ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ

ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ ಆಗದು.ತಿನ್ನುವ ಮಾತಾಢಬೇಡಜ್ಜೀ,ಅದಕ್ಕೆ ಜ್ವರ ಬಂದಿರಬೇಕು,ಅದೆಲ್ಲಿಯ ಗ್ರಹಚಾರ.ಅದಕ್ಯಾವ ಜ್ವರ? ಕಥೆಹೇಳಬೇಡ ಅಡುಗೂಲಜ್ಜೀ,ಕೊರೋನಾ ನರರಿಗಷ್ಟೇ. ಬಣ್ಣದ ಹಕ್ಕಿಗಳು ರುಚಿಇಲ್ಲವಂತೆ, ಸಾದಾ ಹಕ್ಕಿಗಳೇ ರುಚಿರುಚಿಯಂತೆ!ಹಾಗಂತ ಹೇಳು ಮಹಾರಾಣೀಕಾಲೇಜಿನ ಮುಂದೆ, ಅಯ್ಯೋ ಬಿಡೇ ಸಾಕು ಅದನ್ನುದಾಟಿಯೇ ಬಂದವರು ನಾವೆಲ್ಲಾ.ಈಗೆಲ್ಲಿ ಆ ವೈಭವ!ಕಳೆದುಹೋದದ್ದು ಬಿಟ್ಟು ಎದುರಿಗೆಕೂತದ್ದರ ಸುದ್ದಿ ಹೇಳು. ಬೇಸಗೆಗೆ ಬಳಲಿದೆ ಹಕ್ಕಿ,ಚಳಿ ದೇಶಕ್ಕೆ ಹಾರಿಹೋಗಲಾಗಲಿಲ್ಲವೇನೋ ಸಂಗಡಿಗರೊಡನೆ.ನಾವಾದರೂ ಬಿಟ್ಟುಬರೋಣವೆಂದರೆ ರೈಲು ವಿಮಾನಗಳಿಲ್ಲವಲ್ಲ! ಹ್ಞೂಂ, ಹಾಳು ಕೊರೋನಾ ಇವಳೇ.ಹೌದು ಆಂಟೀ, ನಮಗೂ, ಹಕ್ಕಿಗೂಅದರದೇ ಕಾಟ. ಅಂ! ಕೊರೋನಾ ಅಂದೆಯಾ?ಅರೆ ಆಂಟಿನನ್ನ ಮಾಸ್ಕ್ ಎಲ್ಲಿ?ನನ್ನದೂ ಕಾಣದು ಇವಳೇಓಹ್ ಅತ್ತೇ, ನನ್ನದೂ ಇಲ್ಲಟೀ ಕುಡಿವ ಮೊದಲು ಕಳಚಿಟ್ಟೆನಲ್ಲ… ಮಡಿಲಲ್ಲಡಗಿರಬೇಕು ನೋಡೋಣ.ಹಜಾರದ ತುಂಬಾ ಸೀರೆದುಪಟ್ಟಾಗಳ ಫಟ್‍ಫಟ್ ಫಟರವ. ಕಾಣ್ತಿಲ್ವೇ, ಹಾಳು ಹಕ್ಕಿಯಿಂದ ಹೀಗಾಯ್ತಲ್ಲ!ಗಾಳಿಯಲ್ಲಿ ಗಾಬರಿಯ ಲೊಚ್ ಲೊಚ್ ಲೊಚರವ, ಛೇ ಹಕ್ಕಿ,ಪುಟ್ಟ ಹಕ್ಕಿ, ಪುಟಾಣಿ ಹಕ್ಕಿ…ಅರೆ…!ಎಲ್ಲಿದೆ ಹಕ್ಕಿ? ಅದು ಹಾರಿಹೋಗಿದೆ,ಕೂತಿದ್ದೆಡೆ ಒಂದು ಗುಪ್ಪೆಹಿಕ್ಕೆ ಬಿದ್ದಿದೆ. ಪುಟ್ಟಿಯ ಮುಖ ಕಪ್ಪಿಟ್ಟಿದೆ,ಲಲಿತೆಯ ಕಣ್ಣಲ್ಲಿ ಹನಿ ನೀರಿದೆ,ಬಾಲ್ಕನಿಯಾಚೆಹದ್ದೊಂದು ರೆಕ್ಕೆ ಬಡಿದಿದೆ,ನೆರೆಯವರ ನಿರಿಗೆಗಳುಮೆಟ್ಟಲಸರಣಿಯಲ್ಲಿ ಆತುರದಲ್ಲಿ ಚಿಮ್ಮಿವೆ.ನನ್ನ ಕೈನ ಕೋಲು?. ಅದು ನೆಲವನ್ನು ಪಟಪಟ ಬಡಿಯುತ್ತಿದೆ. ಬಡಿಯುತ್ತಲೇ ಇದೆ. ***********************************************************************

