“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ
“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ
“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ Read Post »
“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ
“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ Read Post »
ಸುವಿಧಾ ಹಡಿನಬಾಳ
ಬದಲಾದ ಕಾಲಘಟ್ಟದಲ್ಲಿ
ವಿದ್ಯಾರ್ಥಿ – ಶಿಕ್ಷಕರ ಸಂಬಂಧ
ಮತ್ತು ಪಾಲಕರ ಮನಸ್ಥಿತಿ
ಬದಲಾದ ಕಾಲಘಟ್ಟದಲ್ಲಿ ವಿದ್ಯಾರ್ಥಿ – ಶಿಕ್ಷಕರ ಸಂಬಂಧ ಮತ್ತು ಪಾಲಕರ ಮನಸ್ಥಿತಿ – ಲೇಖನ ಸುಧಾಹಡಿನಬಾಳ Read Post »
ಶಿಕ್ಷಣ ಸಂಗಾತಿ
ಭಗವತಿ ( ಶ್ರೀಮತಿ ಅರುಣ ಉದಯಭಾಸ್ಕರ್)
ರಾಷ್ಟ್ರೀಯ ಶಿಕ್ಷಣ ನೀತಿ
ಅರುಣ ಉದಯಭಾಸ್ಕರ್-ರಾಷ್ಟ್ರೀಯ ಶಿಕ್ಷಣ ನೀತಿ Read Post »
ಶಿಕ್ಷಣ ಸಂಗಾತಿ
ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ
ಶಿಕ್ಷಣ ಸಂಗಾತಿ
ಡಾ. ದಾನಮ್ಮ ಝಳಕಿ
ದೇಶಿಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣ ನೀತಿ  Read Post »
ವಿಶೇಷ ಲೇಖನ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ
ಡಾ. ದಾನಮ್ಮ ಚ ಝಳಕಿ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ Read Post »
ಲೇಖನ ಇಂದಿನ ಶಿಕ್ಷಕ ಸುಮಾ ಕಿರಣ್ ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು ಶಾಲೆಗಳಲ್ಲಿ ಬೆಂಚು, ಕುರ್ಚಿಯ ವ್ಯವಸ್ಥೆ ಇರದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪದ್ಧತಿ ಇತ್ತು. ಬಹುಶಃ ಇದಕ್ಕೆ ಕಾರಣ ವಿದ್ಯಾರ್ಥಿಗಳಾದ ನಾವು ಅಧ್ಯಾಪಕರ ಸರಿ ಸಮಕ್ಕೆ ಕುಳಿತುಕೊಳ್ಳದೆ ವಿನಯ, ವಿಧೇಯತೆಯನ್ನು ರೂಡಿಸಿಕೊಳ್ಳಲಿ… ಎಂದಿರಬಹುದೇನೊ! ಹಾಗೆಯೇ ನಮ್ಮ ಅಧ್ಯಾಪಕರ ಬಗೆಗೆ ಅಪಾರ ಗೌರವ, ಪ್ರೀತಿ, ಭಯ-ಭಕ್ತಿ ಎಲ್ಲವೂ ತುಂಬಿರುತ್ತಿತ್ತು. ಅಧ್ಯಾಪಕರೊಂದಿಗೆ ವಾದ ಮಾಡುವುದಿರಲಿ; ಅಧ್ಯಾಪಕರು ಅಷ್ಟು ದೂರದಲ್ಲಿ ಕಂಡರೂ ಸಾಕು ನಮ್ಮ ತೊಡೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಅಧ್ಯಾಪಕರು