ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ.. *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ ಮರೆಯುತಿರಲಿಏನೇ ಆದರೂ ಎಂದೂ ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »









