ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ

ಪುಸ್ತಕ ಸಂಗಾತಿ ಸುಮತಿ ನಿರಂಜನ್ ಚಂದಕಚರ್ಲ ರಮೇಶ್ ಬಾಬು ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು” “ಮಧ್ಯಮಗತಿಯ ಸುಗಮ ಗದ್ಯ” ಮೂಲತಃ ಬಳ್ಳಾರಿಯವರಾದ ಚಂದಕಚರ್ಲ ರಮೇಶ್ ಬಾಬು ಅವರು ಹೈದರಾಬಾದ್ ಕನ್ನಡಿಗರು. ಹೊರನಾಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ನಾಟ್ಯ ರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್, ತೆಲಂಗಾಣ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವರು. ಇವರು ತೆಲುಗು, ಕನ್ನಡ ಎರಡರಲ್ಲೂ ಪ್ರವೀಣರು. ಕವಿತೆ, ಲಘು ಬರಹಗಳು, ಅಂಕಣಗಳು, ಅನುವಾದ ಕೃತಿಗಳು (ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ)- ಹೀಗೆ ಒಟ್ಟು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ. ಆಚೀಚಿನ ಆಯಾಮಗಳು ಸಂಕಲನದಲ್ಲಿ ಒಟ್ಟು ಮೂವತ್ತನಾಲ್ಕು ಲೇಖನಗಳಿವೆ. ಈ ಅಂಕಣ ಗೊಂಚಲಿನಲ್ಲಿ ಬಗೆಬಗೆಯ ಹೂವುಗಳು. ಎಲ್ಲವೂ ದಿನ ನಿತ್ಯ ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವಂತಹವು. ಅವುಗಳ ಮೇಲೆ ತುಂತುರು ಹನಿ ಚೆಲ್ಲಿದಂತೆ ತೆಳು ಹಾಸ್ಯ. ಕೆಲವಕ್ಕೆ ವೈಚಾರಿಕತೆಯ ಘಮವಿದ್ದರೆ, ಕೆಲವಕ್ಕೆ ಅಧ್ಯಾತ್ಮದ ಅಗರುಬತ್ತಿಯ ಪರಿಮಳ, ಸಣ್ಣಕ್ಕೆ- ಯಾವುದೂ ಮೂಗಿಗೆ ಬಡಿಯುವಂತದಲ್ಲ. ಹಿತ ಮಿತ, ನವಿರು. ಶ್ರೀಸಾಮಾನ್ಯನ ದೈನಂದಿನ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ಸವಾಲುಗಳು, ಅನಿವಾರ್ಯತೆಗಳ ಮೇಲೆ ಬರೆದ ಕಿರು ವ್ಯಾಖ್ಯಾನಗಳು- ಮನೆಯನ್ನು ಹೊಕ್ಕ ಇಲಿಯಿಂದ ಹಿಡಿದು ನೆರೆ ಹೊರೆ, ಗತಕಾಲದ ಟೂ ಇನ್ ಒನ್, ಗಾಂಧಿವಾದದ ಪ್ರಸ್ತುತತೆ ವರೆಗೆ – ಇಲ್ಲಿಯ ಬರಹದ ವಸ್ತುಗಳ ಹರವು ವಿಶಾಲ. ದಿಟ್ಟತನದಿಂದ ತನ್ನದೇ ಆದ ಧೋರಣೆಯನ್ನು ಅಭಿವ್ಯಕ್ತಿಸುತ್ತದೆ- “ಮೇರಾ ಭಾರತ್ ಮಹಾನ್”. ಬಯೋಪಿಕ್ ಬಗ್ಗೆ ಹೇಳುವಾಗ- ಚಲನಚಿತ್ರಗಳಲ್ಲಿ ಪುರಾಣ ಪುರುಷರ ಚಿತ್ರಣದಿಂದ ಹಿಡಿದು, ಕ್ರೀಡಾಪಟುಗಳ ರಾಜಕಾರಣಿಗಳ ಮೇಲಣ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗೆ ಇವರ ಅಧ್ಯಯನಶೀಲತೆಗೆ ಕನ್ನಡಿ. ಭಾಷೆ, ಅದರಲ್ಲೂ ಕನ್ನಡದ ಮೇಲಿನ ಲೇಖನಗಳಲ್ಲಿ ಕನ್ನಡಾಭಿಮಾನ ತುಂಬಿ ತುಳುಕುವುದು ಮಾತ್ರವಲ್ಲ ಉತ್ತಮ ಸಲಹೆಗಳೂ ಕಾಣುವುವು. ಸ್ವಂತ ಅನುಭವದ ಕುರಿತಾದ “ಆಕಾಶಯಾನವೂ…”, “ನಾವು ಇಲಿಯನ್ನು ಹೊರಗಟ್ಟಿದೆವು…”, “ನೋ ಪಾರ್ಕಿಂಗ್”- ಇತ್ಯಾದಿಗಳು ನಮ್ಮೆಲ್ಲರ ಅನುಭವವನ್ನು ಪ್ರತಿಫಲಿಸುವ ಆಪ್ತತೆ ಹೊಂದಿವೆ. ನನ್ನ ಮೆಚ್ಚಿನವು- ಶ್ವಾನೋಪಾಖ್ಯಾನ, (ಗ್ರೇಟ್ ಡೇನ್ ಗೆ “ಕಾಲಭೈರವ”, ಪೊಮರೇನಿಯನ್- ಭೂಮಿಗೆ ಸಮಾನಾಂತರವಾಗಿರುವ “ಕುಳ್ಳ ಕುನ್ನಿ” !), ಫೇಸ್ಬುಕ್ ಪ್ರಭಂಜನ, ಬೀಗರು (ಗಟ್ಟಿತನವಿರುವುದರಿಂದ ಬೀಗ ಎಂಬ ಹೆಸರು ಬಂದಿರಬಹುದು ಎಂಬ ಊಹೆ !), ನಿರೂಪಕರ ಪಾತ್ರ – ಕಬಡ್ಡಿ ಆಟಗಾರರಂತೆ ನಿರ್ದಿಷ್ಟ ಮಿತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ, ಮನೆಕೆಲಸದ ಸಾಮ್ರಾಜ್ಞಿ -(ಮನೆಯೊಡೆಯನನ್ನೆ ರೂಮಿನಿಂದ ಹೊರಗೋಡಿಸಲು ಕೋಲುಧಾರಿಣಿಯಾಗಿ ಒರೆಸಲು ನಿಂತ ಮಹಿಷಾಸುರ ಮರ್ದಿನಿ!), ವಜ್ರದಂತಕ್ಕೊಂದು ಕ್ಷತಿ ( ದಂತಸ್ಥ- ಹಲ್ಕಟ್ ಡಾಕ್ಟರ್!) – ಚಿಕ್ಕ ಚಿಕ್ಕ ಕುಂಚಕಾರಿತನದಿಂದ ಮನ ಸೆಳೆದ ಉದಾಹರಣೆಗಳು. ಭಾರವೆನಿಸದ ಈ ಲಲಿತ ಕಿರು ( ಯಾವುದೂ ೩-೪ ಪುಟ ಮೀರಿಲ್ಲ) ಪ್ರಬಂಧಗಳಲ್ಲಿ ಅಬ್ಬರವಿಲ್ಲ, ವ್ಯಂಗ್ಯದಲ್ಲಿ ಮೊನಚಿಲ್ಲ, ಹಾಸ್ಯದಲ್ಲಿ ಕಹಿಯಿಲ್ಲ, ಭಾಷೆಯಲ್ಲಿ ಶಬ್ದ ಪ್ರದರ್ಶನವಿಲ್ಲ. ನನಗೆ ಥಟ್ಟಂತ ನೆನಪಾದದ್ದು ಆರ್ .ಕೆ. ಲಕ್ಷ್ಮಣರ ಶ್ರೀಸಾಮಾನ್ಯನ ವ್ಯಂಗ್ಯ ಚಿತ್ರಗಳು. ಅಷ್ಟೇ ಖುಷಿ ಕೊಡುವಂತಹವು. ಸುಮತಿ ನಿರಂಜನಹೈದರಾಬಾದ್

