ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಅವ್ವನ ಮಡಿಲು” ​ಅವ್ವ, ನೀನೆಷ್ಟು ನೆನಪಾಗುತ್ತಿ ಗೊತ್ತಾ?ಜಗತ್ತಿನ ಭಾರವೆಲ್ಲ ಹೆಗಲ ಮೇಲಿರುವಾಗ,ಬಾಲ್ಯದ ಆ ನಿಶ್ಚಿಂತೆಯ ದಿನಗಳು ಕಾಡುತ್ತಿವೆನಿನ್ನ ಸೆರಗಿನ ನೆರಳಲ್ಲಿ ಹಾಯಾಗಿ ಮಲಗುವ ಆಸೆ ಹೆಚ್ಚುತ್ತಿದೆ. ​ಮನಸಿಗೆ ಬೇಜಾರಾದಾಗಲೆಲ್ಲ,ಸಂತೈಸಲು ಸಾವಿರ ಜನರಿದ್ದರೂಅವರ ಮಾತುಗಳಲ್ಲಿ ಸಿಗದ ಆ ನೆಮ್ಮದಿ,ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿದಾಗ ಸಿಗುತ್ತಿತ್ತು. ​ಕಣ್ಣೀರು ಸುರಿಸಿದರೆ ಪದೇ ಪದೇ ಕೇಳದೆ,ತಲೆ ಸವರಿ ಸಮಾಧಾನ ಪಡಿಸುತ್ತಿದ್ದ ಆ ನಿನ್ನ ಕೈಗಳು..ಮತ್ತೆ ಬೇಕೆನಿಸುತ್ತಿದೆ ಅವ್ವ,ನಿನ್ನ ಮಡಿಲಲ್ಲಿ ಮಗುವಾಗಿ ಕರಗುವ ಹಂಬಲವಾಗುತ್ತಿದೆ. ​ಯಾರೇ ಏನೇ ಅಂದರೂ, ಎಷ್ಟೇ ಬೆಳೆದರೂ,ನನಗೆ ನೀನೇ ಸಾಟಿಯಿಲ್ಲದ ದೇವತೆ..ನಿನ್ನ ಮಡಿಲ ಆ ಬೆಚ್ಚಗಿನ ಅಪ್ಪುಗೆಯೇ,ನನ್ನ ಬದುಕಿನ ಅತಿ ದೊಡ್ಡ ಆಸ್ತಿ. ಡಾ ವಿಜಯಲಕ್ಷ್ಮಿ ಪುಟ್ಟಿ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ”

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” ಊರ ಮುಂದಿನ ತ್ವಾಟ ಐತಿ ಬಾಳ ಮಾಟಬರ್ತೀ ಏನ ನೀ ಊಟಕ್ಕ//ಪ// ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿಹುಳಿಬಾಣ ಮಾದೇಲಿ ಮಾಡಿಬುತ್ತಿ ಕಟ್ಟಿಕೊಂಡ ಬರ್ತೀನಿತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡಗಾಡಿ ನತ್ತ ಇಟ್ಕೊಂಡ ಬರ್ತೀನಿ// ಎತ್ತಿಗೆ ಸಿಂಗಾರ ಮಾಡ್ಕೊಂಡಕೊರಳಿಗೆ ಹುರಿಗೆಜ್ಜೆ ಕಟ್ಟಿಬಂಡಿಗೆ ಕೊಲಾರಿ ಕಟ್ಟಿಕೊಂಡಸಜ್ಜ ಮಾಡಿಕೊಂಡ ಬಿಡಹೊತ್ತಾರೆ ಎದ್ದ ಹೋಗೋಣಉಂಡ  ತಿಂದ ಸುತ್ತಾಡಿ ಬರೋಣ // ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ  ಕೇಳ್ತಿ ಏನ ನೀ ಕಿವಿಗೊಟ್ಟಎಳೆನೀರ ಬೇಕಾದ ಹಣ್ಣ ಹಂಪಲಗೋದಿ ಕಡ್ಲಿ ಹುಣಸಿ ಮಾವುಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ// ಬಾಜು ಜುಳು ಜುಳು ಹರಿಯೋ ಹಳ್ಳಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾನಮ್ಮೂರಾಗ ಏನ ಕೊಂಡ್ರು ಸಸ್ತಾಎಲ್ಲಾ ಮಸ್ತ್ ಮಸ್ತ್ ಹಂಗಂತಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ// ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬಹಳಬರ ಹೊಲ್ದಾಗ ಪ್ಯಾರಲ ಹಣ್ಣಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿಸಾವಕಾರ ಹೊಲ್ದಾಗ ನೋರೊಂದ ದಿನಸಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” Read Post »

