ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಯುದ್ದಕಾಲೇ ವಿಪರೀತ ಬುದ್ದಿ. ನಮ್ಮ ಕಡಿ ಬಿಸಿಲಿನ ಕಾವು ಏರಲತರ ಆ ಕಡಿ ಯುದ್ದದ ಕಾವು ಎರಲತದ.ಯುದ್ದ ಅಂದ್ರ ನಾವು ಸಣ್ಣವರಾಗಿದ್ದಾಗ ಪುಸ್ತಕದಾಗ ಓದಿದ್ದು ಒಬ್ಬ ರಾಜ ಮತ್ತೊಬ್ಬ ರಾಜನ ಮ್ಯಾಲ ಯುದ್ದ ಮಾಡಿ ಅವನ ರಾಜ್ಯ ವಶಪಡಿಸಿಕೊಳ್ಳೊದು ಅಂತ ಓದಿದ್ದೆವು. ಕಲ್ಪನೆ ಮಾಡಕೊಳ್ಳಕೊ ಆಗದ ವಯಸ್ಸು ಅದು. ಆಮ್ಯಾಲ ರಾಮಾಯಣ ಮಹಾಭಾರತ ಧಾರಾವಾಹಿಗಳದಾಗ ಯುದ್ದ ಅಂದ್ರ ಹಿಂಗಿರತದ ಅಂತ ತಿಳಕೊಂಡೆವು.ಆ ಕಡೆಯಿಂದ ಸಾವಿರಾರು ಜನ ಈ ಕಡಿಯಿಂದ ಸಾವಿರಾರು ಜನ , ಯಾರು ಯಾರಿಗಿ ಹೊಡಿಲತಾರ ಕಡಿಲತಾರ ಎಂದು ತಿಳಕೊಳ್ಳೊವಷ್ಟರಲ್ಲಿ ಯುದ್ದ ಮುಗಿದಿರತಿತ್ತು. ಕತ್ತಿ , ಚೂರಿ , ಕೊಡಲಿ ಇಂತಹ ಆಯುಧಗಳಿಂದ ಯುದ್ದ ಮಾಡತಾರ ಅಂದಕೊಂಡಿದ್ದೆವು.ಪೌರಾಣಿಕ ಸಿನಿಮಾದೊಳಗ , ಇತಿಹಾಸ ತಿಳಸೋ ಸಿನಿಮಾದೊಳಗೆಲ್ಲ ಇಂತಹ ಯುದ್ದ ತೊರಿಸ್ತಿದ್ರು. ಮತ್ತ ನಮೂನಿ ನಮೂನಿ ಬಿಲ್ಲು ಬಾಣಗಳು.ರಾಮಾಯಣ ಮಹಾಭಾರತ ಧಾರಾವಾಹಿದೊಳಗ ಅದೇಷ್ಟು ನಮೂನಿ ಬಾಣಗಳು ತೊರಿಸ್ತಿದ್ರು ಅಂದ್ರ , ಬೆಂಕಿ ಉಗೊಳೋ ಬಾಣಗಳು , ಕಬ್ಬಿಣದ ಮಳಿ ಉಗೊಳೊ ಬಾಣಗಳು , ಹುಲಿ ಮುಖದ ಬಾಣಗಳು , ಹಾವಿನ ಮುಖದ ಬಾಣಗಳು. ಅವುಗಳನ್ನು ನೋಡ್ತ ಎಷ್ಟು ಕೂತುಹಲದಿಂದ ಕೂಡ್ತಿದ್ದಿವಂದ್ರ ಧಾರಾವಾಹಿ ಮುಗದ ಮ್ಯಾಲ ಬಾಳ ಬ್ಯಾಸರ ಆಗ್ತಿತ್ತು. ಹೈಸ್ಕೂಲ್ ಗೆ ಬಂದ ಮ್ಯಾಲ ಸಮಾಜ ವಿಜ್ಞಾನ ಪಠ್ಯ ದಾಗ ಓದಿದ ಯುದ್ದಗಳ ಕಲ್ಪನೆ ಸ್ವಲ್ಪ ಅಪ್ಗ್ರೆಡ್ ಆಗಿತ್ತು.ಮೊದಲನೆ ಮಹಾಯುದ್ದದಲ್ಲಿ ಮೊಟ್ಟಮೊದಲ ಬಾರಿಗೆ ಯುದ್ದ ವಿಮಾನಗಳು, ಯುದ್ದ ನೌಕೆಗಳು , ಟ್ಯಾಂಕರ್ ಗಳು , ಜಲಾಂತರ್ಗಾಮಿ ಗಳು ಬಳಸಲಾಯಿತು . ಅಲ್ಲಿವರೆಗೂ ಯುದ್ದಗಳೆಂದರೆ ಎರಡು ಪಡೆಗಳು ಕೈಯಿಂದ ಹೊಡೆದಾಡಿಕೊಳ್ಳುವದು ಎಂದು ತಿಳಿದಿದ್ದ ನಮಗೆ ಹೊಸ ಯುದ್ಧ ರೀತಿ ತಿಳಿಯಿತು. ಒಂದನೆ ಮಹಾಯುದ್ದ , ಎರಡನೇ ಮಹಾಯಯದ್ದ , ಹಿರೋಷಿಮಾ ನಾಗಾ ಸಾಕಿ ಮೇಲೆ ಹಾಕಿದ ಅಣುಬಾಂಬ್ ಅದರ ಪರಿಣಾಮಗಳು ಇವೆಲ್ಲವೂ ಪಠ್ಯ ದಲ್ಲಿ ಓದಿ ತಿಳಿದ ವಯಸ್ಸಿನಲ್ಲಿ ಯುದ್ದ ಯಾತಕ್ಕಾಗಿ ಮಾಡ್ತಾರೆ ಎಂಬ ಯೋಚನೆ ಅಷ್ಟು ಕಾಡ್ತಿರಲಿಲ್ಲ. ಯುದ್ದ ಮಾಡುವದರ ಮುಖ್ಯ ಉದ್ದೇಶ ಮಹತ್ವಾಕಾಂಕ್ಷೆ ಮತ್ತು ಹಕ್ಕಿನ ಹೋರಾಟಕ್ಕಾಗಿ.ಎರಡೂ ಪಡೆಗಳು ತಮ್ಮ ತಮ್ಮ ಜಾಗದಾಗ ಸರಿ ಅಂತ ನಿರ್ಣಯಿಸಿದ ಮ್ಯಾಲ ಯುದ್ದಕ್ಕ ಮಾಡ್ಲಕ್ಕ ಕಾರಣಗಳು ಬೇಕಾದಷ್ಟು ಸಿಗತಾವ. ನಮ್ಮ ಮನುಕುಲಕ್ಕ ಅಣುಬಾಂಬ್ ಯಾಕ್ ಬೇಕು.