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ Read Post »

ಪುಸ್ತಕ ಸಂಗಾತಿ

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ

ಪುಸ್ತಕ ಸಂಗಾತಿ ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?” ಒಂದು ಅವಲೋಕನ, ಮಧು ಮಾಲತಿ ಪತ್ರಕರ್ತ ˌ ಸಾಹಿತಿ ಹಾಗೂ ಅಂಕಣಕಾರರಾದ ಶ್ರೀ ವಿಶ್ವಾಸ್  ಡಿ ಗೌಡರ “”ನೆಮ್ಮದಿಯ ವಿಳಾಸವೆಲ್ಲಿದೆ”” ಕೃತಿಯನ್ನು ಖಂಡಿತಾ ಒಂದೊಮ್ಮೆ ಓದಲೇಬೇಕು .ಈ ಕೃತಿಯ ಶೀರ್ಷಿಕೆಯೇ ಬಹಳ ಆಪ್ತವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಸಹ ಎಷ್ಟೇ ಸುಖಿಯಾಗಿದ್ದರೂ ಈ ನೆಮ್ಮದಿಯನ್ನು ಕ್ಷಣವೂ ಅರಸುವವರೇ .ಈ ನೆಮ್ಮದಿಯ ವಿಳಾಸವ ಹುಡುಕಿ ಹುಡುಕಿ ಸೋತವರೇ ಹೆಚ್ಚು. ಅದರ ವಿಳಾಸವನ್ನು ಅರಸುವವರಿಗಾಗಿಯೇ ವಿಶ್ವಾಸ್ ಗೌಡರು ಈ ಕೃತಿಯನ್ನು ಬರೆದಿರಬಹುದು. ಏಕೆಂದರೆ ಇಲ್ಲಿರುವ ಪ್ರತಿ ಕಥೆಯು ಮನಸ್ಸಿಗೆ ತುಂಬಾ ಹತ್ತಿರವಾದಂತೆ ತೋರುತ್ತದೆ .ಪ್ರತೀ ಕಥೆಯಲ್ಲೂ ಓದುಗ ತನ್ನನ್ನೇ ಅಲ್ಲಿ ಬಿಂಬಿಸುತ್ತ ಹೋದಂತಿದೆ. ಇಲ್ಲಿರುವ ಪ್ರಸಂಗಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಘಟಿಸಿಯೇ ಇರುತ್ತದೆ .ಇಂತಹ ಘಟನೆಗಳನ್ನೇ ಕಥೆಯ ಜೀವಾಳವಾಗಿಸಿಕೊಂಡು ಸರಳ ಸುಂದರವಾಗಿ ಹೆಣೆಯುತ್ತಾ ಓದುಗನೆದೆಗೆ ಶಾಶ್ವತವಾಗಿ ಇಳಿಸುವಲ್ಲಿ ವಿಶ್ವಾಸ್ ಗೌಡರ ಪ್ರಭುದ್ಧತೆ ಎದ್ದು ಕಾಣುತ್ತದೆ.ಇಲ್ಲಿ ಬರುವ ಅಪ್ಪ ಮಕ್ಕಳ ಭಾವನಾತ್ಮಕ ಸಂಬಂಧಗಳ ಬರಹಗಳು ಓದುಗನ ಕಣ್ಣೆವೆಗಳನ್ನು ತುಂಬದೇ ಇರಲಾರದು .ಮಗಳಿಗಾಗಿ ಜೀವನವನ್ನೇ ಮುಡಿಪಿಡುವ ಅಪ್ಪ ˌಇಹಲೋಕ ತ್ಯಜಿಸಿಯು ಮಗನ ನೌಕರಿಗಾಗಿ ಅದೃಶ್ಯದಲ್ಲೂ ದೃಶ್ಯದಂತೆ ಗೋಚರಿಸಿ ಕಚೇರಿಗೆ ಅಲೆವ ಅಪ್ಪ ˌಖಾಯಿಲೆಯಿಂದ ಮೂಗನಾದ ಮಗನಿಗಾಗಿ ಮಾತಿದ್ದರೂ ಮೌನಕೋಟೆಯೊಳಗೆ ಬಂಧಿಯಾಗಿ ಜೀವಮಾನವಿಡೀ ಮೂಗನಾಗಿ ಬದುಕಿದ ಅಪ್ಪ ಹೀಗೆ ಅಪ್ಪನ ವ್ಯಕ್ತಿತ್ವ ಪ್ರತೀಕಥೆಯಲ್ಲೂ ಹಿಮಾಲಯಕ್ಕಿಂತ ಎತ್ತರದ ಸ್ಥಾನದಲ್ಲೇ ನಿಲ್ಲುತ್ತದೆ.