ಕಾವ್ಯಯಾನ

ಕಾವ್ಯ ಸಂಗಾತಿ ಕವಿತೆಗಳ ರಾಣಿ ಕವಿತೆಗಳ ರಾಣಿ ಬಣ್ಣಿಸಿದ ಕವಿಕಿವಿಗಳಿಗೆ ಇoಪು  ಮಾತಿನ ಸವಿಹರ್ಷಗೊಂಡಿತು ಹೃದಯ ಸಿಹಿಮರೆಯಿತು ಮನದೊಳಗಿನ ಕಹಿ ಕವಿತೆಯ ಸಾಲುಗಳಲಿ ನಾ ಬಂಧಿಯಾದೆಪ್ರೀತಿಯ ಸಾಲಿನಲಿ ನೀ ಬರಹವಾದೆಸಂತಸದ ಮಳೆ ಸುರಿವ ಮುಗಿಲಾದೆಗರಿಬಿಚ್ಚಿ ನರ್ತಿಸುವ ನಾಟ್ಯದ ನವಿಲಾದೆ ಜೀವನದ ಬೇಸರದಲ್ಲಿ ಜೊತೆಯಾದೆಬರವಣಿಗೆಯ ಬೆರಳಲ್ಲಿ ಸಾಲದೆಜೀವನ ಉತ್ಸಾಹಕ್ಕೆ ಕಾರಣವಾದೆಜೀವನದಿ ಬದುಕುವ ಆಸೆ ತಂದೆ ನಾನೇಗೆ ನಿನ್ನನ್ನು ಪದಗಳಲಿ ವರ್ಣಿಸಲಿಶೃಂಗಾರದಲ್ಲಿ ಬಣ್ಣಿಸಿ ನಾನೆಂತು ಚಿತ್ರಿಸಲಿನನ್ನೊಳಗೆ ನೀನಿರುವೆ ಹೇಗೆ ಮೋಹಿಸಲಿಎಂದೆಂದೂ ಜೊತೆಯಾಗಿರು ಈ ಜನ್ಮದಲಿ. ಲತಾ ಎ ಆರ್ ಬಾಳೆಹೊನ್ನೂರು

Read Post »

ಕಾವ್ಯಯಾನ

ಡಾ.ತಾರಾ ಬಿ ಎನ್‌ ಅವರ ಕವಿತೆ “ಆದರ್ಶ”