ನೀಡುತ್ತಿದ್ದ ಶಿಕ್ಷೆಗಳು ಕೂಡ ಅಷ್ಟೇ ಕಠಿಣವಾಗಿ ಇರುತ್ತಿತ್ತು. ಇನ್ನೊಂದು ಬಾರಿ ಅಂತಹ ತಪ್ಪು ಮಾಡದಂತೆ ಸದಾ ಎಚ್ಚರಿಸುವ ರೀತಿಯಲ್ಲಿ ಶಿಕ್ಷೆಗಳು ಇರುತ್ತಿದ್ದವು. ಅಧ್ಯಾಪಕರ ಬಗ್ಗೆ ಕೇವಲ ನಮಗೆ ಮಾತ್ರವಲ್ಲ ಮನೆ ಮಂದಿ, ಊರವರಿಗೆಲ್ಲ ಗೌರವ ಭಾವ. ಮನೆಯಲ್ಲಿ ನಾವೇನಾದರೂ ಅಧ್ಯಾಪಕರ ಬಗ್ಗೆ ದೂರು ಹೇಳಿದ್ದೆ ಆದರೆ, ಮನೆಯವರಿಂದ ನಮಗೇ ನಾಲ್ಕು ಗುದ್ದು ಬಿದ್ದು ನಮ್ಮ ಬಾಯಿ ಮುಚ್ಚುತ್ತಿತ್ತು. ಎಲ್ಲಿಯಾದರೂ ಅಧ್ಯಾಪಕರನ್ನು ನಮ್ಮ ಪಾಲಕರು ಕಂಡದ್ದೇ ಆದರೆ, ಅವರ ಬಾಯಿಯಿಂದ ಬರುತ್ತಿದ್ದ ಒಂದೇ ಪದ “ಗಂಡಿಗ್ ಸಮ ನಾಲ್ಕು ಹಾಕಿ ಮೇಷ್ಟ್ರೇ, ಹೇಳಿದ್ದ್ ಕೆಂತಿಲ್ಲ “. ಇನ್ನು ಅಧ್ಯಾಪಕ ವೃತ್ತಿ ಎನ್ನುವುದು ಗೌರವಕ್ಕೆ ಪಾತ್ರವಾದ ವೃತ್ತಿಯಾಗಿತ್ತು. ಶ್ರೇಷ್ಠ ವೃತ್ತಿ ಎಂಬ ಹೆಗ್ಗಳಿಕೆ ಕೂಡ ಇತ್ತು. “ಶಿಕ್ಷಕರು” ಎಂದರೆ ಊರಿನಲ್ಲೆಲ್ಲ ಒಂದು ಘನತೆ ಇತ್ತು. ಅವರ ಮಾತಿಗೆ ಊರವರು ಬೆಲೆ ಕೊಡುವ ಜೊತೆಗೆ ಶಿಕ್ಷಕರು ಊರಿನಲ್ಲಿರುವ ಎಲ್ಲರ ಮನೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿರುತ್ತಿದ್ದರು. ಶಿಕ್ಷಕರಿಗೆ ದೊರಕುತ್ತಿದ್ದ ಈ ಪರಿಯ ಪ್ರೀತಿ, ಗೌರವಗಳಿಂದಾಗಿ ಮುಂದಿನ ತಲೆಮಾರಿನವರೂ ಶಿಕ್ಷಕರಾಗುವ ಕನಸು ಕಾಣುತ್ತಿದ್ದರು ಎಂದರೆ ತಪ್ಪಾಗಲಾರದೆನೋ? ಮಿತ್ರರೇ, ಈಗ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅವಲೋಕಿಸೋಣವೇ? ಅಧ್ಯಾಪಕರೊಂದಿಗೆ ವಾದಿಸುವ, ಅಧ್ಯಾಪಕರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವ ಇಂದಿನ ವಿದ್ಯಾರ್ಥಿಗಳಿಂದ ಅದ್ಯಾವ ಪರಿಯ ವಿನಯ ವಿಧೇಯತೆಗಳನ್ನು ನಿರೀಕ್ಷಿಸಲು ಸಾಧ್ಯ ನೀವೇ ಹೇಳಿ! ಇನ್ನು ತಮ್ಮ ಮಕ್ಕಳ ಶಿಕ್ಷಕರ ಬಗ್ಗೆ ಪಾಲಕರಿಗೇ ಕಿಂಚಿತ್ತು ಗೌರವವಿಲ್ಲ. ಮಕ್ಕಳ ಎದುರಿನಲ್ಲಿ ಅವರ ಶಿಕ್ಷಕರನ್ನು ಏಕವಚನದಲ್ಲಿ ಹೀಯಾಳಿಸುವಾಗ ಮಕ್ಕಳಿಗಾದರೂ ಗೌರವ ಅದೆಲ್ಲಿಂದ ಮೂಡಬೇಕು? ಪಾಲಕರಾದ ನಾವು, ನಮ್ಮ ಹಿರಿಯರು ಅದ್ಯಾವ ಪರಿಯ ವಿನಯದಿಂದ ನಮ್ಮ ಶಿಕ್ಷಕರೊಂದಿಗೆ ವ್ಯವಹರಿಸುತ್ತಿದ್ದರು ಎಂಬುದನ್ನು ಈ ಕ್ಷಣಕ್ಕೆ ಮರತೇ ಬಿಟ್ಟಿರುತ್ತೇವೆ. ಇನ್ನು ತಮ್ಮ ಶಾಲಾ ಮಕ್ಕಳಿಗೆ ಹೊಡೆಯುವುದಂತಿರಲಿ; ಗಟ್ಟಿಯಾಗಿ ಗದರಿದರೂ ಅದೊಂದು ಅಪರಾಧದಂತೆ ಕಂಡು, ಅಧ್ಯಾಪಕರು ಮಹಾನ್ ಅಪರಾಧಿಗಳಂತೆ ಬಿಂಬಿತರಾಗುತ್ತಾರೆ. “ನನ್ನ ಮಗುವಿಗೆ ನಿಮ್ಮ ಶಿಕ್ಷಕರು ಗದರಿದರಂತೆ? ಅವನು ಶಾಲೆಗೆ ಬರಲು ಒಪ್ಪುತ್ತಿಲ್ಲ” ಎಂದು ಶಾಲಾ ಪ್ರಾಂಶುಪಾಲರೊಂದಿಗೆ ದೂರುವ ಪಾಲಕರು ಕ್ಷಣ ಕಾಲ ಹಿಂತಿರುಗಿ ನೋಡಿದ್ದರೆ… ಕೋಲಿನಲ್ಲಿ ಬಾಸುಂಡೆ ಬರುವಂತೆ ಬಡಿದಾಗಲೂ ಚಕಾರವೆತ್ತದ ನಮ್ಮ ಪಾಲಕರು ಕಣ್ಮುಂದೆ ತೇಲುತ್ತಾರೆ. ಇಂದಿನ ಮಕ್ಕಳಿಗೆ ಅವರು ತಪ್ಪು ಮಾಡಿದಾಗ ತಿದ್ದಲು ಅವಶ್ಯಕವಾದ ಸಣ್ಣ ಮಟ್ಟದ ದಂಡನೆ ಪಾಲಕರಿಂದ ಯಾ ಶಿಕ್ಷಕರಿಂದ ಆಯಾ ಕಾಲಕ್ಕೆ ವಿಧಿಸಲ್ಪಡದೆಯೇ ಇರುವುದರಿಂದಲೇ ನಾಗರಿಕ ಸಮಾಜದಲ್ಲಿ ತಪ್ಪಿನ ಮೇಲೆ ತಪ್ಪು ಎಸಗುತ್ತಾ ಕಾನೂನಿನ ಕುಣಿಕೆಗೆ ಸಿಲುಕಿ ಪೋಲೀಸರಿಂದ ಹೊಡೆತ ತಿನ್ನುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ! ಮಕ್ಕಳಿಗೆ ಹೊಡೆಯಬಾರದು, ಬೈಯಬಾರದು… ಇದನ್ನೆಲ್ಲ ಹೇಗೋ ಶಿಕ್ಷಕರು ಸಹಿಸಿಯಾರು. ಆದರೆ, ಬೋರ್ಡ್ ಮೇಲೆ ಬರೆದ ನೋಟ್ಸ್ ಅನ್ನು ಮಗು ಬರೆಯದಿದ್ದಾಗಲೂ ಅದು ಶಿಕ್ಷಕರದ್ದೆ ತಪ್ಪು! ಮಗುವಿನ ನೋಟ್ಸ್ ಪೂರ್ಣಗೊಳಿಸುವುದು, ಮಗು ಉತ್ತಮ ಅಂಕ ಗಳಿಸುವುದು… ಎಲ್ಲದಕ್ಕೂ ಹೊಣೆಗಾರರು ಶಿಕ್ಷಕರೇ! ಗಮನಿಸಿ – ಮನೆಯಲ್ಲಿ ಇರುವ ನಮ್ಮ ಒಂದೇ ಮಗುವಿನ ನೋಟ್ಸ್ ಅನ್ನು ಪೂರ್ಣಗೊಳಿಸುವಲ್ಲಿ ಸಹಕರಿಸಲು ಆಗದ ಪಾಲಕರು ನಾವು. ಅದೇ ಒಬ್ಬ ಶಿಕ್ಷಕ ತರಗತಿಯಲ್ಲಿರುವ ನಲವತ್ತು ವಿದ್ಯಾರ್ಥಿಗಳನ್ನು ನೋಡಬೇಕು. ಅದೂ ಕೇವಲ ಒಂದೇ ತರಗತಿಯಲ್ಲ! ಅಂತಹ ಕನಿಷ್ಠ ಆರು ತರಗತಿಗಳನ್ನು ಪ್ರತಿನಿತ್ಯ ಗಮನಿಸಬೇಕು ಎಂದಾದರೆ ನಿಜಕ್ಕೂ ಶಿಕ್ಷಕರ ಬಗ್ಗೆ ಕರುಣೆ ಮೂಡುವುದಿಲ್ಲವೇ? ಮಿತ್ರರೇ, ಒಬ್ಬ ಶಿಕ್ಷಕ ಕೂಡ ಎಲ್ಲರಂತೆ ಸಾಮಾನ್ಯ ಮನುಷ್ಯ! ತನ್ನ ವೃತ್ತಿಯ ಮೇಲಿನ ಗೌರವ, ಪ್ರೀತಿ, ಬದ್ಧತೆಯಿಂದ ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ನಗುನಗುತ್ತಾ ಎದುರಿಸುವ ಕಲೆಗಾರಿಕೆ ಶಿಕ್ಷಕನಿಗೆ ಕರಗತವಾಗಿರುತ್ತದೆ. ಹಾಗೆಂದು ಪಾಲಕರಾದ ನಾವು ಎಲ್ಲ ತಪ್ಪುಗಳನ್ನು ಶಿಕ್ಷಕರ ಕುತ್ತಿಗೆಗೆ ಕಟ್ಟಿ ನಿರಾಳವಾಗಿ ಇರಲು