ಇದರಿಂದ ಉಪಯೋಗ ಏನು. ಇದು ಜಗತ್ತಿಗಿ ಘಾತಕ ಅಂತ ಗೊತ್ತಿದ್ರು ದೇಶಗಳು ಇದನ್ನು ಯಾಕ ತಯ್ಯಾರಿಸ್ತಾರ. ಎಲ್ಲಾ ದೇಶದವ್ರಿಗೂ ತಮ್ಮ ತಮ್ಮ ದೇಶದ ಬಲ ತೋರಿಸಿಕೊಳ್ಳಕ್ಕ.ದೊಡ್ಡಸ್ತಿಕೆಗಾಗಿ ಮಾತ್ರ. ಒಂದು ದುರ್ಬಲ ಸಂದರ್ಭದಲ್ಲಿ ಅಣುಬಾಂಬ್ ಪ್ರಯೋಗಿಸಿದ್ರು ಅಂತಿಟ್ಟಕೊಳ್ಳೊಣ.ಅದರ ಪರಿಣಾಮ ಎಲ್ರಿಗೂ ಗೊತ್ತು.ಜಪಾನಿನ ನಾಗಾಸಾಕಿ ಪ್ರದೇಶ ಇನ್ನೂ ಆ ಘಟನೆಯಿಂದ ಚೇತರಿಸಿಕೊಳ್ಳತಿಲ್ಲ.ಎಷ್ಟು ತಲೆಮಾರು ದಾಟಿದ್ರು ಅಂಗವಿಕಲತೆ ತೊಲಗಸಲ್ಕಿಕ್ಕೆ ಆಗತಿಲ್ಲ. ಇಂತಹ ಒಡಲೊಳಗೆ ಕೆಂಡ ಇಟ್ಟಕೊಂಡ ದೇಶಗಳು ಎನನ್ನ ಸಾಧಿಸಬಹುದು. ಯುದ್ದಗಳು ನಮ್ಮ ಜಗತ್ತಿನ ಪ್ರಗತಿಯನ್ನು ಐವತ್ತು ವರ್ಷ ಹಿಂದಕ್ಕ ದೂಡತಾವ.ಮನುಷ್ಯ ತನ್ನ ಬುದ್ದಿ ಉಪಯೋಗಿಸಿ ಏನೆಲ್ಲ ಸಾಧಿಸಿ ಗಳಿಸಿದ್ದ ಎಲ್ಲವೂ ಯುದ್ದ ನಾಶ ಮಾಡ್ತದ.ಆದ್ರು ದೇಶಗಳಿಗೆ ತಮ್ಮ ಪ್ರತಿಷ್ಟೆ ಮುಖ್ಯ. ಒಬ್ಬರ ಮೇಲೊಬ್ಬರು ಬಾಂಬ್ ಎಸೆದು ಎಲ್ಲಾ ನೆಲಸಮ ಮಾಡಿ ಹೆಮ್ಮೆಯಿಂದ ಬೀಗತಾರ.ಅದು ಪರಿಣಮ ಬೀರೋದು ಜನಸಾಮಾನ್ಯರ ಮ್ಯಾಲ. ನೆಲ ಆಸ್ತಿ ಜೀವ ಕಳಕೊಂಡವರ ಪಾಡು ಯಾರಿಗೂ ಕಾಣಲ್ಲ.ಬರೀ ದೇಶಗಳ ಸೋಲು ಗೆಲವು ಮಾತ್ರ ವಿಷಯ ಆಗ್ತದ. ಈ ವಿಶ್ವ ಸಂಸ್ಥೆ ಇರುವದು ಎಲ್ಲಾ ದೇಶಗಳು ಪರಸ್ಪರ ಶಾಂತಿ ಸಹಬಾಳ್ವೆಯಿಂದ ತಂಟೆ ತಕರಾರು ಇಲ್ಲದೆ ಬದುಕಲು ತಿಳಿಸುವದಕ್ಕಾಗಿ ಇರತದ. ಈಗ ಈ ಸಂಸ್ಥೆ ಏನು ಮಾಡ್ತಿದೆ ಅಂತ ಪ್ರಶ್ನೆ ಕಾಡತದ.ಒಂದಿಲ್ಲೊಂದು ಯುದ್ದ ನಡಿತಾನೆ ಅವ. ಸುಮ್ಮನೆ ಇದ್ದ ಇರಾನ್ ಮ್ಯಾಲ್ ಅದ್ಯಾಕ ಅಮೇರಿಕಾ ಕಾಲಕೆರಕೊಂಡು ಜಗಳಕ್ಕ ನಿಂತು. ಅಣುಬಾಂಬ್ ಇರಾನ ದೇಶದಾಗಷ್ಟೆ ಅದ ಏನು. ಬೇರೆ ಅದೇಷೋ ದೇಶಗಳದಾಗೂ ಅವ.ಇಸ್ರೆಲ್ , ಪ್ಯಾಲೆಸ್ಟೈನ್ ಜಗಳಕ್ಕ ಒಂದು ಕಾರಣ ಇತ್ತು.ಸಮರ್ಥನೆ ಅವರವರು ಯಾವಾಗ್ಲೂ ಮಾಡಿಕೊಳ್ಳತಾನೆ ಇರತಾರ.ಇದು ಎಲ್ಲಾ ಜಗಳದಾಗೂ ಇರತದ . ಆದ್ರ ಸ್ವಲ್ಪ ವಿವೇಚನೆ ಯಿಂದ ವಿಚಾರ ಮಾಡ್ದರ ಪ್ರಬಲರು ದುರ್ಬಲರ ಮ್ಯಾಲ ಯುದ್ದ ಮಾಡೋದು ಪೌರುಷ ಅನಿಸಿಕೊಳ್ಳಲ್ಲ.ಭಯೋತ್ಪಾದಕ ದಂತ ಕೃತ್ಯ ತಡೆಗಟ್ಟಬೇಕಾದ್ರ ಕೆಲವೊಮ್ಮೆ ಮಾರಕ ನಿರ್ಣಯ ಗಳನ್ನು ತಗೋಬೇಕಾಗತದ.ಭಯೋತ್ಪಾದ ನೆ ತಡೆಗಟ್ಟಲು ಪ್ರಯತ್ನಿಸತಿದ್ದರಂದ್ರೆ ಬೆಂಬಲಿಸೊಣ. ಆದ್ರ ಈ ಅಮೇರಿಕಾ ಕಾಲ ಕೆರದು ಜಗಳಕ್ಕ ಬರೊದು ಖಂಡಿಸಲೇಬೇಕು. ಯುದ್ದ ಗಳು ಎರಡು ದೇಶದ ನಡುವೆ ನಡೆದ್ರು ಪರಿಣಾಮ ಇಡೀ ಜಗತ್ತು ಎದುರಿಸಬೇಕಾಗತದ.