ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು”
ಕಾವ್ಯ ಸಂಗಾತಿ ಅನಸೂಯ ಜಹಗೀರದಾರ “ಹಲವು ಬಲಿದಾನಗಳು” ಸುಧಾರಣೆಯಾಗುತ್ತವೆ..ಹೀಗೆಅಂದುಕೊಳ್ಳುತ್ತೇವೆ. ಕೆಲವು ಆಹುತಿಯಿಂದಕೆಲವು ಬಲಿದಾನದಿಂದಹಾಗೆಯೇ ನನ್ನ ವಾತಾವರಣವೂ.. ಅರೆ..! ಏನಾಗಿಹೋಯ್ತು..ಅಂತ ಚಿಂತಿಸಬಾರದು..ಬಲಿದಾನಕ್ಕೆ ಬೆದರಬಾರದು..ಆಹುತಿಗೆ ಅಂಜಬಾರದು.. ಇಲ್ಲದಿರೆ..;ಭಗತಸಿಂಗ್ ಶಹೀದನಾಗುತ್ತಿರಲಿಲ್ಲ..ಲಕ್ಷೀಬಾಯಿ ಸಂತಾನ ಕಳೆದುಕೊಳ್ಳುತ್ತಿರಲಿಲ್ಲ..! ನಿಜ..!ದೇವರೂ ಸಹ ವರ ದಯಪಾಲಿಸಲುತಪಸ್ಸು ಬೇಡುತ್ತಾನೆಹವಿಸ್ಸಿನ ನಂತರವೇ ಕಣ್ಣು ತೆರೆಯುತ್ತಾನೆ..! ಇದಕ್ಕಲ್ಲವೆ..,ಪಾನಾ ಹೈತೋ ಕುಛ ಖೋನಾ ಹೈ..!ಹಸನಾ ಹೈ ತೋ ಕುಛ ರೋನಾ ಹೈ.. ಇಷ್ಟೇ….,ನಾವು ಬಂದದ್ದು ಏಕೆಂದುಇರುವುದು ಏಕೆಂದುತಿಳಿದರೆ ಸಾಕು… ಒಂದು,ಆಂದೋಲನಒಂದು ಕ್ರಾಂತಿ ಆಗಬೇಕಾದರೆಹಲವು ಬಲಿದಾನವೂ ಬೇಕು..!ಹಲವು ಗಂದಗಿ ತೊಲಗಲುಗಂಧ ಹೊತ್ತ ಮರುತ ಬೇಕುಹಾಗಾದರೆ ಮಾತ್ರಸುಧಾರಣೆಯ ಸುಗಂಧ ಹರಡೀತು..!! ಅನಸೂಯ ಜಹಗೀರದಾರ
ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು” Read Post »