ಸಾಧ್ಯವೇ? ಖಂಡಿತ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಶಿಕ್ಷಣ ಸಂಸ್ಥೆಗಳ ಮೇಲೆ ಸುರಿದಿದ್ದೇವೆ. ಹಾಗೆಂದು ಶಿಕ್ಷಕರು ನಾವು ಬಯಸಿದಂತೆ ಇರಬೇಕು ಎಂಬುದು ಯಾವ ಪರಿಯ ನ್ಯಾಯ? ಕ್ಷಣ ಕಾಲ ಯೋಚಿಸಿ, ನೀವು ಮಹಾನಗರಗಳಲ್ಲಿ ಇದ್ದರೆ ಈ ಅನುಭವ ಖಂಡಿತ ನಿಮಗಾಗಿರುತ್ತದೆ. ನೀವು ವೃತ್ತಿ ನಿರತರಾಗಿದ್ದು ನಿಮ್ಮ ಒಂದು ಮಗುವನ್ನು ನೋಡಿಕೊಳ್ಳಲು ಆಯಾಗಳಿಗೆ ತಿಂಗಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಚೆಲ್ಲಿರುತ್ತೀರಿ. ಆದರೆ, ಒಬ್ಬ ಖಾಸಗಿ ಶಾಲಾ ಶಿಕ್ಷಕ/ಅಧ್ಯಾಪಕ ಇದಕ್ಕೂ ಕಡಿಮೆ ಸಂಬಳಕ್ಕೆ ಪ್ರತಿದಿನ ಪ್ರತಿ ತರಗತಿಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಧಾರಿಸಿ, ಅವರ ಎಲ್ಲ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿ, ಕ್ಷಣ ಕ್ಷಣಕ್ಕೂ ಅವರೆಡಗೆ ಕಾಳಜಿ ತೋರಿ, ಊಟದಿಂದ ಹಿಡಿದು ಪಾಠದವರೆಗೆ ಗಮನಿಸುತ್ತಾರೆ. ಅಂತಹ ಶಿಕ್ಷಕರ ಬಗ್ಗೆ ನಮಗದೆಷ್ಟು ಗೌರವ ಅಭಿಮಾನವಿರಬೇಕು. ಈಗಲಾದರೂ ಈ ಬಗ್ಗೆ ಯೋಚಿಸೋಣವೇ?? ಸುಮಾ ಕಿರಣ್
ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು. ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”. ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ! *****************************************
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ Read Post »
ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ. ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟ ಮುಖ್ಯವಾದರೂ ಆ ಸಂಸ್ಥೆಗಳ ಮೂಲಕ ದೊರೆಯಬಹುದಾದ ಉದ್ಯೋಗಾವಕಾಶ ಹಾಗೂ ಸಂಬಳದ ಪ್ಯಾಕೇಜ್ ಬಹಳ ಮುಖ್ಯವಾಗುತ್ತದೆ.ಈ ಕಾರಣದಿಂದಲೇ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣ ವಿದ್ಯಾಲಯಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಿರುವುದು.ಪ್ರತಿವರ್ಷ ಸಮರೋಪಾದಿಯಲ್ಲಿ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುತ್ತಿರುವುದು.