ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ”
ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸಂಕ್ರಾಂತಿ ಸಂಭ್ರಮ” ಭಾನು ಉದಯಿಸಿಕಿರಣ ಚೆಲ್ಲಿದ ದಿನಶೀತದ ನೆರಳು ಸರಿದುಹೊಸ ಕಾಲ ಅದುಬೆಳೆದು ನಿಂತ ಪೈರುಗಳು ನಗುವಿನ ಗೀತೆ ಮುಗುಳು ಮನೆ ಮನ ತುಂಬಿತುಸಂಕ್ರಾಂತಿಯ ಸಂಭ್ರಮ ಎಳ್ಳು–ಬೆಲ್ಲ ಹಂಚಿಹೃದಯ ಬೆಸೆಯುವಸಂಪ್ರದಾಯ,ಕಹಿ–ಸಿಹಿಯ ಸಂಗಮವೇಬದುಕಿನ ಸತ್ಯೋಪಾಯ,ಸಂಕ್ರಾಂತಿಯ ಸಂಭ್ರಮ “ಎಳ್ಳು ಬೆಲ್ಲ ತಿನ್ನಿಒಳ್ಳೇ ಮಾತಾಡಿ” ಹಾರೈಕೆ,ಸ್ನೇಹದ ಬೀಜ ಬಿತ್ತುವಮಧುರ ಸಂಸ್ಕೃತಿಯ ಸಖ್ಯಹಸಿರು ಹೊಲಗಳಲ್ಲಿಕಂಗೊಳಿಸುವ ದವಸ,ಸಂಕ್ರಾಂತಿಯ ಸಂಭ್ರಮ ರೈತನ ಶ್ರಮಕ್ಕೆ ಸಿಕ್ಕಿತುಸಾರ್ಥಕ ಉತ್ಸವ,ನೇಗಿಲು ಹಿಡಿದ ಕೈಗಳಿಗೆಗೌರವದ ನಮನ,ಅನ್ನದಾತನ ಬದುಕಿಗೆಬೆಳಕಿನ ಕಿರಣ.ಸಂಕ್ರಾಂತಿಯ ಸಂಭ್ರಮ ಗೋ ಮಾತೆಗೂ ಹಬ್ಬ, ಕೊಂಬುಗಳಿಗೆ ಬಣ್ಣಗಂಟೆಯ ನಾದದಲ್ಲಿತುಂಬಿತು ಹಳ್ಳಿ–ಹಾಡುಉತ್ಸಾಹದ ಆಟ–ಪಾಠಸಂಕ್ರಾಂತಿ ತಂದಿತುಸಂಕ್ರಾಂತಿಯ ಸಂಭ್ರಮ ಸಂಭ್ರಮದ ನೋಟ.ಆಕಾಶದಲ್ಲಿ ಗಾಳಿಪಟಬಣ್ಣದ ಬಣ್ಣದ ಕೂಟಸಕ್ಕರೆ ಕಬ್ಬು ಕೈಯಲ್ಲಿಕನಸ ಮನದಲ್ಲಿ,ಸಂತಸದ ಸಿಹಿ ಬೆಲ್ಲ ಎಲ್ಲರ ಬದುಕಿನಲ್ಲಿ.ಸಂಕ್ರಾಂತಿಯ ಸಂಭ್ರಮ ಸೂರ್ಯನಿಗೆ ನಮಿಸಿಹೊಸ ದಾರಿಗೆ ಪಯಣ ಭವಿಷ್ಯ ಕಟ್ಟುವೆವು, ಪಣಒಗ್ಗಟ್ಟಿನ ಸಂದೇಶ ಸಾರುವಪುಣ್ಯದ ಹಬ್ಬ,ಸಂಕ್ರಾಂತಿ , ಸಂಸ್ಕೃತಿ ಸಂಭ್ರಮ, ಸೌಭಾಗ್ಯಸಂಕ್ರಾಂತಿಯ ಸಂಭ್ರಮ. ಡಾ ತಾರಾ ಬಿ ಎನ್
ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ” Read Post »