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ Read Post »

ಕಾವ್ಯಯಾನ

ವಿರಾಗಿ ತ್ಯಾಗಿ

ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ ನಾಥ ಸುತನನ್ನೇ ಅರಸಿದಂತಿದೆಪ್ರತಿ ಕ್ಷಣದ ಆರಂಭಕೆ **************************

ವಿರಾಗಿ ತ್ಯಾಗಿ Read Post »

ಕಾವ್ಯಯಾನ

ಸ್ವಾತಿಮುತ್ತು

ಕವಿತೆ ಸ್ವಾತಿಮುತ್ತು ಅಕ್ಷತಾ ಜಗದೀಶ. ಎನಿತು ಸುಂದರ ನೋಡುತಿಳಿನೀಲ ಮುಗಿಲು….ಮುತ್ತು ನೀಡುವಂತಿದೆಬಾನಂಚಿನ ಕಡಲು.. ಕಡಲಿಗು‌ ಮುಗಿಲಿಗುಇದೆಂತಹ ಬಂಧ..ಅರಿಯಲಾರದಂತಹಅಂತರಂಗದ ಅನುಬಂಧ.. ಕಾಲಗಳು ಉರುಳಿದರುಯುಗಗಳೇ ಕಳೆದರುಕಾಣುವುದು ತಿಳಿನೀಲಿ ಬಿಂಬಮಾಸಿಹೋಗದ ಆ ಪ್ರತಿಬಿಂಬ.. ಭಾವದೊಳಗೆ ಸನಿಹ ಕಡಲುವಾಸ್ತವದೊಳು ದೂರ ‌ಮುಗಿಲುಸತ್ಯದ ಒಳಗಿನ ಮಿಥ್ಯ..ನೆನಪಿಸುತಿದೆ‌ ಅಲೆಗಳು‌ ನಿತ್ಯ.. ಬಾನಿಂದ ಜಾರಿದೆ ಮಳೆ ಹನಿಕೇಳುತಿದೆ ಮರಳಿ ಕಡಲ ದನಿಮತ್ತೆ ಪ್ರೀತಿ ಮೂಡುವ ಹೊತ್ತುಕಡಲಾಳದಲಿ ಎಲ್ಲೆಲ್ಲೂ ‌ಸ್ವಾತಿಮುತ್ತು…. ****************************

ಸ್ವಾತಿಮುತ್ತು Read Post »

ಕಾವ್ಯಯಾನ

ಹರಿದ ಬಟ್ಟೆ….

