ನಾವೀಗ ಹೊರಟಿದ್ದೇವೆ
ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************