ಈ ಕಾರಣಗಳಿಗಾಗಿ ಈ ಕೃತಿ ಮತ್ತಷ್ಟು ಆಪ್ತವಾಗುತ್ತಾ ಸಾಗುತ್ತದೆ .ಪ್ರೇಮ ಪ್ರಸಂಗಗಳ ಕಥೆಗಳಿಗೆ ಒಳಹೊಕ್ಕರೆ ಪ್ರೀತಿಯ  ಶರಧಿಯಲ್ಲಿ ಮಿಂದೆದ್ದವರೇ ನಾವೆಲ್ಲರೂ. ಅತೀ ನವಿರಾದ ನಾಜೂಕಾದ ಪದಪುಂಜಗಳು ಮತ್ತೆ ಮತ್ತೆ ಸೆಳೆಯುತ್ತವೆ . ಪ್ರತೀ ಓದುಗನೂ ಓದುತ್ತಿದ್ದಂತೆ ತನ್ನದೇ ಪ್ರೇಮ ಕಥೆ ಎಂಬಷ್ಟು ಅಲ್ಲಿ ಕಳೆದು ಹೋಗುತ್ತಾನೆ. ಇಲ್ಲಿ ಬರುವ ಪ್ರೀತಿಯ ಸೆಳೆತಗಳು ˌ ಮೊದಲ ಪ್ರೇಮ ˌ ಪ್ರೇಮ ನಿವೇದನೆಗೆ ತಲ್ಲಣ ಗೊಳ್ಳುವ ಮನಸ್ಸು ˌಸಿಕ್ಕಿಯೂ ಸಿಗದ ಪ್ರೇಮ ಇವೆಲ್ಲದರ ನಡುವೆ ಒಂದಷ್ಟು ಹೊತ್ತು ಓದುಗ ಪ್ರಭು ತನ್ನ ಜೀವನವನ್ನೇ ಅಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾನೆ. ಓದುತ್ತಾ  ಓದುತ್ತಾ ಆಧ್ರಗೊಳ್ಳುತ್ತಾನೆ . ನೆಮ್ಮದಿಯ ವಿಳಾಸವನ್ನು ಅರಸುತ್ತ ಅರಸುತ್ತ ಮತ್ತೆ ಮತ್ತೆ ಕೃತಿಯ ಮೇಲೆ ಕಣ್ಣಾಡಿಸುವಷ್ಟು ಬರಹಗಳು ಸೆಳೆಯುತ್ತವೆ.ಎಂದೋ ಅನುಭವಿಸಿದ ನೋವು ˌನಲಿವು ˌ ಸಂಕಟಗಳು ˌ ನಮ್ಮವರನ್ನೇ ಅರಿಯಲಾಗದ ಸ್ಥಿತಿ ˌ  ದಕ್ಕಿಯೂ ದಕ್ಕದ ಪ್ರೀತಿ ಇವೆಲ್ಲವುಗಳ ಸುತ್ತ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ .ಇಂತಹ ಘಟನೆಗಳೇ ವಿಶ್ವಾಸ್ ಗೌಡರ ಬರಹದ ಕೇಂದ್ರ ಬಿಂದು.  ಸುಮ್ಮನೇ  ಕೈಗೊತ್ತಿಕೊಂಡರೂ ಕೃತಿಯನ್ನು ಸಂಪೂರ್ಣ ಓದುವವರೆಗೂ ಅದು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರು ಒಮ್ಮೆಯಾದರೂ ಈ ಕೃತಿಯನ್ನು ಪಡೆದು ಓದಲೇಬೇಕೆನ್ನುವಷ್ಟು ಕೃತಿ ಸಿದ್ಧಗೊಂಡಿದೆ .ಈ ಮೂಲಕ ವಿಶ್ವಾಸ ಡಿ ಗೌಡರಿಗೆ ಶುಭಾಶಯಗಳನ್ನು ಕೋರುತ್ತಾ  ಓದುವೆಡೆಗೆ ಸಾಗೋಣ. ಮಧು ಮಾಲತಿ‌ ರುದ್ರೇಶ್

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ Read Post »

ಪುಸ್ತಕ ಸಂಗಾತಿ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ.