ಹರಿದ ಬಟ್ಟೆ…. ಸುಜಾತ ಕಂದ್ರವಳ್ಳಿ ನನ್ನದು ಅರ್ಧಂಬರ್ಧ ಹರಿದ ಬಟ್ಟೆಆಧುನಿಕತೆಯನ್ನು ವೈಭವೀಕರಿಸಲೆಂದೇಹರಿದುಕೊಂಡ ಬಟ್ಟೆ….!ಹರಕಲು ಬಟ್ಟೆ ಎನ್ನಲಾರೆ….!ಆದರೂ ಹರಿದ ಬಟ್ಟೆ….! ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…ಅಂಬಲಿ ಊಟ ನನ್ನದಲ್ಲವೇ ಅಲ್ಲ…!ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,ಆದರೇನಂತೆ ನಾ ಹರಕಲು ಬಟ್ಟೆ ಎಂದು ಅರಚಲಾರೆ,ಕಿರುಚಲಾರೆ ಆದರು ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಒಬ್ಬರು ಇನ್ನೊಬ್ಬರನ್ನು ನಂಬಲಾರದಂತ ಬಟ್ಟೆ.ತಳುಕು ಬಳುಕಿನ ವೈಯ್ಯಾರದ ಬಟ್ಟೆ.ಬಣ್ಣದ ಜಗದಲಿ ಮೆರೆಯಲೆಂದೆ ಹುಟ್ಟಿಕೊಂಡುಸಾಯಲಾಗದೆ ನರಳಾಡುತಿರುವ ಬಟ್ಟೆ.ಬಂಗಾರವಿಲ್ಲದ, ಸಿಂಗಾರ ಕಾಣದ ,ಮಲ್ಲಿಗೆ ಕಂಪು ತಾಗದ ಬಟ್ಟೆಬೊಟ್ಟನ್ನೆ ದಿಕ್ಕರಿಸಿ ಬೆಟ್ಟು ಮಾಡಿ ತೋರಿಸಿಕೊಳ್ಳುತಿರುವ ಬಟ್ಟೆ,ಆದರೂ ಹರಿದ ಬಟ್ಟೆ ಎನ್ನಲಾರೆ….!ಅರ್ಧಂಬರ್ಧ ಹರಿದ ಬಟ್ಟೆ….. ಎಂದು ಹೊಲಿಸಿಕೊಳ್ಳಲಾರದಷ್ಟು ದುಬಾರಿ ಈ ಬಟ್ಟೆ.ಅಲಂಕರಿಸಿಕೊಳ್ಳುವ ಸೊಬಗನ್ನು ಮರೆತ ಬಟ್ಟೆಇದರೊಳಗೆ ನಾನು ಪಟ್ಟದ ಗೊಂಬೆಯಂತೆ ಮೌನಳಾಗಿಬಿಟ್ಟೆ.********************************************

ಹರಿದ ಬಟ್ಟೆ…. Read Post »

ಕಾವ್ಯಯಾನ

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ಕಾವ್ಯಯಾನ Read Post »

ಕಾವ್ಯಯಾನ

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ನಿರುತ್ತರ Read Post »

ಕಾವ್ಯಯಾನ

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿಅಲ್ಲಿಯವರೇ ಆಗಿಬಿಡುತ್ತೀರಿಅದಕ್ಕೆ ಕಾರಣ ಅವರ ಪ್ರೀತಿಪ್ರತಿ ಸಂಜೆ ಎದುರಾಗುವ ಈದಂಡೆಯ ಮಮತೆ! ದಂಡೆಯ ಉಸುಕು ಸದಾ ಗಾಳಿಯೊಂದಿಗೆಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳುಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳುಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟುಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆಮಾತಾಡುತ್ತಿರುತ್ತವೆ. ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳುಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ. ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ! ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭಇಡೀ ಕಾರವಾರಿಗರ ಮನಸ್ಸನ್ನುಪ್ರತಿನಿಧಿಸುತ್ತದೆ!ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತಸುರಕ್ಷಿತ ದಡ ಸೇರಿಸುತ್ತದೆ.! ಸಂಜೆಯಾದರೆ ಮೀನ ಖಂಡಗಳ ಹೊಳೆಸುವಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆಸುಳಿದು ಹೋಗುತ್ತವೆ. ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ! ಲಂಗರು ಹಾಕಿದ ಹಡಗುಗಳು ಸಂಜೆಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ! ಇಲ್ಲಿನ ಆಹ್ಲಾದಕರ ಸಂಜೆಅಲೆವ ಅಲೆಗಳ ಹೃದಯದ ಮಿಡಿತದಂಡೆಯ ಮರಳ ಮಧುರ ಸಂಗೀತಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ! *************************************

