹೇಳುತ್ತದೆ. ಆದರೆ ತಿಂದ ಮೇಲೆ ಜೀರ್ಣಸಿಕೊಳ್ಳಲಾಗದೆ ಒದ್ದಾಡುತ್ತದೆ.ಕೆಲವು ರಾಜಕಾರಣಿಗಳು, ಕೆಲವು ಅಧಿಕಾರಿಗಳು, ಕಳ್ಳರು ಹೀಗೆ, ತಿಂದಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಎಷ್ಟೋ ನಿದರ್ಶನ ಗಳು ನಮ್ಮ ಕಣ್ಣಮುಂದಿವೆ. ಪುಕ್ಕಟೆ ಸಿಕ್ಕುತ್ತೆ ಅಂತ ಹೊಟ್ಟೆಬಿರಿಯೆ ತಿಂದವರು ಅವರುಗಳು. ಕಷ್ಟಪಟ್ಟು ಗಳಿಸಿದ್ದವರಿಗೆ ಜೀರ್ಣಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಗಳಿಸಿದ್ದನ್ನು ಮನಸಾರೆ ಉಣ್ಣುವ ಸುಖವೂ ಸಿಗುತ್ತಿತ್ತು.ಕೊನೆಯಲ್ಲಿ ನಾನು ಹೇಳುವುದೊಂದೆ ಅದೃಷ್ಟ ಅನ್ನುವುದು ಒಂದು ಭ್ರಮೆ. ಭ್ರಮೆ ಎನ್ನುವುದೊಂದುಮಾಯೆ. ಅದರ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುವ ಮುನ್ನ ಹುಷಾರು.ವನಜಾ ಮಹಾಲಿoಗಯ್ಯ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ Read Post »

ನಿಮ್ಮೊಂದಿಗೆ

“ಭಾವ ಲಹರಿ” ಸರಸ್ವತಿ ಕೆ.ನಾಗರಾಜ್‌ ಅವರ ಕವಿತೆ

ಕಾವ್ಯ ಸಂಗಾತಿ ಸರಸ್ವತಿ ಕೆ.ನಾಗರಾಜ್‌ “ಭಾವ ಲಹರಿ” ​ಗೀಚಿದ್ದೆಲ್ಲವೂ ಕವಿತೆಯಲ್ಲ,ಕೆಲವೊಮ್ಮೆ ಅದು ಆತ್ಮದ ಬಿಕ್ಕಳಿಕೆ;ಮಾತಿಗೆ ಮಣಿಯದ ಮೌನದ ಭಾರ,ಅಕ್ಷರಕ್ಕಿಳಿದಾಗ ಸಿಗುವ ಸಮಾಧಾನದ ತಣಿಕೆ. ​ಹೃದಯದ ಗೂಡಲಿ ಬಂಧಿಯಾದ ಭಾವ,ಶಬ್ದಗಳ ನೆಪದಲ್ಲಿ ರೆಕ್ಕೆ ಬಿಚ್ಚುತ್ತವೆ;ಹೇಳಲಾಗದ ಸಾವಿರ ನೋವು,ನಲಿವು,ಸಾಲಿನ ಮಧ್ಯದ ಖಾಲಿ ಜಾಗದಲ್ಲಿ ಅಡಗುತ್ತವೆ. ​ಕವಿತೆಯೆಂದರೆ ಬರಿ ಪದಗಳ ಜೋಡಣೆಯಲ್ಲ,ಅದು ಅಂತರಾತ್ಮದ ಅವ್ಯಕ್ತ ರೋದನೆ;ಹೇಳಲಾಗದ  ಭಾವನೆಗಳು ಲೇಖನಿಯ ತುದಿಗಿಳಿದಾಗ,ಅದಕ್ಕೇ ಹೆಸರಿಡುವುದು ಈ ಜಗತ್ತು ‘ಕವನ’ವೆಂದು. ​ಅರ್ಥವಾಗದ ಮೌನವೆ ಇಲ್ಲಿ ಹೆಚ್ಚು, ಆ ಮೌನಕ್ಕೆ ಭಾಷೆಯ ಹಂಗಿಲ್ಲ;ಮೌನವಾಗಿ ಬರೆಯುವವನ ಎದೆಯ ಭಾರ ಇಳಿದಾಗ ಮಾತ್ರ,ಅಲ್ಲಿ ಕವಿತೆಯಾಗುತ್ತದೆ, ಸರಸ್ವತಿ ಕೆ ನಾಗರಾಜ್.

“ಭಾವ ಲಹರಿ” ಸರಸ್ವತಿ ಕೆ.ನಾಗರಾಜ್‌ ಅವರ ಕವಿತೆ Read Post »