ಕಾವ್ಯ ಸಂಗಾತಿ ಡಾ.ತಾರಾ ಬಿ ಎನ್‌ “ಆದರ್ಶ” ಅಂಧಕಾರದ ಮಧ್ಯೆ ದೀಪದಂತೆ ಬೆಳಗುವ,ಜೀವನದ ದಾರಿಗೆ ದಿಕ್ಕು ತೋರಿಸುವ ಬೆಳಕುಆದರ್ಶ, ಮನಸ್ಸಿನ ಮೌನದಲ್ಲಿಮೂಡುವ ನಿಶ್ಶಬ್ದ ಶಕ್ತಿಯ ಸಂಕೇತ.ಲಾಭದ ಲೆಕ್ಕವಿಲ್ಲದೆನಡೆಯುವ ಪಥ,ಭಯದ ನೆರಳನ್ನೂ ಮೀರಿ ನಿಲ್ಲುವ ಧೈರ್ಯ,ಆದರ್ಶ. ಸತ್ಯದ ಮಾತಿಗೆ  ಸೋಲುವಬೆಲೆ ಕೊಡುವ  ಅನರ್ಘ್ಯಹೃದಯಕ್ಜೆ ದೃಢ ನಿರ್ಣಯಹೋರಾಟಕ್ಕೆ ಎದೆಗೊಟ್ತುನಿಲ್ಲುವ ಅಸೀಮ ಬಲಆದರ್ಶ. ಕಷ್ಟದ ಕಲ್ಲುಬಂಡೆಗಳಮೇಲೆ ನಡೆದು,ನೋವಿನ ಮುಳ್ಳುಗಳಸಹಿಸಿಕೊಂಡು, ಉಂಡುನ್ಯಾಯದ ದಾರಿಗೆ ತಡೆಗೋಡೆಮಾನವತೆಯಜೀವಂತ ರೂಪ.ಆದರ್ಶ ಖರೀದಿಯಾಗದು, ಹುದ್ದೆಗೂ ಸೀಮಿತವಲ್ಲ,ಪ್ರತಿ ಸಣ್ಣ ಕಾರ್ಯದಲ್ಲೂನೈತಿಕತೆಯ ಸುವಾಸನೆಹರಡುವ ಗುಣ.ಬಿದ್ದಾಗ ಎತ್ತಿಕೊಳ್ಳುವಸೋತಾಗ ಧೈರ್ಯ ತುಂಬುವನೋಟದಲ್ಲಿ,ಅನ್ಯಾಯದ ಎದುರುಮೌನ  ಮುರಿಯುವ ಅಸ್ತಿತ್ವ ತೋರುತ ನಿಲುವುದು.ಆದರ್ಶ ಸಾವಿರ  ಜ ನಕೆ ಪ್ರೇರಣೆ,ಸತ್ಯ ಶುದ್ಧ ಚಿಂತನೆಸಮಾಜದ ಭವಿಷ್ಯನಿರ್ಮಾಣ.ಸುಳ್ಳಿನ ಸೌಲಭ್ಯವಲ್ಲ,ಸತ್ಯದ ಕಠಿಣತೆಉಸಿರಾಗಿಸಿಕೊಳ್ಳುವುದೇಆದರ್ಶ ಡಾ ತಾರಾ ಬಿ ಎನ್

ಡಾ.ತಾರಾ ಬಿ ಎನ್‌ ಅವರ ಕವಿತೆ “ಆದರ್ಶ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಪ್ರೀತಿಸಿದ ತಪ್ಪಿಗೆ..” ಇಂದು ಈ ಮುಸ್ಸಂಜೆಯಲಿ….ಯಾರೋ ಎಲ್ಲೋಪ್ರೀತಿಸುವ ಹೃದಯಕೆನೋವುಣಿಸಿರಬೇಕು…ಅಕಾಲದಲ್ಲಿ ಆಕಾಶ್ಆರ್ಭಟಿಸಿ ಭೋರ್ಗರೆದುಹೀಗೆ ಸುರಿಯಬೇಕಾದರೆ…ಸದ್ದಿಲ್ಲದೇ ಒಡೆದಎದೆ ತುಣುಕುಗಳುಮುಗಿಲಲಿ ಶೋಕಗೀತೆನುಡಿಸುತಿವೆ…. ಯಾರೋ ಎಲ್ಲೋಹೂವಂತ ಮನಸನುಮಾತಿನ ಮುಳ್ಳುಗಳಿಂದಚುಚ್ಚಿ ನೋಯಿಸಿರಬೇಕು…ಹೆಪ್ಪುಗಟ್ಟಿದ ದುಃಖಕಪ್ಪು ಮೋಡದ ಒಡಲಬಗೆದು ಭೋರೆಂದುಭುವಿಯ ಅಪ್ಪುತಿದೆ… ಯಾರೋ ಎಲ್ಲೋಸ್ನೇಹ ತುಂಬಿದ ಕಂಗಳಿಗೆಅಪಮಾನ  ಆಪಾದನೆಪಟ್ಟಿ ಕಟ್ಟಿರಬೇಕು….ಗರಬಡೆದ ಮುಗಿಲೂ ದುಃಖಿಸಿಬಿಕ್ಕಿಸಳುತ ಮುತ್ತುಮಳೆಸುತ್ತ ಸುರಿಸುತಿದೆ ನೋಡು.. ತಪ್ಪು ಮಾಡದ ಜೀವಬಿಟ್ಟ ಬಿಸಿಯುಸಿರ ಕಾವಿಗೆಸುಟ್ಟು ಸುಡುವ ಸೂರ್ಯನೇ  ನಲುಗಿ ಮರೆಯಾಗಿ ಹೋದ….ಹೂಹೃದಯ ಒಡೆದು ಚೂರಾಗಿದೆಬಿರುಮಾತಿನ ಬಾಣಗಳಿಗೆ…ಪ್ರೀತಿಸಿದ ತಪ್ಪಿಗೆ….. ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..” Read Post »

ಕಾವ್ಯಯಾನ

ಶ್ರೀನಿವಾಸ್‌ ಕೆ ಎಂ ಕವಿತೆ-ಸಂಕ್ರಮಣ

ಕಾವ್ಯ ಸಂಗಾತಿ ಶ್ರೀನಿವಾಸ್‌ ಕೆ ಎಂ ಸಂಕ್ರಮಣ ಬುವಿ ಬಾನ ನಡುವೆಯೂಅವಿನಾಭಾವದ ಬಿಡಿಸಲಾರದ  ನಂಟುದಕ್ಷಿಣದ ಪಂಥದಿಂದ ಉತ್ತರದ ಕಡೆಪಥ ಬದಲಿಸುವ ರವಿಯ ಸಂಕ್ರಮಣ. ಕತ್ತಲೆ ಜಗತ್ತು;ಬೆಳದಿಂಗಳ ಒನಪುತಾರೆಗಳ ನಡುವೆ;ಚಂದಿರನ ಸಖ್ಯಪಿಸುಗುಡುವ ಗಾಳಿ;ಮೈ ಕೊರೆವ ಚಳಿ ನಿನ್ನದೆ ಒಲವ ಬೆಳದಿಂಗಳು; ಸಂಕ್ರಮಣದ ಸುಗ್ಗಿಮಾಗುವುದು ಎಂದರೆ;ಅನುಭವದ ಹದ ಬೆರೆತಹಬೆಯಾಡುವ ಮುದ್ದೆ,ಕಾಳು-ಕಡ್ಡಿ,  ಭತ್ತ-ರಾಗಿಒಪ್ಪ ಓರಣ; ರಾಶಿಯ ನಡುವೆ  ನಗುವಮಾಮರದ ಚಿಗುರು.  ಮಾಗಿ ಕಳೆಯೆ,ನವುರಾದ ಭಾವಗಳ;ಉಣ ಬಡಿಸುವ ಬುತ್ತಿತೆರೆದಷ್ಟು  ಸವಿಯಲು; ಅನುಭವದ ಸ್ವಾದ!ನಿಸರ್ಗದ ಅದ್ಭುತ ಚಣ; ಅದೇ ಸುಗ್ಗಿ ಸಂಕ್ರಮಣ ಶ್ರೀನಿವಾಸ ಕೆ ಎಂ

ಶ್ರೀನಿವಾಸ್‌ ಕೆ ಎಂ ಕವಿತೆ-ಸಂಕ್ರಮಣ Read Post »

ಕಾವ್ಯಯಾನ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಸದ್ದಿಲ್ಲದ ಬಂದೈತಿ” ಸದ್ದಿಲ್ಲದ ಬಂದೈತಿ ಈ ಸಂಕ್ರಾಂತಿತರಲಿ ಪ್ರತಿ ಜೀವಿಗೂ ಸುಖಶಾಂತಿಬನ್ನಿ ನೂಕೋಣ ನಮ್ಮೆಲ್ಲ ನೋವಪ್ರತಿ ಮನದಾಗೂ ಅರಳಲಿ ಹೂವ ಎಳ್ಳು ಬೆಲ್ಲವ ಸವಿಯೋಣ ಕೂಡಿನಾಕು ಒಳ್ಳೊಳ್ಳೆ ಮಾತುಗಳ ಆಡಿಸುಗ್ಗಿ ಮಾಡೋಣ ಹಿರಿ ಹಿರಿ ಹಿಗ್ಗಿಹೊಟ್ಟ್ತುಂಬ ಉಣ್ಣೋಣ ಹಾಲ್ಹುಗ್ಗಿ ನೇಸರ ಬದಲಿ ಮಾಡ್ಯಾನೋ ದಿಕ್ಕಬಲ್ಲವರಾರಯ್ಯ ಆ ದೇವರ ಲೆಕ್ಕಈ ಸಂಕ್ರಾಂತಿ ಕರಿಯ ಕಟ್ಟು ಹಬ್ಬನೋಡಬೇಕ ಮ್ಯಾಲೇರಿಸಿ ಹುಬ್ಬ ಹಳ್ಳಿಯ ಹಾದಿ-ಬೀದೆಲ್ಲ ಸಿಂಗಾರಬಿತ್ತಿ ಬೆಳೆದಾರೋ ಬಗಸಿ ಬಂಗಾರಮನಿ ಮುಂದ ಬಿಡಿಸಿ ರಂಗೋಲಿಮೈ ಮರೆತಾರ ಖುಷಿಯ ಗುಂಗಲ್ಲಿ ಬನ್ನಿ ಕುಣಿಯೋಣ ಮೈ ಚಳಿ ಬಿಟ್ಟಭಗವಂತನ ಮ್ಯಾಲ ನಂಬಿಕಿ ಇಟ್ಟನೋಡಲಾಕತ್ಯಾನು ಕುಂತ ಮ್ಯಾಲಅವಗ ಒಪ್ಪಿಸಿವ್ನಿ  ನನ್ನೆರಡು ಸಾಲ ಎಮ್ಮಾರ್ಕೆ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ” Read Post »

