ನೇಗಿಲಿನ ಒಂದು ಸಾಲು
ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು. ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು. *****************************************