ದಂಡೆಯಲ್ಲಿ ಒಮ್ಮೆ ನಡೆದು.. Read Post »

ಕಾವ್ಯಯಾನ

ಗೋವು ಮತ್ತು ರೈತ

ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ ಬಂಗಾರ ಹುಡುಕಲು ರೈತನ ಬೆನ್ನು ಮುರಿಯುತ್ತಿದ್ದಾರೆ ಅಧಿಕಾರ ಪಡೆಯಲು ಯಾರು ರಾಜನಾದರೂಬಡವನಿಗೆ ಹೊಡೆಯುವುದೆ ಕಾಯಕಇದು ಶತ ಶತಮಾನದ ಬಳುವಳಿ ಪ್ರತಿ ಚುನಾವಣೆಯಲ್ಲಷ್ಟೆರೈತನ ಮೂಳೆಗಳುಗೋವಿನ ಮಾಂಸಕಾಣುತ್ತದೆನಂತರ ಮತ್ತೆರೈತಮಾರಾಟವಾಗುತ್ತಾನೆಗೋವು ರಪ್ತಾಗುತ್ತದೆ ಜನರಿಗೂ ಗೋವು ಬೇಕುಗೃಹ ಪ್ರವೇಶಕ್ಕೆ ಹೋಮ ಹವನಕ್ಕೆ ನಂತರ ಬೀದಿಪಾಲು ರೈತನೂ ಬೇಕು ಸಭೆ ಸಮಾರಂಭಗಳಿಗೆ ,ನಾಯಕರಭಾಷಣಕ್ಕೆ ನಂತರ ಸಾಲದ ಪಾಲು ಪ್ರಕೃತಿ ,ಸಮಾಜದ ಜೊತೆಗೆಹೋರಾಡಿ ಸೋತು ಗೋವಿನಹಗ್ಗ ರೈತನ ಕೊರಳಲಿ ಅಂತ್ಯ ಆಗುತ್ತಿದೆ ಹೌದು ,ಈಗೀಗ ಹಳ್ಳಿಗಳಲ್ಲಿಗೋವು ಅಂಬಾ ಅನ್ನುತ್ತಿಲ್ಲರೈತ ಉಳಿಮೆ ಮಾಡುತ್ತಿಲ್ಲ ರೈತ ,ಗೋವಿನ ಬೆಲೆ ಬಾರಿ ಕುಸಿದಿದೆಆದರೆ ಮಣ್ಣಿಗೆ ,ಮರಳಿಗೆಭೂಮಿಯ ಬೆಲೆ ಏರುತ್ತಿದೆ ಗೋವಿನ ಹಾಲು ಕುಡಿದವರುವಿಷ ಕಕ್ಕುತ್ತಿದ್ದಾರೆರೈತನ ಅನ್ನ ತಿಂದವರುರೈತನಿಗೆ ,ರೈತನ ಬೆಳೆದ ಬೆಳೆಗೆಬೆಲೆ ನಿಗದಿ ಪಡಿಸುತ್ತಿದ್ದಾರೆ ಹಾಲಿನ ಡೈರಿಯ ಹಾಲುಕುಡಿಯುವವರಿಗೆಪುಡ್ ಬಜಾರ್ ನಲ್ಲಿ ಪುಡ್ತಿನ್ನುವವರಿಗೆ ರೈತ ,ಗೋವು ಯಾಕೆ ಬೇಕು??? **********************************************

ಗೋವು ಮತ್ತು ರೈತ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ ಒಡೆದು ಹಾಕಬೇಡ ಗೆಳೆಯ ************************************************************************

ಗಜಲ್ Read Post »

ಕಾವ್ಯಯಾನ

ಕಾರ್ತಿಕದ ಮುಸ್ಸಂಜೆ

ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವುಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನುತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ || ***********************************

ಕಾರ್ತಿಕದ ಮುಸ್ಸಂಜೆ Read Post »

You cannot copy content of this page

Scroll to Top