ದೇಶಗಳು ಖಂಡಗಳು ದೂರ ದೂರ ಇದ್ರೂ ಗಾಳಿ ಬೆಳಕು ಎಲ್ಲ ಕಡೆ ಹಬ್ಬಿದಂಗ ನಮ್ಮ ದೈನಂದಿನ ಕೆಲಸಗಳಿಗಿ ಬೇಕಾದ ವಸ್ತುಗಳು ಇಡೀ ಜಗತ್ತಿನ ಎಲ್ಲಾ ಭಾಗಗಳಿಗೂ ಹರಿದಾಡತಾವ.ಯುದ್ದಗಳಿಂದ ಇಂತಹ ವಸ್ತು ಗಳ ಆಮದು ರಪ್ತು ಕಾರ್ಯಗಳು ನಿಂತು ಜನಸಾಮಾನ್ಯರು ಹೈರಾಣ ಆಗಬೇಕಾಗತದ. ಯುದ್ದ ನಡಿತಿರೋ ದೇಶಗಳ ಚಿತ್ರಣ ನೋಡಿದ್ರ ಮನಸ್ಸು ವಿಷಾದ ಆಗತದ.ಎಂತೆಂಥ ದೊಡ್ಡ ದೊಡ್ಡ ಕಡ್ಡಡಗಳೆಲ್ಲ ನೆಲಸಮ ಮಾಡ್ತಿದ್ದಾರ.ಈಗ ಒಂದು ಸಮಾಧಾನ ಅಂದ್ರ ಯುದ್ದದ ಸೂಚನೆ ಸಿಗ್ತಂದ್ರ ಜನರಿಗೆ ತಾವಿರುವ ಸ್ಥಳ ಖಾಲಿ ಮಾಡ್ಸಿ ಬ್ಯಾರೆ ಸುರಕ್ಷಿತ ಸ್ಥಳ ಕ್ಕ ಕಳ್ಸತಾರಂತ.ಜೀವ ಉಳದ್ರ ಸಾಕು ಅನ್ನಕೊಂಡ್ರ ತಮ್ಮ ಎಲ್ಲಾ ಜೀವಮಾನದ ಗಳಿಕಿ ಕಳಕೊಂಡು ಅವ್ರ ಬದುಕು ಉಹಿಸಿಕೊಳ್ಳಕ್ಕ ಆಗಲ್ಲ.ಕ್ಷೀಪಣಿಗಳು ಒಬ್ಬರ ದೇಶದ ಮ್ಯಾಲ ಒಬ್ಬರು ಹಾರಿಸಿ ಇಡೀ ಊರೆಲ್ಲ ನೆಲಸಮ ಮಾಡೊದ್ರಾಗ ಯಾವ ಪುರುಷಾರ್ಥ ಅದ..ಸಣ್ಣ ಮಕ್ಕಳು ಕಲಿಯೋ ಸಾಲಿಮ್ಯಾಲ್ ಬಾಂಬ್ ಹಾಕಿ ಮಕ್ಕಳ ಸಾವಿಗಿ ಕಾರಣ ಆಗೊ ದೇಶಗಳ ವಿಕೃತಿಗೆ ಧಿಕ್ಕಾರ. ಅಲ್ಲೆಲ್ಲೊ ಯುದ್ದ ಆಗತಿದ್ರ ಅದರ ಪರಿಣಾಮ ನಮ್ಮ ದೇಶದವ್ರು ಅನುಭವಿಸಬೇಕಾಗ್ಯಾದ.ಬರಿ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಮನುಕುಲಕ್ಕೆ ತೊಂದರೆ ಆಗಲತದ.ನಮ್ಮ ಜನರು ಸಿಲಿಂಡರ್ ಸಲುವಾಗಿ ಕಷ್ಡಪಡತಿದ್ದಾರ.ಕಾಡು ಕಡದು ಕಟ್ಟಿಗಿ ಉಪಯೊಗಿಸಿ ಕಾಡು ಹಾಳು ಮಾಡಬ್ಯಾಡ್ರಿ ಅಂತ ಕಾಡಿನ ಅಕ್ಕಪಕ್ಕದ ಜನಕ್ಕ ಸರ್ಕಾರ ಉಚಿತ ಗ್ಯಾಸ ಸಿಲಿಂಡರ್ ವ್ಯವಸ್ಥೆ ಮಾಡಿತ್ತು. ಈಗ ಬಹುತೇಕ ಮನಿ ಗಳಲ್ಲಿ ಕಟ್ಟಗಿ ಉಪಯೋಗಿಸೋದು ಕಮ್ಮಿ ಆಗ್ಯಾದ ಈ ಯುದ್ದದ ಪರಿಣಾಮದಿಂದ ಗ್ಯಾಸ್ ಅಭಾವವಾಗಿ ಮತ್ತ ಜನ ಕಟ್ಟಿಗಿಗಿ ಮೊರೆ ಹೋಗಬೇಕಾಗ್ಯಾದ.ಈಗ ಮತ್ತೊಮ್ಮೆ ಕೋವಿಡ್ ದಾಗ ಅನುಭವಿಸಿದ ಸಂಕಟ ನೆನಪಿಗೆ ಬರಲತದ.ಈ ಯುದ್ದಗಳು ಹಿಂಗ ಮುಂದುವರೆದ್ರ ಇನ್ನೂ ಎನೇನು ಅಭಾವ ಎದುರಿಸಬೇಕೋ ಎನೋ. ಈ ಯುದ್ದಗಳಿಂದ ಜಗತ್ತಿಗೆ ಉಪಯೋಗ ಇಲ್ಲ.ಆದ್ರೂ ಮತ್ತೊಬ್ಬರ ಜೋಡಿ ಜಗಳ ಆಡೋದೇ ದೊಡ್ಡಸ್ತಿಕೆ ಅನ್ನಕೊಳ್ಳೋ ಮೂರ್ಖರು ಇರೊ ತನಕ ಇವು ಹಿಂಗ ನಡಿತಾವ.ಎಲ್ಲೊ ಕುಂತು ಯುದ್ದಕ್ಕ ಪ್ರೇರಣೆ ನಿಡೋರು ಸುರಕ್ಷಿತ ವಾಗೆ ಇರತಾರ.ಸಾಮಾನ್ಯರ ಪಾಡು ಅನ್ನಲಕ್ಕ ಆಗಲ್ಲ ಆಡಲಕ್ಕ ಆಗಲ್ಲ.ದೇಶಗಳು ದೊಡ್ಡಸ್ತಿಕಿಯಿಂದ ಬೆನ್ನತಟ್ಟಕೊಳ್ಳತಾವ , ದೇಶವಾಸಿಗಳು ಯುದ್ಧದ ಕಾರ್ಮೊಡದೊಳಗ ಕಾಣೆಯಾಗತಾರ. ಜ್ಯೋತಿ , ಡಿ.ಬೊಮ್ಮಾ. ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ.
