ಜ್ಯೋತಿ ಮಾಳಿ ಅವರ ಗಜಲ್
ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಉಕ್ಕಿಹೋದ ಹಾಲು ಹೆಕ್ಕಿ ತೆಗೆಯುವುದು ಹೇಗೆಮಿಕ್ಕಿ ಹೋದ ಕಾಲ ಹೊಕ್ಕು ಬಗೆಯುವುದು ಹೇಗೆ ಸವಿಸವಿ ಕ್ಷಣಗಳ ಚಿಕ್ಕ ಪಾಲೂ ಇಲ್ಲವೆಸವಿಯದ ಸಿಹಿಯನು ನೆಕ್ಕಿ ಜಗಿಯುವುದು ಹೇಗೆ ಹಾಲೆರೆದು ಹಾವಿನ ಜೊತೆಯಲಿ ನಡೆದಿದೆ ಸರಸವಿಧಿ ಕೊಟ್ಟ ವಿಷವನು ಮುಕ್ಕಿ ಉಗಿಯುವುದು ಹೇಗೆ ಬೆಂಕಿಕಡ್ಡಿ ಮಕ್ಕಿನಲಿ ಅಡಗಿ ಕಾದಿದೆ ಕಿಡಿದಕ್ಕದ ಪ್ರೀತಿಯನು ತಿಕ್ಕಿ ಮೊಗೆಯುವುದು ಹೇಗೆ ಸಾರಾಯಿ ಕುಡಿದ ಮಂಗನಂತಾಗಿದೆ ಮನವುಹಕ್ಕಿ ರೆಕ್ಕೆ ಬೀಸಿ ಸೊಕ್ಕಿ ನೆಗೆಯುವುದು ಹೇಗೆ ಬೇಡೆಂದರೂ ಕಾಡಿವೆ ಅರಿವಿನ ಘಳಿಗೆಗಳುಕಹಿ ಕಹಿ ನೆನಪುಗಳ ಕಕ್ಕಿ ಹುಗಿಯುವುದು ಹೇಗೆ ಕಲ್ಲು ಕುಕ್ಕಿ ಜ್ಯೋತಿಯ ಕೊಕ್ಕು ರಗುತಾಗಿದೆಬದುಕಿನ ಭವಣೆಗಳ ಲೆಕ್ಕ ಮುಗಿಯುವುದು ಹೇಗೆ ಜ್ಯೋತಿ ಮಾಳಿ ಬೆಳಗಾವಿ
ಜ್ಯೋತಿ ಮಾಳಿ ಅವರ ಗಜಲ್ Read Post »