ನಿಮ್ಮೊಂದಿಗೆ

ಭಾರತಿ ಅಶೋಕ್‌ ಕವಿತೆ “ಪಕ್ಷ ಬದಲಿಸಿದ್ದಾನೆ ಕರ್ತ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಪಕ್ಷ ಬದಲಿಸಿದ್ದಾನೆ ಕರ್ತ” “ತಮ್ಮ ಪಾಪದ ಅರಿವಿಲ್ಲಕ್ಷಮಿಸಿಬಿಡು ಪ್ರಭುವೆ”ಎನ್ನುವುದಿಲ್ಲ  ನಾನುನಿನ್ನ ಪ್ರಭು ಪಕ್ಷ ಬದಲಿಸಿದ್ದಾನೆ ಏಸು ಪ್ರಭುವೇ ನಿನ್ನ ಮಾತನ್ನು ಅವನುತಪ್ಪಾಗಿ ಅರ್ಥೈಸಿಕೊಂಡಂತಿದೆಇಲ್ಲಾ-ಪಾಪಿ ಪಕ್ಷದಆಮಿಷಕ್ಕೊಳಗಾಗಿದ್ದಾನೆ. ಹೆಣ್ಣನ್ನು ವಿವಸ್ತ್ರಗೊಳಿಸುವಾಗಕೈ ಕಬಂಧವಾದಾಗಲೇ  ಅವನಲ್ಲಿದ್ದಎನ್ನುವ  ಗುಮಾನಿ.ಇಸ್ರೆಲ್ ಪ್ಯಾಲೆಸ್ತೇನ್ ನಡುವೆಪ್ರೇಮ ಸೇತು ಕಟ್ಟಬೇಕಿದ್ದವನುರಕ್ತದಾಹಿಯಾಗುತ್ತಿದ್ದನೆ? ನೀನಂದುಕೊಂಡಂತೆನಿನ್ನ ಪ್ರಭು ನನ್ನ ಹೆಣ್ತನ ಕಾಯನು!ನನ್ನಾತ್ಮ ರಕ್ಷಣೆ ನನ್ನ ಹೊಣೆಅದಕೆ  ಬೂಟನ್ನೆ ಎತ್ತಿಟ್ಟಿದ್ದೇನೆ ನೀನದನ್ನುಅವನು ಕೊಟ್ಟ ಶಕ್ತಿ ಎಂದುಕೊಂಡರೆನಾನದಕೆ ಹೊಣೆಯಲ್ಲ ಭಾರತಿ ಅಶೋಕ್

ಭಾರತಿ ಅಶೋಕ್‌ ಕವಿತೆ “ಪಕ್ಷ ಬದಲಿಸಿದ್ದಾನೆ ಕರ್ತ” Read Post »

ನಿಮ್ಮೊಂದಿಗೆ

ಲತಾ ಎ ಆರ್ ಬಾಳೆಹೊನ್ನೂರು ಕವಿತೆ “ಕಡಲ ತೆರೆಯ ಮೊರೆತ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕಡಲ ತೆರೆಯ ಮೊರೆತ” ಸೆಳೆದಿರುವೆ ನನ್ನನ್ನು ಸೂಜಿಗಲ್ಲಿನಂತೆಯವ್ವನದ ಹುಚ್ಚು ಹೊಳೆಯಂತೆತಾಯಿ ತಂದೆಯ ತೊರೆವಂತೆಬಾಳು ಸಾಗಿಸುವ ಹುಮ್ಮನಸ್ಸಿನಂತೆ ಬೇರೆಲ್ಲ ಬೇಡದ ಛಲದಂತೆವಿಧಿಯಾಟದ ಸುಳಿಗೆ ಸಿಲುಕಿದಂತೆಆಡಿಸಿದಾತನ ಕೈ ಚಳಕದ ಪಾತ್ರವಂತೆನಾ ನಿನ್ನಾ ಸೇರಿರುವೆ ಸಂಗಾತಿಯಂತೆ ಕನಸು ನೂರು ನನಸಾಗುವಂತೆಸಾಧಿಸಿ ನಡೆವ ನಾವೆಣಿಸಿದಂತೆಬಾಳ ದಾರಿಯಲಿ ನೋವ ಮರೆತಂತೆಕಂಡಿದೆ ತೃಪ್ತಿ ಮನವಂತೆ ಅಂದುಕೊಂಡಂತಲ್ಲ ಜೀವನವಂತೆಬಗೆದಷ್ಟು ಮುಗಿಯದ ಕರ್ಮಫಲವಂತೆಏರಿಳಿತದ ಹಾದಿಯಲ್ಲಿ ಎಲ್ಲವಂತೆಪಯಣಿಸಬೇಕು ನಾವೆಲ್ಲ ಬೆರೆತಂತೆ ಕೂಗಿ ಕೂಗಿ ಕರೆಯುವಂತೆಕಡಲ ತೆರೆಯ ಮೊರೆವಂತೆಬಂದು ಸೇರಿಬಿಡು ಏನುವಂತೆವಿದಾಯಕ್ಕೆ ಕೇಳಿರುವೆ ಸಮಯವಂತೆ ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಕವಿತೆ “ಕಡಲ ತೆರೆಯ ಮೊರೆತ” Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಅಮೃತ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಅಮೃತ” ಏನೆಂದು ಕರೆಯಲಿ ಈ ಭಾವಗಳನ್ನ ಜೀವ ನದಿಗಳನ್ನ.ಬಾಡಿಹೋಗುವ ಮುನ್ನಿನಹೊನ್ನುಗಳನ್ನಪನ್ನೀರ ಸಿಂಚನಗಳನ್ನಆಹ್ಲಾದಗಳನ್ನ. ಆ ಸ್ವಾದಗಳ ಘಮ ನಾಲಿಗೆಯಿಂದ ನಾಲಿಗೆಗೆಕೈ ಬಾಯಿ ತುಟಿ ಕಟಿಗಳ ಸಂಗೀತ ಸಂಭ್ರಮಗಳಿಗೆ ಹೌದೆಂದರೆ ಹೌದುಇಲ್ಲವೇ ಇಲ್ಲವೆಂದರೆನಾ ಯಾರುಇರುವ ತನಕ ಬದುಕಿದ್ದುಕನಸಲ್ಲೆ ಬದುಕು ಸಾಗಿಸಿದ್ದುಯಾರು. ಬಯಸಿದ್ದು ಸಾಕುಇರುವ ತನಕ ಇಲ್ಲಿಲ್ಲದಿರುವ ಬೇಕುಗಳೂ ಸಾಕು ಸಮುದ್ರ ಮಂಥನದ ಅಮೃತಮತ್ತೆ ಸಮುದ್ರಕ್ಕೇ!ಪುನಃ ಪುನಃ ದಡಕ್ಕಪ್ಪಳಿಸುವತೀರದ ಬಯಕೆಗಳಿಗೇ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಅಮೃತ” Read Post »