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಸಾವಿಲ್ಲದ ಮನೆಯ ಸಾಸಿವೆ ಹುಡುಕುತ್ತ… ಒಂದೊಂದು ಸಲ ಬದುಕು ಅಂದ್ರ ಏನಂತ ತಿಳಿವಲ್ದು. ರಾತ್ರಿ ಮಲಕ್ಕೊಂಡು ಮರುದಿನದ ಬೆಳಕು ನೊಡಿದ್ರ ಅದೇ ಬದುಕು. ಮುಂದಿನ ಕ್ಷಣ ಏನು ಎತ್ತ ಅಂತ ಚಿಂತಿ ಮಾಡೊವಷ್ಟರಾಗ ಏನೇನೊ ಘಟಿಸಿ ಬಿಡಲತದ. ಚಿಕ್ಕವರಿದ್ದಾಗ ಸಾವು ವಯಸ್ಸಾದವ್ರಿಗಿ ಮಾತ್ರ ಬರತದ ಅಂತ ತಿಳಕೊಂಡ ಕಾಲ ಒಂದಿತ್ತು. ಹಾಗೆ ಘಟಿಸತಿತ್ತು.ಆತ್ಮಹತ್ಯೆ ಅಂದರ ಏನು ಅಂತ ಕೂಡ ತಿಳದಿರಲಿಲ್ಲ.ಈಗಿಗ ಚಿಕ್ಕ ಪ್ರಾಯದವರ ಸಾವು ಬಹಳ ಕಂಗೆಡಸತದ.ಬದುಕು ಕಾಣಬೇಕಾದವ್ರು ಅಕಾಲಿಕವಾಗಿ ತೀರಿ ಹೋದ್ರ ಮನಸ್ಸು ಒಂಥರಾ ವಿಷಾದ ಆಗತದ.ಅದರಲ್ಲೂ ಆತ್ಮಹತ್ಯೆ ಅಂತ ಸಾವುಗಳಿಗಿ ಮರುಗಬೇಕೋ ಸಿಟ್ಟು ಮಾಡ್ಕೋಬೇಕೋ ತಿಳಿವಲ್ದು. ಆತ್ಮಹತ್ಯೆಗಳಿಗಿ ಚಿಕ್ಕವಯಸ್ಸಿನವರೆ ಹೆಚ್ಚು ಬಲಿ ಆಗತಿದ್ದಾರ.ದುಡುಕಿನ ಮತ್ತು ಸಿಟ್ಟಿನಲ್ಲಿ ತಗೊಂಡ ನಿರ್ದಾರಗಳು ಅದೆಷ್ಟು ಬೇಗ ಜೀವ ತಗೊಂಡು ಬಿಡತಾವ. ಸಾಯಲಕ್ಕ ತೋರಿಸೋ ದೈರ್ಯ ಬದುಕಲಕ್ಕ ಯಾಕ ತೋರಿಸೋದಿಲ್ಲ..! ಸಾಯುವಷ್ಟು ದೈರ್ಯ ಬದುಕಲಿಕ್ಕ ಬೇಕಾಗಿಯೂ ಇಲ್ಲ. ಬದುಕು ಅದರ ಪಾಡಿಗದು ನಡಿತಿರತದ.ಆದ್ರ ಈಗಿನ ಯುವ ಜನ ಒಂದು ಸ್ವಲ್ಪ ಜೀವನದಾಗ ಏರು ಪೇರಾದ್ರೂ ಜೀವಕ್ಕ ಸಂಚಕಾರ ತಂದುಕೊಳ್ಳತಿದ್ದಾರ. ಚಿಕ್ಕ ವಯಸ್ಸಿನವವರದು ದುಡುಕಿನ ನಿರ್ದಾರ ಅನ್ನಬಹುದು. ಜೀವನದ ಅರ್ದ ಶತಮಾನದ ಏಳು ಬೀಳುಗಳನ್ನು ನೋಡಿದವ್ರು ಯಾವದೊ ಒಂದು ಕಾರಣಕ್ಕ ಜೀವನಾನೆ ಬಲಿ ತಗೊಂಡು ಬಿಡತಿದ್ದಾರಂದ್ರ ..ಏನು ಕಾರಣ ಹುಡುಕಬೇಕು. ಆತ್ಮ ಹತ್ಯೆಗ ಮುಖ್ಯ ಕಾರಣ ಖಿನ್ನತೆ ಅಂತ ಮೇಲ್ನೋಟಕ್ಕೆ ತಿಳಿಬಹುದು.ಜೊತೆಗಿರುವವರು ಖಿನ್ನತೆಗೆ ಒಳಪಟ್ಟವರನ್ನು ಹೇಗೆ ಗುರುತಿಸಬೇಕು.ಎಲ್ಲರ ಜೋತೆ ಚಂದ ಉಂಡು ಓಡಾಡಿ ಮಾತಾಡಿ ಯಾವದೊ ಒಂದು ಕ್ಷಣದಲ್ಲಿ ತಂತಾನೆ ಲೋಕದಿಂದ ನಿರ್ಗಮಿಸಿ ಬಿಟ್ಟ ಸಂಬಂಧ ಪಟ್ಟವರು ತಡಕೊಳ್ಲೋದು ಎಷ್ಟು ಕಷ್ಟ.ಜೀವನ ಪರ್ಯಂತ ಅವರ ಸಾವಿಗಿ ಕಾರಣ ಹುಡುಕಾಡೊದು ಬಿಟ್ಟು ಮತ್ತೆನು ಮಾಡ್ಲಿಕ್ಕಾಗತದ. ನಾನು ನೋಡಿದ ಮಟ್ಟಿಗಿ ಖಿನ್ನತೆ ಕಾಡುವದು ಎಲ್ಲಾ ಉಳ್ಳವರಿಗಿ.ದಿನಾ ದುಡದು ತಿನ್ನೊವರ್ರಿಗಿ ಇದು ಹೆಚ್ಚಾಗಿ ಕಾಡಲ್ಕ ಅನಿಸ್ತದ. ಮೈ ಮುರಿದು ದುಡಿಯೋರಿಗಿ ಮನಸ್ಸು ಖುಷಿಯಾಗಿ ಇರಲು ಬೇಕಾದ ಡೂಪ್ ಮೀನ್ ಎಂಬ ಹಾರ್ಮೊನ್ ತನ್ನ ತಾನೆ ಉತ್ಪತ್ತಿ ಆಗತದ. ಎಲ್ಲಾ ಸೌಲಭ್ಯ ಇರೋರು , ಸದಾ ಕಂಫರ್ಟ ಝೊನ್ ನಲ್ಲಿ ಇರೋರಿಗಿ , ಮೈಗಳ್ಳರಿಗಿ ,ದೇಹಕ್ಕ ವ್ಯಾಯಾಮ ಇಲ್ದವರಿಗಿ ಡೋಪ್ ಮೀನ್ ಹಾರ್ಮೊನ್ ಉತ್ಪತ್ತಿ ಆಗೋದೆ ಇಲ್ಲ. ಆಗ ಮನಸ್ಸು ಬೇಜಾರು , ನಿರಾಸೆಗೆ ಒಳಪಡತದ.ಎಲ್ಲದರ ಮ್ಯಾಲಿನ ಆಸಕ್ತಿ ಕಮ್ಮಿ ಆಗತದ.