ದೇವರ ಲೀಲೆ
ಕವಿತೆ ದೇವರ ಲೀಲೆ ಬಾಪು ಖಾಡೆ ನೀಲಿಯ ಹಾಳೆಗೆ ಚಿತ್ರವ ಬರೆದುಮೇಲಕೆ ಎಸೆದಿರುವೆಶಿವನೇ ಮೇಲಕೆ ಎಸೆದಿರುವೆಮೂಡಣ ರವಿಗೂ ಹುಣ್ಣಿಮೆ ಶಶಿಗೂಸ್ನೇಹವ ಬೆಸೆದಿರುವೆಬೆಳಕಿನ ಸ್ನೇಹವ ಬೆಸೆದಿರುವೆ ತುಂಬಿದ ಅಂಬುಧಿ ಅಲೆಗಳ ಮೇಲೆನರ್ತನ ನಡೆಸಿರುವೆಹರನೇ ನರ್ತನ ನಡೆಸಿರುವೆಹಕ್ಕಿಯ ಹಿಂಡಿನ ಮೆತ್ತನೆ ಮೈಗೆಅಂಗಿಯ ತೊಡಿಸಿರುವೆರಂಗಿನ ಅಂಗಿಯ ತೊಡಿಸಿರುವೆ ಬಳುಕುವ ಬಳ್ಳಿಗೆ ಬಣ್ಣದ ಹೂಗಳಚಿತ್ರವ ಬಿಡಿಸಿರುವೆಚಂದದ ಚಿತ್ರವ ಬಿಡಿಸಿರುವೆಕೋಗಿಲೆ ಕಂಠದಿ ಕಾಣದೆ ಕುಳಿತುವೀಣೆಯ ನುಡಿಸಿರುವೆಚೈತ್ರದ ವೀಣೆಯ ನುಡಿಸಿರುವೆ ಎಲ್ಲೊ ಅವಿತು ಸೋಲು-ಗೆಲುವಿನಸೂತ್ರವ ಹಿಡಿದಿರುವೆಜೀವನ ಸೂತ್ರವ ಹಿಡಿದಿರುವೆನಾಟಕವಾಡಿ ಪಾತ್ರವ ಮುಗಿಯಲುಪರದೆಯ ಸರಿಸಿರುವೆಅಂಕದ ಪರದೆಯ ಸರಿಸಿರುವೆ ***********************************









