ರಾಜು ಅವರ ಕವಿತೆ “ಕಾಲಚಕ್ರ”
ಕಾವ್ಯ ಸಂಗಾತಿ ರಾಜು “ಕಾಲಚಕ್ರ” ಒಂದೊಂದೇ ಹೆಜ್ಜೆ ಇಟ್ಟು ನಡೆಯುತ್ತಿದ್ದಕಾಲನ ಗಡಿಯಾರಈಗೀಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ !ಮೊನ್ನೆಯಷ್ಟೇ ಕೇಕ್ ಕತ್ತರಿಸಿ ಕೇಕೆ ಹಾಕಿದ ದಿನಹಿಂದೆ ಸರಿದು ಮತ್ತೊಂದು ಎದುರಿಗೆ ಬಂದು ನಿಂತಿದೆ !! ಬೆನ್ನ ಹಿಂದೆ ಪಾಟಿ ಚೀಲ ಹಾಕಿಕೊಂಡುಶಾಲೆಯ ಫಸ್ಟ್ ಬೆಲ್ ಗೆ ಕಾಯುತ್ತಿದ್ದ ದಿನ ಕಳೆದುಮನೆಯಂಗಳದಲ್ಲಿ ಸ್ಕೂಲ್ ವ್ಯಾನ್ ಕಾಯುತ್ತಿದೆ !ಪಾಟಿ-ಪೇಣೆ ಅಟ್ಟಸೇರಿ ಲ್ಯಾಪ್ಟಾಪ್ ತೊಡೆಯೇರಿ ಕುಳಿತಿದೆ !! ಮನೆಯಂಗಳದ ಪುಟ್ಟ ಗಿಡವೀಗಎದೆಯೆತ್ತರ ಬೆಳೆದು ನೆರಳು ನೀಡುತ್ತಿದೆ !ಹಣ್ಣೆಲೆಗಳ ಕಳಚಿಕೊಂಡ ಮರವೀಗಚಿಗುರೆಲೆಗಳ ಹೊತ್ತು ಹಸಿರಾಗಿ ನಿಂತಿದೆ !! ಧಾವಂತದ,ದಣಿವರಿಯದ ಬದುಕಲ್ಲಿಹಿಂತಿರುಗಿ ನೋಡಿದರೆ ಹೆಜ್ಜೆ ಗುರುತು ಕಾಣದಾಗಿದೆ !ಮರಳ ಮೇಲಿನ ಹೆಜ್ಜೆ ಗುರುತುಸಾಗರದಲೆಗಳು ಅಳಿಸಿಹಾಕಿವೆ !! ಹೊಸತು ಹಳತಾಗಿ, ಹಳತು ಕಳೆದ್ಹೋಗಿಕಾಲಚಕ್ರ ಉರುಳುತ್ತಿದೆಮೂಗಿನ ಮೇಲೇರಿದ ಕನ್ನಡಕ ಕಣ್ಣುಗಳಿಗೆ ಬೆಳಕಾಗಿದೆ !ಕಾಲನ ಗಡಿಯಾರದ ಮುಳ್ಳುಗಳನ್ನು ತಡೆಯುವರಾರು !?? ರಾಜು ಪವಾರ್
ರಾಜು ಅವರ ಕವಿತೆ “ಕಾಲಚಕ್ರ” Read Post »