ಈ ಸೂತ್ರದಲ್ಲಿ ಗುರು ಇಲ್ಲದಿರುವುದುದನ್ನು ಗಮನಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ಮಹತ್ವವನ್ನು ಕಳೆದು ಕೊಳ್ಳುತ್ತಿರುವುದನ್ನು ಈ ಸಂಸ್ಥೆಗಳು ನಡೆಸುವ ಪರೀಕ್ಷೆಗಳು, ಗುರುಗಳ ಬದಲಾಗಿ ಕೋಚಿಂಗ್ ಸೆಂಟರುಗಳ ಗುರುವಲ್ಲದ ತರಬೇತುದಾರರ ಮೇಲೆ ಹೆಚ್ಚು ಅವಲಂಬಿತರಾಗುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತೆ ಮತ್ತೆ ಪುಷ್ಟೀಕರಿಸುತ್ತಿದ್ದಾರೆ. ಎರಡನೇ ಸೂತ್ರ ವಿದ್ಯಾಭ್ಯಾಸದ ಗುರಿಯನ್ನು ನಿರ್ಧರಿಸುತ್ತದೆ.ಅದೆಂದರೆ ಉದ್ಯೋಗ.ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರಿಂದ ದೊರೆಯಬಹುದಾದ ಸಂಬಳದ ಪ್ಯಾಕೇಜಿನ ಮೇಲೆ ಅದು ನಿರ್ಧರಿಸಲ್ಪಡುತ್ತದೆ.ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಿದ್ಯಾರ್ಥಿ ಪಡೆಯುವ ಅಂಕಗಳು, ಅಗತ್ಯ ಸಂದರ್ಭದಲ್ಲಿ ಮಾಡಬಹುದಾದ ವಶೀಲಿ.ಇಲ್ಲಿಯೂ ಕೂಡ ಗುರುವಿನ ಮಾತೇ ಇಲ್ಲ. ಇಂತಹ ಅನೇಕ ಸೂತ್ರಗಳನ್ನು ಸಿದ್ಧಪಡಿಸುತ್ತ ಹೋಗಬಹುದು.ಪ್ರಯತ್ನಿಸಿ ನೋಡಿ.ಆದರೆ ಎಲ್ಲಿಯೂ ಗುರುವಿನ ಅಗತ್ಯತೆ ಕಂಡುಬರದಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ.ಆಚಾರ್ಯದೇವೋ ಭವ ಎಂದು ಗುರುವನ್ನು ದೈವತ್ವಕ್ಕೇರಿಸಿದ ನಮ್ಮ ನಾಡಿನಲ್ಲಿ ಹೀಗೆ ಗುರುವಿನ ಸ್ಥಾನ ಗೌಣವಾಗಲು ಆರಂಭವಾದದ್ದು ತೀರ ಇತ್ತೀಚಿನ ವರ್ಷಗಳಲ್ಲಿ. ನಮ್ಮ ದೇಶದಲ್ಲಿ ಗುರುಕುಲ ಪದ್ಧತಿಯಲ್ಲಿ ಮಾತ್ರಇದ್ದ ಶಿಕ್ಷಣ ನಿಲುಕುತ್ತಿದ್ದುದು ಕೂಡ ಸಮಾಜದ ಉನ್ನತ ವರ್ಗಕ್ಕೆ ಸೇರಿದ ಕೆಲ ಗಣ್ಯಾತಿಗಣ್ಯರಿಗೆ ಮಾತ್ರ. ಕಾಲಾಂತರದಲ್ಲಿ ಆದ ಸಾಮಾಜಿಕ ಬದಲಾವಣೆಗಳಿಂದ, ಶೈಕ್ಷಣಿಕ ಕ್ರಾಂತಿಯಿಂದ. ಶಿಕ್ಷಣ ಸಾರ್ವತ್ರಿಕವಾದದ್ದು ಆಧುನಿಕ ಭಾರತದ ಅತಿ ದೊಡ್ಡ ಸಾಧನೆ. ಆದರೆ ಸ್ವಾತಂತ್ರ್ಯಾನಂತರ ಆದ ಆರ್ಥಿಕ ಬದಲಾವಣೆಯ ಬಿರುಗಾಳಿಯಲ್ಲಿ ಶಿಕ್ಷಣ ಕ್ಷೇತ್ರವೂ ಸಿಲುಕಿ ಅದರ ವ್ಯಾಪಾರೀಕರಣವಾದದ್ದರಿಂದಲೇ ‘ಗುರು’ಸ್ಥಾನ ಈ ಹಿಂದಿನ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿತು.‘ ಹಿಂದೆ ಗುರುವಿದ್ದ; ಮುಂದೆ ಗುರಿ ಇತ್ತು. ಸಾಗುತಿತ್ತು ಧೀರರದಂಡು. ಇಂದು ಹಿಂದೆ ಗುರುವಿಲ್ಲ; ಮುಂದೆ ಗುರಿ ಇಲ್ಲ. ಸಾಗುತಿಹುದು ರಣಹೇಡಿಗಳ ಹಿಂಡು’ ಎಂಬ ನುಡಿ ಶಿಕ್ಷಣ ಕ್ಷೇತ್ರಕ್ಕೆ ಬಿದ್ದ ಕೊಡಲಿಪೆಟ್ಟಿನಿಂದ ಘಾಸಿಗೊಂಡು ಆಡಿದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ರಣಹೇಡಿತನವನ್ನೂ ಮೀರಿಸಿದ ಶಿಕ್ಷಣ ವ್ಯವಸ್ಥೆಗೆ ನಮ್ಮ ದೇಶ ಸಾಕ್ಷಿಯಾಗುತ್ತಿದೆ. ಉನ್ನತ ಶಿಕ್ಷಣದ ದೇಗುಲಗಳಾಗಿದ್ದ ವಿಶ್ವವಿದ್ಯಾಲಯಗಳೂ ಅನೀತಿಯ ತಾಣಗಳಾಗುತ್ತಿವೆ. ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಈ ಪಿಡುಗು ಶಾಲೆ ಕಾಲೇಜುಗಳನ್ನೂ ಬಿಟ್ಟಿಲ್ಲ. ಇಂತಹ ವಾತಾವರಣದಲ್ಲಿ ನಲುಗುತ್ತಿರುವುದು ವಿದ್ಯೆಯೇ ಹೊರತು ಶಿಕ್ಷಕರಾಗಲೀ, ವಿದ್ಯಾರ್ಥಿಗಳಾಗಲೀ ಅಲ್ಲ. ಶಿಕ್ಷಕರಿಗೆ ಸಂಬಳ, ಭತ್ಯೆಗಳು, ಪರೀಕ್ಷಾ ಡ್ಯೂಟಿಗಳು, ಜೊತೆಗೆ ಒಂದಷ್ಟು ತರಗತಿಗಳಲ್ಲಿ ಪಾಠ ಇವಿಷ್ಟು ಶಿಕ್ಷಣ ವ್ಯವಸ್ಥೆಯಾಗಿ ಕಂಡರೆ ವಿದ್ಯಾಥಿಗಳಿಗೆ ಹಾಜರಿ ಹಾಗೂ ಪರೀಕ್ಷೆಗಳೇ ಶಿಕ್ಷಣ ವ್ಯವಸ್ಥೆಯಾಗಿವೆ. ಇದರಿಂದ ಸರಿಯಾದ ಶಿಕ್ಷಣ ಯಾವ ಹಂತದಲ್ಲೂ ದೊರೆಯದೇ ಇಡಿಯ ಶಿಕ್ಷಣ ವ್ಯವಸ್ಥೆ ಬಡವಾಗುತ್ತಿದೆ. ಅವ್ಯವಹಾರ, ಅನೈತಿಕತೆ ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು. ಪರೀಕ್ಷಾ ಗೊಂದಲಗಳು, ಪ್ರತಿವರ್ಷ ಕಾಡುವ ಪ್ರಶ್ನೆ ಪತ್ರಿಕೆ ಗೊಂದಲಗಳು, ಪರೀಕ್ಷೆಗೆ ಮುನ್ನವೇ ಅವುಗಳು ಬಯಲಾಗುವುದು, ಪರೀಕ್ಷಾ ನಂತರವೂ ಫಲಿತಾಂಶಗಳಲ್ಲಿ ಗೊಂದಲ, ಅವ್ಯವಹಾರಗಳು ಈ ವ್ಯವಸ್ಥೆಯನ್ನುಗುರುವಿನ ಹೊರತಾಗಿ ಬೇರೆ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆಳುತ್ತಿರುವುದನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಗುರು’ ಎಂಬ ಪದ ತನ್ನ ಗರಿಮೆಯನ್ನು ಕಳೆದುಕೊಂಡಿದೆ. ಕೇವಲ ಮೂರು ದಶಕಗಳ ಹಿಂದೆ ಗುರು-ಶಿಷ್ಯ ಸಂಬಂಧ ಭಯ-ಭಕ್ತಿಯ ಸಂಬಂಧವಾಗಿತ್ತು. ತಮ್ಮನ್ನು ಗೌರವಿಸುವ ಅಪಾರ ಶಿಷ್ಯವೃಂದ ಗುರುಗಳಿಗೆ ಇತ್ತು.ಇದು ಒಳ್ಳೆಯ ಶಿಕ್ಷಣ ವ್ಯವಸ್ಥೆಯ ಸೊಬಗು ಕೂಡ.