ಎಲ್ಲರೊಂದಿಗೆ ಛಲೋ ವರ್ತಿಸತಿದ್ರು ಅವ್ರು ಒಳಗ ಅಸಮಾಧಾನದಿಂದ ಇರತಾರ.ಸದಾ ಒಂಟಿ ಆಗಿ ಇರಲಕ್ಜ ಬಯಸ್ತಾರ. ಇಲ್ಲ ಬರೀ ಪೋನ್ ನೊಂದಿಗೆ ಇರತಾರ.ಪೋನ್ ನೊಡೊದ್ರಿಂದ ಮಿದುಳಿನಾಗ ಡೂಪ್ಮೀನ್ ಹಾರ್ಮೊನು ಉತ್ಪತ್ತಿ ಆಗಿ ಮನಸ್ಸು ಸಮಾಧಾನದಿಂದ ಇಡತದ.ಅದಕ್ಕ ಎಲ್ರೂ ಈಗ ಪೋನ್ ವ್ಯಸನಿಗಳಾಗಿರೋದು. ಪೋನ್ ಹಿಡಕ್ಕೊಂಡು ಕುಂತಷ್ಟು ಹೊತ್ತು ತಲೆಯೊಳಗ ಯಾವ್ದೆ ಆಲೋಚನೆ ಬರಲಾರದೆ ಈ ಹಾರ್ಮೊನ್ ತಡಿತದ. ಪೋನ್ ಬಿಟ್ಟ ತಕ್ಷಣ ಮತ್ತ ಮತ್ತ ಪೋನ್ ಕಡಿಗೆ ಮನಸ್ಸು ಏಳಿತದ. ಅಲ್ಕೋಹಾಲ್ ಕುಡಿದಾಗ , ಗುಟಕಾ ತಿನ್ನುವಾಗ , ದೂಮಪಾನ ಮಾಡುವಾಗ ಹೀಗೆ ಈ ಎಲ್ಲಾ ಚಟಗಳು ಆ ಸಮಯದಲ್ಲಿ ನಮ್ಮ ದೇಹದ ಖುಷಿಯ ಹಾರ್ಮೋನ್ ಬಿಡುಗಡೆಗೊಳಿಸಿ ನಮ್ಮನ್ನು ಪದೆ ಪದೆ ಅದನ್ನೆ ಮಾಡಲು ಪ್ರೇರೆಪಿಸ್ತದ. ಆದ್ರ ಈ ಎಲ್ಲಾ ಚಟಗಳು ನಮಗ ಯಾವಾಗ ವ್ಯಸನಗಳಾಗಿ ಬದಲಾಗತಾವ ನಮಗ ಅರಿವಿಗಿ ಬರೊದಿಲ್ಲ.ಅಷ್ಟರಲ್ಲಿ ತಡ ಆಗಿರತದ.ವ್ಯಸನ ಮನುಷ್ಯ ನನ್ನು ಖಿನ್ನತೆಗೆ ಒಳಪಡಸ್ತದ. ವ್ಯಸನಗಳಿಲದೆಯು ಮನುಷ್ಯ ಖಿನ್ನತೆಗೆ ಹೋಗಬಹುದು.ಚಿಕ್ಕವಯಸ್ಸಿನಲ್ಲಿ ಆಗಿರೋ ಅಹಿತಕರ ಘಟನೆಗಳು , ಅಥವಾ ಪೋಷಕರಿಂದ ಸಿಗಬೇಕಾದ ಪ್ರೀತಿ ಮಮತೆಗಳು ಸಿಗದೆ ಇದ್ದಾಗ , ಕೌಟುಂಬಿಕ ದೌರ್ಜನ್ಯ ಗಳು , ಪ್ರೀತಿ ಪಾತ್ರರನ್ನು ಕಳಕೊಂಡ ನೋವು ಇವುಗಳು ಖಿನ್ನತೆಗೆ ದೂಡತಾವ.ಆದ್ರ ಇದರ ಅರಿವು ಆಗೊವಷ್ಟರಲ್ಲಿ ಅವ್ರು ಪೂರ್ಣವಾಗಿ ಖಿನ್ನತೆಯೊಳಗ ಜಾರಿಬಿಟ್ಟಿರತಾರ. ಜೀವನದ ಬಗ್ಗೆ ಬ್ಯಾಸರ. ನಿರಾಸಕ್ತಿ , ಯಾವದರಲ್ಲೂ ಆಸಕ್ತಿ ಇಲ್ಲದಿರೋದು , ನಿದ್ಧೆ ಬರದೆ ಇರೋದು , ಅತೀ ಭಾವುಕರಾಗೋದು , ಸದಾ ನೆಗೆಟಿವ್ ಆಲೋಚನೆಗಳು , ನಾನು ಎಲ್ಲರಿಂದ ನಿರಾದರಕ್ಕ ಒಳಪಟ್ಟಿದ್ದೆನೆಂಬ ಭ್ರಮೆ , ಇವೆಲ್ಲವೂ ಖಿನ್ನತೆಯ ಲಕ್ಷಣಗಳು. ಅವರಿಗೆ ಗೊತ್ತಿಲ್ಲದಂತೆ ಮನಸ್ಸಿನಾಗ ಆತ್ಮಹತ್ಯೆ ವಿಚಾರಗಳು ಬರತಾವ.ಒಟ್ಟು ಜೀವನ ಕೊನೆಗಾಣಿಸಬೇಕು ಎಂಬ ತುಡಿತ ಸದಾ ಇರತದ.ಇಂತಹ ವಿಚಾರಗಳು ಅವ್ರು ಯಾರ ಹತ್ರನೂ ಹಂಚಿಕೊಳ್ಳೊದಿಲ್ಲ.ಒಂದು ವ್ಯಾಳೆ ಹೇಳಿದ್ರು ಮನೆಯವರು ಮೊದಲು ಮಾಡೋದೆ ದೇವ್ರು ದೆವ್ವ ಎಂಬ ಪ್ರಯೋಗಗಳು.ಮಾನಸಿಕ ರೋಗ ತಜ್ಞ ರಲ್ಲಿ ಹೋಗಬೇಕೆಂಬ ಆಲೋಚನೆಯೂ ಮಾಡೊದಿಲ್ಲ. ಎಷ್ಟೋ ಜನ ನಾವು ಖಿನ್ನತೆಗೆ ಒಳಪಟ್ಟಿವಿ ಎಂದು ನಂಬಲಿಕ್ಕೂ ತಯ್ಯಾರಿರಲ್ಲ.ಖಿನ್ನತೆ ಅಂದ್ರ ಹುಚ್ಚು ಅಂತ ತಿಳಕೊಂಡಿರೋರು ಇದ್ದಾರ.ಅಂತವರು ಮಾನಸಿಕ ರೋಗ ತಜ್ಞ ರ ಹೆಸರು ಕೆಳಿದ್ರ ಅಂಜತಾರ. ಅಂತ ಡಾಕ್ಟರ ಹತ್ದ ಹೊದ್ರ ಜನ ಎಲ್ಲಿ ತಮಗ ಹುಚ್ಚರ ಪಟ್ಟ ಕಟ್ಟಾತಾರೋ ಅನ್ನೊ ಅಂಜಿಕಿ ಇರತದ. ತಮ್ಮ ಖಿನ್ನತೆ ನಿಭಾಯಿಸಲಕ್ಕ ಆಗ್ಧ ಕೊನೆಗೆ ಸಾವಿನಲ್ಲಿ ಪರಿಹಾರ ಕಾಣತಾರ. ಮಕ್ಕಳಲ್ಲಿ ಖಿನ್ನತೆ ಲಕ್ಷಣ ಹ್ಯಾಂಗ್ ಗುರುತಿಸಬೇಕು.