ಕಾವ್ಯಯಾನ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” ಮೈ ನಡುಗುವ ತಂಪುಗಾಳಿಯುಕಂಪ ಸೂಸುತ್ತಿತ್ತು ಅದು…ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು. ಹಚ್ಚಹಸುರಿನ ಪಚ್ಚೆಪೈರಿನಬೆಳೆಯ ನೋಡುತ ಕೋಗಿಲೆಕೂಗುತ್ತಿತ್ತು. ಬರುವ ಸಂಕ್ರಾಂತಿಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು. ಉಡಿತುಂಬಿದ ಧರೆಮುಡಿಗೇರಿದ ಫಸಲುಮುತ್ತಿಕ್ಕುವ ಚಳಿ ತಾ….ಮುನುಗುತ್ತಾ ಸುಗ್ಗಿಯಹಾಡಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕುಎಂದು ದೇವರ ಬೇಡುತ್ತಿತ್ತು. ತಳಿರು ತೋರಣ ಕಟ್ಟುತಚಾಮರ ಬೀಸಿದೆ ಮಾಮರ.ಕರಗದಿರಲಿ ಅನ್ನದಾತನ ಕನಸುಈ ವರುಷ ಬರದೇ ಇರಲಿ ಬರ. ಹಸನಾಗಿರಲಿ ಅನ್ನದಾತನ ಮನಸುಹರಿದೋಗಿ ಬಿಡಲಿ ಈ ವರುಷ.ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು. ಆ ಪಥ ಬದಲಿಸಿ ಈ ಪಥದಲಿಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿಕತ್ತೆ.ಕಪ್ಪೆ.ಗೋವು.ಮಾವುಯಾವುದೇ ವಾಹನ ಏರುಮಡಿವಾಳರ ಮನೆಯಲ್ಲೇ ವಾಸವಿರು  ಮಡಿಯುಳ್ಳವರ ಮನೆಯಲ್ಲೇ ಮಲಗು  ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತವಾಗಿರಲು ಬಂದುಬಿಡುಸಂಕ್ರಾಂತಿ ಬಾಡದಿರಲಿಅನ್ನದಾತನ ಮುಖದ ಕಾಂತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” ಬಂದಿತೋ ಬಂದಿತು ಮೊದಲ ಹಬ್ಬಸರಿಸಿ ಎಲ್ಲರ ಮನದ ಮಬ್ಬಸವಿಯಲು ಕರೆಯಿತು ಸಿಹಿ ಕಬ್ಬಒಟ್ಟಿಗೆ ಆಡೋಣ ಎತ್ತರದ ದಿಬ್ಬ ದ್ವೇಷದ ಯೋಚನೆ ಎಂದಿಗೂ ಸಲ್ಲಒಟ್ಟಿಗೆ ಸವಿಯೋಣ ಎಳ್ಳು ಬೆಲ್ಲಸ್ನೇಹ ಸಂಪಾದಿಸೋಣ ಮೆಲ್ಲ ಮೆಲ್ಲಪ್ರೀತಿಯಲಿ ಸಿಹಿ ಮಾತಾಡೋಣ ಎಲ್ಲಾ ಉತ್ತರಾಯಣದ ಪುಣ್ಯಪರ್ವ ಕಾಲವಿದುಮಕರ ಸಂಕ್ರಮಣದ ಜ್ಯೋತಿಯಿದು.ಸೂರ್ಯದೇವನ ಕರುಣೆ ನಮಗೆಂದುಮನುಕುಲದ ಉನ್ನತಿಗೆ ಸಹಕರಿಸೆಂದು ಮಾನವರಲ್ಲಿ ತುಂಬಿರಲಿ ಪ್ರೀತಿ ಶಾಂತಿಮನದಿಂದ ದೂರಗಲಿ ಕಲ್ಮಶದ ಬ್ರಾಂತಿಸಾದಿಸಲು ಬೇಕಿದೆ ಸ್ವಲ್ಪ ಕ್ರಾಂತಿಅದಕಾಗಿ ಬಂದಿಹುದು ಮಕರ ಸಂ…..ಕ್ರಾಂತಿ. ದಬ್ಬಾಳಿಕೆ ಕಂಡರೆ ವಿರೋಧವಿರಲಿಲಂಚದ ಅಧಿಕಾರಕ್ಕೆ ತಲೆ ಬಾಗದಿರಲಿಪ್ರತಿ ಹೆಜ್ಜೆಯಲಿ ನಮ್ಮತನದ ದೃಢತನವಿರಲಿದಿಟ್ಟತನದ ಬದುಕು ಎಂದೆಂದೂ ಸಾಗುತಿರಲಿ. ಲತಾ ಎ ಆರ್ ಬಾಳೆಹೊನ್ನೂರು.