ಪುಸ್ತಕ ಸಂಗಾತಿ ಜಗದೀಶ ಹಾದಿಮನಿ “ಅಬುಚಾ ..! ಅಬುಚಾ..!” ಒಂದು ಅವಲೋಕನ ಶಂಕರಾನಂದ ಹೆಬ್ಬಾಳ ಅಬುಚಾ ಅಬುಚಾದ ಬೆನ್ನೇರಿ…. ಪುಸ್ತಕ : ಅಬುಚಾ ..! ಅಬುಚಾ..!ಲೇಖಕರು : ಜಗದೀಶ ಹಾದಿಮನಿಕಥಾ ಸಂಕಲನಪ್ರಕಾಶನ: ಪಂಚಮಿ ಪ್ರಕಾಶನ ನಾಡಿನ ಹೆಮ್ಮೆಯ ಕಥೆಗಾರ ಜಗದೀಶ ಹಾದಿಮನಿ ಅವರ ಅಬುಚಾ ಅಬುಚಾ ಕಥಾ ಸಂಕಲನ ಕಥಾ ಸಾಹಿತ್ಯಕ್ಕೆ ವಿಶೇಷ ಕೊಡುಗೆ. “ಮತಿದರ್ಪಣೆ ಕವಿನಾಂ ವಿಶ್ವಂ ಪ್ರತಿಫಲತಿ” ಎಂಬ ಕವಿವಾಣಿಯಂತೆ ಕವಿಯ ಮತಿಯೆಂಬ ಕನ್ನಡಿಯಲ್ಲಿ ಇಡಿ ವಿಶ್ವವೆ ಗೋಚರಿಸುತ್ತದೆ.ಅಂತಹ ಜ್ಞಾನನಿಧಿಯಾದ ಕಥೆಗಾರ ಸಹೋದರ ಜಗದೀಶ ಹಾದಿಮನಿ ಈ ನಿಟ್ಟಿನಲ್ಲಿ ಒಳ್ಳೆಯ ಹೃದ್ಯಮಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವಿಕತೆಯ ತಲ್ಲಣಗಳನ್ನು, ನಿತ್ಯ ನಡೆಯುವ ಘಟನೆಗಳನ್ನು ಹೃದ್ಯಮಯವಾಗಿ ಹೆಣೆದು ಓದುಗರಿಗೆ ಮುಟ್ಟಿಸುವ ಶೈಲಿ ನಿಜಕ್ಕೂ ಶ್ಲಾಘನೀಯ. ಮೊದಲನೆ ಹೆಜ್ಜೆಯಲ್ಲಿ ಅಬುಚಾ ಅಬುಚಾ….ಕಥೆಯಲ್ಲಿ ಚಿಕ್ಕ ಮಗುವಿನ ಹಠ ಸ್ವಭಾವ ಎಂತೆಂಥಾ ಸಮಸ್ಯೆಗಳನ್ನು ತಂದೊಡ್ಡಿತು ಹಾಗೂ ಇಡಿ ಊರನ್ನೆ ತಲ್ಲಣಗೊಳಿಸಿತು ಎಂಬುದನ್ನು ಸ್ವತಃ ಕಥೆಗಾರರೆ ದಾಖಲಿಸಿದ್ದಾರೆ.ಇದು ಗೋರೂರರ ಕಥೆಯೊಂದನು ನೆನಪಿಸುತ್ತದೆ‌. ಮಗುವಿನ ಹಠಕ್ಕೆ ಕಾರಣವೇನು ಎಂದು ಹುಡುಕುವಲ್ಲಿ ಇಡಿ ಮನೆ ಹಾಗೂ ಊರಿಗೆ ಊರೆ ವಿಫಲವಾಗುತ್ತದೆ. ಮಗುವಿಗೆ ಹೊಟ್ಟೆ ಹಸಿದಿರಬಹುದು ಎಂದು ವೈದ್ಯರ ಹತ್ತಿರ ಕರೆದುಕೊಂಡು ಹೋಗುವಾಗ ಮಗುವಾಗುವ ಬದಲು “ಸಿಡಿಗುಂಡನು ಎತ್ತಿಕೊಂಡು ” ಎಂದು ರೂಪಕವನ್ನು ಬಳಸುತ್ತಾರೆ ಕಾರಣ ಆ ಅತಿರೇಕದ ಅಬುಚಾದ ಹಠಕ್ಕೆ ಬೇಸತ್ತಿತ್ತು.ಕೊನೆಗೆ ಹುಡುಗಿಯ ಅಣ್ಣ ಅದರ ಸಾಂತ್ವನಕ್ಕೆ ಮುಂದಾಗುತ್ತಾನೆ, ಎಲ್ಲೈತಮ್ಮ ತೋರ್ಸು ಎಂದಾಗ ಕಾಟಾದ ಮೂಲೆಯನ್ನು ತೋರಿಸಿತು. ಕೊನೆಯಲ್ಲಿ ಕಸದ ರಾಶಿಯಲ್ಲಿ ಸಿಕ್ಕ ಚಮಚದಿಂದ ನೆಮ್ಮದಿ‌ ಸಿಗುವ ಅಬುಚಮ್ಮಳ ಕಥೆ ಓದುಗರ ಮನ ಗೆಲ್ಲುತ್ತದೆ. ಕಾವೇರಮ್ಮ ಸರಳ ಸುಂದರ ಕಥೆಯಾಗಿದ್ದು ನಿತ್ಯ ಜೀವನದಲ್ಲಿ‌ ನಡೆಯುವ ಘಟನೆಯೆ ಆಗಿದ್ದು ಕಾವೇರಮ್ಮನ ಮಗ ವೃತ್ತಿಯಿಂದ ಪೋಲಿಸ ಅಧಿಕಾರಿಯಾಗಿದ್ದಾನೆ. ಮಗನೆಂದರೆ ಮಮಕಾರ ಆ ತಾಯಿಗೆ. ಆ ಊರಿಗೆ ಅವನೊಬ್ಬನೆ ನೌಕರಸ್ಥ ಎಂಬುದನ್ನು ಕಥೆಗಾರ ಎಚ್ಚರಿಸುವ ಸಂದೇಶ ಹಳ್ಳಿಗಳಲ್ಲಿಯೂ ಕೂಡಾ ವಿದ್ಯಾವಂತರಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ.ಕಾವೇರಮ್ಮನ ಮಗನಿಗೆ ಮದುವೆಯಾಗಿ ನಂತರ ಆತ ಊರನ್ನೆ ಮರೆಯುತ್ತಾನೆ.ತಾಯಿಯು ಆಗಾಗ ಹೋಗಿ ಬರುವುದು ,ಮಗನ ಅಕ್ಕರೆಯಿಂದ ತಾಯಿ ವಂಚಿತಳಾಗಿ ಕೊನೆಗೆ ಮಗನ ಹತ್ತಿರ ಹೋಗಲೆ ಬಾರದೆಂಬ ಧೃಡನಿರ್ಧಾರಕ್ಕೆ ಬಂದರೂ ಮೊಮ್ಮಕ್ಕಳ ಬಾಂಧವ್ಯ ಆ ಕಡೆ ಎಳೆಯುತ್ತದೆ.ಅತ್ತೆಯನ್ನು ಮನೆಯ ಕೆಲಸದವಳಂತೆ ನೋಡಿಕೊಂಡ ಸೊಸೆಯು ಕೊನೆಯಲ್ಲಿ ಊರು ಸುತ್ತುವ ನೆಪದಲ್ಲಿ ಅತ್ತೆಯನ್ನು ನಂಬಿಸಿ ಧನ್ನೂರು ಹೊಳೆಯಲ್ಲಿ ತಳ್ಳಿ ಜಾರಿ ಬಿದ್ದಳೆಂದು ನಂಬಿಸುವ ಕಪಟತನವನ್ನು ಮಗುವಿನ ಮಾತಿನಲ್ಲಿ ಎತ್ತಿ ತೋರಿಸುವ ಜಾಣ್ಮೆ ಅಸಾಮಾನ್ಯ ಕಥೆಗಾರರಿಗೆ ಮಾತ್ರ ಸಾಧ್ಯವಾಗುತ್ತದೆ. ಮಾತಿನ‌ಬೆನ್ನು ಹತ್ತಿ ಕಥೆಯಲ್ಲಿ ಹೆರಿಗೆಗಾಗಿ ತವರಿನಲ್ಲಿ ರೇವತಿ ಗಂಡನಿಗಾಗಿ ಕಾಯುವ ಹಪಾಹಪಿ,ಹೊಲದ ಕೆಲಸದಲ್ಲಿ ಮಗ್ನನಾಗಿ ಕೊನೆಗೆ ಬರುತ್ತೆನೆ,ಬರುತ್ತೆನೆ ಎಂದು ದಿನ ತಳ್ಳಿ ಬರುವಾಗ ಆಕಸ್ಮಾತ ಅಪಘಾತವಾಗಿ ಸಾಯುವ ದುಃಸ್ಥಿತಿ ಎದುರಾಯಿತು. ಇತ್ತ ಅವಳಿಗೆ ಪ್ರಸವ, ಸೂಲಗಿತ್ತಿಯ ನಂಜಮ್ಮನ ನಗೆಚಾಟಿಕೆಯಲ್ಲಿ ತೇಲುತ್ತ ತನ್ನನ್ನೆ ತಾ ಮರೆತಿದ್ದಾಳೆ.ಗಂಡ ಅವಸರದಲ್ಲಿ ಬರುವಾಗ ಇಹಲೋಕ ತ್ಯೆಜಿಸಿದ್ದು ಆಕಗೆ ಗೊತ್ತಿಲ್ಲದೆ ಹೋದದ್ದು ಎಂತಹ ವಿಪರ್ಯಾಸ. ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತ್ತಿದ್ದವು ಕಥೆ ಪ್ರೇಮದ ಪರಿಯನ್ನು ಬಿಚ್ಚಿಡುತ್ತದೆ. ಕಥೆಯಲ್ಲಿ ನಾಯಕಿ ಐಎಎಸ್ ಅಧಿಕಾರಿ ನಾಯಕ ಅರೆಹುಚ್ಚ, ಹೈಸ್ಕೂಲ ಟೀಚರ ಆದಾಗಿನಿಂದ ಆಕೆಯನ್ನು ಮನಸಾರೆ ಪ್ರೀತಿಸಿ ಕೊನೆಗೆ ಕೈಗೆ ಸಿಗದೆ ಆಕೆ ಬೇರೊಬ್ಬನನ್ನು ಇಷ್ಟಪಟ್ಟು ಮದುವೆಯಾಗಿ ಕೊನೆಗೆ ಇತನೆ ಅವಳನ್ನು ಹುಡುಕಿಕೊಂಡು‌ ಮಾತನಾಡಿಸಿ ಹೋಗುವ ಸ್ಥಿತಿ ಓದುಗರಿಗೆ ಕಂಬನಿ ಉಕ್ಕಿಸುತ್ತದೆ. ಅಲ್ಲಿಂದ ಏನು ಕೊಟ್ಟರೂ ಬೇಡವೆನ್ನುವ ಆತ ಹಾಗೆ ನಿರ್ಗಮಿಸುತ್ತಾನೆ.ಹೊರಗಡೆ ದಾರಿಯಲ್ಲಿ ಗಿಡದ ಹತ್ತಿರ ಕುಳಿತಾಗ ಪೋಲಿಸರ ಈತನ ಬಳಿಗೆ ಬಂದು ಇನ್ನೊಬ್ಬ ಎಲ್ಲಿ…? ಎಂಬ ಪ್ರಶ್ನೆ ಕೇಳಿ ಶೂಟ್ ಮಾಡುವ ದೃಶ್ಯ ಎದೆ ಝಲ್ಲೆನಿಸುತ್ತದೆ.