ಅವ್ರು ದಿನಾ ಉಣ್ಣತಾರ ,ತಿಂತಾರ , ಸಾಲಿಗಿ ಹೋಗತಾರ ,ನಗತಾರ ,ಅಳತಾರ ,ಜಗಳ ಆಡತಾದ..ಒಟ್ಟಿನಾಗ ಎಲ್ರೂ ಇರೊ ಹಂಗ ಇರತಾರ . ಒಮ್ಮ ನೇಣಿಗಿ ಶರಣಾಗತಾದ.ಆಗ ಯಾವ ಕಾರಣ ಹುಡುಕಬೇಕು.ಹೆತ್ತವರು ಹ್ಯಂಗ್ ಬದುಕಬೇಕು.ಜೀವನ ಪರ್ಯಂತ ಈ ಪ್ರಶ್ನೆಗೆ ಉತ್ತರ ಹುಡುಕ್ಕೊಂತ ಬದುಕುವ ಅವರ ಪಾಡು ಹ್ಯಾಂಗ್ ವರ್ಣಿಸಬೇಕು..! ಕಾಲೇಜು , ಹಾಸ್ಟೆಲ್ ನಲ್ಲಿರುವ ಮಕ್ಕಳು ಈ ರೀತಿ ಮಾಡಿಕೊಳ್ಳುವದಕ್ಕ ಮುಖ್ಯ ಕಾರಣ ಖಿನ್ನತೆ.ಒತ್ತಡ. ಓದುವ ಅಥವಾ ಪ್ರೆಮ ವೈಫಲ್ಯ , ಮನೆಯವರು ಬೈದರೆಂದು , ಶಿಕ್ಷಕರು ಹೊಡೆದರೆಂದು , ಮೊಬೈಲ್ ಕಸಕೊಂಡರು ಎಂದು ಸಣ್ಣ ಸಣ್ಣ ಕಾರಣಗಳಿಗಿ ಆತ್ಮಹತ್ಯೆ ಮಾಡ್ಕೊಳ್ಳೊದು ಹೆಚ್ಚು ಆಗಲತದ. ಇದಕ್ಕ ಕಾರಣ ಹುಡುಕಿದ್ರ ಮೊಟ್ಟಮೊದಲು ಕಾಣೋದು ಮಕ್ಳು ಮತ್ತು ಹರೆದವರಿಗಿ ಒತ್ತಡ ನಿಭಾಯಿಸಲಿಕ್ಕ ಆಗ್ದೆ ಇರೋದು.ಸದಾ ಆರಾಮ ಮತ್ತು ಕಂಫರ್ಟ ನ್ನು ಹೆತ್ತವರು ಮಕ್ಳಿಗಿ ಕೊಡತಿದ್ದಾರ.ಅವ್ರು ಬೇಡಿದ್ಚು ಕೊಡ್ಸಿ ಅವ್ರು ಕೇಳಿದ್ದು ತಿನ್ಸಿ ಅವ್ರನ್ನ ಏನು ಮಾಡ್ಲಿಕ್ಕ ಬಿಡದಂಗ ಮಾಡಿ ಅವ್ರನ್ನ ಒಂದು ಕಂಫರ್ಟ ಎಂಬ ಒಂದು ವರ್ತುಲ ದೊಳಗ ಸಿಕ್ಕಿ ಹಾಕ್ತಿವಿ.ಹೊರಗ ಏನು ಚಂದಿಲ್ಲ ಎಂಬ ನಿಗರಾನಿಯೊಳಗ ಬೆಳೆಸ್ತಿವಿ .ಒಂದಿಷ್ಟು ಜೀವನದೊಂದಿಗೆ ಹೋರಾಡೋ ಶಕ್ತಿನೂ ಅವ್ರರಲ್ಲಿ ತುಂಬದೆ ಬೆಳೆಸಿತಿದ್ದಿವಿ.ಯಾವದೋ ಒಂದು ಹಂತದಲ್ಲಿ ಒತ್ತಡ ನಿಭಾಯಿಸ್ಲಿಕ್ಕ ಆಗ್ದೆ ಆತ್ಮಹತ್ಯೆ ಗೆ ಶರಣಾಗತಾರ. ಎಷ್ಟು ದುಡುಕಿನ ನಿರ್ಧಾರ. ಮಕ್ಕಳು ಮನಬಿಚ್ಚಿ ತಂದೆತಾಯಿಯೊಂದಿಗೆ ಮಾತಾಡಲಾರದಂಗ ಆಗತುದ್ದಾರ.ತಮ್ಮ ಆತಂಕಗಳನ್ನು ಅಲೆಕ್ಸಾ ಅಥವಾ ಗೂಗಲ್ ಗೆ ಹೇಳತಾರ ಹೊರತಾಗಿ ಹೆತ್ತವ್ರಿಗಿ ಹೇಳಲ್ಲ.ಎಷ್ಟು ವಿಪರ್ಯಾಸ. ಸಾವು ಎಂಬುದು ಹುಟ್ಟುತ್ತಲೆ ಬದುಕಿಗೆ ಅಂಟಿಕೊಂಡೆ ಬಂದಿರತದ.ಅದು ಬರುವಾಗ ಬಂದೆ ಬರತದ.ಅಲ್ಲಿವರೆಗೆ ಬದುಕಬೇಕು.ಸುಖ ದುಃಖ ಗಳೆಲ್ಲ ಚಕ್ರದಂಗ ತಿರುಗತಾ ಇರತಾವ.ಒಂದರ ಬೆನ್ನಿಗಿ ಒಂದು. ಚಕ್ರ ನಿಲ್ಲಿಸಲಿಕ್ಕ ಆಗೊದಿಲ್ಲ.ಕೆಟ್ಟ ಸಂದರ್ಭಗಳಲ್ಲಿ ತಾಳ್ಮೆ ಒಂದೇ ಸಂಜೀವಿನಿ. ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಎರಡು ಜೀವನದ ದೊಡ್ಡ ಶತ್ರುಗಳು.ಇದು ಜೀವನಾನೆ ಅಲ್ಲೊಲ ಕಲ್ಲೋಲ ಮಾಡ್ತದ.ಹಾಗಂತ ಜೀವ ಕಳಕೊಳ್ಳೊದು ಮೂರ್ಖತನ. ಹೌದು ,ಎಷ್ಟೊಂದು ಓದಿರತಿವಿ , ಕೇಳಿರತೀವಿ , ಉಪದೇಶನೂ ಮಾಡಿರತೀವಿ.ಆದ್ರ ಖಿನ್ನತೆ ಅದಾವ ಮಾಯದಾಗ ಆವರಿಸಿಕೊಂಡು ಬಿಡತದ ಅರಿವುಗೂ ಬರಲ್ಲ.ಇದಕ್ಕ ಪರಿಹಾರ ಅಂದ್ರ ಮನಸ್ಸು ಬಿಚ್ಚಿ ಮಾತಾಡೋದು.ತಂದೆತಾಯಿ ಗೆಳೆಯರು ಬಳಗದವ್ರು ಯಾರೊಂದಿಗಾದ್ರೂ ಮನಸ್ಸು ಬಿಚ್ಚಿ ಮಾತಾಡೋದು.ಯಾರಿಗೂ ಹೇಳಬೇಕು ಅನಿಸದಿದ್ರ ಬರೆದು ಬಿಸಾಕೋದು. ಖಿನ್ನತೆಯನ್ನು ಬೆರೆಯವರು ಗುರುತಿಸೊದಕ್ಕಿಂತ ಮೊದಲು ನಾವೆ ಅದನ್ನ ಪತ್ತೆ ಹಚ್ಚಕೊಳ್ಳಬೇಕು.