ಗೌರವಕ್ಕೆ ಪಾತ್ರನಾಗುವ ಗುರು ಎಂದರೆ ಅವನು ತನ್ನ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ತನ್ನ ಶಿಷ್ಯವೃಂದಕ್ಕೆ ಸಲ್ಲಬೇಕಾದ ಸೇವೆಯನ್ನು ಸಲ್ಲಿಸಿದ್ದಾನೆ ಹಾಗೂ ಹೊಣೆಯನ್ನು ನಿಭಾಯಿಸಿದ್ದಾನೆ ಎಂದೇ ಅರ್ಥ. ಅದರಂತೆ ವಿದ್ಯಾರ್ಥಿಗಳೂ ಕೂಡ ಅಂತಹ ಗುರುವಿಗೆ ವಿಧೇಯರಾಗಿರುತ್ತಾರೆಂದರೆ ಅದು ಆ ಗುರುವೇ ಅವರಿಗೆ ನೀಡಿದ ಮಾರ್ಗದರ್ಶನದ ಮೂಲಕ ಎಂಬುದೂ ಕೂಡ ಸತ್ಯ. ಕಾಲ ಕಳೆದಂತೆ ಗುರು-ಶಿಷ್ಯ ಸಂಬಂಧದಲ್ಲಿ ಬದಲಾವಣೆ ಕಂಡು ಬರುತ್ತಪರಸ್ಪರ ಮಿತ್ರತ್ವದ ನೆಲೆಗೆ ಈ ಸಂಬಂಧವನ್ನು ತಂದು ನಿಲ್ಲಿಸಿತು.ಇದು ಕೂಡ ಬಹು ಸುಂದರವಾದ ಘಟ್ಟವೇ. ಏಕೆಂದರೆ ಆಜ್ಞಾಪಾಲಕ ವಿದ್ಯಾರ್ಥಿ ಸಂಸ್ಕೃತಿಯಿಂದ ಗೆಳೆತನಕ್ಕೆ ಒಗ್ಗಿಕೊಳ್ಳುವ ಸಖ್ಯ ಪರಂಪರೆ ಈ ಕಾಲದಲ್ಲೆ ಬೆಳೆಯಿತು.ಇತ್ತೀಚಿನ ದಿನಗಳಲ್ಲಿ ಇದೂ ಕೂಡ ಮಾಯವಾಗುತ್ತ ಎಲ್ಲವೂ ಕೇವಲ ವ್ಯಾವಹಾರಿಕ ನೆಲೆಗೆ ಬಂದು ನಿಂತಿರುವುದು ಶಿಕ್ಷಣ ವ್ಯವಸ್ಥೆಯ ಅರಾಜಕತೆಯನ್ನು ತೋರಿಸುತ್ತದೆ.ಇದಕ್ಕೆಲ್ಲ ಮುಖ್ಯ ಕಾರಣ ಈ ವ್ಯವಸ್ಥೆಯಲ್ಲಿ ಬದಲಾದ ಗುರುವಿನ ಸ್ಥಾನ ಮಾನ ಎಂದು ನನ್ನ ಅನಿಸಿಕೆ. ವಿದ್ಯಾರ್ಥಿಗಳಲ್ಲಿ ಆಶಿಸ್ತು ಹೆಚ್ಚುತ್ತಿದೆ. ವಿದ್ಯಾಲಯಗಳು ಅನೀತಿಯ ತಾಣಗಳಾಗುತ್ತಿವೆ ಎಂಬ ಹಳಹಳಿಕೆ ಕೇವಲ ಕ್ಲೀಷೆಯಾಗುತ್ತದೆ. ಈ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ವಿಧಿವತ್ತಾಗಿ ನೂಕಲು ಆರಂಭಿಸಿದ್ದು ಕೆಲ ದಶಕಗಳ ಹಿಂದಿನಿಂದಲೇ ಎಂಬುದು ನಮಗೆ ಅರಿವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬದಲಾಯಿಸುವ ಗೊಡವೆ ಆಡಳಿತವೂ ಸೇರಿದಂತೆಯಾರಿಗೂ ಬೇಡವಾದದ್ದು ಈ ದುರಂತಕ್ಕೆ ಕಾರಣ.ಈಗ ಹಿಂದಿರುಗಿ ಹೋಗಲಾರದಷ್ಟು ದೂರದ ದಾರಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕ್ರಮಿಸಿಯಾಗಿದೆ.ಆದ್ದರಿಂದ ಆರಂಭದಲ್ಲಿ ಹೇಳಿದ ಸೂತ್ರಗಳಿಗೆ ಪರ್ಯಾಯವಾಗಿ ಸೂತ್ರಗಳನ್ನು ನಾವು ಸಿದ್ಧಪಡಿಸಬೇಕು.ಅವು ಜ್ಞಾನ ಹಾಗೂ ಗುರುವನ್ನು ಒಳಗೊಂಡಂತೆ ಇರಬೇಕು.ಶಿಕ್ಷಣದ ಮೂಲ ಉದ್ದೇಶ ಜ್ಞಾನವೇ ಹೊರತು ಉದ್ಯೋಗವಲ್ಲ. ಆ ಜ್ಞಾನ ಗುರುಮುಖೇನ ಬರುವಂತಾಗಬೇಕು. ಮಾತ್ರವಲ್ಲದೇ ಗುರುವೂ ಕೂಡ ತನ್ನ ಸ್ಥಾನ ಹಾಗೂ ಹೊಣೆಗೆ ಬದ್ಧತೆಯನ್ನು ಹೊಂದುವಂತಿರಬೇಕು.ಈ ಮಾತನ್ನು ಕ್ಲಾಸ್‌ರೂಂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಬಹುದು.ಆದರೆಇಂದು ಶಿಕ್ಷಣ ಈ ಕ್ಲಾಸರೂಂ ಗೊಡವೆಯನ್ನು ದಾಟಿ ಅಂತರ್ಜಾಲದ ಮೂಲಕ ಯಥೇಚ್ಛವಾಗಿ ದೊರೆಯುತ್ತಿದೆ. ಇಲ್ಲಿ ಗುರು-ಶಿಷ್ಯ ಪರಂಪರೆಗಿಂತ ನೀಡಲ್ಪಡುವ ಸಮಯ ಹಾಗೂ ಜ್ಞಾನಾಧಾರಿತ ವ್ಯಾವಹಾರಿಕ ಹಾಗೂ ಕೇವಲ ಲಾಭಾಧಾರಿತ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗಿದೆ.ಒಟ್ಟಿನಲ್ಲಿ ಶಿಕ್ಷಣ ಎಂದರೆ ಒಳ್ಳೆಯ ಸಂಬಳ ತರುವ ಉದ್ಯೋಗಕ್ಕೆ ರಹದಾರಿ ಎಂಬ ಸಿದ್ಧಸೂತ್ರ ಇಂದು ಪ್ರಚಲಿತದಲ್ಲಿರುವುದು ದಿಟ. ಮೊಗೆದಷ್ಟೂದೊರೆಯುವ ಮಾಹಿತಿಯ ಮಹಾಪೂರದ ಇಂದಿನ ದಿನಗಳಲ್ಲಿ ಒನ್‌ಟುಒನ್ ಟೀಚಿಂಗ್ ಬಹುತೇಕವಾಗಿ ನಶಿಸುತ್ತಿದೆ.ಆದರೆ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ದಾರಿಗಳು, ಅವಕಾಶಗಳು, ಇಂದಿನ ವಿದ್ಯಾರ್ಥಿಗಳ ಅಪ್ರತಿಮ ಸಾಮರ್ಥ್ಯ ಮೊದಲಾದವುಗಳನ್ನು ಖಂಡಿತ ಕಡೆಗಣಿಸುವಂತಿಲ್ಲ. ಶಿಕ್ಷಣಕ್ಕೆ ಇಂದು ಅಂತಾರಾಷ್ಟೀಯ ಆಯಾಮ ದೊರೆತಿದೆ.ಎಲ್ಲ ಸಂದರ್ಭಗಳಲ್ಲೂ ಬಂಡವಾಳಶಾಹಿ, ವಸಾಹತುಶಾಹಿ ದಾಳಿಯನ್ನು ತೀವ್ರವಾಗಿ ಖಂಡಿಸುವ ನಾವು ಈ ಹೊಸ ಶಿಕ್ಷಣ ಆಯಾಮಕ್ಕೆ ಮಾತ್ರ ಬಂಡವಾಳಶಾಹಿಯೇ ಕಾರಣ ಎಂಬುದನ್ನೂ ಮರೆಯಬಾರದು. ಉತ್ತಮ ದರ್ಜೆಯ ಹಾಗೂ ವಿದೇಶದಲ್ಲಿ ಶಿಕ್ಷಣ ಉಳ್ಳವರಿಗೆ ಮಾತ್ರ ನಿಲುಕುತ್ತಿದ್ದ ಕಾಲ ಈಗ ಇಲ್ಲವಾಗಿದೆ.ಪ್ರತಿಭೆಗೆ ಸಲ್ಲಬೇಕಾದ ಪುರಸ್ಕಾರ ಸಲ್ಲುವ ಅವಕಾಶಗಳನ್ನೂ ಈ ಬಂಡವಾಳಶಾಹಿಯೇ ತೆರೆದಿದೆ.ಇದು ಸಧ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾಣ ಸಿಗುವ ಧನಾತ್ಮಕಗುಣ.ಅಂದ ಮಾತ್ರಕ್ಕೆ ವಿದೇಶೀ ಶಿಕ್ಷಣವೇ ಉನ್ನತ ಗುಣಮಟ್ಟದ್ದು ಎಂದಂತೂ ಅಲ್ಲ. ಭಾರತದಲ್ಲೂ ಇಂದು ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳಿವೆ. ಮಾತು ಬಂದು ನಿಲ್ಲುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೇ.ಗುರು ಮುಖ್ಯವಲ್ಲದ ಬದಲಾದ ಶಿಕ್ಷಣ ಸ್ವರೂಪದ ವಾಸ್ತವತೆಯನ್ನು ಒಪ್ಪಿಕೊಳ್ಳುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಅಗತ್ಯ ಹಾಗೂ ಅನಿವಾರ್ಯ ಕೂಡ. ***********************************
ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************
You cannot copy content of this page