ಆಗಲೂ ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತಿದ್ದವೆಂಬ ಅಸಹನೀಯ ದನಿಯಲ್ಲಿಅಮಾಯಕನ ಮನಸಿನ ನುಡಿಗಳನ್ನು ವರ್ಣಿಸುವ ಪರಿ ಅದ್ಬುತ. ಭೂಮಿ ಇದೊಂದು ಮಹಿಳಾಪರ ಕಥೆಯಾಗಿದ್ದು ಗಂಡು ಸಂತಾನಕ್ಕಾಗಿ ಸಿದ್ದಮ್ಮ ಮತ್ತು ಗಿರೆಪ್ಪ ಹುಟ್ಟಿದ ಹೆಣ್ಣು ಮಕ್ಕಳನೆಲ್ಲ ಒಂದೊಂದಾಗಿ ಕರುಣೆಯಿಲ್ಲದೆ ಕೊಲ್ಲುವುದು ಒಂದು ಪ್ರವೃತ್ತಿಯಂತೆ, ಮೊದಮೊದಲು ನಿಧಿ ಹುಡುಕುವ ನೆಪದಲ್ಲಿ ಮಗಳನ್ನು ಕರೆದೊಯ್ವ ತಂದೆ ಕೊನೆಗೆ ತೋಡಿದ ಗುಂಡಿಯಲ್ಲಿ‌ ಮಗಳನ್ನೆ ಮುಚ್ಚುವ ಕ್ರೂರವೃತ್ತಿಗೆ ಇಳಿವಲ್ಲಿಓದುಗನಿಗೆ ಛೇ…ಹೀಗಾಗಬಾರದಿತ್ತು? ಎನ್ನುವ ಭಾವ ಮೂಡುತ್ತದೆ. ಗಂಡು ಮಗುವಿಗಾಗಿ ಈ ಸಮಾಜ ಏನೆಲ್ಲ ಮಾಡಿಸುತ್ತದೆ ಎನ್ನುವುದನ್ನು ಸುಂದರ ಕಥೆಯ ಮೂಲಕ ಹೆಣೆದು ಕೊಟ್ಟಿದ್ದಾರೆ. ನಿಮ್ಮೊಳಗಿನ ಕಥೆಯಲ್ಲಿ ಮೋಹನ ಎಂಬ ಕಥಾಕಾರರ ಅಭಿಮಾನಿಯಾಗಿದ್ದ ರೂಪಾ ಹುಡುಕಿ ಹೊರಡುವ ಕಥೆ ಮುಂದೆ ಸಂಭಾಷಣೆಗಿಳಿದು ತನ್ನ ಸಾಹಿತ್ಯ ಜೀವನದ ಬಿಚ್ಚುತ್ತ ಕೊನೆಗೆ ಅವಳನ್ನು ಕೈಸವರುವ ಜಾಯಮಾನಕ್ಕಿಳಿವ ಸಂಗತಿ ಎದುರಾಗುತ್ತದೆ. ರೂಪಾ ” ನಾನಂತ ಹೆಣ್ಣಲ್ಲ ” ಎನ್ನುತ್ತ ಹೊರಡುತ್ತಾಳೆ.  ನೀನಿನ್ನು ನನ್ನ ಮರೆತಿಲ್ಲ ಎನ್ನುವಲ್ಲಿ ರೂಪಾಳಿಗೆ ನನ್ನ ಮಗನ ಹಾಗೂ ಮನೆಯ ಹೆಸರು ಮೋಹನ ಎಂದಿಟ್ಟಿರುವೆ ನಿನ್ನೊಳಗಿನ ಕಾಮುಕನನ್ನು ನಾ ಮರೆಯಲು ಅಸಾಧ್ಯವೆಂದು,ಹೇಳುವ ಕಥೆಗಾರರು ಒಂಟಿಯಾಗಿ ಸಿಕ್ಕ ಸಮಯದಲ್ಲಿ ಮನಸು ಕೈಜಾರಬಾರದೆನ್ನುವ ಸಂದೇಶ ಕೊನೆಯಲ್ಲಿ ಕೊಟ್ಟಿದ್ದಾರೆ. ಸೇಡು ಕಥೆಯಲ್ಲಿ ಸಿದ್ದವ್ವ ಮತ್ತು ಬೈರನ ಸುಂದರ ಸಂಸಾರದಲ್ಲಿ ಬೈರನನ್ನು ತೊರೆದು ಎಮ್ಮಿಯನ್ನು  ಸಾಕಿ ಹಾಲು‌,ಮೊಸರು, ತುಪ್ಪ ಮಾರಿ ಗಟ್ಟಿಗಿತ್ತಿಯಂತೆ ಬದುಕಿದ ಸಿದ್ದವ್ವಳನ್ನು ಬಲಾತ್ಕಾರ ಮಾಡಿದ ಸಂಗಪ್ಪಗೌಡನನ್ನು ಕುಡಗೋಲಿಂದ ಕೊಚ್ಚಿ ಕೊಲ್ಲುವ ಪ್ರಸಂಗವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಚಿತ್ರಣವನ್ನು ಸೇಡು ಕಥೆಯಲ್ಲಿ ಬಿತ್ತರಿಸಿದ್ದಾರೆ. ಜೀವನ್ಮುಕ್ತಿ ಕಥೆಯಲ್ಲಿ ಪ್ರೀತಿಯನ್ನು‌ನಂಬಿ ಹೊರಟವಳಿಗೆ ಸಿಕ್ಕಿದ್ದು ವೇಶ್ಯೆಯಂಬ ಪಟ್ಟ ಅಲ್ಲಿಂದ ಹೊರಗೆ ಬರಲು ಮಾಡಿದ ಪ್ರಯತ್ನ ಕೊನೆಗೆ ಹರಿಚಂದನಯೆಂಬ ವ್ಯೆಕ್ತಿಯಿಂದ ಹೊರಬಂದು ತಾನಿದ್ದ ಸ್ಥಳಕ್ಕೆ ಹೋದಾಗ ಆಕೆ ಪಡುವ ವ್ಯಥೆ, ಒಳಗಿನ ಹೇಳತೀರದ ಸಂಕಟ , ಕರುಳು ಹಿಚುಕುತ್ತವೆ ಸ್ವತಃ ತಮ್ಮನಾದವನೆ ಅವಳ ನೇಣು ಹಾಕುವ ಸಂದರ್ಬವೆದುರಾಗಿ ಕೊನೆಗೆ ಜೀವ ಕಳೆದುಕೊಳ್ಳುವ ಕ್ಷಣದಲ್ಲಿ ಮತ್ತೆ ಜೀವ ಚಿಗುರಿತು ಅದು ಕೇವಲ ಕ್ಷಣಿಕ ಅಷ್ಟೆಯೆಂಬ ನಿದರ್ಶನದೊಂದಿಗೆ ಮನೆಬಿಟ್ಟು ಹೋದವಳ ದುರಂತ ಕಥೆಯನ್ನು