ನಿಮ್ಮೊಂದಿಗೆ

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್

ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ವಿಶಾಲವಾದ ಬಟಾಬಯಲು ನಡುವಲ್ಲೊಂದು ಮನೆಆ ಮನೆಯ ಮೂಲೆಯಲ್ಲೊಂದು ಕೋಣೆತಿರುಗುತ್ತಿದೆ ಕೋಣೆಯಲ್ಲಿ ತಣ್ಣನೆಯ ಫ್ಯಾನುಅವನ ಉದ್ವೇಗಕ್ಕಾಗಿಯೋ ಅವಳ ಆವೇಗಾಕ್ಕಾಗಿಯೋ ಪ್ರೇಮ ಕಾಮಗಳ ಪರಾಕಾಷ್ಠೆಗೆನೆರೆಹೊರೆಗೆ ಸದ್ದು ಕೇಳಿಸದಿರಲೆಂದುಮೈ ಜುಮ್ಮೆನ್ನುವ ಗಡುವಿಗೆಕಿವಿಗಡಚುವಂತೆ ಏರಿಸಿದಗಮನಿಸದ ಹಾಡು ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರಕಳಚಿಟ್ಟ ಬಟ್ಟೆಯೂ ನೆನಪಿಸುತ್ತಿಲ್ಲಬಂಧಿಸಿದ ಭಾವನೆಗಳ ತಳಮಳದಲ್ಲಿಅವರಿಬ್ಬರೂ ತನ್ಮಯರುಲೋಕದ ರೂಢಿಯಲ್ಲಿ ಅವ್ಯಕ್ತಮೂಕ ವಿಸ್ಮಿತರು ಬೆವರ ಹನಿ ಘಮಗುಡಲೆಂದುಮೈ ತುಂಬಾ ತಣ್ಣಗೆ ಚುಮುಕಿಸಿದಸುಗಂಧ ದ್ರವ್ಯಬೆಚ್ಚನೆಯ ಬೆವರ ಹನಿಗೆ ಬಣ್ಣ ಕಳೆದುಕೊಂಡಿತೆನ್ನುವ ಭಯ ಕಳೆದುಕೊಂಡದ್ದೋ, ದಕ್ಕಿಸಿಕೊಂಡದ್ದೋಎಲ್ಲವನ್ನೂ ಒಮ್ಮೆಲೆ ಸುಖಿಸಿಕೊಂಡಸ್ಖಲನದ ರಾತ್ರಿಯೋಅರಿವಿಲ್ಲದ ಖಾತ್ರಿಯೋ ತಿಳಿಯದು ರವಿಗೆ ಇಬ್ಬನಿ ಕರಗುವಂತೆಮಳೆಗೆ ಮಣ್ಣ ತಣುವಾದಂತೆಸ್ಪರ್ಶದೊಳಗಿನ ಹಣ್ಣುರುಚಿ ನೀಡಿದ ಹೊತ್ತಿಗೆಈಗೆಲ್ಲವೂ ಆ ಕೋಣೆಯಮೂಲೆಯಲ್ಲಿಅದೇ ಕಡುಗಪ್ಪಿನ ಮೂಲೆಯಲ್ಲಿಬೆಳದಿಂಗಳ ಬಯಕೆಗೆ ಲೀನವಾಗಿದೆ ಬಟಾಬಯಲಿನ ನಡುಮನೆಯಲ್ಲೊಂದುಫ್ಯಾನೂ ಇನ್ನೂ ತಣ್ಣಗೆ ತಿರುಗುತ್ತಿದೆಇನ್ನೂ ತಣ್ಣಗೆ ತಿರುಗುತ್ತಿದೆ ನಾಗೊಂಡಹಳ್ಳಿ ಸುನಿಲ್         

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್ Read Post »

ನಿಮ್ಮೊಂದಿಗೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ”

