ಕಾವ್ಯಯಾನ
ಅಯ್ಯೋ… ಸಂತೇಬೆನ್ನೂರು ಫೈಜ್ನಾಟ್ರಾಜ್ ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ ನೆಲದ ಮೇಲೆ ಆಕಾಶ ನೋಡ್ತಾ ನಾಲ್ಕು ದಿನ ಹೇಗೋ ಬಾಳುತ್ತಿತ್ತು ಅಯ್ಯೋ ಹರಿದು ಹಾಕಿದಿರಾ…ಛೆ ಮನವರಳೋ ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು ಕಿತ್ತೇಕೆ ಎಸೆದಿರಿ…ಛೆ ಮಳೆ ಬಂದಿದ್ದರೆ ಮೈ ಮುರಿದು ಚಿಗುರುತ್ತಿತ್ತೇನೋ ಪಾಪ ಏನಂದಿರಿ….ಛೆ ತುಸು ಕಾದು ನೋಡಿದ್ದರೆ ನಿಮ್ಮಂತೆಯೇ ಇರುತ್ತಿದ್ದರೋ…ಏನೋ… ಮುಖ ತಿರುವಿ ಬಿಟ್ಟಿರಾ… ಛೆ ನಗ್ತಾ ಒಂದೆರಡು ಮಾತಾಡಿದ್ದರೆ ಹೂ ನಗೆ ಕೊಡುತ್ತಿದ್ದರೇನೋ….! ಬಾಗಿಲು ಹಾಕಿಯೇ ಬಿಟ್ಟಿರಾ…ಛೆ ಒಲವ ಒಲವಿಂದ ನೋಡದೇ ಹಳದಿ ಕಣ್ಣೇಕೆ ಬಿಟ್ಟಿರಿ ಪಾಪ ದೂರಾಗುತ್ತಿರಲಿಲ್ಲವೇನೋ! ಛೆ…ಬಿಡಿ, ನಾನೂ ಹಾಗೆಯೇ ಬದಲಾಗಿದ್ದರೆ…ನನಗೂ ಹೊಸ ನೋಟ ಕಾಣುತ್ತಿತ್ತೇನೋ!! *******