ಜೀವನ್ಮುಕ್ತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಉಯಿಲು ಕಥೆಯು ಇದಕ್ಕೆ ಹೊರತಾಗಿಲ್ಲ ಹಣ ,ಆಸ್ತಿ, ಸಂಪತ್ತು ಎಲ್ಲರನ್ನೂ ಏನು ಬೇಕಾದರೂ ಮಾಡಿಸುವ ಜಗತ್ತು. ಶಿವಶಂಕರಗೌಡರ ಕಾಲದಿಂದಲೂ ತಿಮ್ಮಣ್ಣ ಆಳಾಗಿ ದುಡಿಯುತ್ತಿದ್ದವನು, ಅವನ ಹೆಸರಿಗೆ ಎಂಟು‌ನೂರು ಕೋಟಿ ಆಸ್ತಿ ಉಯಿಲು ಬರೆದದ್ದು ಗೌಡರ ಮಗನಿಗೆ ಒಳಗೊಳಗೆ ಖೇದವಿತ್ತು, ಇದಕ್ಕಾಗಿ ತಿಮ್ಮಣ್ಣ ಅದರ ಮೇಲೆ ಎಳ್ಳಷ್ಟು ಆಸೆಯಿರದೆ ಅವನಿಗೆ ಒಪ್ಪಿಸಿ, ನಮ್ಮ ಕುಟುಂಬವನ್ನೆ ನಾಶಮಾಡಿದ ಈ ಆಸ್ತಿ ನಮಗೆ ಬೇಡವೆಂದು ಮರಳಿ ನೀಡುವ ನಾವು ಹೀಗೆ ಇರುತ್ತೇವೆ ಎನ್ನುವ ಉದಾರತನ ಎತ್ತಿ ತೋರುತ್ತಾನೆ. ಬದುಕು ಕಥೆಯಲ್ಲಿ ದಿನನಿತ್ಯ ಸೂಜಿ,ಪಿನ್ನು ,ಡಬ್ಬಣ ಮಾರುವವರ ಕಥೆಯನ್ನು ತುತ್ತು ಅನ್ನಕ್ಕಾಗಿ, ಪುಡಿಗಾಸಿಗಾಗಿ ಪರದಾಡುವ ಸ್ಥಿತಿ ಅವರ ನೋವು ನಲಿವುಗಳನ್ನು ಬಿಚ್ಚಿಡುತ್ತಾರೆ. ಕೊನೆಗೆ ಅವರ ಹದಿನಾರು ವರ್ಷದ ಮಗನ ಕಿಡ್ನಿ ಆಪರೇಶನಗೆ ಹಣ ಹೊಂದಿಸಲಾಗದೆ ಕಳೆದುಕೊಳ್ಳುವ ಹೃದಯ ಹಿಂಡುವ ಚಿತ್ರಣ ಎದುರಾಗುವ ಸನ್ನಿವೇಶ ಕಣ್ಣಲ್ಲಿ ನೀರು ತುಂಬಿಸುತ್ತದೆ. ಹತ್ತಿಪ್ಪತ್ತು ದುಡಿವವರಿಗೆ ದೊಡ್ಡ ರೋಗ ಬಂದರೆ ಏನಾಗುತ್ತದೆನ್ನುವ  ವಾಸ್ತವತೆಯಲ್ಲಿ ಕವಿ ಕಥೆ ಹೆಣೆದಿದ್ದಾರೆ. ವಿಧಿ ಕಥೆಯಲ್ಲಿ ಹೊಯ್ಸಳೇಶ್ವರನ ಚರ್ಮ ಸುಲಿಯುವ ಘಟನೆ ಸುಲ್ತಾನನ ಕರಾಳ ಮುಖವನ್ನು ಓದುಗನಿಗೆ ಬಿಚ್ಚಿಡುತ್ತದೆ. ಪರಸ್ಪರ ಸಂಧಾನ ಮಾಡಿಕೊಂಡು ಕೊನೆಗೆ ದೊಪ್ಪನೆ ಎರಗಿ ಹೊಯ್ಸಳರ  ಸೈನ್ಯವನ್ನೆ ದಿಕ್ಕಾಪಾಲು ಮಾಡುವ ಸಂಚು ಬಲ್ಲಾಳನಿಗೆ ಗೊತ್ತಾಗದೆ ಕೊನೆಗೆ ಸುಲ್ತಾನನ ಕ್ರೌರ್ಯವೆ ವಿಜೃಂಭಿಸುತ್ತದೆ. ಬಹುಶಃ ಇದು ವಿಧಿಲಿಖಿತ ಎನ್ನುವಷ್ಟರ ಮಟ್ಟಿಗೆ ಕವಿ ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಒಟ್ಟಿನಲ್ಲಿ ಅಬುಜಾ ಅಬುಜಾ ಕಥೆ ಓದುಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಇಲ್ಲಿನ, ಸಿದ್ದಮ್ಮ, ಕೌಶಲ್ಯಬಾಯಿ, ತಿಮ್ಮಣ್ಣ,ದೇವಪ್ಪ, ಗಿರೆಪ್ಪ,ಧರಣೀಶ, ಹರಿಚಂದನ್ ಇವರೆಲ್ಲ ಜೀವಂತ ಪಾತ್ರಗಳಾಗಿ ಕಣ್ಮುಂದೆ ನಿತ್ಯವೂ ಓಡಾಡುವಂತೆ ಭಾಸವಾಗುತ್ತದೆ. ಈ ಕಥಾಸಂಕಲನ ನಾಡಿನ ಇನ್ನಷ್ಟು ಓದುಗರ ಮನಗೆಲ್ಲಲಿ ಎಂದು ಆಶಿಸುತ್ತೇನೆ… ಶಂಕರಾನಂದ ಹೆಬ್ಬಾಳ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ. Read Post »

ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

ಪುಸ್ತಕ ಸಂಗಾತಿ

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ. Read Post »

ಪುಸ್ತಕ ಸಂಗಾತಿ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು
ಅವಲೋಕನ ಬಿ.ಹೆಚ್. ತಿಮ್ಮಣ್ಣ
ಕೃತಿ: *ಬಾಳೊಂದು ಚೈತ್ರಾ ಮಯ*
ಲೇಖಕರು: ವಿಶ್ವಾಸ್.ಡಿ. ಗೌಡ
ಪ್ರಕಾಶನ: ಬೊಂಬೆ ಎಂಟರ್ಪ್ರೈಸಸ್ , ಮೈಸೂರು
ಬೆಲೆ:158 /-
ದೊರೆಯುವ ಸ್ಥಳ: ಅಕ್ಷರ ಬುಕ್ ಡಿಪೋ, ಸಪ್ನಾ ಬುಕ್ ಹೌಸ್, ಹಾಸನ ಜಿಲ್ಲೆ.
ಸಂಪರ್ಕಿಸುವ ಮೊಬೈಲ್ ನಂ:9743636831

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ Read Post »

ಪುಸ್ತಕ ಸಂಗಾತಿ

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು

“ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು” ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ

ಪ್ರವಾಸ ಕಥನದ ಒಂದು ಉತ್ತಮ ಮಾದರಿಯಾಗಿದೆ. ಇದು ಕೇವಲ ಸ್ಥಳಗಳ ವಿವರಣೆ ಮಾತ್ರವಲ್ಲದೆ, ಅಲ್ಲಿನ ವ್ಯಕ್ತಿಗಳ ಒಡನಾಟ, ಅವರ ವ್ಯಕ್ತಿತ್ವದ ವಿಶ್ಲೇಷಣೆ ಮತ್ತು ಇದರಿಂದ ಪಡೆದ ಅನುಭವಗಳನ್ನು ಮನಮುಟ್ಟುವಂತೆ ದಾಖಲಿಸುತ್ತದೆ.
ಪುಸ್ತಕ ಸಂಗಾತಿ

“ಶಹಾಪುರದಿಂದ ಪ<ಜಾಬಿನವರೆಗೆ" ಡಾ. ಸಿದ್ದರಾಮ ಹೊನ್ಕಲ್ ಅವರ "ಲೋಕ ಸಂಚಾರಿ" ಪ್ರಕಾಶಚಂದ ತಾರಾಚಂದ ಜೈನ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ Read Post »

ಪುಸ್ತಕ ಸಂಗಾತಿ

ಎಸ್‌ ಎಲ್‌ ಬೈರಪ್ಪನವರ ಕಾದಂಬರಿ “ಉತ್ತರ ಕಾಂಡ” ಒಂದು ಪರಾಮರ್ಶೆ, ಸುಜಾತಾ ರವೀಶ್

ಸುಜಾತಾ ರವೀಶ್

ಎಸ್‌ ಎಲ್‌ ಬೈರಪ್ಪನವರ

“ಉತ್ತರ ಕಾಂಡ”

ಒಂದು ಪರಾಮರ್ಶೆ

ಎಸ್‌ ಎಲ್‌ ಬೈರಪ್ಪನವರ ಕಾದಂಬರಿ “ಉತ್ತರ ಕಾಂಡ” ಒಂದು ಪರಾಮರ್ಶೆ, ಸುಜಾತಾ ರವೀಶ್ Read Post »

ಪುಸ್ತಕ ಸಂಗಾತಿ

“ಮಾನಸೀಕ ಸಮಸ್ಯೆಗಳಿಗೆ ಆಧ್ಯಾತ್ಮದ ದಿವ್ಯೌಷಧ” ಪಿ.ಲಂಕೇಶರ ನಾಟಕ ʼಗುಣಮುಖʼ ಒಂದು ಓದು-ಗಿರಿಜಾ ಮಾಲಿಪಾಟೀಲ ಅವರಿಂದ

ಹೌದು ಅಮಾಯಕರನ್ನು ಹಿಡಿದು ಕೊಲ್ಲುವುದು ರಾಜನಾದವನಿಗೆ ಯಾವ ಕಾಲದಲ್ಲೂ ಶ್ರೇಯಸ್ಕರವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಪ್ರಜೆಗಳೆಂದರೆ ಅರಸನ ಮಕ್ಕಳು.
ಪುಸ್ತಕ ಸಂಗಾತಿ

ಗಿರಿಜಾ ಮಾಲಿಪಾಟೀಲ

“ಮಾನಸೀಕ ಸಮಸ್ಯೆಗಳಿಗೆ

ಆಧ್ಯಾತ್ಮದ ದಿವ್ಯೌಷಧ”

ಪಿ.ಲಂಕೇಶರ ನಾಟಕ

ʼಗುಣಮುಖʼ

“ಮಾನಸೀಕ ಸಮಸ್ಯೆಗಳಿಗೆ ಆಧ್ಯಾತ್ಮದ ದಿವ್ಯೌಷಧ” ಪಿ.ಲಂಕೇಶರ ನಾಟಕ ʼಗುಣಮುಖʼ ಒಂದು ಓದು-ಗಿರಿಜಾ ಮಾಲಿಪಾಟೀಲ ಅವರಿಂದ Read Post »

You cannot copy content of this page

Scroll to Top