ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ ಧನಿಕರಿರಬಹುದುನನ್ನ ಗಜಲಿನಲಿ ಮಾನವೀಯತೆ ಜೀವಂತವಾಗಿದೆ ಕಾಮ್ರೇಡ್ ನಾನು ಶೋಷಣೆಯ ವಿರುದ್ಧ ಎತ್ತಿದ ಧ್ವನಿ ಒಂಟಿ ಇರಬಹುದುನನ್ನ ಗಜಲಿಗೆ ಬಹುಜನರ ಬೆಂಬಲವಿದೆ ಕಾಮ್ರೇಡ್ ಬಹುತ್ವ ಭಾರತದಲಿ ಮೂಲಭೂತವಾದಿಗಳ ಪ್ರಭುತ್ವ ಇರಬಹುದುವಿಜಿಯ ಗಜಲ್ ಹೊತ್ತಿಸಿದ ಕ್ರಾಂತಿಗೆ ಲಾಲ್ ಸಲಾಂ ಸಿಕ್ಕಿದೆ ಕಾಮ್ರೇಡ್. ************************

ಗಜಲ್. Read Post »

You cannot copy content of this page

Scroll to Top