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು “ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎ ಸ್ ಆರ್ ಕಂಠಿ” ಕರ್ನಾಟಕವು ಕಂಡ ಶ್ರೇಷ್ಠ ಆಡಳಿತಗಾರರು ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಂದು ಎನಿಸಿಕೊಂಡ  ಎಸ್ ಆರ್ ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ )ಯವರು ಬಾಗಲಕೋಟ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ನಗರದವರು. 1962ರಲ್ಲಿ ಅಲ್ಪ ಕಾಲ ಕರ್ನಾಟಕ (ಆಗಿನ ಮೈಸೂರು) ರಾಜ್ಯದ ಮುಖ್ಯಮಂತ್ರಿಯಾಗಿದ್ದರು. *ವೈಯಕ್ತಿಕ ಮಾಹಿತಿ* ಜನನ 21 ಡಿಸೆಂಬರ್ 1908 ಕೆರೂರ, ಬದಾಮಿ, ಬಾಗಲಕೋಟೆ ಜಿಲ್ಲೆ ರಾಜಕೀಯ ಪಕ್ಷ ಕಾಂಗ್ರೆಸ್ ಜನನ ಹಾಗೂ ವಿದ್ಯಾಭ್ಯಾಸ ಬಾಗಲಕೋಟೆ(ಹಳೆಯ ಬಿಜಾಪುರ) ಜಿಲ್ಲೆಯ ಬದಾಮಿ ತಾಲ್ಲೂಕಿನ ಕೆರೂರನಲ್ಲಿ 1908 ಡಿಸೆಂಬರ್ 21ರಂದು ಜನಿಸಿದರು. *ಶಿಕ್ಷಣ* ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಇವರು ಬಾಗಲಕೋಟೆಯಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. *ಸಮಾಜ ಸೇವೆ* ಹರಿಜನರ, ರೈತರ ಮತ್ತು ನೇಕಾರರ ಏಳ್ಗೆಗಾಗಿ ಶ್ರಮಿಸಿದರು. 1939ರಲ್ಲಿ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿಗಳಿಗೆ ಸದಸ್ಯರಾಗಿ ಆಯ್ಕೆಯಾದರು. 1940-41ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಸತ್ಯಾಗ್ರಹ ವ್ಯವಸ್ಥೆ ಮಾಡಿ 10 ತಿಂಗಳ ಸೆರೆಮನೆವಾಸ ಅನುಭವಿಸಿದರು. 1942ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮತ್ತೊಮ್ಮೆ ಸೆರೆಯಾಗಿ ಅದೇ ವರ್ಷ ಬಿಡುಗಡೆ ಹೊಂದಿದರು. ಅನಂತರ ಮುಂಬಯಿ ಸ್ಥಳೀಯ ಆಹಾರ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿದ್ದುಕೊಂಡು ಕ್ಷಾಮ ಪರಿಹಾರ ಸಮಿತಿಯ ಪರವಾಗಿ ಕ್ಷಾಮಪೀಡಿತ ಪ್ರದೇಶಗಳಿಗೆ ಊಟ, ಬಟ್ಟೆ ಇತ್ಯಾದಿ ಸರಬರಾಜು ಮಾಡುವ ಸಾರ್ವಜನಿಕ ಸೇವೆಯಲ್ಲಿ ಪ್ರವೃತ್ತರಾದರು. *ಹೋರಾಟ* 1946ರಲ್ಲಿ ಬಿಜಾಪುರ ಜಿಲ್ಲೆಯ ರೈತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ಅಂದಿನ ಮುಂಬಯಿ ಮಂತ್ರಿ ಮಂಡಲದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು 6 ವರ್ಷಗಳ ಕಾಲ ಸೇವೆಸಲ್ಲಿಸಿದರು (1946-52). ಆಗ ಸುಮಾರು ಎರಡು ವರ್ಷಗಳ ಕಾಲ ಹಣಕಾಸಿನ ಶಾಖೆಯನ್ನು ಹಾಗೂ ಮೂರು ವರ್ಷಗಳ ಕಾಲ ವ್ಯವಸಾಯ, ಅರಣ್ಯ ಮತ್ತು ಸಹಕಾರ ಇಲಾಖೆಗಳ ಅಧಿಕಾರವನ್ನು ವಹಿಸಿಕೊಂಡಿದ್ದರು. 1952-56ರ ವರೆಗೆ ಮುಂಬಯಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ರಾಜ್ಯದ ನಿರ್ಮಾಣದ ಬಗ್ಗೆ ವಿಷಯ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ರಚಿಸಿದ ಸಮಿತಿಗೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತ್ತು. ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ 1956ರಲ್ಲಿ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾದ ಕಂಠಿಯವರು ಸುಮಾರು 6 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. 1961ರಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂಸದೀಯ ನಿಯೋಗಕ್ಕೆ ಇವರು ಮುಖ್ಯಸ್ಥರಾಗಿದ್ದರು. ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು 1962 ಮಾರ್ಚ್ 9ರಿಂದ 1962 ಜುಲೈ 20ರವರೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನಂತರ 1962 ಜುಲೈ 21ರಂದು ವಿದ್ಯಾಮಂತ್ರಿಯಾಗಿ ನೇಮಕಗೊಂಡರು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಇವರು ವಿದ್ಯಾಮಂತ್ರಿಯಾಗಿದ್ದಾಗ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾಗಿ 1967 ಮಾರ್ಚ್ 14ರಿಂದ 1968 ಏಪ್ರಿಲ್ 29ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು. ಇವರು ಕೆಲಕಾಲ ಕರ್ನಾಟಕ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರೂ ಮೈಸೂರು ಪ್ರದೇಶದ ಭಾರತ ಸೇವಕ ಸಮಾಜದ ಅಧ್ಯಕ್ಷರೂ ಆಗಿದ್ದರು. 1959ರಲ್ಲಿ ಲಂಡನಿನಲ್ಲಿ ನಡೆದ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಇವರನ್ನು ತನ್ನ ಪ್ರತಿನಿಧಿಯನ್ನಾಗಿ ಕಳಿಸಿತ್ತು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಇವರು ನೋಟ್ಸ್‌ ಆನ್ ದಿ ಪಾರ್ಲಿಮೆಂಟರಿ ಕೋರ್ಸ್ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ. *ಮುಖ್ಯಮಂತ್ರಿ* 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು. ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್  ಪಕ್ಷದ  ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಟ್ಟರು.  ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನ್ನು ‘ಆಧುನಿಕ ಕರ್ನಾಟಕದ ನಿರ್ಮಾತೃ’ ಎಂದೂ ಕರೆಯಲಾಗುತ್ತಿತ್ತು.  ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು. *ನಿರ್ವಹಿಸಿದ ಹುದ್ದೆಗಳು* ಕರ್ನಾಟಕ ಸಾಹಿತ್ಯ ಅಕಾಡೆಮೆಯ ಅಧ್ಯಕ್ಷರು (1961-1966) ಕರ್ನಾಟಕ ವಿಧಾನಸಭಾ ಸದಸ್ಯರು (1957 – 1962) ಕರ್ನಾಟಕ ವಿಧಾನಸಭಾ ಸಭಾಪತಿ (19 ಡಿಸೆಂಬರ್ 1956- 9 ಮಾರ್ಚ್ 1962) ಕರ್ನಾಟಕದ ಮುಖ್ಯಮಂತ್ರಿ (1962 ಮಾರ್ಚ್ 9ರಿಂದ 1962 ಜುಲೈ 20) ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ *ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಸ್ಥಾಪಕರು* ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಕಂಠಿ ಅವರ ದೂರದೃಷ್ಟಿಯಿಂದ 1969 ರಲ್ಲಿ ಆರಂಭವಾದ ಈ ಶಾಲೆಯು ಬಾಲಕಿಯರಿಗಾಗಿ ಸೈನಿಕ ಶಿಕ್ಷಣ ನೀಡುವ ಏಕೈಕ ಶಾಲೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರ ಇರುವ ಈ ಶಾಲೆಯಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದ್ದು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. *ನಿಧನ* ಕರ್ನಾಟಕದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಕಂಠಿಯವರು ರಾಜ್ಯ ವಿಧಾನಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ಕಿತ್ತೂರಿನಲಿ ಹೃದಯಾಘಾತಕ್ಕೆ ಒಳಗಾಗಿ  ನಿಧನ ಹೊಂದಿದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಪ್ರೇಮ ಮತ್ತು ವಿಶ್ವಾಸದ ಘನ ವ್ಯಕ್ತಿತ್ವ ಹೊಂದಿದ ಶ್ರೀ ಎಸ್ ಆರ್ ಕಂಠಿ ಅವರುರಾಷ್ಟ್ರ ನಾಡು ಕಂಡ ಅಪರೂಪದ ಪ್ರಬುದ್ಧ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ. ಆರು ದಶಕ ಬದುಕಿ ಆರು ಶತಕದ ನೆರಳನ್ನು ಕೊಟ್ಟ ಶ್ರೇಷ್ಠ ಹೆಮ್ಮರವಾಗಿದೆ. ಇವತ್ತು ಶ್ರೀ ಎಸ್ ಆರ್ ಕಂಠಿ ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ. ಆದರೆ ಅವರು ಮಾಡಿದ ಅತ್ಯಂತ ಜನಪರ ಕೆಲಸಗಳು ಇಂದಿಗೂ ಅವರನ್ನು ನೆನಪಿಡುವಂತೆ ಮಾಡುತ್ತಿವೆ. ವಿದ್ಯಾರ್ಥಿ ನಿಲಯಕ್ಕೆಂದು ತಮ್ಮ ಮನೆಯನ್ನೇ ಮಾರಾಟ ಮಾಡಿದ ಕರ್ಣ ಅಪಾರ ಬಂಧು ಬಳಗವನ್ನು ಬಿಟ್ಟು ಹೋದ ಭರತ. ಎಸ್ ನಿಜಲಿಂಗಪ್ಪನವರ ಪಡಿ ನೆರಳು ಪ್ರಾಮಾಣಿಕತೆಯ ನಿಜ ರೂಪ ಆಗಿದ್ದರು. ಇವರಿಗೆ ಶತ ಕೋಟಿ ನಮನಗಳು __________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ” Read Post »