ಎಲ್ಲರೊಂದಿಗೆ ಇದ್ರು ಒಂಟಿತನ ಭಾದಿಸ್ತಾ ಇದ್ರೆ.ರಾತ್ರಿ ನಿದ್ರೆ ಬರದಿದ್ರೆ ನಿರುತ್ಸಾಹ ನಿರಾಸಕ್ತಿಇವೆಲ್ಲ ಬಾಳ ದಿನಗಳಿಂದ ನಮಗ ಕಾಡತಿದ್ರ ಮಾನಸಿಕ ತಜ್ಞ ರಲ್ಲಿ ಹೋಗೊದಕ್ಕ ಹಿಂದಮುಂದ ನೋಡ್ಲೆಬಾರ್ದು.ನಮ್ಮ ಜೊತೆಗಿರುವವರಿಗೆ ಈ ಸಮಸ್ಯೆ ಗಳು ಕಾಡತಿದ್ರೆ ಅವ್ರನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಲು ಒಪ್ಪಿಸಬೇಕು. ಎಷ್ಟೋ ತಿಳವಳಿಕೆ ಉಳ್ಳವ್ರು ಸಾಯುವಂತ ದುಡುಕಿನ ನಿರ್ಧಾರ ತಗೊಳ್ತಿರೋದು ಆತಂಕದ ಸಂಗತಿ. ಬುಧ್ದಿಯಿಂದ ಅತಿ ಶಕ್ತಿಶಾಲಿಯಾದ ಮನುಷ್ಯ ಆತ್ಮಹತ್ಯೆ ಯಂತ ನಿರ್ಣಯಗಳಲ್ಲಿ ಎಷ್ಟು ದುರ್ಬಲನಾಗತಾನ. ಅತೀ ವಿದ್ಯಾವಂತರೆ ಇಂತಹ ಘಟನೆಗಳಿಗೆ ಬಲಿಯಾಗ್ತಿರೋದು ಯಾಕೆ ಎಂದು ತಿಳಿತಿಲ್ಲ.ಸದಾ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು , ಶ್ರೇಷ್ಟರಾಗಿರಬೇಕು , ಜಾಣ ಎನಿಸಿಕೊಳ್ಳಬೇಕು ಎಂಬ ಇಂತಹ ಹಂಬಲಗಳು ಕೂಡ ಮನುಷ್ಯ ಗ ದುರ್ಬಲ ಮಾಡಿಬಿಡತಾವ.ಅತೀ ಮಹತ್ವಾಕಾಂಕ್ಷೆಯು ಮನುಷ್ಯ ನನ್ನು ದುಃಖಿತ ನನ್ನಾಗಿಸ್ತದ.ಭಾವನೆಗಳನ್ನು ನಿಯಂತ್ರಿಸಿಕೊಳ್ಳೊದು ಕಲಿತರೆ ಜೀವನ ಅರ್ಧ ಗೆದ್ದಂಗೆ.ಅದರಲ್ಲೂ ಸಿಟ್ಟಿನ ಕೈಗೆ ಬುದ್ದಿ ಎಂದೂ ಕೋಡ್ಲೆಬಾರದು. ಈಗೀಗ ನಾವು ಎಷ್ಟು ಒಂಟಿ ಆಗತಿದ್ದೆವೆ ಅಂದ್ರ ನಮ್ಮ ಸಮಸ್ಯೆ ಹೆತ್ತವ್ರಿಗೆ ಗೆಳೆಯರಿಗೆ ತಿಳಿಸಲಿಕ್ಕೆ ಆಗದಿರುವಷ್ಟು.ಆಪ್ತ ಸಮಾಲೋಚರಿಗೆ ನಮ್ಮ ಸಮಸ್ಯೆ ಮುಕ್ತ ವಾಗಿ ಹೇಳಿಕೊಂಡಷ್ಟು ನಮ್ಮ ಜೊತೆಗಿರುವರಿಗೆ ಹೇಳಕೊಳ್ಳಕ್ಕ ಆಗ್ತಿಲ್ಲ ಅಂದ್ರ ಸಂಭಂಧಗಳು ಎಷ್ಟು ಅರ್ಥಹೀನ ಆಗ್ತಿವೆ ಎಂದು ಚಿಂತಿಸಬೇಕಾಗ್ತದ. ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು.ಇದನ್ನು ತಡೆಯಲು ನಾವು ಪ್ರಯತ್ನಿಸಬೆಕಂದ್ರೆ ನಮ್ಮ ಸುತ್ತಲಿರುವವರೊಂದಿಗೆ ಮನಸ್ಸು ಬಿಚ್ಚಿ ಮಾತಾಡೋದು.ಆತಂಕವನ್ನು ಮತ್ತೊಬ್ಬ ರೊಂದಿಗೆ ಹಂಚಕೊಳ್ಳೊದು.ಪ್ರೀತಿ ಕೊಟ್ಟು ಪಡಕೊಳ್ಳೊದು.ಖಿನ್ನತೆ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅದರ ಬಗ್ಗೆ ತಿಳಿಸೊದು.ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ
ಜ್ಯೋತಿ ಡಿ ಬೊಮ್ಮ ಅಂಕಣ “ಮನದ ಮಾತುಗಳು”
ಹೆಣ್ಣು ಹೆರಲೂಬೇಡ , ಸಿಟ್ಟಾಗಿ ಶಿವನಿಗೆ ಬೈಬೇಡ…
ನಮ್ಮ ದೇಶ ಸುಧಾರಕರು ಹೇಳತಾರ. , ನಾಲೈದು ಮಕ್ಕಳ ಹೆತ್ತು ನಮ್ಮ ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚು ಮಾಡ್ರಿ ಅಂತ. ನೀವು ಮಕ್ಳನ್ನ ಹೆರಿ ನಾವು ಅವರನ್ನು ಚಂದ ಸಲವತೀವಿ ಅಂತನೂ ಭರವಸೆ ಕೊಟ್ರ ಈಗ ಆಸ್ಪತ್ರೆ ದಾಗ ಮೂರನೇ ಮಗುನೂ ಹೆಣ್ಣಾಗಿದ್ದಕ್ಕ ಕತ್ತು ಹಿಸುಕಿ ಆ ತಾಯಿ ಮಗುವನ್ನು ಕೊಲ್ಲುತ್ತಿರಲಿಲ್ಲವೇನೊ..