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ”

ಕಾವ್ಯ ಸಂಗಾತಿ ಗೀತಾ ಆರ್‌ “ಸುಗ್ಗಿ ಸಂಕ್ರಾಂತಿ” ಹೊಸ ವರುಷದ ಹೊಸತುಬೆಳೆ ಹರುಷದಲಿ….ಸುಗ್ಗಿ ಸುಗ್ಗಿ ಸಂಭ್ರಮವುಮನೆಯಲಿ ಸಡಗರವು….ಕಷ್ಟವೆಂಬ ಕಹಿಎಳ್ಳು ಮರೆವಕಬ್ಬು ಬೆಲ್ಲದ ಸವಿಯಲಿ…ಸೂರ್ಯ ಪಥ ಬದಲಿಸುವಸಂಚಲನ ಕಾಲಚಕ್ರದಲಿ…ತುಂಬಿರಲಿ ಸುಖ ಸಂತೋಷಮಕರ ಸಂಕ್ರಾಂತಿಯಲಿ….ರಂಗೋಲಿಯ ಬಣ್ಣಗಳಲ್ಲಿಪಚ್ಚೆ ತಳಿರುತೋರಣದಲಿ…ಜೀವನದ ನೋವುಗಳೆಲ್ಲಾಮರೆವ ನಾವು ಬಾಳಿನಲ್ಲಿ….ಸ್ನೇಹ ಪ್ರೀತಿ ಸಂಬಂಧಗಳುಇರಲಿ ಸಾಮರಸ್ಯದಲಿ….ಆಯುಷ್ಯ ಆರೋಗ್ಯ ಆನಂದಪ್ರಾರ್ಥಿಸು ದೇವರಲಿ….ಧನ ಧಾನ್ಯ ಸಂಪತ್ತು ಸಮೃದ್ಧಿಏಲ್ಲಾರ ಬದುಕಿನಲಿ….ಸುಖ ಶಾಂತಿ ನೆಮ್ಮದಿ ಸಿಗಲಿಎಲ್ಲಾರಿಗೂ ಸುಗ್ಗಿಯಲಿ…ಸಂಭ್ರಮಿಸಿರಿ ಏಲ್ಲಾರೂಮಕರ ಸಂಕ್ರಾಂತಿಯಲಿ….  ಗೀತಾ ಆರ್.

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ” Read Post »

You cannot copy content of this page

Scroll to Top