ನಿಮ್ಮೊಂದಿಗೆ

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ವಿಶೇಷ ಸಂಗಾತಿ “ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ “ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. ಉಕ್ಕಿನ ಮನುಷ್ಯ  2006 ರಲ್ಲಿ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು.ಡಾ.ಎಂ.ಎಂ.ಕಲಬುರ್ಗಿ,ಡಾ.ಸಿದ್ಧಲಿಂಗಪಟ್ಟಣಶೆಟ್ಟಿ,ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ,ಡಾ.ವಿ.ವಿ.ಹೆಬ್ಬಳ್ಳಿ,ಶ್ರೀ.ನಿರಂಜನ ವಾಲಿಶೆಟ್ಟರವರು ಈ ಕ್ರೃತಿಯ ಸಂಪಾದಕರು. “ಗಾಂಧೀಜಿದರ್ಶನದ ರೋಮಾಂಚನವೆ ನಾಂದಿಹಳ್ಳಿ-ಕೇರಿಯ ಮೀರಿ ಹ್ರೃದಯದಲಿ ಪುಟಿದೆದ್ದದೇಶಭಕ್ತಿಯ ಚಿಲುಮೆ!ಹೋರಾಟಕ್ಕೆ ಗುದ್ದ-ಲಿ ಪೂಜೆ,ಸೆರೆಮನೆಯ ವಾಸ,ಖಾದಿಯೆ ಹಾದಿದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ”…… – ಡಾ.ಚನ್ನವೀರ ಕಣವಿ. ಅವರ ಈ ಕವಿವಾಣಿಯಂತೆ  ಅಪೂರ್ವ ಸೇವೆಯಲಿ ಜೀವ ತೇಯ್ದ ಪ್ರಾತಃಸ್ಮರಣೀಯರು, ಪರುಷ ಮಣಿ ಹರುಷದ ಖಣಿ, ರಾಜಕೀಯ ಕ್ಷೇತ್ರದ ರ್ಯಾಂಗ್ಲರ್, ವೀರ ಸ್ವಾತಂತ್ರ್ಯಸೇನಾನಿ, ರಾಷ್ಟ್ರೀಯತೆಯ ಹರಿಕಾರ, ದಿಟ್ಟ ಹೃದಯದ ಗಟ್ಟಿ ಜೀವ, ಚುಂಬಕ ಶಕ್ತಿಯ ವ್ಯಕ್ತಿ, ಅದ್ವಿತೀಯ ಕಾಯಕ ಜೀವಿ, ಗಾಂಧೀಜಿಯವರ ತತ್ವಗಳಂತೆ ಜೀವಿಸಿದ ಅಸಾಮಾನ್ಯ ವ್ಯಕ್ತಿತ್ವವುಳ್ಳವರು, ಕಿಂಗ್ ಮೇಕರ್, ಹಳ್ಳಿ ಹಳ್ಳಿಗೂ ಸ್ವಾತಂತ್ರ್ಯ ಸಮರದ ಕಿಚ್ಚು ಹಚ್ಚಿದವರು,ಕರ್ನಾಟಕದ ಹುಲಿ ಭಾರತದ ಕಲಿ, ಅದಮ್ಯ ಶಕ್ತಿಯ ಚೈತನ್ಯ ಮೂರ್ತಿ, ದೇಶ ಬಂಧು, ಗುಣಗ್ರಾಹಿ ಮುಂದಾಳು, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಜನರಿಂದ ಜನರಿಗಾಗಿ ಜನರ ನಡುವೆ ಬೆಳೆದ ಸುಭಟರು, ಕರ್ನಾಟಕದ ಕೇಸರಿ, ಆದರ್ಶ  ಧೀಮಂತ ಜನನಾಯಕರು, ರಾಷ್ಟ್ರ ಪ್ರೇಮಿ, ಗಾಂಧೀ ತತ್ವ ಅನುಷ್ಠಾನದ ನೆಲೆ ವಿದ್ಯಾರ್ಥಿ ಸ್ಪೂರ್ತಿಯ ಸೆಲೆ,ಸತ್ಯನಿಷ್ಠ ದೇಶಪ್ರೇಮಿ ಹಾಗೂ ಗಾಂಧಿವಾದಿ, ಸಂಘಟನಾ ಚತುರರು, ಕರ್ನಾಟಕದ ಕರ್ಮಯೋಗಿವರ್ಯರು, ಮಾನವೀಯ ಅನುಕಂಪ ಭರಿತ ಜನನಾಯಕರೆಂದೇ ಪ್ರಖ್ಯಾತರಾದ ‘ಉತ್ತರ ಕರ್ನಾಟಕದ ಉಕ್ಕಿನ ಮನುಷ್ಯರೆಂದೆ’ ಚಿರಪರಿಚಿತರಾದವರು ಸನ್ಮಾನ್ಯ ಶ್ರೀ.ಗುದ್ಲೆಪ್ಪ ಹಳ್ಳಿಕೇರಿಯವರು.             ಶ್ರೀ.ವೀರಪ್ಪ-ವೀರಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ಕೊನೆಯ ಸುಪುತ್ರರಾಗಿ ದಿ.6-6-1906 ರಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿರುವ ಗುದ್ಲೆಪ್ಪನವರು ಧಾರವಾಡದ ಶ್ರೀಗುರು ಮೃತ್ಯುಂಜಯಪ್ಪಗಳವರ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಮೊದಲು ಧಾರವಾಡದ ಕರ್ನಾಟಕ ಹೈಸ್ಕೂಲು, ಆನಂತರ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀಯುತರು ಗಣಿತ ವಿಷಯದಲ್ಲಿ ಅದ್ಭುತ ಸ್ಮರಣ ಮತ್ತು ಮೇಧಾ ಶಕ್ತಿಯಿಂದಾಗಿ ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಉಕ್ತಿಯಂತೆ ಪ್ರತಿಭಾವಂತ ವಿದ್ಯಾರ್ಥಿಯೆಂದು ಪ್ರಖ್ಯಾತರಾಗಿದ್ದರು. 1924 ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು.ಗಾಂಧೀಜಿಯವರನ್ನು ಕಂಡು ಅವರ ವ್ಯಕ್ತಿತ್ವಕ್ಕೆ ಪ್ರಭಾವಿತರಾದರು. ಗಣಿತಶಾಸ್ತ್ರದಲ್ಲಿ ಇಂಗ್ಲೆಂಡಿನ  ರ್ಯಾಂಗ್ಲರ್ ಪದವಿ ಪಡೆಯುವ ಸದವಕಾಶವನ್ನು ಕಡೆಗಣಿಸಿ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ,ಕಾಂಗ್ರೆಸ್ಸಿಗರಾಗಿ ರೂಪುಗೊಂಡರು. 1928-1942 ರ ಅವಧಿಯಲ್ಲಿ ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ ಸ್ಥಾಪಿಸಿದರು. ಸಾಬರಮತಿ ಆಶ್ರಮದ ಮಾದರಿಯಲ್ಲಿ ಹೊಸರಿತ್ತಿಯಲ್ಲಿ ಗಾಂಧಿ ಆಶ್ರಮ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಪ್ರೌಢಶಾಲೆ ಸ್ಥಾಪಿಸಿದರು. ರಾಷ್ಟ್ರೀಯ ವಿದಾಯಕ ಕಾರ್ಯಗಳಲ್ಲಿ ನಿರತರಾಗಿ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಕಾಂಗ್ರೆಸ್ಸಿನ ಏಕೈಕ ಸರ್ವಸ್ವಾಮ್ಯ ವ್ಯಕ್ತಿ ಎಂದು ರಾಷ್ಟ್ರಪಿತ ಮ. ಗಾಂಧೀಜಿಯವರಿಂದ ಆಯ್ಕೆಯಾದರು.ನಂತರ ಸತ್ಯಾಗ್ರಹದ ನಿಷ್ಠ ಅನುಯಾಯಿಯಾಗಿ ಉಪವಾಸ ಅನುಭವಿಸಿ ಜೈಲುವಾಸಿಯಾದರು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಸಲ ಜೈಲುವಾಸಿಯಾದರು. ಆಗ ಪ್ರತಿದಿನ 70 ಪೌಂಡ್ ಜೋಳ ಬೀಸುತ್ತಿದ್ದರು.1932 ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುವಾಸಿಯಾಗಿ ಜೈಲಿನಲ್ಲಿ ಎಲ್ಲರೂ ಭಂಗಿ ಕಾರ್ಯ ಮಾಡಲು ಆಗ್ರಹಿಸಿ 13 ದಿನ ಉಪವಾಸವಿದ್ದರು. 1937 ರಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿಯಂದು ಹೊಸರಿತ್ತಿಯ ಹರಿಜನ ಕೇರಿಯಲ್ಲಿ ರಾಷ್ಟ್ರಧ್ವಜದಡಿ ಖಾದಿ ವಸ್ತ್ರಧಾರಣೆ ಮತ್ತು ಖಾದಿ ಮಾಲೆ ವಿನಿಮಯ ಮಾಡುವುದರೊಂದಿಗೆ ಇಟಗಿಯ ಸ್ವಾತಂತ್ರ್ಯಯೋಧ ಶ್ರೀ ಬಸವಣ್ಣೆಪ್ಪ ಸಾಣೆಕೊಪ್ಪ ಅವರ ಭಗಿನಿ ಗಂಗಾದೇವಿಯವರೊಡನೆ ವಿಶಿಷ್ಟ ರೀತಿಯಲ್ಲಿ ವಿವಾಹವಾದರು. 1942 ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಮೂರು ವರ್ಷ ಸೆರೆಮನೆ ವಾಸ ಅನುಭವಿಸಿದರು.ಆಗ ಮಹಾತ್ಮ ಗಾಂಧೀಜಿ ಕೈಕೊಂಡ ಉಪವಾಸಕ್ಕೆ ಅನುಗುಣವಾಗಿ 21 ದಿನ ಉಪವಾಸನಿರತರಾದರು.                   1946-1960 ರ ವರೆಗೆ ಅಖಂಡ ಒಂದುವರೆ ದಶಕ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1952 ರಲ್ಲಿ ಹಾವೇರಿ ತಾಲೂಕಿನಿಂದ ಮುಂಬೈ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅಖಿಲ ಕರ್ನಾಟಕ ಏಕೀಕರಣ ಚಳುವಳಿಯ ಸಂಘಟಕ ಮತ್ತು ಮುಂಚೂಣಿಯ ನಾಯಕರೆನಿಸಿದ್ದರು.1954 ರಲ್ಲಿ ಚೀನಾ ದೇಶಕ್ಕೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1950-1955 ರ ವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1956-1960 ರ ವರೆಗೆ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು. 1960 ರಲ್ಲಿ ಮೈಸೂರು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಜರ್ಮನಿ ಈಜಿಪ್ತ  ದೇಶಗಳಿಗೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1962-1966 ರ ವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.1967 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾ ಕರ್ನಾಟಕ ಪ್ರಾಂತ್ಯಾಧ್ಯಕ್ಷರಾಗಿದ್ದರು. ದಕ್ಷಿಣ ಮಧ್ಯ ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿದ್ದರು.1971 ರಲ್ಲಿ ದ್ವಿತೀಯ ಅವಧಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.             “ನನ್ನ ಕ್ರಿಯಾಶಕ್ತಿ ತನ್ನ ತೀವ್ರತೆಯನ್ನು ಎಂದು ಕಳೆದುಕೊಳ್ಳುವದೋ ಅಂದೇ ನನ್ನ ಕೊನೆಯ ಗಳಿಗೆಯಾಗಲಿ”ಎಂಬ ಶ್ರೀಯುತರ ಹೇಳಿಕೆಯಂತೆ 1971 ರಲ್ಲಿ ಲಿಂಗೖಕ್ಯರಾದ ಶ್ರೀಯುತರು ತಮ್ಮ  ಜೀವಿತಾವಧಿಯಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ನಿಜಲಿಂಗಪ್ಪ ಮಹಾವಿದ್ಯಾಲಯ ಮತ್ತು ಕರ್ನಾಟಕದ ಪ್ರಪ್ರಥಮ ಬಿಜಿನೆಸ್ ಮ್ಯಾನೇಜಮೆಂಟ್ ಕಾಲೇಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಠೆಯ ಮ.ಗಾಂಧೀಜಿಯ ವಿಚಾರ ಪ್ರಣಾಳಿಕೆಯ ಜೀವನ ಶಿಕ್ಷಣ ತತ್ವಾಧಾರಿತ ಗಾಂಧೀ ಗ್ರಾಮೀಣ ಗುರುಕುಲ ನಾಡಿಗೆ ಧಾರೆಯೆರೆದ ಕೀರ್ತಿಶಾಲಿಗಳು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗಾಗಿ ಶ್ರೀಯುತರು ಹೊಂದಿದ್ದ ಕಳಕಳಿಯ ಪ್ರತೀಕದಂತೆ ಶ್ರೀಯುತರ ಕೊಡುಗೆಗಳು ಕಂಗೊಳಿಸುತ್ತಲಿರುವದು ಅನುಕರಣೀಯವೇ ಸರಿ.            ಹುಬ್ಬಳ್ಳಿ ಧಾರವಾಡ ಪರಿಸರವನ್ನು ಕರ್ಮಭೂಮಿಯನ್ನಾಗಿಸಿಕೊಂಡಿರುವ ಶ್ರೀ.ಹಳ್ಳಿಕೇರಿ ಗುದ್ಲೆಪ್ಪನವರು  ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ರಾಜಕೀಯಕ್ಷೇತ್ರಗಳನ್ನು ತಮ್ಮ ಜೀವನದ ಅವಿಭಾಜ್ಯ ರಾಷ್ಟ್ರೀಯ ಅಂಗಗಳನ್ನಾಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕೃಷಿ ಮಹಾವಿದ್ಯಾಲಯ, ಕೆಎಲ್ಇ ಶಿಕ್ಷಣ ಸಂಸ್ಥೆಗೆ ಶ್ರೀಯುತರು ಸಲ್ಲಿಸಿದ ಸೇವೆ ಅಪಾರ ಹಾಗೂ ಅನನ್ಯವಾದುದೆಂಬುದಕ್ಕೆ ಶ್ರೀ.ಎಂ.ಎಫ್.ಉಪನಾಳವರ ಕಾವ್ಯ ಸಾಕ್ಷಿಯಂತಿದೆ.ಉದಾ: “ಸ್ವಾತಂತ್ಯಸಂಗ್ರಾಮದ ಹುಲಿಕರ್ನಾಟಕದ ಗಂಡುಗಲಿಹೋರಾಟದ ಶಿಕ್ಷಣ ಸಾಬರಮತಿಯಲಿ ಕಾರ್ಯಕ್ಷೇತ್ರ,ಕರ್ನಾಟಕದಲಿ//ಮಾಡಿದಿರಿ ವಿದೇಶ ಪರ್ಯಟನಪಯಣದಲಿ ರಾಷ್ಟ್ರದ ಚಿಂತನಹೊಸರಿತ್ತಿಯು ಗುರುಕುಲವಾಗಿದೆ ಚಂದನ ಪ್ರಗತಿಗಿಲ್ಲಿಲ್ಲ ಅದಾವ ಬಂಧನ”//. ಈ ಕವನ ಶ್ರೀಯುತರ ಅಪೂರ್ವ ಸೇವೆಗೆ ಹಿಡಿದ ಕೖಗನ್ನಡಿಯಾಗಿರುತ್ತದೆ.            ‘ಕರ್ನಾಟಕದ ಉಕ್ಕಿನ ಮನುಷ್ಯ’ರೆಂದೆ ಜನಜನಿತರಾದ ರಾಷ್ಟ್ರನಾಯಕ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಿನೋತ್ಸವದ ಸ್ಮರಣಾರ್ಥವಾಗಿ ಪ್ರತಿಷ್ಠಾಪಿಸಿದ ಕಂಚಿನ ಮೂರ್ತಿಯ ಪ್ರತಿಷ್ಠಾಪನೆಯು, ಶ್ರೀ ಹಳ್ಳಿಕೇರಿ ಗುದ್ಲೆಪ್ಪ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಹುಬ್ಬಳ್ಳಿ ಹಾಗೂ ಹುಬ್ಬಳಿ ಧಾರವಾಡ ಮಹಾನಗರ ಸಭೆ ಇವರ ಸಹಯೋಗದಿಂದ ನೆರವೇರಿದ್ದು, ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಯುವ ಜನಾಂಗದ ಅನುಪಮ ಪ್ರಗತಿಯ ಪ್ರತಿರೂಪದಂತಿದ್ದು ಶ್ರೀ.ಗುದ್ಲೆಪ್ಪನವರಿಗೆ ಇರುವ ಕಳಕಳಿಯೇ ಅವರ  ಅವಿಸ್ಮರಣೀಯ  ದ್ಯೋತಕವಾಗಿರುತ್ತದೆ.— ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.ಸಾಹಿತ್ಯ ಚಿಂತಕರು.ಗದಗ. 

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. Read Post »

You cannot copy content of this page

Scroll to Top