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮ
ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ..
ಆದ್ರ ಈಗ ಕೆಲಸಗಳು ಮೊದಲಿನಂಗ ಉತ್ಸಾಹದಾಯಕವಲ್ಲ. ಸ್ವಲ್ಪ ಕೆಲಸ ಹೆಚ್ಚಾದ್ರ ದೇಹ ದಣಿತದ. ಮಾಡ್ಲೇಬೇಕು ಅಂತ ಒತ್ತಾಯದಿಂದ ಆಚರಣೆಗಳು ಪದ್ದತಿಗಳು ಮಾಡಲಕ್ಕ ದೇಹ ಸ್ಪಂದಿಸಲ್ಲ.ಮತ್ತ ಅದಕ್ಕ (ದೇಹಕ್ಕ) ಆರೈಕ ಮಾಡಕೊಂತ ಕೂಡಬೇಕು.
ಮುಂದಿನ ಭವಿಷ್ಯದ ವಾರುಸದಾರರಾಗಬೇಕಾದ ಮಕ್ಕಳು ಒತ್ತಡ ಬದುಕಿಗೆ ಸಿಕ್ಕಿ ಆತ್ಮಹತ್ಯೆ ಮಾಡಕ್ಕೊಳತಿರೋದು ನಿಜಕ್ಕೂ ಶೋಚನೀಯ ಸಂಗತಿ. ಇದನ್ನು ತಡೆಗಟ್ಟಲು ಪ್ರತಿಯೊಬ್ರು ಪ್ರಯತ್ನಿಸಬೇಕು. ಮಕ್ಕಳು ನಮ್ಮ ಆಸೆ ಈಡೇರಿಸುವ ಯಂತ್ರಗಳ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಒತ್ತಡದ ಬದುಕಿನಲ್ಲಿ
ನಲುಗುತ್ತಿರುವ ಕುಸುಮಗಳು.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಬಾಹ್ಯ ಸೌದರ್ಯದ ಅಡಿಯಲ್ಲಿ
ಮಾಯವಾದ ಮಾನವೀಯತೆ.
ದೇಹದ ಚಂದದ ಭೃಮೆಯಲ್ಲಿ ತನ್ನ ತಾ ವೈಭವಿಕರಿಸಿಕೊಂಡು ಮತ್ತೊಬ್ಬರ ಬಗ್ಗೆ ಅಸಹ್ಯ ಪಟ್ಟುಕೊಳ್ಳೊದು ಅಹಂಕಾರ ಮತ್ತು ಮಾನಸಿಕ ವಿಕೃತಿ.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಗುಂಡಿನ ಸದ್ದು ಮತ್ತು ಧರ್ಮಗಳ ಮೊರೆತ
ಎಷ್ಟೋ ಶತಮಾನಗಳಿಂದ ನಮ್ಮ ದೇಶ ಬಹುತ್ದದ ಸಂಸ್ಕತಿ ಹೊಂದಿರುವಂಥದ್ದು.
ಸಾಮರಸ್ಯ ದಿಂದ ಬದುಕಿದ್ರೆ ಮಾತ್ರ ನೆಮ್ಮದಿ. ತಪ್ಪನ್ನು ಖಂಡಿಸುವಂತೆ , ಒಳ್ಳೆತನಕ್ಕೂ ಪ್ರಶಂಸೆ ಮಾಡಲೇಬೇಕು.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಸ್ತ್ರೀ ಎಂಬ
ಅಸ್ಮೀತೆಯ
ಹುಡುಕಾಟದಲ್ಲಿ.
ಸಮಾನತೆ ಪ್ರಶ್ನೆ ಬಂದಾಗ ಪುರುಷರು ನಮಗ ಕೇಳತಾರ , ಅಲ್ರೀ ಸಮಾನತೆ ಸಮಾನತೆ ಅಂತ್ರಿ . ನಿಮ್ಮ ಹೆಣ್ಣಮಕ್ಕಳ ಹತ್ರನೆ ಸಮಾನತೆ ಇಲ್ಲ. ಒಗ್ಗಟ್ಟ ಇಲ್ಲ , ಇನ್ನ ಹೊರಗೆಲ್ಲಿ ಸಮಾನತೆ ಹುಡುಕತ್ರಿ .. ಅಂತ ಕುಹಕ ಆಡ್ತಾರ.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಉಪವಾಸ ವ್ರತಗಳು ಮತ್ತು ವಿಧ ವಿಧ ತಿಂಡಿಗಳು
ಅದಲ್ದ ಈಗೀನ ಉಪವಾಸಗಳೇನು ಪೂರಾ ನೀರಾಹಾರ ಆಗಿದ್ದು ಯಾರು ,,ಮಾಡಲ್ಲ. ಊಟದಷ್ಟೆ ಉಪಹಾರ ತಿಂದು ಉಪಾವಾಸ ಮಾಡ್ತಾರ. ನೀವೊಂದು ಸುಮ್ನ ಚಿಂತಿ ಮಾಡಲತೀರಿ . ಅಂದ

